ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ, ಉಚಿತ ಪ್ರಯಾಣಕ್ಕಾಗಿ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ

 

ಕಾಂಗ್ರೆಸ್ ಪಕ್ಷದಿಂದ ಪಂಚಖಾತ್ರಿ ಯೋಜನೆಗಳ ಪೈಕಿ ಮೊದಲನೆಯದಾಗಿ ಲಾಂಚ್ ಆಗಿದ್ದೇ ಶಕ್ತಿ ಯೋಜನೆ, ಈ ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯದ ಮಹಿಳೆಯರು ಕರ್ನಾಟಕದ ಗಡಿಯೊಳಗೆ ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ಕರ್ನಾಟಕ ಸಾರಿಗೆ ಸಂಸ್ಥೆ ವಾಹನಗಳಾದ KSRTC, BMTC, ಕಲ್ಯಾಣ ಕರ್ನಾಟಕ ಸಾರಿಗೆ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿತ್ತು.

ಸದ್ಯಕ್ಕೆ ರಾಜ್ಯದ ಮಹಿಳೆಯರು ಜೂನ್ 11ನೇ ತಾರೀಖಿನಿಂದ ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯನ್ನು ಜಾರಿಗೆ ತಂದ ಪರಿಣಾಮವಾಗಿ ಇಂದು ಕರ್ನಾಟಕದಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಹಾಗೂ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ಕೊಡುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಪರೋಕ್ಷವಾಗಿ ಇದು ಸರ್ಕಾರಕ್ಕೆ ಆದಾಯವನ್ನು ತರುತ್ತಿದೆ.

ಭೂಮಿಗೆ ಎಸೆದ ಬೀಜ ವ್ಯರ್ಥವಾಗದೆ ಬೆಳೆದು ಹೇಗೆ ಫಲ ನೀಡುತ್ತದೆಯೋ ಹಾಗೆಯೇ ಸರ್ಕಾರದಿಂದ ರಾಜ್ಯದ ಜನತೆಗೆ ಕೊಟ್ಟ ಯೋಜನೆಗಳು ಕೂಡ ಸರ್ಕಾರದ ಬೊಕ್ಕಸಕ್ಕೆ ಮರಳಿ ಆದಾಯ ತರುತ್ತವೆ ಎನ್ನುವ ಘೋಷಣೆಯನ್ನು ಹೊಂದಿರುವ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಯ ಆದಾಯವು ಹೆಚ್ಚಾಗಿದೆ ಎನ್ನುವುದು ಸದ್ಯಕ್ಕೆ ಸಂತಸ ಪಡುವ ವಿಚಾರ.

ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರೇ ಯೋಜನೆ ಆರಂಭವಾದ ಸ್ವಲ್ಪ ದಿನದ ಬಳಿಕ ಇದರ ಬಗ್ಗೆ ವಿಷಯ ಪ್ರಸ್ತಾಪಿಸಿ ಸಾರಿಗೆ ಸಂಸ್ಥೆಗಳಿಗೆ ಯಾವುದೇ ತೊಂದರೆಯಿಲ್ಲ, ಸರ್ಕಾರದ ಅನುದಾನವನ್ನು ಅವಲಂಬಿಸದೆ ನಡೆಸಿಕೊಂಡು ಹೋಗುವಷ್ಟು ಶಕ್ತಿ ಯೋಜನೆಯಿಂದ ಸಂಸ್ಥೆ ಪ್ರಬಲವಾಗಿದೆ ಎಂದು ಮಾಹಿತಿ ತಿಳಿಸಿದ್ದರು. ಈಗ ಶಕ್ತಿ ಯೋಜನೆಯ ಕುರಿತು ಮತ್ತೊಂದು ಮಹತ್ವದ ಸುದ್ದಿ ಹೊರ ಬಿದ್ದಿದೆ. ಇದರ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

ಶಕ್ತಿ ಯೋಜನೆಗೆ ಕರ್ನಾಟಕದ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಆದರೆ ಕಡ್ಡಾಯವಾಗಿ ಮಹಿಳೆಯರು ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ಅಥವಾ ಸರ್ಕಾರ ನೀಡಿರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ನೀಡಿ ಉಚಿತ ಪ್ರಯಾಣದ ಟಿಕೆಟ್ ಪಡೆಯಬೇಕು.

ಸದ್ಯಕ್ಕೆ ಮೂರು ತಿಂಗಳಿನವರೆಗೂ ಕೂಡ ಈ ರೀತಿ ಗುರುತಿನ ಚೀಟಿಯನ್ನು ತೋರಿಸಿ ಉಚಿತ ಟಿಕೆಟ್ ಪಡೆದುಕೊಳ್ಳಲು ಮಹಿಳೆಯರಿಗೆ ಸೂಚಿಸಲಾಗಿದೆ. ಆದರೆ ಮೂರು ತಿಂಗಳ ಒಳಗೆ ಅವರು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಬೇಕು. ಈ ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ಪಡೆದ ಮಹಿಳೆಯರಿಗೆ ಮಾತ್ರ ಮೂರು ತಿಂಗಳ ನಂತರ ಉಚಿತ ಪ್ರಯಾಣಕ್ಕೆ ಅವಕಾಶ ಇರುತ್ತದೆ.

ಈ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಲು ಗ್ಯಾರಂಟಿ ಕಾರ್ಡ್ ಯೋಜನೆಯ ವೆಬ್ಸೈಟ್ ಅಲ್ಲಿಯೇ ಮಹಿಳೆಯರು ಅರ್ಜಿ ಸಲ್ಲಿಸಬೇಕು. ಇದುವರೆಗೂ ಅದು ಓಪನ್ ಆಗುತ್ತಿರಲಿಲ್ಲ ಆದರೆ ಈಗ ಆ ವೆಬ್ಸೈಟ್ ಓಪನ್ ಮಾಡಿದರೆ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸುವ ಕಾಲಂ ಓಪನ್ ಆಗುತ್ತದೆ, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ, ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ನಿಯಮಗಳು ಹಾಗೂ ಕಂಡಿಷನ್ ಗಳು ಅರ್ಜಿ ಿ ನಮೂನೆಯನ್ನು ಡೌನ್ಲೋಡ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ ಎನ್ನುವ ಆಪ್ಷನ್ ಗಳು ಕಾಣುತ್ತವೆ.

ಆದರೆ ಅದನ್ನು ಕ್ಲಿಕ್ ಮಾಡಿದರೆ ಮುಂದಿನ ಹಂತಗಳು ಲಭ್ಯವಾಗುತ್ತಿಲ್ಲ. ಇದರರ್ಥ ಸರ್ಕಾರ ವೆಬ್ಸೈಟ್ ಅಭಿವೃದ್ಧಿ ಪಡಿಸುತ್ತಿದೆ, ಇನ್ನು ಕೆಲವೇ ದಿನಗಳಲ್ಲಿ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೂ ಕೂಡ ಚಾಲನೆ ನೀಡಲಿದೆ. ಹಾಗಾಗಿ ಮಹಿಳೆಯರು ಇದಕ್ಕೆ ಬೇಕಾದ ಪೂರಕ ದಾಖಲೆಗಳಾದ ಪಾಸ್ಪೋರ್ಟ್ ಸೈಜ್ ಭಾವಚಿತ್ರ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಇವುಗಳ ಸಿದ್ದಪಡಿಸಿಕೊಂಡರೆ ಅನೌನ್ಸ್ ಮಾಡಿದ ಕೂಡಲೇ ಅರ್ಜಿ ಸಲ್ಲಿಸಬಹುದು.

Leave a Comment

%d bloggers like this: