ಈ ಕಾರ್ಡ್ ಇದ್ದವರಿಗೆ ಇನ್ಮುಂದೆ ಉಚಿತವಾಗಿ ಸಿಗಲಿದೆ 14Kg ಗೋಧಿ ಮತ್ತು 21Kg ಅಕ್ಕಿ…!

 

ಕರ್ನಾಟಕದ ರಾಜ್ಯದ ಜನತೆಗೆಲ್ಲಾ ಈಗ ಅನ್ನ ಭಾಗ್ಯ ಯೋಜನೆಯಡಿ ಡಬಲ್ ಧಮಾಕ ಎಂದೇ ಹೇಳಬಹುದು. ಯಾಕೆಂದರೆ ಕಾಂಗ್ರೆಸ್ ಸರ್ಕಾರವು ಹಸಿವು ಮುಕ್ತ ಕರ್ನಾಟಕ ಎನ್ನುವ ಯೋಜನೆಯನ್ನು ಜಾರಿಗೆ ತಂದು ಜನರಿಗೆ ಉಚಿತ ಪಡಿತರವನ್ನು ನೀಡುತ್ತಿತ್ತು.

ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಘೋಷಿಸಿದ್ದ 5 ಗ್ಯಾರಂಟಿ ಕಾರ್ಡ್ ಯೋಜನೆಗಳು ಪೈಕಿ ಅನ್ನಭಾಗ್ಯ ಯೋಜನೆ ಅಡಿ ನೀಡುತ್ತಿರುವ ಪಡಿತರವನ್ನು 10Kg ಗೆ ಏರಿಸಲಾಗುವುದು ಎನ್ನುವ ಆಶ್ವಾಸನೆ ಕೂಡ ಸೇರಿದ್ದರಿಂದ ಜುಲೈ ತಿಂಗಳಿನಿಂದ ಪ್ರತಿ ಸದಸ್ಯನಿಗೆ 10Kg ಯಂತೆ ಪಡಿತರ ನೀಡಲಾಗುವುದು ಎಂದು ಆದೇಶ ಪತ್ರ ಹೊರಡಿಸಿದ್ದರು.

ನಂತರದ ಪ್ರಕ್ರಿಯೆಯಲ್ಲಿ ಕೆಲಸ ತೊಡಕುಗಳು ಉಂಟಾದ ಕಾರಣ 10Kg ಪಡಿತರ ನೀಡಲು ದಾಸ್ತಾನು ಲಭ್ಯವಾಗದ ಕಾರಣ ಎಂದಿನಂತೆ 5Kg ಪಡಿತರ ಹಾಗೂ ಹೆಚ್ಚುವರಿ ಅಕ್ಕಿಯ ಬದಲಾಗಿ ಪ್ರತಿ ಸದಸ್ಯನಿಗೆ 170ರೂ. ಹಣ ನೀಡುವ ನಿರ್ಧಾರಕ್ಕೆ ಬಂದಿದೆ.

ಈಗಾಗಲೇ ಜುಲೈ ತಿಂಗಳಿನ ಪಡಿತರದ ಬದಲಿನ ಹಣ ಭಾಗ್ಯ ಯೋಜನೆಯ ಪ್ರಯೋಜನವನ್ನು ಮೈಸೂರು, ಕೋಲಾರ, ಯಾದಗಿರಿ, ಬಾಗಲಕೋಟೆ, ರಾಮನಗರ ಬೆಂಗಳೂರು ಗ್ರಾಮಾಂತರ ಮತ್ತು ಧಾರವಾಡ ಜಿಲ್ಲೆಯ ಕೆಲ ಫಲಾನುಭವಿಗಳು ಪಡೆದಿದ್ದಾರೆ. ಹಂತ ಹಂತವಾಗಿ ಪ್ರತಿ ಜಿಲ್ಲೆಗೂ ಕೂಡ ಹಣ ವರ್ಗಾವಣೆ ಮಾಡಲಾಗುವುದು ಎಂದು ಆಹಾರ ಇಲಾಖೆ ಸಚಿವರು ಘೋಷಿಸಿದ್ದಾರೆ.

ಪಡಿತರ ಚೀಟಿಯಲ್ಲಿ ಇರುವ ಹೆಡ್ ಆಫ್ ದ ಫ್ಯಾಮಿಲಿ ಬ್ಯಾಂಕ್ ಖಾತೆಗೆ ಎಲ್ಲ ಸದಸ್ಯರ ಒಟ್ಟು ಹಣ ವರ್ಗಾವಣೆ ಆಗಲಿದೆ. ಅಕ್ಕಿ ದಾಸ್ತಾನು ಲಭ್ಯವಾಗುವವರೆಗೂ ಕೂಡ ಇದೇ ರೀತಿ ಹೆಚ್ಚುವರಿ ಅಕ್ಕಿ ಹಣ ಹಾಕಲು ಸರ್ಕಾರ ಮುಂದಾಗಿದೆ. ಇದು ಕರ್ನಾಟಕ ಸರ್ಕಾರ ನೀಡಿರುವ ಯೋಜನೆಯಾಗಿದೆ. ಕರ ವಿಧಾನಸಭಾ ಚುನಾವಣೆ ವೇಳೆ ಮತ ಬೇಟೆಗಾಗಿ ಬಳಸಿದ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಕಾರಣ ರಾಜ್ಯ ಸರ್ಕಾರ ರಾಜ್ಯದ ಜನತೆಗಾಗಿ ಇಂಥದೊಂದು ಯೋಜನೆಯನ್ನು ಜಾರಿಗೆ ತಂದಿದೆ.

ಕೇಂದ್ರದಿಂದ ಎಲ್ಲಾ ರಾಜ್ಯಗಳಿಗೂ ಕೂಡ ಪ್ರತಿ ಸದಸ್ಯನಿಗೆ 5Kg ಉಚಿತ ಪಡಿತರ ವಿತರಣೆ ಆಗುತ್ತಿದೆ. ಇದರ ಜೊತೆಗೆ ಆಯಾ ರಾಜ್ಯ ಸರ್ಕಾರಗಳು ಕೂಡ ತಮ್ಮ ರಾಜ್ಯದ ಜನತೆಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರುತ್ತವೆ. ಅವುಗಳಲ್ಲಿ ಪಡಿತರ ವ್ಯವಸ್ಥೆ ಮೂಲಕ ಬಡತನ ರೇಖೆಗಿಂತ ಕೆಳಗಿರುವವರಿಗೆ ಅಗತ್ಯ ಸಾಮಗ್ರಿಗಳನ್ನು ತಲುಪಿಸುವುದು ಒಂದು ಭಾಗವಾಗಿರುತ್ತದೆ.

ಈಗ ಈ ಪಡಿತರ ಚೀಟಿ ಮೂಲಕ ಒಂದು ಯೂನಿಟ್ ಗೆ 14Kg ಗೋಧಿ ಹಾಗೂ 21Kg ಅಕ್ಕಿಯನ್ನು ನೀಡಲು ಉತ್ತರಪ್ರದೇಶ ಸರ್ಕಾರ ಮುಂದಾಗಿದೆ. ಉತ್ತರಪ್ರದೇಶದಲ್ಲಿ ಅನೇಕ ಬಡ ಕುಟುಂಬಗಳಿವೆ. ಒಪ್ಪೊತ್ತಿನ ಊಟಕ್ಕೂ ಕೂಡ ಕಷ್ಟ ಪಡುತ್ತಿರುವ ಆ ಜನರ ಹಸಿವನ್ನು ನೀಗಿಸಲು ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಇಂತಹದೊಂದು ಘೋಷಣೆಯನ್ನು ಮಾಡಿದ್ದಾರೆ.

ಇದರ ಪೈಕಿ ಗೃಹಸ್ಥಿ ಕಾರ್ಡ್ ಕುಟುಂಬಗಳಿಗೆ 2Kg ಗೋಧಿ ಹಾಗೂ 3Kg ಅಕ್ಕಿ ಲಭ್ಯವಾದರೆ ರೇಷನ್ ಕಾರ್ಡ್ ಹೊಂದಿರುವವರಿಗೆ 14Kg ಗೋಧಿ ಹಾಗೂ 21Kg ಅಕ್ಕಿ ವಿತರಣೆ ಮಾಡುವ ನಿರ್ಧಾರ ಮಾಡಿದೆ. ಜುಲೈ 11 ರಿಂದ 24ನೇ ತಾರೀಖಿನವರೆಗೆ ಈ ಪಡಿತರ ವಿತರಣೆ ಕಾರ್ಯಕ್ರಮ ನಡೆಯಲಿದೆ.

ದೇಶದ ಎಲ್ಲಾ ರಾಜ್ಯಗಳ ಸರ್ಕಾರಗಳು ಕೂಡ ಈ ರೀತಿ ನಿರ್ಧಾರ ತೆಗೆದುಕೊಂಡರೆ ಅನೇಕ ಬಡವರಿಗೆ ಅನುಕೂಲ ಆಗಲಿದೆ ಎನ್ನುವ ಅಭಿಪ್ರಾಯ ಹಲವರಿಗೆ ಹಾಗಾಗಿ ಮುಂದೆ ಇದು ನಮ್ಮ ರಾಜ್ಯದಲ್ಲೂ ಕೂಡ ಜಾರಿಗೆ ಬರುವಂತಾಗಲಿ ಎಂದು ನಾವು ಬಯಸೋಣ.

Leave a Comment

%d bloggers like this: