ಪತಿ ಪತ್ನಿ ಇನ್ನು ಮುಂದೆ ಈ ಕೆಲಸ ಮಾಡುವಂತಿಲ್ಲ.! ನಿಯಮ ಮೀರಿದ್ರೆ ಸೀದಾ ಜೈಲಿಗೆ, ಸರ್ಕಾರದ ಹೊಸ ಆದೇಶ.!

 

ಸೋಶಿಯಲ್ ಮೀಡಿಯಾ ಎನ್ನುವುದು ಈಗ ಜಗತ್ತಿನಾದ್ಯಂತ ವಿಸ್ತರಿಸಿಕೊಂಡು ಎಲ್ಲರನ್ನೂ ಒಂದೆಡೆ ಬೆಸೆದಿರುವ ಜಾಲ. ಈಗಿನ ಜನರೇಶನ್ ಅವರಿಗೆ ಸೋಶಿಯಲ್ ಮೀಡಿಯಾ ಬದುಕಿನ ಮುಖ್ಯ ಭಾಗವಾಗಿದೆ ಎಂದರು ಕೂಡ ತಪ್ಪಾಗಲ್ಲ. ಇದರ ಬಳಕೆ ಎಷ್ಟು ಸರಿ ತಪ್ಪು ಎನ್ನುವ ವಿಚಾರಕ್ಕೂ ಮೊದಲು ಇದು ಎಷ್ಟು ಅಗತ್ಯವೋ ಅನಗತ್ಯವೋ ಎನ್ನುವ ಲೆಕ್ಕಚಾರ ಹಾಕುವುದಕ್ಕೂ ಅವಕಾಶ ಸಿಕ್ಕಿ ಯೋಚಿಸುವ ಮೊದಲೇ ಇದು ನಮ್ಮ ನಡುವೆ ಬೆಸೆದು ಹೋಗಿದೆ.

ಇಂದು ಎಷ್ಟೋ ಯುವ ಜನತೆಗೆ ಪ್ರತಿದಿನ ಆರಂಭ ಆಗುವುದೇ ಸೋಶಿಯಲ್ ಮೀಡಿಯಾಗಳನ್ನು ನೋಡುವ ಮೂಲಕ, ಯಾವುದೇ ಒಂದು ಖುಷಿ, ಸಂಭ್ರಮದ ವಿಚಾರವಿರಲಿ ಅಥವಾ ನೋ’ವಿನ ವಿಚಾರವೇ ಇರಲಿ ಅದನ್ನು ಪೋಸ್ಟ್ ಮಾಡುವುದು ಅಥವಾ ಆಗುಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್ ಗೆ ಕಮೆಂಟ್ ಮಾಡುವುದೇ ತಮ್ಮ ಕರ್ತವ್ಯ ಎಂದುಕೊಂಡಿರುವಂತೆ ಅವರು ಬದುಕುತ್ತಿರುತ್ತಾರೆ.

ಈ ರೀತಿ ಸೋಶಿಯಲ್ ಮೀಡಿಯಾ ಬಳಕೆ ರೂಢಿಯಾಗಿ ಹೋಗಿರುವುದರಿಂದ ಸೋಶಿಯಲ್ ಮೀಡಿಯಾದಲ್ಲಿ ಅವರು ಹಾಕುವ ಮಾಹಿತಿಗಳನ್ನು ಬಳಸಿಕೊಂಡು ಮೂರನೇ ವ್ಯಕ್ತಿ ಇದರ ದುರುಪಯೋಗ ಪಡಿಸಿಕೊಂಡಿರುವುದು ಬಗ್ಗೆ ಪ್ರಕರಣಗಳು ಕೂಡ ದಾಖಲು ಆಗುತ್ತಿವೆ ಸೆಲೆಬ್ರಿಟಿಗಳ ವಿಚಾರದಲ್ಲಂತೂ ಇದು ಸರ್ವೇ ಸಾಮಾನ್ಯ ಆಗಿಹೋಗಿದೆ.

ಅವರ ಹೆಸರಿನಲ್ಲಿ ಅವರ ಫೋಟೋ ಹಾಗೂ ಮಾಹಿತಿ ಬಳಸಿಕೊಂಡು ಫೇಕ್ ಅಕೌಂಟ್ ಗಳು ಕ್ರಿಯೇಟ್ ಮಾಡಿ ಅವರಿಗಿಂತ ಹೆಚ್ಚು ಪಾಲವರ್ಸ್ ಹೊಂದಿರುವವರು, ಪ್ರಭಾವಿ ವ್ಯಕ್ತಿಗಳ ಐಡೆಂಟಿಟಿ ಇಟ್ಟುಕೊಂಡು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಲು ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವವರು ಇದ್ದಾರೆ. ಇನ್ನು ಚೆಂದುಳ್ಳಿ ಚೆಲುವೆಯರಂತೂ ಸಿಕ್ಕ ಸಿಕ್ಕದನೆಲ್ಲಾ ಸೋಶಿಯಲ್ ಮೀಡಿಯಾದ ಹಂಚಿಕೊಂಡು ಟ್ರೋಲ್ ಆಗಿರುವ ಉದಾಹರಣೆಯೂ ಕಡಿಮೆ ಇಲ್ಲ.

ಎಲ್ಲಾ ಕಣ್ಣೆದುರು ನಡೆಯುತ್ತಿದ್ದರೂ ಕೂಡ ಗೊತ್ತು ಗೊತ್ತಿಲ್ಲದೇ ನಾವು ಈ ರೀತಿ ತಪ್ಪನ್ನು ಮಾಡುತ್ತಿರುತ್ತೇವೆ. ದಂಪತಿಗಳಿಗೆ ಮಗು ಹುಟ್ಟಿದ ಸಂಭ್ರಮವನ್ನು ಕೂಡ ಅದು ಭೂಮಿಗೆ ಬಂದ ದಿನದ ಫೋಟೋ ಹಾಗೂ ತಿಂಗಳಿಂದ ಅದರ ಹುಟ್ಟುಹಬ್ಬದ ಸಂಭ್ರಮ ಮಾಡುವ ಫೋಟೋಗಳ ಮೂಲಕ ಹಂಚಿಕೊಳ್ಳುವುದೇ ಈಗ ಟ್ರೆಂಡಿಂಗ್ ಆಗಿ ಹೋಗಿದೆ. ಸಾಮಾನ್ಯದಿಂದ ಇದು ಸೆಲೆಬ್ರಿಟಿ ವರೆಗೂ ಕೂಡ ಎಲ್ಲರೂ ಇದನ್ನು ಮಾಡುತ್ತಾರೆ.

ಇದಕ್ಕೆ ಈಗ ಅಸ್ಸಾಂ ಸರ್ಕಾರ ತಡೆ ತಂದಿದೆ. ಅಸ್ಸಾಂ ರಾಜ್ಯದಲ್ಲಿ ಈ ರೀತಿ ಮಕ್ಕಳ ಫೋಟೋಶೂಟ್ ಮಾಡಿಸಿ ಹಂಚಿಕೊಳ್ಳುವಂತಿಲ್ಲ ,ಇದು ಬಹಳ ದುಷ್ಪರಿಣಾಮ ಬೀರುತ್ತದೆ ಎಂದು ಈ ರೀತಿ ಮಾಡುವ ಪೋಷಕರಿಗೆ ಸರ್ಕಾರ ನಿರ್ಬಂಧ ಹೇರಿದೆ. ಕೆಲವರು ಇದರಲ್ಲಿ ತಮ್ಮ ಮಕ್ಕಳ ಮುಖಕ್ಕೆ ಬೇರೆದೆ ಸ್ಟಿಕರ್ ಅಥವಾ ಇಮೋಜಿ ಹಾಕಿ ಅದನ್ನು ಪೋಸ್ಟ್ ಮಾಡಿ ಮಗುವಿನ ಐಡೆಂಟಿಟಿಯನ್ನು ಮುಚ್ಚಿಡುತ್ತಾರೆ ಇದು ಒಂದು ಮಟ್ಟಕ್ಕೆ ಸಹ್ಯ ಎಂದು ಹೇಳಬಹುದು.

ಆದರೆ ಅಸ್ಸಾಂ ಸರ್ಕಾರ ವಿಧಿಸಿರುವ ಹೊಸ ಆದೇಶದ ಪ್ರಕಾರ ಯಾವುದೇ ಒಬ್ಬ ವ್ಯಕ್ತಿಯ ಪರ್ಮಿಷನ್ ಇಲ್ಲದೆ ಆತನ ಫೋಟೋವನ್ನು ಸೋಶಿಯಲ್ ಮೀಡಿಯಾ ಹಂಚಿಕೊಳ್ಳಲು ತಪ್ಪು ಆದರೆ ಮಕ್ಕಳ ವಿಷಯದಲ್ಲಿ ಪೋಷಕರು ಈ ರೀತಿ ಮಾಡುತ್ತಿಲ್ಲ. ಹಾಗಾಗಿ ಈ ರೀತಿ ಮಕ್ಕಳ ಮುಖವನ್ನು ಸೋಶಿಯಲ್ ಮೀಡಿಯದಲ್ಲಿ ಹಂಚಿಕೊಳ್ಳುವುದಕ್ಕಿಂತ ಉತ್ತಮವಲ್ಲ ಎಂದು ಅಸ್ಸಾಂ ಸರ್ಕಾರ ಅಭಿಯಾನವನ್ನು ಆರಂಭಿಸಿದೆ.

ಸ್ವತಃ ಪೊಲೀಸರೇ ಈ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರಿಗೆ ತಿಳಿ ಹೇಳುತ್ತಿದ್ದಾರೆ. ಜನರು ಎಷ್ಟರಮಟ್ಟಿಗೆ ಎಚ್ಚೆತ್ತುಕೊಳ್ಳುತ್ತಾರೆ ಎಂದು ಕಾದು ನೋಡಬೇಕು ಅಷ್ಟೇ. ಅಸ್ಸಾಂ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಜಾರಿಗೆ ಬರಬೇಕು ಎನ್ನುವುದೇ ಹಲವರ ಆಶಯ, ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

Leave a Comment

%d bloggers like this: