ನಿಮ್ಮ ಪ್ಯಾನ್ ಕಾರ್ಡ್ ಅಲ್ಲಿ ಇತ್ತೀಚಿನ ಭಾವಚಿತ್ರ ಸಹಿ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡಲು ಈ ಕ್ರಮಗಳನ್ನು ಅನುಸರಿಸಿ:-
● ಮೊದಲಿಗೆ www.onlineservices.nsdl.com ಭೇಟಿ ಕೊಡಿ.
● ಆಗ ಆದಾಯ ತೆರಿಗೆ ಇಲಾಖೆಯ ಪೋರ್ಟಲ್ ಓಪನ್ ಆಗುತ್ತದೆ ಮತ್ತು ಅಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಾಣುತ್ತದೆ.
● ಮುಖ್ಯವಾಗಿ ಅಪ್ಲಿಕೇಶನ್ ಟೈಪ್ ಎಂದು ಇರುವಲ್ಲಿ ನ್ಯೂ ಪ್ಯಾನ್ ಕಾರ್ಡ್ ಎನ್ನುವ ಮೊದಲನೇ ಆಪ್ಷನ್ ಅನ್ನು ಎಲ್ಲರೂ ಕ್ಲಿಕ್ ಮಾಡುತ್ತಾರೆ ಅದು ತಪ್ಪು, ಬದಲಾಗಿ ಮೂರನೇ ಆಪ್ಷನ್ ಆದ ಚೇಂಜಿಂಗ್ ಆರ್ ಕರೆಕ್ಷನ್ ಇನ್ ಎಕ್ಸಿಸ್ಟಿಂಗ್ ಪ್ಯಾನ್ ಡಾಟಾ ಎಂದು ಇರುವ ಆಪ್ಷನ್ ಅನ್ನು ಕ್ಲಿಕ್ ಮಾಡಿ.
● ಕೆಟಗರಿ ಎಂದು ಇರುವಲ್ಲಿ individual ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
● ಟೈಟಲ್ ಅಲ್ಲಿ ಶ್ರೀ, ಶ್ರೀಮತಿ, ಕುಮಾರಿ ಇವುಗಳಲ್ಲಿ ಸರಿಯಾದ ಆಪ್ಷನ್ ಅನ್ನು ಕ್ಲಿಕ್ ಮಾಡಿ.
● ನಿಮ್ಮ ಹಳೆಯ ಪಾನ್ ಕಾರ್ಡ್ ಅಲ್ಲಿರುವ ಫಸ್ಟ್ ನೇಮ್, ಮಿಡಲ್ ನೇಮ್ ಮತ್ತು ಲಾಸ್ಟ್ ನೇಮ್ ಅನ್ನು ಎಂಟ್ರಿ ಮಾಡಿ. ಲಾಸ್ಟ್ ನೇಮ್ ಇಲ್ಲದೆ ಇದ್ದಲ್ಲಿ ಅದನ್ನು ಹಾಗೆ ಖಾಲಿ ಬಿಡಿ.
● ಡೇಟ್ ಆಫ್ ಬರ್ತ್ ಕೇಳಿರುವ ಆಪ್ಷನ್ ಅಲ್ಲಿ ಹಳೆಯ ಪ್ಯಾನ್ ಕಾರ್ಡ್ ಅಲ್ಲಿರುವ ಡೇಟ್ ಆಫ್ ಬರ್ತ್ ಹಾಕಿ ಹಾಗೆಯೇ ಆಪ್ಷನ್ ಇರುವಲ್ಲಿ ಈಗಿನ ಈಮೇಲ್ ಐಡಿಯನ್ನು ಹಾಕಿ ಮತ್ತು ಮೊಬೈಲ್ ಸಂಖ್ಯೆಯನ್ನು ಹಾಕಿ ಅದೇ ಲಿಂಕ್ ಆಗುತ್ತದೆ.
● ನಿಮ್ಮ ಸಿಟಿಜನ್ ಶಿಪ್ ಬಗ್ಗೆ ಕೇಳಲಾಗುವ ಪ್ರಶ್ನೆಯಲ್ಲಿ ಎಸ್ ಎಂದು ಟೈಪ್ ಮಾಡಿ ಮತ್ತು ನಿಮ್ಮ ಹಳೆಯ ಪ್ಯಾನ್ ಸಂಖ್ಯೆಯನ್ನು ಕೇಳುವ ಆಪ್ಷನ್ ಅಲ್ಲಿ ಪ್ಯಾನ್ ಸಂಖ್ಯೆಯನ್ನು ಫಿಲ್ ಮಾಡಿ, ಕೊನೆಯಲ್ಲಿ ಕ್ಯಾಪ್ಚಾ ಕೋಡ್ ಕೂಡ ಹಾಕಿ ಸಬ್ಮಿಟ್ ಕೊಡಿ.
● ಸಬ್ಮಿಟ್ ಆದ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಒಂದು ನೋಟಿಫಿಕೇಶನ್ ಬರುತ್ತದೆ. ಅದರಲ್ಲಿ ಟೋಕನ್ ನಂಬರ್ ಇರುತ್ತದೆ ಅದನ್ನು ನೋಟ್ ಮಾಡಿ ಇಟ್ಟುಕೊಳ್ಳಿ. ವಿಳಂಬ ಆದರೆ ನೀವು ಮತ್ತೆ ಹೊಸದಾಗಿ ಪ್ರಾರಂಭ ಮಾಡಲು ಈ ಟೋಕನ್ ನಂಬರ್ ಅನುಕೂಲವಾಗುತ್ತದೆ.
● ಕಂಟಿನ್ಯೂ ವಿತ್ ಅಪ್ಲಿಕೇಶನ್ ಫಾರ್ಮ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ ಮತ್ತೊಂದು ವಿಂಡೋ ಓಪನ್ ಆಗುತ್ತದೆ.
● ಅದರಲ್ಲಿ ಸಬ್ಮಿಟ್ ಸ್ಕಾನ್ಡ್ ಇ-ಸೈನ್ ಎಂದು ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ. ಸ್ಕ್ರೋಲ್ ಮಾಡಿದಾಗ ಫಿಜಿಕಲ್ ಕಾರ್ಡ್ ಪಡೆಯಲು ಪೇ ಮಾಡಬೇಕಾದ ಹಣದ ಮೊತ್ತದ ವಿವರ ಮತ್ತು ಆಯ್ಕೆ ಇರುತ್ತದೆ. ನಿಮಗೆ ಫಿಸಿಕಲ್ ಪ್ಯಾನ್ ಕಾರ್ಡ್ ಬೇಕಿದ್ದರೆ ಎಸ್ ಎಂದು ಕ್ಲಿಕ್ ಮಾಡಿ ಡಿಜಿಟಲ್ ಕಾರ್ಡ್ ಮಾತ್ರ ಸಾಕು ಎನ್ನುವುದಾದರೆ ನೋ ಎಂದು ಕ್ಲಿಕ್ ಮಾಡಿ. ನಂತರ ಫಾದರ್ ನೇಮ್ ಕೇಳಲಾಗಿರುತ್ತದೆ ಅದನ್ನು ಫಿಲ್ ಮಾಡಿ ಎರಡನೇ ಪುಟಕ್ಕೆ ಹೋಗಿ.
● ಪ್ಯಾನ್ ಕಾರ್ಡ್ ನಿಮಗೆ ತಿಳಿಸಬೇಕಾದ ಬೆಳೆಸದ ಬಗ್ಗೆ ಆಪ್ಷನ್ ಇರುತ್ತದೆ ಅದನ್ನು ಫಿಲ್ ಮಾಡಿ ಮುಂದಿನ ಹಂತಕ್ಕೆ ಹೋಗಿ.
● ಮೂರನೇ ಪುಟದಲ್ಲಿ ಡಾಕುಮೆಂಟ್‌ಗಳ ಬಗ್ಗೆ ಕೇಳಲಾಗುತ್ತದೆ ಅದರಲ್ಲಿ POI, POA, POD ಕೇಳಲಾಗುತ್ತದೆ ಅದರಲ್ಲಿ ಆಧಾರ್ ಕಾರ್ಡ್ ಎಂದು ಸೆಲೆಕ್ಟ್ ಮಾಡಿ. ಹಳೆಯ ಪಾನ್ ಕಾರ್ಡ್ ಕೂಡ ಕೇಳಲಾಗುತ್ತದೆ ಅದರ ಕಾಪಿಯನ್ನು ಕೂಡ ಅಟ್ಯಾಚ್ ಮಾಡಿ.
● ಫೋಟೋ ಕಾಪಿ, ಸಿಗ್ನೇಚರ್ ಕಾಪಿ, ಹಳೆಯ ಆಧಾರ್ ಕಾರ್ಡ್ ಮತ್ತು ಈಗಿನ ಆಧಾರ್ ಕಾರ್ಡ್ ಸ್ಕ್ಯಾನ್ಡ್ ಕಾಫಿಯನ್ನು ಕೂಡ ಅಟ್ಯಾಚ್ ಮಾಡಿ. ಇಲ್ಲಿ ಸೈನ್ ಮತ್ತು ಫೋಟೋ 50kb ಗಿಂತ ಕಡಿಮೆ ಇರಬೇಕು, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಕಾಪಿ 300kb ಒಳಗೆ ಇರಬೇಕು. pdf ಫಾರ್ಮ್ ಅಲ್ಲಿ ಇರಬೇಕು. ಪ್ಲಸ್ ಸಿಂಬಲ್ ಇರುವ ಕಡೆ ಕ್ಲಿಕ್ ಮಾಡಿ ಕಾಪಿ ಸೆಲೆಕ್ಟ್ ಮಾಡಿ ಅಪ್ಲೋಡ್ ಎಂದು ಇರುವಲ್ಲಿ ಕ್ಲಿಕ್ ಮಾಡಿದರೆ ಅಪ್ಲೋಡ್ ಆಗುತ್ತದೆ.
● ಪ್ರತಿಯೊಂದು ಡಾಕ್ಯುಮೆಂಟ್ ಅನ್ನು ಇದೇ ರೀತಿಯಾಗಿ ಅಪ್ಲೋಡ್ ಮಾಡಿಕೊಳ್ಳಬೇಕು. ಇದೆಲ್ಲ ಪೂರ್ತಿ ಮಾಡಿ ಸಬ್ಮಿಟ್ ಕೊಟ್ಟರೆ ಪೇಮೆಂಟ್ ಆಪ್ಷನ್ ಬರುತ್ತದೆ. ಆನ್ಲೈನ್ ಪೇಮೆಂಟ್ ಆಪ್ಷನ್ ಇದೆ ಅದರ ಮೂಲಕ 107ರೂ. ಪೇಮೆಂಟ್ ಮಾಡಿದರೆ 15 ದಿನಗಳಲ್ಲಿ ಅಪ್ಡೇಟ್ ಆಗಿರುವ ನಿಮ್ಮ ಪ್ಯಾನ್ ಕಾರ್ಡ್ ನಿಮ್ಮ ವಿಳಾಸಕ್ಕೆ ಬರುತ್ತದೆ.