ಗ್ಯಾರಂಟಿ ಕಾರ್ಡ್ ಯೋಜನೆ ಘೋಷಣೆಯಾದ ದಿನದಿಂದಲೂ ಕೂಡ ಕುಟುಂಬದ ಯಜಮಾನಿಯರು ಕಾಯುತ್ತಿರುವ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಈ ವಾರ ಚಾಲನೆ ಸಿಕ್ಕಿದೆ. ಸೋಮವಾರದಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನೋಂದಣಿ ಮಾಡಿಕೊಳ್ಳುವ ಅವಕಾಶ ನೀಡಲಾಗಿದ್ದು, ಸರ್ಕಾರ ಅದಕ್ಕೆ ಮಾರ್ಗಸೂಚಿಯನ್ನು ಕೂಡ ತಿಳಿಸಿದೆ.
ಸರ್ಕಾರ ನೀಡಿರುವ ಸಹಾಯವಾಣಿ ಸಂಖ್ಯೆಯಾಗಿರುವ 8147500500 ಗೆ ಪಡಿತರ ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥರ ಮೊಬೈಲ್ ಸಂಖ್ಯೆಯಿಂದ ಪಡಿತರ ಚೀಟಿ ಸಂಖ್ಯೆಯನ್ನು SMS ಕಳುಹಿಸುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಈ ರೀತಿ SMS ಕಳುಹಿಸಿದರೆ ಕೆಲವೇ ಸೆಕೆಂಡ್ ಗಳಲ್ಲಿ ಕರ್ನಾಟಕ ಸರ್ಕಾರದದಿಂದ ರಿಪ್ಲೈ ಬರುತ್ತದೆ.
ನೀವು ಯಾವ ಸೇವಾಕೇಂದ್ರದಲ್ಲಿ ಯಾವ ಸಮಯಕ್ಕೆ ಯಾವ ದಿನಾಂಕದಂದು ಹೋಗಿ ಅರ್ಜಿ ಸಲ್ಲಿಸಬೇಕು ಎನ್ನುವ ವಿವರ ಬರುತ್ತದೆ. ನಿಮ್ಮ ಸ್ಲಾಟ್ ಬುಕಿಂಗ್ ಆಗಿರುತ್ತದೆ. ಆದರೆ ಸಮಸ್ಯೆ ಏನು ಎಂದರೆ ಕೆಲವರಿಗೆ ಎಷ್ಟು ಬಾರಿ SMS ಕಳುಹಿಸಿದರೂ ಕೂಡ ರಿಪ್ಲೈ ಬರುತ್ತಿಲ್ಲ, ಇನ್ನು ಕೆಲವರಿಗೆ 24 ಗಂಟೆಗಳ ನಂತರ ಪ್ರಯತ್ನಿಸಿ ಎಂದು ರಿಪ್ಲೈ ಬರುತ್ತಿದೆ. ಇದಕ್ಕೆ ಕಾರಣ ಏನು ಮತ್ತು ಪರಿಹಾರ ಏನು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
● ಸರ್ಕಾರವು ಈ ಹಿಂದೆ ಗೃಹಜ್ಯೋತಿ ಯೋಜನೆಗೆ ಆದ ಸರ್ವರ್ ಸಮಸ್ಯೆ ಮತ್ತು ಜನದಟ್ಟಣೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕಾಗಿ ವ್ಯವಸ್ಥಿತವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನೋಂದಣಿ ಮತ್ತು ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡಿದೆ. ಸರ್ಕಾರದ ಆದೇಶದ ಮೇರೆಗೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರ ಇವುಗಳು ಮಾತ್ರ ಅರ್ಜಿ ಸ್ವೀಕರಿಸುತ್ತವೆ.
ಅಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಎಂದರೆ ನೀವು ಎಸ್ಎಂಎಸ್ ಕಳಿಸುವ ಮೂಲಕ ನಿಮ್ಮ ವೇಳಾಪಟ್ಟಿಯನ್ನು ನಿಗದಿಪಡಿಸಿಕೊಳ್ಳಬೇಕು. ಒಂದು ದಿನಕ್ಕೆ ಒಂದು ಸೇವಾಕೇಂದ್ರದಲ್ಲಿ 60 ಜನರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುವುದರಿಂದ ಅದಕ್ಕಿಂತ ಹೆಚ್ಚಿನ SMS ಗಳು ಹೋದಾಗ ಈಗಾಗಲೇ ಕೆಲ ದಿನಗಳವರೆಗೆ ಬುಕ್ಕಿಂಗ್ ಆಗಿ ಹೋಗಿದ್ದರೆ 24 ಗಂಟೆಯ ನಂತರ ಪ್ರಯತ್ನಿಸಿ ಎಂದು ರಿಪ್ಲೈ ಬರಬಹುದು.
● ಕೆಲವೊಮ್ಮೆ ಸರ್ವರ್ ಸಮಸ್ಯೆ ಇದ್ದಾಗ ಕೂಡ ಸರ್ವರ್ ಶಟ್ ಡೌನ್ ಆಗಿದ್ದಾಗ SMS ಕಳುಹಿಸಿದರು ಕೂಡ ರಿಪ್ಲೈ ಬರದೇ ಇರಬಹುದು.
● ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್ ಅಲ್ಲಿರುವ ಮೊಬೈಲ್ ಸಂಖ್ಯೆ ಮೂಲಕ ಸ್ಲಾಟ್ ಬುಕ್ಕಿಂಗ್ ಮಾಡಿಕೊಳ್ಳಲು ಸಹಾಯವಾಣಿ ಸಂಖ್ಯೆಗೆ SMS ಮಾಡಬೇಕು, ಆಗ ತಕ್ಷಣವೇ ರಿಪ್ಲೈ ಬರುತ್ತದೆ. ಸರ್ಕಾರ ಈಗ ಒಂದು ವೇಳೆ ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಇಲ್ಲದವರಿಗೆ ಇತರ ಸದಸ್ಯರ ಮೊಬೈಲ್ ಸಂಖ್ಯೆಯಿಂದ SMS ಕಳುಹಿಸಲು ಅನುಮತಿ ನೀಡಿದೆ ಆದರೆ ಆ ಕಾರಣಕ್ಕಾಗಿ ತಡವಾಗುತ್ತಿರಬಹುದು.
● ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನೂ ಸಹ ಬಹಳ ಸಮಯವಕಾಶ ಇರುವುದರಿಂದ ಜೊತೆಗೆ ಒಂದು ದಿನಕ್ಕೆ ಒಂದು ಸೇವಾ ಕೇಂದ್ರದಲ್ಲಿ 60 ಜನರಿಗೆ ಮಾತ್ರ ಅವಕಾಶ ಇರುವುದರಿಂದ ಪ್ರಕ್ರಿಯೆ ಈಗ ನಿಧಾನವಾಗಿ ಆರಂಭಗೊಳ್ಳುತ್ತಿದೆ. ಹೀಗಾಗಿ ಆರಂಭದಲ್ಲಿ ಅರ್ಜಿ ಸಲ್ಲಿಸಿದವರ ಲಿಸ್ಟ್ ಮುಗಿದ ಬಳಿಕ ನಿಮಗೆ ರಿಪ್ಲೈ ಬರಬಹುದು ಹಾಗಾಗಿ ತಾಳ್ಮೆಯಿಂದ ಕಾಯುವುದು ಉತ್ತಮ.
● ಸರ್ಕಾರ ಮೊದಲಿಗೆ 8147500500 ಸಹಾಯವಾಣಿ ಸಂಖ್ಯೆಗೆ SMS ಕಳುಹಿಸಿ ಸ್ಲಾಟ್ ಬುಕಿಂಗ್ ಸೂಚಿಸಿತ್ತು, ಈಗ ಮತ್ತೊಂದು ಸಹಾಯವಾಣಿ ಸಂಖ್ಯೆಯನ್ನು ಕೂಡ ನೀಡಿದೆ.
8277000555 ಸಹಾಯಗೊಳಿ ಸಂಖ್ಯೆಗೂ ಕೂಡ ಪಡಿತರ ಚೀಟಿ ಸಂಖ್ಯೆಯನ್ನು SMS ಮಾಡಿ ನೋಂದಣಿ ವೇಳಾಪಟ್ಟಿ ಪಡೆದುಕೊಳ್ಳಬಹುದು.
● ಒಂದು ವೇಳೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕಿದ ದಿನದಿಂದಲೂ ಕೂಡ ಸಂದೇಶ ಕಳುಹಿಸುತ್ತಿದ್ದರೂ ಇನ್ನು SMS ಗೆ ರಿಪ್ಲೈ ಬಂದಿಲ್ಲ ಎಂದರೆ ತಾಂತ್ರಿಕ ಸಮಸ್ಯೆಯಿಂದ ಹೀಗಾಗಿರಬಹುದು. ಗೃಹಲಕ್ಷ್ಮಿ ಯೋಜನೆಯ ಅಧಿಕೃತ ವೆಬ್ಸೈಟ್ https://sevasindhugs.karnataka.gov.in/ ಗೆ ಭೇಟಿ ಕೊಟ್ಟು ಅದರಲ್ಲೂ ಸಹ ನಿಮ್ಮ ಪಡಿತರ ಚೀಟಿ ಸಂಖ್ಯೆ ಹಾಗೂ ಕ್ಯಾಪ್ಚಾ ನಮೂದಿಸಿ ನೀವು ಅರ್ಜಿ ಸಲ್ಲಿಸುವ ವೇಳಾಪಟ್ಟಿ ಚೆಕ್ ಮಾಡಿಕೊಳ್ಳಬಹುದು.