ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳ ಪೈಕಿ ಅನ್ನ ಭಾಗ್ಯ ಯೋಜನೆಗೆ ಜುಲೈ ತಿಂಗಳಲ್ಲಿ 10 ಕೆಜಿ ಪಡಿತರ ನೀಡಬೇಕಾಗಿತ್ತು. ಆದರೆ ದಾಸ್ತಾನು ಕೊರತೆಯಾದ ಕಾರಣ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಹಾಗೂ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು 170 ರೂಪಾಯಿಗಳನ್ನು ಕೊಡಲು ಸರ್ಕಾರ ನಿರ್ಧರಿಸಿದೆ. ಈ ಹಣವನ್ನು ಪಡಿತರ ಚೀಟಿಯಲ್ಲಿ ಮುಖ್ಯಸ್ಥರಾಗಿರುವ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ.
ಈಗಾಗಲೇ ಅನ್ನ ಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣ ಅನೇಕರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ. ಮೊದಲ ಹಂತದಲ್ಲಿ ಮೈಸೂರು ಹಾಗೂ ಕೋಲಾರ ಜಿಲ್ಲೆ ಬಳಿಕ ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೆ ಹಣ ವರ್ಗಾವಣೆ ಆಗುತ್ತಿದೆ.
ಆದರೆ ಕೆಲ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿಲ್ಲ ಸ್ಟೇಟಸ್ ಚೆಕ್ ಮಾಡುವಾಗ ಕೆಲವರಿಗೆ ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು ಅಥವಾ KYC ಅಪ್ಡೇಟ್ ಮಾಡಿಸಬೇಕು ಎನ್ನುವ ಸೂಚನೆ ಸಿಗುತ್ತಿದೆ. ಈ ರೀತಿ ಘೋಷಣೆ ಬಂದವರಿಗೆ ಆ ಪ್ರಕ್ರಿಯ ಪೂರ್ತಿಗೊಳಿಸಿದರೆ ಬಳಿಕ ಹಣ ಜಮೆ ಆಗುತ್ತದೆ ಆದರೆ ಇನ್ನೂ ಕೆಲವರಿಗೆ ಇದೆಲ್ಲಾ ಸರಿ ಇದ್ದರೂ ಕೂಡ PAV response not at received ಎಂದು ಕಾಣುತ್ತಿದೆ.
ಈ ರೀತಿ ಬಂದರೆ ಏನು ಅರ್ಥ ಹಾಗಾದ್ರೆ ಹಣ ಜಮೆ ಆಗಲ್ಲವೇ ಎಲ್ಲಾ ಮಾಹಿತಿಯೂ ಸರಿ ಇದೆಯಲ್ಲಾ ಎಂದು ಗೊಂದಲವಾಗಿರುತ್ತದೆ. ಅಸಲಿಗೆ PAV ಎಂದರೆ Payment adjustment voture ಎಂದರ್ಥ. ಸ್ಟೇಟಸ್ ಚೆಕ್ ಮಾಡುವಾಗ ಈ ರೀತಿ ಬಂದರೆ, ಬ್ಯಾಂಕಿನ ಸಿಬ್ಬಂದಿಗಳು ಇನ್ನು ಹಣ ಜಮಾ ಆಗಿರುವ ಮಾಹಿತಿಯನ್ನು ಕೊಟ್ಟಿಲ್ಲ ಎಂದರ್ಥ.
ನಿಮ್ಮ ಯಾವ ಬ್ಯಾಂಕ್ ಖಾತೆಗೆ ಹಣ ಜಮೆ ಆಗುತ್ತದೆಯೋ ಆ ಬ್ಯಾಂಕಿನ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ ಎಂದರ್ಥ. ಈ ರೀತಿ ಬಂದರೆ ನೀವು ಕೆಲ ದಿನಗಳ ಕಾಯಬೇಕು ನಂತರ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತದೆ.
ಬಳಿಕ ಈಗ ಈ ರೀತಿ PAV Payment adjustment voture ಬರುತ್ತಿರುವ ಜಾಗದಲ್ಲಿ ನಿಮ್ಮ ಹೆಸರು, ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ನಿಮ್ಮ ಬ್ಯಾಂಕ್ ಖಾತೆ ಶಾಖೆ, ಎಷ್ಟು ಹಣ ಜಮೆ ಆಗಿದೆ ಎನ್ನುವ ಮಾಹಿತಿ ಬರುತ್ತದೆ. ಇದುವರೆಗೆ ನೀವು ಒಮ್ಮೆ ಕೂಡ ನಿಮ್ಮ ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಆಗಿರುವ ಬಗ್ಗೆ ಸ್ಟೇಟಸ್ ಚೆಕ್ ಮಾಡಿಲ್ಲ ಎಂದರೆ ಈಗ ನಾವು ಹೇಳುವ ಈ ವಿಧಾನದ ಮೂಲಕ ಚೆಕ್ ಮಾಡಿ ನೋಡಿ.
● ಮೊದಲಿಗೆ ಆಹಾರ ಇಲಾಖೆ ಅಧಿಕೃತ ವ್ಯವಸ್ಥೆಗೆ ಭೇಟಿ ಕೊಡಬೇಕು ಅದಕ್ಕಾಗಿ https://ahara.kar.nicin/home/E.services ಕ್ಲಿಕ್ ಮಾಡಿ.
● ಆಹಾರ ಇಲಾಖೆ ಪೇಜ್ ಓಪನ್ ಆಗುತ್ತದೆ, ಎಡಭಾಗದ ಮೇಲೆ ಮೂರು ಗೆರೆಗಳು ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿ e-services ಎನ್ನುವ ಆಪ್ಷನ್ ಸೆಲೆಕ್ಟ್ ಮಾಡಿ.
● DBT Status ಎನ್ನುವ ಆಪ್ಷನ್ ಇರುತ್ತದೆ ಅದನ್ನು ಸೆಲೆಕ್ಟ್ ಮಾಡಿ, ಒಂದು ಹೊಸ ಪೇಜ್ ಓಪನ್ ಆಗುತ್ತದೆ ಅದರಲ್ಲಿ ಜಿಲ್ಲವಾರು ಲಿಸ್ಟ್ ಇರುತ್ತದೆ, ಇದರಲ್ಲಿ ನಿಮ್ಮ ಜಿಲ್ಲೆಯ ಲಿಂಕನ್ನು ಸೆಲೆಕ್ಟ್ ಮಾಡಿ.
● ಅದರಲ್ಲಿ Status of DBT ಎಂದು ಇರುತ್ತದೆ. ಅದನ್ನು ಸೆಲೆಕ್ಟ್ ಮಾಡಿದ ಮೇಲೆ ಕೊನೆ ಪೇಜ್ ಅಲ್ಲಿ ಮೊದಲಿಗೆ ತಿಂಗಳನ್ನು ಸೆಲೆಕ್ಟ್ ಮಾಡಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಕಿ ಕ್ಯಾಪ್ಚ ಕೋಡ್ ಹಾಕಿದರೆ ನಿಮ್ಮ ಕುಟುಂಬದ ಯಾವ ಸದಸ್ಯರ ಬ್ಯಾಂಕ್ ಖಾತೆಗೆ ಹಣ ಹೋಗುತ್ತದೆ ಅವರ ಆಧಾರ್ ಕಾರ್ಡ್ ಸಂಖ್ಯೆ ಕೊನೆ ನಾಲ್ಕು ನಂಬರ್, ಎಷ್ಟು ಕೆಜಿ ಅಕ್ಕಿಗೆ ಈ ಕಾರ್ಡ್ ಅರ್ಹವಾಗಿದೆ, ಅದಕ್ಕೆ ಎಷ್ಟು ಹಣ ಬರುತ್ತದೆ ಮತ್ತು ಈ ಮೇಲೆ ತಿಳಿಸಿದಂತೆ ಸ್ಟೇಟಸ್ ಏನಾಗಿದೆ ಎನ್ನುವ ಘೋಷಣೆ ಇರುತ್ತದೆ.