ಜನನ ಪ್ರಮಾಣ ಪತ್ರ ಒಬ್ಬ ವ್ಯಕ್ತಿಗೆ ತನ್ನ ಜೀವನಪರ್ಯಂತ ಬಹಳ ಅಗತ್ಯವಾಗಿ ಬೇಕಾಗಿರುವ ಒಂದು ದಾಖಲೆ. ಈಗ ದೇಶದಲ್ಲಿ ಜನನ ಮತ್ತು ಮರಣ ನೋಂದಣಿ ಕೂಡ ಕಡ್ಡಾಯ ಎನ್ನುವ ನಿಯಮವಿದೆ. ಜನರ ಪ್ರಮಾಣ ಪತ್ರ ಇಲ್ಲದಿದ್ದರೆ ಆ ಮಗುವಿನ ಆಧಾರ್ ಕಾರ್ಡ್ ಮಾಡಿಸುವುದು ಮತ್ತು ಶಾಲಾ ದಾಖಲಾತಿ ಮಾಡಿಸುವುದು ಕಷ್ಟವಾಗುತ್ತದೆ.
ಜನನ ಪ್ರಮಾಣ ಪತ್ರ ಇಲ್ಲದೆ ಹೋದಲ್ಲಿ ಮಗುವಿನ ತಾಯಿಗೆ ಸರ್ಕಾರದಿಂದ ಸಿಗಬೇಕಾದ ಅನೇಕ ಅನುದಾನಗಳು ಮತ್ತು ಯೋಜನೆಗಳು ಕೈ ತಪ್ಪಿ ಹೋಗುತ್ತವೆ. ಕೆಲ ಸಂಧರ್ಭಗಳಲ್ಲಿ ಜನನ ಪ್ರಮಾಣ ಪತ್ರ ಮಾಡಿಸಿದರು ಕೂಡ ಸಣ್ಣ ಪುಟ್ಟ ತಪ್ಪುಗಳು ಆಗಿರುತ್ತವೆ. ಹೀಗಾಗಿ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಜನನ ಪ್ರಮಾಣ ಪತ್ರದಲ್ಲಿ ಹೆಸರಿನ ಬದಲಾವಣೆ ಮತ್ತು ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ವಿಳಾಸ ತಿದ್ದುಪಡಿ ಹಾಗೂ ಪೋಷಕರ ಹೆಸರಿನ ತಿದ್ದುಪಡಿಗೂ ಕೂಡ ಅವಕಾಶವಿದೆ.
ಜನನ ಪ್ರಮಾಣ ಪತ್ರ ಮಾಡಿಸಲು ಕೇಳುವ ದಾಖಲೆಗಳು:-
● ಮಗುವಿನ ಹಳೆಯ ಜನನ ಪ್ರಮಾಣ ಪತ್ರ
● ತಂದೆ ಮತ್ತು ತಾಯಿಯ ಆಧಾರ್ ಕಾರ್ಡ್ ಜೆರಾಕ್ಸ್
● e-stamp ಪೇಪರ್ ಅಫಿಡವಿಟ್.
● ಅಫಿಡವಿಟ್ ಅಲ್ಲಿ ತಿದ್ದುಪಡಿಗೆ ಕಾರಣ ಹಾಗೂ ಈ ಹಿಂದೆ ಜನನ ಪ್ರಮಾಣ ಪತ್ರದಲ್ಲಿ ಅದು ಏನೆಂದು ಇತ್ತು ಎನ್ನುವ ವಿವರ ಬರೆಯಬೇಕು ಮತ್ತು ಹೆಸರು ಹಾಗೂ ವಿಳಾಸದಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗದಂತೆ ನೋಡಿಕೊಳ್ಳಬೇಕು.
● ಪುರಸಭೆ ಅಥವಾ ಮಹಾನಗರ ಪಾಲಿಕೆ ಬಳಿ ಇರುವ ಅಂಗಡಿಗಳಲ್ಲಿ ಈ ಅಫಿಡೆವಿಟ್ ಮಾಡಿಕೊಡುತ್ತಾರೆ.
● ಜನನ ಪ್ರಮಾಣ ಪತ್ರ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಬೇಕು. ಈ ಅರ್ಜಿ ಪತ್ರ ಕೂಡ ಪುರಸಭೆ ಅಥವಾ ನಗರಸಭೆಯ ಸುತ್ತ ಮುತ್ತಲಿನ ಜೆರಾಕ್ಸ್ ಅಂಗಡಿಗಳಲ್ಲಿ ಸಿಗುತ್ತದೆ.
ತಿದ್ದುಪಡಿ ಪ್ರಕ್ರಿಯೆ:-
● ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ನೀವು ಮೊದಲು ಜನನ ಪ್ರಮಾಣ ಪತ್ರವನ್ನು ಪಡೆದ ಕಛೇರಿಯಲ್ಲಿ ಸಲ್ಲಿಸಬೇಕು.
● ಪುರಸಭೆ ಆಗಿದ್ದರೆ ಬಹಳ ಬೇಗನೆ ತಿದ್ದುಪಡಿಯಾಗಿ ಜನರ ಪ್ರಮಾಣ ಪತ್ರ ಸಿಗುತ್ತದೆ, ಮಹಾನಗರ ಪಾಲಿಕೆಗಳಾದರೆ ಸ್ವಲ್ಪ ವಿಳಂಬವಾಗುತ್ತದೆ.
● ಒಂದು ಪತ್ರಕ್ಕೆ 5 ರಿಂದ 7ರೂ. ಚಾರ್ಜ್ ಮಾಡುತ್ತಾರೆ.
● ನೀವು ಅರ್ಜಿ ಸಲ್ಲಿಸುವ ವೇಳೆಯೇ ನಿಮಗೆ ಎಷ್ಟು ಪ್ರತಿ ಬೇಕು ಎಂದು ಮನವಿ ಮಾಡಿರಬೇಕು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:-
● ಈಗ ಸೇವಾ ಸಿಂಧು ಪೋರ್ಟಲ್ ಮೂಲಕ ಕೂಡ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ.
2 ಸೇವಾ ಸಿಂಧು ಪೋರ್ಟಲ್ ಗೆ ಲಾಗಿನ್ ಆಗಿ ಇ-ಸೇವೆಗಳು ಸೆಲೆಕ್ಟ್ ಮಾಡಿ, ತಿದ್ದುಪಡಿಗಾಗಿ ಇರುವ ಆಪ್ಷನ್ ಸೆಲೆಕ್ಟ್ ಮಾಡಿ ಆ ಮುಖಪುಟಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು.
● ಹಂತ ಹಂತವಾಗಿ ಎಲ್ಲಾ ದಾಖಲೆಗಳ ಪುರಾವೆಯನ್ನು ಕೇಳಲಾಗುತ್ತದೆ. ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ನೀವು ಅರ್ಜಿ ಸಲ್ಲಿಸಬೇಕು ಮತ್ತು ನಿಮಗೆ ಎಷ್ಟು ಪ್ರತಿ ಬೇಕು ಎನ್ನುವುದನ್ನು ಕೂಡ ಸೆಲೆಕ್ಟ್ ಮಾಡಬೇಕು.
● ಆನ್ಲೈನ್ ಪೇಮೆಂಟ್ ಮೂಲಕ ಅರ್ಜಿ ಶುಲ್ಕ ಪಾವತಿಸಿದರೆ ನಿಮಗೆ ಕೊನೆಯಲ್ಲೇ ಅಕ್ನಾಲೆಜ್ಮೆಂಟ್ ಕಾಪಿ ಸಿಗುತ್ತದೆ. ಅದನ್ನು ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ಬಳಸಬಹುದು, ಅದಾದ ಬಳಿಕ ಕೆಲವೇ ದಿನಗಳಲ್ಲಿ ನಿಮಗೆ ತಿದ್ದುಪಡಿ ಆದ ಜನನ ಪ್ರಮಾಣ ಪತ್ರವು ಸಿಗುತ್ತದೆ.