ಎಲ್ಲಾ ಪುರುಷರಿಗೂ ಕೂಡ ಸಿಹಿಸುದ್ದಿ, KSRTC ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ.!

 

WhatsApp Group Join Now
Telegram Group Join Now

ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯದ ಮಹಿಳೆಯರೆಲ್ಲರೂ ಕೂಡ ಕರ್ನಾಟಕ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಉಚಿತ ಪ್ರಯಾಣದ ಅವಕಾಶವನ್ನು ಪಡೆಯುತ್ತಿದ್ದಾರೆ. ಈ ಅವಕಾಶದಿಂದ ವಂಚಿತರಾಗಿದ್ದ ಪುರುಷ ಸಮಾಜಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮೈಸೂರು ಜಿಲ್ಲಾಡಳಿತವು ಐದು ದಿನಗಳವರೆಗೆ ಪುರುಷರಿಗೂ ಕೂಡ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿದೆ.

ಯಾವ ಮಾರ್ಗದಲ್ಲಿ ಮತ್ತು ಯಾವ ದಿನಗಳು ಪುರುಷರು ಈ ರೀತಿ ಉಚಿತವಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣ ಮಾಡಬಹುದು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಆಷಾಢ ಮಾಸದಲ್ಲಿ ನಾಡ ಅಧಿದೇವತೆಯಾದ ಮೈಸೂರಿನಲ್ಲಿ ನೆಲೆ ನಿಂತಿರುವ ಚಾಮುಂಡೇಶ್ವರಿ ತಾಯಿಯ ದೇವಾಲಯವು ಕಳೆ ಕಟ್ಟಿರುತ್ತದೆ. ಆಷಾಢ ಮಾಸದಲ್ಲಿಯೇ ಚಾಮುಂಡೇಶ್ವರಿ ತಾಯಿಯ ಜನ್ಮ ವರ್ಧಂತಿಯು ಕೂಡ ಇದೆ.

ಈ ಕಾರಣಕ್ಕಾಗಿ ಆಷಾಢ ಮಾಸದಲ್ಲಿ ವಿಶೇಷ ಪೂಜೆಗಳು ತಾಯಿಯ ತಪ್ಪಲಿನಲ್ಲಿ ನಡೆಯುತ್ತವೆ. ಮತ್ತು ವರ್ಷಪೂರ್ತಿ ಭಕ್ತಾದಿಗಳಿಂದ ತುಂಬಿರುವ ಈ ಸನ್ನಿಧಾನದಲ್ಲಿ ಆಷಾಡ ಮಾಸದಲ್ಲಿ ಇದು ಇನ್ನು ಅಧಿಕವಾಗಿರುತ್ತದೆ. ಆಷಾಢ ಶುಕ್ರವಾರದಂದು ಮತ್ತು ಜನ್ಮ ವರ್ಧಂತಿಯಂದು ಲಕ್ಷಾಂತರ ಭಕ್ತಾದಿಗಳು ನಾಡಿನ ಮೂಲೆ ಮೂಲೆಗಳಿಂದ ಆಗಮಿಸುತ್ತಾರೆ. ಈ ಕಾರಣದಿಂದ ಮೈಸೂರು ಜಿಲ್ಲಾಡಳಿತವು ಭಕ್ತಾದಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಅದೇ ರೀತಿಯಾಗಿ ಈ ಸಮಯದಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಖಾಸಗಿ ವಾಹನಗಳಲ್ಲಿ ಚಲಿಸಿದರೆ ವಾಹನದಟ್ಟಣೆ ಅಥವಾ ಅಪಘಾತದ ತೊಂದರೆಗಳು ಆಗಬಹುದು ಎನ್ನುವ ಕಾರಣಕ್ಕಾಗಿ ಮೈಸೂರು ಜಿಲ್ಲಾಡಳಿತವು ಎಲ್ಲಾ ಖಾಸಗಿ ವಾಹನಗಳಿಗೂ ಕೂಡ ಪ್ರವೇಶವನ್ನು ನಿರ್ಬಂಧಿಸಿದೆ ಮತ್ತು ಸರ್ಕಾರಿ ಬಸ್ ಗಳಿಗೆ ಮಾತ್ರ ಚಾಮುಂಡಿ ಬೆಟ್ಟದವರೆಗೆ ಪ್ರವೇಶಿಸಲು ಅನುಮತಿ ನೀಡಿದೆ.

ಖಾಸಗಿ ವಾಹನಗಳಲ್ಲಿ ತೆರಳುವವರು ಲಲಿತಾ ಮಹಲ್ ಪ್ಯಾಲೆಸ್ ಮೈದಾನದಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡಿ ಬರಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಟ್ಟಿದೆ. ಅಲ್ಲದೆ ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಮಾರ್ಗಗಳಿಂದಲೂ ಕೂಡ ಖಾಸಗಿ ವಾಹನಗಳಿಗೆ ಪ್ರವೇಶ ನೀಡದಂತೆ ತಡೆಹಿಡಿಯಲು ಸೂಚಿಸಿದೆ ಹಾಗಾಗಿ ಬೆಟ್ಟದ ಬುಡದ ವರೆಗೆ ಮಾತ್ರ ಖಾಸಗಿ ವಾಹನಗಳು ಹೋಗಬಹುದು.

ನೀವೇನಾದರೂ ದೇವಸ್ಥಾನದ ತನಕವೂ ಕೂಡ ಬಸ್ಸಿನಲ್ಲೇ ಪ್ರಯಾಣ ಮಾಡುವುದಾದರೆ ಈ ಮಾರ್ಗದಲ್ಲಿ ಸಂಚರಿಸುವ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸಬಹುದು ಜೊತೆಗೆ ಇದರ ಬಗ್ಗೆ ಜಿಲ್ಲಾಡಳಿತ ನೀಡಿರುವ ಸಿಹಿ ಸುತ್ತಿ ಏನೆಂದರೆ ಈಗಾಗಲೇ ಕರ್ನಾಟಕದ ಮಹಿಳೆಯರಿಗೆ ಶಕ್ತಿ ಯೋಜನೆ ಅಡಿ ಉಚಿತ ಪ್ರಯಾಣಕ್ಕೆ ಅವಕಾಶ ಇದೆ.

ಪುರುಷ ಪ್ರಯಾಣಿಕರು ಕೂಡ ಸರ್ಕಾರಿ ವಾಹನಗಳಲ್ಲಿ ಪ್ರಯಾಣಿಸಲಿ ಎಂದು ಉತ್ತೇಜಿಸುವ ಕಾರಣಕ್ಕಾಗಿ ಐದು ದಿನಗಳು ಮೈಸೂರಿನಿಂದ ಚಾಮುಂಡಿ ಬೆಟ್ಟಕ್ಕೆ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುವ ಪುರುಷ ಪ್ರಯಾಣಿಕರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಜೂನ್ 23ರಿಂದ ಜುಲೈ 14ರ ವರೆಗೆ ಇರುವ ಆಷಾಢ ಶುಕ್ರವಾರಗಳು ಮತ್ತು ಜುಲೈ 10ರಂದು ಇರುವ ಚಾಮುಂಡೇಶ್ವರಿ ವರ್ಧಂತಿ ಜಯಂತಿ ದಿನಗಳಂದು ಮೈಸೂರಿಂದ ಚಾಮುಂಡಿ ಬೆಟ್ಟದ ವರೆಗೆ ಎಲ್ಲರೂ ಉಚಿತ ಪ್ರಯಾಣ ಮಾಡಬಹುದು.

ಆ ದಿನಗಳಂದು ಬೆಳಕಿನ ಜಾವ 3:00ರಿಂದಲೂ ಕೂಡ ಸರ್ಕಾರಿ ಬಸ್ ಗಳ ವ್ಯವಸ್ಥೆಯನ್ನು ಮೈಸೂರು ಜಿಲ್ಲಾಡಳಿತ ನೀಡಿದೆ. ಶಿಷ್ಟಾಚಾರ ಹೊಂದಿರುವ ಗಣ್ಯರು ಮತ್ತು ಅತಿ ಗಣ್ಯರ ಖಾಸಗಿ ವಾಹನಗಳನ್ನು ಬಿಟ್ಟು ಉಳಿದ ಎಲ್ಲಾ ಖಾಸಗಿ ವಾಹನಗಳಿಗೆ ನಿರ್ಬಂಧವಿದೆ. ಮೈಸೂರು ಪೊಲೀಸ್ ಆಯುಕ್ತ ಬಿ ರಮೇಶ್ ಬಾನೋತ್ ಈ ರೀತಿ ಆದೇಶ ಹೊರಡಿಸಿದ್ದಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now