ನಿಮ್ಮ ಜಮೀನಿನಲ್ಲಿ ಪ್ರಾಣಿಗಳ ಹಾವಳಿನಾ.? ಚಿಂತೆ ಬಿಡಿ ಮನುಷ್ಯನಂತೆ ಶಬ್ಧ ಮಾಡಿ ಪ್ರಾಣಿಗಳನ್ನು ಓಡಿಸುವ ಯಂತ್ರ ಇದು, ಕರೆಂಟ್ ಬೇಡ, ರೈತರು ತಪ್ಪದೇ ಈ ಮಾಹಿತಿ ನೋಡಿ.!

 

ರೈತರಿಗೆ ಬೆಳೆ ಬೆಳೆಯಲು ಸಾಕಷ್ಟು ಸಂಕಷ್ಟಗಳಿವೆ. ಭೂಮಿಯನ್ನು ಹಸನು ಮಾಡಿ ಬೆಳೆ ಬಿತ್ತುವ ತನಕ ಮಳೆ ಜೊತೆ ಆಡುವ ಜೂಜಾಟವಾದರೆ ಬಳಿಕ ಕಳೆಗಳು, ಕೀಟಗಳ ಕಾ’ಟ, ಜಮೀನು ಕೆಲಸ ಮಾಡಲು ಕೂಲಿ ಕಾರ್ಮಿಕರ ಕೊರತೆ, ರಸಗೊಬ್ಬರ ಕೃತಕ ಅಭಾವ ಒಂದು ವೇಳೆ ಬಿತ್ತನೆ ಬೀಜಗಳು ಕ’ಳ’ಪೆಯಾಗಿದ್ದರೆ ಅದರ ಸಮಸ್ಯೆ ಒಂದು ಕಡೆ ಆಗಿದ್ದರೆ ಪ್ರಕೃತಿ ವೈಪರೀತಗಳಿಂದ ಉಂಟಾಗುವ ಬೆಳೆ ಹಾನಿ ಮತ್ತೊಂದು ಹೊರೆ.

ಒಂದು ವೇಳೆ ಇದೆಲ್ಲದರಿಂದ ತಪ್ಪಿಸಿಕೊಂಡು ಉತ್ತಮ ಬೆಳೆಯಾಗಿ ರೈತ ಸಂತಸ ಪಡುವ ಹೊತ್ತಿಗೆ ಪಕ್ಷಿಗಳ ಹಾ’ವ’ಳಿ ಮತ್ತೊಂದು ತಲೆನೋವಾಗಿ ಪರಿಣಮಿಸುತ್ತದೆ ಇವುಗಳಿಂದ ರೈತ ಬೆಳೆಯನ್ನು ರಕ್ಷಿಸಿಕೊಳ್ಳಲು ಪಡುವ ಪಾಡು ಅಷ್ಟಿಷ್ಟಲ್ಲ. ಕಾಡಂಚಿನಲ್ಲಿ ಜಮೀನು ಹೊಂದಿರುವವರಿಗೆ ಕಾಡು ಪ್ರಾಣಿಗಳಾದ ಆನೆ ಹಂದಿ ಕರಡಿಗಳ ಕಾಟ ಇರುತ್ತದೆ. ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಒಂದೇ ಒಂದು ರಾತ್ರಿಯಲ್ಲಿ ನಾಶ ಮಾಡುತ್ತವೆ.

ಇನ್ನು ಕೆರೆ, ಕಾವಲೆ, ಹಳ್ಳಕೊಳ್ಳದ ಬಯಲಿನಲ್ಲಿ ಜಮೀನು ಇದ್ದರೆ ಅಥವಾ ಜಮೀನಿನಲ್ಲಿ ಮರಗಳ ಸಂಖ್ಯೆ ಹೆಚ್ಚಾಗಿದ್ದರೆ ಪಕ್ಷಿಗಳ ಕಾ’ಟ ತಪ್ಪುವುದಿಲ್ಲ. ಗಿಳಿಗುಬ್ಬಿ ನವಿಲುಗಳ ಗುಂಪು ಬೆಳೆಯನ್ನು ಹಾನಿ ಮಾಡುತ್ತವೆ. ಒಮ್ಮೊಮ್ಮೆ ಬಿತ್ತನೆ ಮಾಡಿದ ಸಮಯದಲ್ಲೂ ಕೂಡ ಬಿತ್ತನೆ ಬೀಜವನ್ನು ಹುಡುಕಿ ತಿಂದು ರೈತನಿಗೆ ಕಾಟ ಕೊಡುತ್ತವೆ. ಈ ಸಮಯದಲ್ಲಿ ರೈತನು ಅವುಗಳಿಂದ ತಪ್ಪಿಸಿಕೊಳ್ಳಬೇಕು ಎಂದರೆ ಹರಸಾಹಸವನ್ನೇ ಪಡಬೇಕು.

ಇಲ್ಲಿಯವರೆಗೂ ಕಾಡು ಪ್ರಾಣಿಗಳಿಂದ ಹಾಗೂ ಪಕ್ಷಿಗಳ ತೊಂದರೆ ತಪ್ಪಿಸಿಕೊಳ್ಳಲು ರೈತ ಸಿಡಿಗುಂಡುಗಳನ್ನು ಸಿಡಿಸುವುದು, ಪಟಾಕಿ ಹೊಡೆಯುವುದು. ಜೋರಾಗಿ ಕೂಗುವುದು ಅಥವಾ ಬೆದರು ಬೊಂಬೆ ನಿಲ್ಲಿಸುವುದು ಪಕ್ಷಿಗಳನ್ನು ಓಡಿಸಲು ತಟ್ಟೆ ಬಡಿದು ತಮಟೆ ಬಡಿದು ಡಬ್ಬಗಳನ್ನು ಬಡಿದು ಜೋರಾಗಿ ಸೌಂಡ್ ಮಾಡುವುದು ಇಂತಹ ಪ್ರಯತ್ನಗಳನ್ನು ಮಾಡಿ ಸಾಕಾಗುತ್ತಾನೆ.

ದಿನ ಕಳೆದಂತೆ ಎಲ್ಲಾ ಕ್ಷೇತ್ರದಲ್ಲಿ ಕೂಡ ತಂತ್ರಜ್ಞಾನದ ಅಳವಡಿಕೆ ಆಗುತ್ತಿದೆ. ಈಗ ಕೃಷಿಯಲ್ಲಿ ಕೂಡ ಸಾಕಷ್ಟು ಯಂತ್ರೋಪಕರಣ ಹಾಗೂ ತಂತ್ರಜ್ಞಾನದ ಬಳಕೆ ಆರಂಭವಾಗಿದೆ. ಇದನ್ನೇ ಸದುಪಯೋಗ ಪಡಿಸಿಕೊಂಡ ಗೌಡ್ರು ನಾಗರಾಜ್ ಎನ್ನುವ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜಂಗಮ ಸೊವೇನಹಳ್ಳಿ ರೈತರು Automatic Solar Sound system ಎನ್ನುವ ಯಂತ್ರವನ್ನು ಕಂಡು ಹಿಡಿದಿದ್ದಾರೆ.

ಈ ಯಂತ್ರವು ಒಂದು ಸೋಲಾರ್ ಪ್ಯಾನಲ್, ಚಿಕ್ಕ ಬ್ಯಾಟರಿ, LED ಬಲ್ಬ್, ಸ್ಪೀಕರ್ ಗಳು ಮತ್ತು ಇನ್ನಿತರ ಸೌಂಡ್ ಮಾಡಲು ಸಿಸ್ಟಂಗೆ ಬೇಕಾದ ಪರಿಕರಣಗಳನ್ನು ಹೊಂದಿರುತ್ತದೆ. ಇದನ್ನು ಜಮೀನಿನಲ್ಲಿ ಅಳವಡಿಸಿದರೆ ನೈಟ್ ಮೂಡ್ ಅಥವಾ ಡೇ ಮೋಡ್ ಎರಡರಲ್ಲೂ ಆಯ್ಕೆ ಪ್ರಕಾರ ಇದು ವರ್ಕ್ ಮಾಡುತ್ತದೆ.

ಪ್ರತಿ 10 ನಿಮಿಷಕ್ಕೊಮ್ಮೆ 12 ವಿಧವಾದ ಕಾಡು ಪ್ರಾಣಿಗಳನ್ನು ಓಡಿಸುವ ಶಬ್ದಗಳಲ್ಲಿ ಒಂದನ್ನು ಜೋರಾಗಿ ಸೌಂಡ್ ಮಾಡುತ್ತದೆ. ಇದರ ಶಬ್ದ 10 ರಿಂದ 12 ಎಕರೆವರೆಗೂ ಕೂಡ ಕೇಳಿಸುತ್ತದೆ. ಮತ್ತೆ 10 ನಿಮಿಷಕ್ಕೆ ಬೇರೆ ರೀತಿಯ ಸೌಂಡ್ ಮಾಡುತ್ತದೆ. ಒಂದು ನಿಮಿಷಗಳವರೆಗೂ ಸೌಂಡ್ ಮಾಡುತ್ತದೆ. ಪಕ್ಷಿಗಳಿಗೆ ಪ್ರತಿ 5 ನಿಮಿಷಕ್ಕೆ ಒಮ್ಮೆ ಈ ರೀತಿ ಪಕ್ಷಿಗಳನ್ನು ಓಡಿಸುವ ಶಬ್ದ ಬರುತ್ತದೆ.

ನೀವು ನಿಮ್ಮ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು. ಒಂದು ವೇಳೆ ಸಿಸ್ಟಮ್ ಅಲ್ಲಿರುವ ಸೌಂಡ್ ಬಿಟ್ಟು ಬೇರೆ ಶಬ್ದಗಳನ್ನು ಸೇರಿಸಬೇಕು ಎಂದರೆ ಪೆನ್ ಡ್ರೈವ್ ಅಥವಾ ಮೆಮೊರಿ ಚಿಪ್ ಸಹಾಯದಿಂದ ಸೇರಿಸಬಹುದು. ಮಂಗಗಳು ಬಹಳ ಬೇಗ ಕೃತಕ ಶಬ್ದ ಹಾಗೂ ನಿಜವಾದ ಶಬ್ದಗಳ ವ್ಯತ್ಯಾಸವನ್ನು ಗ್ರಹಿಸುವುದರಿಂದ ಮಂಗಗಳ ಕಾಟಕ್ಕೆ ಇದು ಅಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಆದರೆ ಉಳಿದ ಪ್ರಾಣಿಗಳನ್ನು ಓಡಿಸಲು ಇದನ್ನು ಬಳಸಬಹುದು. ಕರೆಂಟ್ ಅವಶ್ಯಕತೆ ಇರುವುದಿಲ್ಲ ದಿನಪೂರ್ತಿ ಸೋಲಾರ್ ಚಾರ್ಜ್ ಆಗಿ ಇದು ಕೆಲಸ ಮಾಡುತ್ತದೆ. ರಾತ್ರಿ ಸಮಯ ಶಬ್ದ ಮಾಡಿದ ಒಂದು ನಿಮಿಷಗಳವರೆಗೆ ಲೈಟ್ ಬ್ಲಿಂಕ್ ಕೂಡ ಆಗುತ್ತದೆ, ಬೆಳಿಗ್ಗೆ ಆಗುತ್ತಿದ್ದಂತೆ ಸೂರ್ಯ ಬೆಳಕು ಬಿದ್ದ ತಕ್ಷಣ ಆಟೋಮ್ಯಾಟಿಕ್ ಆಫ್ ಆಗುತ್ತದೆ. ಈ ಉಪಯುಕ್ತ ಪರಿಕರಣದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಈ ವಿಡಿಯೋ ಪೂರ್ತಿಯಾಗಿ ನೋಡಿ.

Leave a Comment

%d bloggers like this: