ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆಗಳ ಜಾರಿ ಬಗ್ಗೆಯೇ ಹೆಚ್ಚು ಚರ್ಚೆ. ಈ ಪೈಕಿ ಮಹಿಳೆಯರದ್ದೇ ಮೇಲುಗೈ ಎಂದರೂ ಕೂಡ ತಪ್ಪಾಗುವುದಿಲ್ಲ. ಯಾಕೆಂದರೆ ಗ್ಯಾರಂಟಿ ಕಾರ್ಡ್ ಯೋಜನೆಗಳ ಪೈಕಿ ಮಹಿಳೆಯರಿಗೆ ಹೆಚ್ಚು ಅನುಕೂಲತೆ ಸಿಗುತ್ತಿದೆ. ಈಗಾಗಲೇ ಜಾರಿಯಾಗಿರುವ ಯೋಜನೆಗಳನ್ನು ಹೇಳುವುದಾದರೆ ಶಕ್ತಿ ಯೋಜನೆಯಡಿ ಕರ್ನಾಟಕದಾದ್ಯಂತ ಮಹಿಳೆಯರು ಕರ್ನಾಟಕದ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.
ಗೃಹಜ್ಯೋತಿ ಯೋಜನೆಗೆ R.R ಸಂಖ್ಯೆ ಜೊತೆ ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ಸಲ್ಲಿಸಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೂಡ ಮುಗಿದಿದೆ. ಜುಲೈ ತಿಂಗಳಿನಿಂದ ಸರ್ರಕಾದ ಕಂಡಿಷನ್ ಜೊತೆ 200 ಯೂನಿಟ್ ವರೆಗೆ ವಿದ್ಯುತ್ ಬಳಕೆ ಮಾಡುವವರಿಗೆ ಆಗಸ್ಟ್ ತಿಂಗಳಿನ ಬಿಲ್ ಪಾವತಿ ಮಾಡುವ ಅಗತ್ಯವಿರುವುದಿಲ್ಲ. ಈಗ ಅನ್ನ ಭಾಗ್ಯ ಯೋಜನೆಗೆ ಕೂಡ ಚಾಲನೆ ದೊರೆತಾಗಿದೆ.
ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಪಡಿತರವನ್ನು 10 Kgಗೆ ಏರಿಸಲಾಗುವುದು ಎನ್ನುವುದು ಕೂಡ ಗ್ಯಾರಂಟಿ ಕಾರ್ಡ್ ಜೊತೆ ಘೋಷಣೆಯಾಗಿದ್ದ ಒಂದು ಯೋಜನೆಯಾಗಿತ್ತು. ಇದೇ ಜುಲೈ ತಿಂಗಳಿಂದ ಇದೂ ಸಹ ಜಾರಿಗೆ ಬಂದಿರುತ್ತದೆ ಎಂದು ವಾಗ್ದಾನ ನೀಡಲಾಗಿತ್ತು. ಆದರೆ ದಾಸ್ತಾನು ಕೊರತೆಯಾದ ಕಾರಣ ಎಂದಿನಂತೆ ಒಬ್ಬ ಸದಸ್ಯನಿಗೆ 5Kg ಪಡಿತರ ಹಾಗೂ 5Kg ಹೆಚ್ಚುವರಿ ಅಕ್ಕಿ ಬದಲಿಗೆ ಕೆಜಿಗೆ 34 ರೂಪಾಯಿಯಂತೆ 170 ರೂ. ನೀಡಲು ಸರ್ಕಾರ ನಿರ್ಧರಿಸಿದೆ.
ಅಂತೆಯೇ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಅವರ ರೇಷನ್ ಕಾರ್ಡ್ ಅಲ್ಲಿರುವ ಫಲಾನುಭವಿಗಳ ಒಟ್ಟು ಹಣವನ್ನು DBT ಮೂಲಕ ವರ್ಗಾವಣೆ ಮಾಡುತ್ತಿದೆ. ಇದಕ್ಕಾಗಿ ಯಾವುದೇ ಅರ್ಜಿಯನ್ನು ಆಹ್ವಾನಿಸಿಲ್ಲ ಆದರೆ ಕೆಲ ಕಂಡಿಷನ್ ಹೇರಿದೆ. ಅದೇನೆಂದರೆ ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗೆ ಲಿಂಕ್ ಆಗಿರಬೇಕು, ಅವರ KYC ಅಪ್ಡೇಟ್ ಆಗಿರಬೇಕು ಹಾಗೆ ಕುಟುಂಬದ ಮುಖ್ಯಸ್ಥರ ಆಧಾರ್ ಸಂಖ್ಯೆ ಅವರ ಬ್ಯಾಂಕ್ ಖಾತೆಗೆ ಲಿಂಕ್ ಆಗಿ NPCI ಮ್ಯಾಪಿಂಗ್ ಆಗಿರಬೇಕು.
ಈಗಾಗಲೇ ಹಂತ ಹಂತವಾಗಿ ಎಲ್ಲ ಜಿಲ್ಲೆಯ ಫಲಾನುಭವಿಗಳಿಗೆ ಸರ್ಕಾರ ಹಣವನ್ನು ವರ್ಗಾವಣೆ ಮಾಡಿದೆ. ಇದರಲ್ಲಿರುವ ಮತ್ತೊಂದು ಮಹತ್ವವಾದ ವಿಷಯ ಏನೆಂದರೆ, ಕುಟುಂಬದ ಮುಖ್ಯಸ್ಥರ ಹೆಸರು ಆ ಕುಟುಂಬದ ಮಹಿಳೆಯದ್ದೇ ಆಗಿರುತ್ತದೆ. ಹಲವು ವರ್ಷಗಳಿಂದ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಆ ಕುಟುಂಬದ ಹಿರಿಯ ಮಹಿಳೆಯೇ ಆಗಿರುವಂತೆ ಕ್ರಮ ಕೈಗೊಳ್ಳಲಾಗಿದೆ.
ಉಳಿದ ಸದಸ್ಯರ ಹೆಸರು ನಂತರ ಇರುತ್ತದೆ. ಹಾಗಾಗಿ ಯಜಮಾನಿ ಬ್ಯಾಂಕ್ ಖಾತೆಗೆ ಯೋಜನೆ ಹಣ ವರ್ಗಾವಣೆ ಮಾಡುವುದು ಸರ್ಕಾರಕ್ಕೆ ಸಲೀಸಾಗಿದೆ. ಆದರೆ ಒಂದು ಕುಟುಂಬದಲ್ಲಿ ಅತ್ತೆ ಸೊಸೆ ಇಬ್ಬರೂ ಕೂಡ ಆ ಮನೆಯನ್ನು ನಿರ್ವಹಣೆ ಮಾಡುತ್ತಿರುತ್ತಾರೆ ಆಗ ಸೊಸೆ ಯು ಅತ್ತೆ ಬದಲಿಗೆ ತಮ್ಮ ಖಾತೆಗೆ ಹಣ ಬರುತ್ತದೆಯಾ ಎಂದು ಪ್ರಶ್ನೆ ಮಾಡುತ್ತಾರೆ.
ಗ್ಯಾರಂಟಿ ಕಾರ್ಡ್ ಯೋಜನೆಗಳು ಘೋಷಣೆಯಾದ ಮೇಲೆ ಇಂತಹ ಅನೇಕ ಗೊಂದಲಗಳು ಸೊಸೆಯೊಂದರಲ್ಲಿ ಇವೆ. ಹಾಗಾಗಿ ಅವುಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇನೆ. ಸರ್ಕಾರ ನೀಡಿರುವ ಆದೇಶದ ಪ್ರಕಾರ ಒಂದು ರೇಷನ್ ಕಾರ್ಡ್ ಅಲ್ಲಿ ಅತ್ತೆ ಸೊಸೆ ಇಬ್ಬರೂ ಕೂಡ ಇದ್ದಾಗ ಅತ್ತೆಯು ಕುಟುಂಬದ ಮುಖ್ಯಸ್ಥೆಯ ಸ್ಥಾನದಲ್ಲಿರುತ್ತಾರೆ.
ಸೊಸೆ ಈ ಸಹಾಯಧನವನ್ನು ಪಡೆಯಲು ಬಯಸಿದರೆ ಅದು ಖಂಡಿತ ಸಾಧ್ಯವಾಗುವುದಿಲ್ಲ. ಅತ್ತೆ ಜೀವಂತ ಇರುವಾಗ ಉಳಿದ ಸದಸ್ಯರ ಸ್ಥಾನದಲ್ಲಿರುವ ಸೊಸೆಯನ್ನು ಯಜಮಾನಿ ಎಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸ್ಪಷ್ಟಪಡಿಸಿದೆ.