ಕರ್ನಾಟಕ ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ನಾಲ್ಕನೇ ಗ್ಯಾರಂಟಿ ಕಾರ್ಡ್ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆಯು ಲಾಂಚ್ ಆಗಿದೆ. ಜುಲೈ 19ರಂದು ಸಂಜೆ 5:00 ಗಂಟೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಮಾನ್ಯ ಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರ ವಿಧಾನಸೌಧದ ಅಂಗಳದಲ್ಲಿ ಕಾರ್ಯಕ್ರಮ ನಡೆಸಿ ಯೋಜನೆಗೆ ಚಾಲನೆ ನೀಡಿದ್ದಾರೆ.
ಪತಿ ಅಥವಾ ಪತ್ನಿ ಐಟಿ ರಿಟರ್ನ್ ಸಲ್ಲಿಸುವವರಾಗಿದ್ದರೆ, gst ಕಟ್ಟುವವರಾಗಿದ್ದರೆ ಅಥವಾ ಸರ್ಕಾರಿ ನೌಕರರಾಗಿದ್ದರೆ ಅವರು ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲ. ಅವರನ್ನು ಹೊರತುಪಡಿಸಿ ರೇಷನ್ ಕಾರ್ಡ್ ಹೊಂದಿರುವ ಕರ್ನಾಟಕದ ಎಲ್ಲಾ ಕುಟುಂಬಗಳ ಯಜಮಾನಿಯರು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ 2000 ಸಹಾಯಧನವನ್ನು ಆಗಸ್ಟ್ ತಿಂಗಳಿನಿಂದ ಪ್ರತಿ ತಿಂಗಳು ಪಡೆಯಬಹುದು.
ಇದಕ್ಕೆ ಅರ್ಜಿ ಸಲ್ಲಿಸಲು ಸರ್ಕಾರ ಮಾರ್ಗಸೂಚಿಯನ್ನು ಕೂಡ ತಿಳಿಸಿದೆ.
● ಸರ್ಕಾರದ ಸಹಾಯವಾಣಿ ಸಂಖ್ಯೆಗಳಿಗೆ ಪಡಿತರ ಚೀಟಿಯಲ್ಲಿರುವ ಮುಖ್ಯಸ್ಥರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ ಪಡಿತರ ಚೀಟಿ ಸಂಖ್ಯೆಯನ್ನು SMS ಕಳುಹಿಸಬೇಕು.
● ಕೆಲವೇ ಕ್ಷಣಗಳಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ರಿಪ್ಲೈ ಬರುತ್ತದೆ. ಆ ಸಂದೇಶದಲ್ಲಿ ನೀವು ಯಾವ ಸಮಯಕ್ಕೆ ಯಾವ ದಿನಾಂಕದಂದು ಯಾವ ಸ್ಥಳದಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಎಂದು ನಿಮ್ಮ ವೇಳಾಪಟ್ಟಿಯನ್ನು ಕಳುಹಿಸಲಾಗಿರುತ್ತದೆ.
● ಸರ್ಕಾರ ಸೂಚಿಸಿರುವ ಸೇವಾಸಿಂಧು ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರ ಇವುಗಳಲ್ಲಿ ಒಂದನ್ನು ನಿಮಗೆ ವೇಳಾಪಟ್ಟಿಯಲ್ಲಿ ತಿಳಿಸಲಾಗಿರುತ್ತದೆ. ಸರ್ಕಾರ ಸೂಚಿಸಿದ ಈ ಸೇವಾ ಕೇಂದ್ರಗಳಲ್ಲಿ ಮಾತ್ರ ನಿಮಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
● ಕೆಲವೊಮ್ಮೆ ಸರ್ವರ್ ಬಿಝಿ ಇದ್ದರೆ 24 ಗಂಟೆಗಳ ನಂತರ ಪ್ರಯತ್ನಿಸಿ ಎಂದು ರಿಪ್ಲೈ ಬಂದಿರುತ್ತದೆ.
● ಒಂದು ವೇಳೆ ಎಷ್ಟೇ ಬಾರಿ ಸಂದೇಶ ಕಳುಹಿಸಿದಾಗಲು SMS ಗೆ ರಿಪ್ಲೈ ಬರುತ್ತಿಲ್ಲ ಎಂದರೆ ನೀವು ಗೃಹಲಕ್ಷ್ಮಿ ಯೋಜನೆ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಪಡಿತರ ಚೀಟಿ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ ನಿಮ್ಮ ವೇಳಾಪಟ್ಟಿ ಯಾವಾಗ ಇದೆ ಎಂದು ತಿಳಿದುಕೊಳ್ಳಬಹುದು.
ಸಹಾಯವಾಣಿ ಸಂಖ್ಯೆಗಳು:- 8147500500, 8277000555
ವೆಬ್ಸೈಟ್ ವಿಳಾಸ:- www.https://sevasindhugs.karnataka.
● ವೇಳಾಪಟ್ಟಿಯಲ್ಲಿಯೇ ಅರ್ಜಿ ಸಲ್ಲಿಸುವ ಸಮಯ ಕೂಡ ನಿಗದಿಪಡಿಸಿ ತಿಳಿಸಲಾಗಿರುತ್ತದೆ. ಅದೇ ಸಮಯಕ್ಕೆ ಹೋಗಿ ಫಲಾನುಭವಿಗಳು ಅರ್ಜಿ ಸಲ್ಲಿಸಬೇಕು. ಒಂದುವೇಳೆ ಆ ಸಮಯವನ್ನು ಮಿಸ್ ಮಾಡಿಕೊಂಡವರಿಗೆ ಸಂಜೆ 5:00-7:00 ರವರೆಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗುತ್ತಿತ್ತು.
ಆದರೆ 23.07.2023 ರಂದು ಅರ್ಜಿ ಸಲ್ಲಿಸಲು ವೇಳಾಪಟ್ಟಿ ಪಡೆದವರಿಗೆ ಈ ದಿನ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಅರ್ಜಿ ಸಲ್ಲಿಸಲು ಪ್ರಯತ್ನಿಸಿದರೂ ಕೂಡ ನಿಮಗೆ ವೆಬ್ಸೈಟ್ ಓಪನ್ ಆಗುವುದಿಲ್ಲ. ಸ್ಕ್ರೀನ್ ಮೇಲೆ The site is not available due to maintenance it will be available from Monday Morning ಈ ಸೇವೆಯು ತಾಂತ್ರಿಕ ನಿರ್ವಹಣೆಗಾಗಿ ಲಭ್ಯವಿರುವುದಿಲ್ಲ.
ಸೋಮವಾರ ಬೆಳಗ್ಗೆಯಿಂದ ಪುನಃ ಪ್ರಾರಂಭಿಸಲಾಗುವುದು ಎನ್ನುವ ಪಾಪ್ ಆಫ್ ಮೆಸೇಜ್ ಬರುತ್ತದೆ. ಹಾಗಾಗಿ ಭಾನುವಾರದಂದು ಈ ಸೇವೆ ಲಭ್ಯವಿರುವುದಿಲ್ಲ. ದೂರದ ಊರುಗಳಿಂದ ಅದು ಸಲ್ಲಿಸಲು ಹೋಗುವವರು ಭಾನುವಾರದ ಬದಲು ಸೋಮವಾರ ಅರ್ಜಿ ಸಲ್ಲಿಸಲು ಹೋಗುವುದು ಉತ್ತಮ. ತಪ್ಪದೇ ಈ ವಿಷಯಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೆ ಹಂಚಿಕೊಂಡು ಎಲ್ಲರಿಗೂ ಮಾಹಿತಿ ತಿಳಿಯುವಂತೆ ಮಾಡಿ.