ಇನ್ಮುಂದೆ ಮನೆಯಲ್ಲಿಯೇ ಕುಳಿತು SMS ಮೂಲಕ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು.! ಹೇಗೆ ಅಂತ ನೋಡಿ ಸಂಪೂರ್ಣ ಮಾಹಿತಿ ಇಲ್ಲಿದೆ.!

 

ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಚಾರ ಮಾರ್ಚ್ ತಿಂಗಳ ಅಂತ್ಯದಲ್ಲಿ ಹೆಚ್ಚು ಸುದ್ದಿಯಾಗಿತ್ತು. ಯಾಕೆಂದರೆ, ಸರ್ಕಾರವು ಉಚಿತವಾಗಿ ಪ್ಯಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊಟ್ಟಿದ್ದ ಕಾಲಾವಕಾಶ ಮುಗಿದು 1000 ರೂ. ದಂಡ ಸಮೇತ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31ನ್ನು ಕಡೇ ದಿನಾಂಕವಾಗಿ ಕೊಟ್ಟಿತ್ತು.

ಆದರೆ ದೇಶದಾದ್ಯಂತ ಅನೇಕರಿಗೆ ಇದರ ಮಾಹಿತಿ ತಿಳಿದಿಲ್ಲ ಎನ್ನುವ ಆರೋಪ ಕೇಳಿ ಬಂತು, ಜೊತೆಯಲ್ಲಿ ಕೊನೆ ದಿನಗಳಲ್ಲಿ ಸರ್ವರ್ ಬಿಸಿ ಆಗಿದ್ದ ಕಾರಣ ಇದೆಲ್ಲವನ್ನು ಪರಿಗಣಿಸಿ ಮತ್ತೊಮ್ಮೆ ಆದಾಯ ತೆರಿಗೆ ಇಲಾಖೆಯು ದಂಡ ಸಮೇತವಾಗಿ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಜೂನ್ 30ರವರೆಗೂ ಕೂಡ ಕಾಲಾವಕಾಶವನ್ನು ವಿಸ್ತರಿಸಿತು.

ಈಗ ಈ ತಿಂಗಳ ಅಂತ್ಯದಲ್ಲಿ ಕಡ್ಡಾಯವಾಗಿ ಎಲ್ಲರೂ ಕೂಡ ತಮ್ಮ ಪ್ಯಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲೇಬೇಕಾಗಿದೆ. ಒಂದು ವೇಳೆ ಈ ಪ್ರಕ್ರಿಯೆ ಪೂರ್ತಿಗೊಂಡಿಲ್ಲ ಎಂದರೆ ಅಂಥವರ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಪಾನ್ ಕಾರ್ಡ್ ಇಲ್ಲದ ಕಾರಣ ಅವರ ಯಾವ ಆರ್ಥಿಕ ಚಟುವಟಿಕೆ ಕೂಡ ನಡೆಯುವುದಿಲ್ಲ ಹಾಗಾಗಿ ಎಲ್ಲರೂ ಸಹ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲು ಮುಗಿ ಬೀಳುತ್ತಿದ್ದಾರೆ.

ಈ ಸಮಯದಲ್ಲಿಯೇ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ ಅದೇನೆಂದರೆ SMS ಮೂಲಕ ಕೂಡ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದಾಗಿದೆ. ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಎರಡು ವಿಧಾನಗಳಿವೆ. ಇ-ಫೈಲಿಂಗ್ ಪೋರ್ಟಲ್ ಮೂಲಕ SMS ಮೂಲಕ. ಈ ಎರಡು ವಿಧಾನದಲ್ಲೂ ಕೂಡ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು.

SMS ಮೂಲಕ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಇಚ್ಚಿಸುವವರು ಮೊದಲಿಗೆ 16 ಅಂಕೆಯ ಆಧಾರ್ ಸಂಖ್ಯೆಯನ್ನು ಬರೆದು ನಂತರ 10 ಅಂಕೆಯ ಅಲ್ಫಾ ನ್ಯುಮರಿಕ್ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಬರೆದು UIDPAN ಸ್ವರೂಪದಲ್ಲಿ ರಿಜಿಸ್ಟರ್ ಮೊಬೈಲ್ ನಂಬರ್ ಇಂದ 56161 ಅಥವಾ 567678 ಸಂಖ್ಯೆಗೆ ಸಂದೇಶವನ್ನು ಕಳುಹಿಸಬೇಕು. ಈ ಸಂದೇಶ ಕಳುಹಿಸಿದ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ತಿಗೊಂಡ ಬಳಿಕ ನಿಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವ ದೃಢೀಕರಣದ ಸಂದೇಶವನ್ನು ಮರಳಿ ಪಡೆಯುತ್ತೀರಿ.

● ಈ ಫೈಲಿಂಗ್ ಪೋರ್ಟಲ್ ಲಿಂಕ್ ಮೂಲಕ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದಾದರೆ ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ಲಿಂಕ್ ಆದ https://incometaxindiaefiling.gov.in/ ವೆಬ್ ಸೈಟಲ್ಲಿ ನೋಂದಾಯಿಸಿಕೊಳ್ಳಬೇಕು.
● ನಿಮ್ಮ ಪ್ಯಾನ್ ಸಂಖ್ಯೆ ಬಳಕೆದಾರರ ಐಡಿ ಆಗಿರುತ್ತದೆ. ಬಳಕೆದಾರರ ಐಡಿ, ಪಾಸ್ವರ್ಡ್ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ಲಾಗಿನ್ ಆಗಬೇಕು.

● ಲಾಗಿನ್ ಆದ ಮೇಲೆ ಪಾಪ್-ಅಪ್-ವಿಂಡೋ ಕಾಣುತ್ತದೆ, ಇಲ್ಲದಿದ್ದಲ್ಲಿ ಪ್ರೊಫೈಲ್ ಸೆಟ್ಟಿಂಗ್ ಗೆ ಹೋಗಿ ಮೆನು ಬಾರ್ ಅಲ್ಲಿ ಲಿಂಕ್ ಬೇಸ್ ಕ್ಲಿಕ್ ಮಾಡಬೇಕು.
● ಈಗ ಸ್ಕ್ರೀನ್ ಮೇಲೆ ನಿಮ್ಮ ವಿವರಗಳೆಲ್ಲ ಕಾಣಿಸುತ್ತದೆ ಈ ವಿವರಗಳು ಸರಿಯಾಗಿದ್ದರೆ ಆಧಾರ್ ಸಂಖ್ಯೆಯನ್ನು ನಮೂದಿಸಿ ಲಿಂಕ್ ಆಪ್ಷನ್ ಕ್ಲಿಕ್ ಮಾಡಿ.
● ಈಗ ಪಾಪ್-ಅಪ್-ವಿಂಡೋ ಬೇಸ್ ಅಲ್ಲಿ ಪಾನ್ ಕಾರ್ಡ್ ಗೆ ನಿಮ್ಮ ಆಧಾರ್ ಸಂಖ್ಯೆ ಲಿಂಕ್ ಆಗಿರುತ್ತದೆ.

Leave a Comment

%d bloggers like this: