ಕರ್ನಾಟಕದಲ್ಲಿ ಪಂಚಖಾತ್ರಿ ಯೋಜನೆಗಳ ಕಾರಣದಿಂದ ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರಾಗಿರುವ ಖಾತೆಗೆ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ 2,000 ಸಹಾಯಧನ ಸಿಗುತ್ತಿದೆ. ಕುಟುಂಬದಲ್ಲಿ ಅತ್ತೆ ಸೊಸೆ ಇಬ್ಬರು ಇದ್ದಾಗ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಹೆಸರು ಬದಲಾವಣೆ ಮಾಡಬೇಕು ಎನ್ನುವ ಕೋರಿಕೆಗಳಿರುತ್ತವೆ.
ಕೆಲವೊಮ್ಮೆ ಅತ್ತೆಗೆ ಬ್ಯಾಂಕ್ ಖಾತೆ ಇಲ್ಲದೆ ಇರಬಹುದು ಅಥವಾ ಅವರು ಓಡಾಡುವ ಪರಿಸ್ಥಿತಿಯಲ್ಲಿ ಇಲ್ಲದೆ ಇರಬಹುದು. ಹಳೆ ರೇಷನ್ ಕಾರ್ಡ್ ಗಳಲ್ಲಿ ಪತಿಯ ಹೆಸರು ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಇರಬಹುದು. ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವವರ ಹೆಸರು ಬದಲಾವಣೆ ಮಾಡಲು ಸದ್ಯಕ್ಕೀಗ ಪಬ್ಲಿಕ್ ವೆಬ್ಸೈಟ್ ಅಲ್ಲಿ ಈ ಅನುಕೂಲತೆ ಇಲ್ಲ, ಆದರೆ ನೀವು ನ್ಯಾಯಬೆಲೆ ಅಂಗಡಿಯಲ್ಲಿ ಇದರ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿದೆ. ಅದರ ಬಗ್ಗೆ ಮಾಹಿತಿ ತಿಳಿಸಿಕೊಡುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
ರೇಷನ್ ಕಾರ್ಡ್ ಲಾಗಿನ್ ಇಂದ ಕುಟುಂಬದ ಮುಖ್ಯಸ್ಥರ ಹೆಸರು ಬದಲಾಯಿಸುವ ವಿಧಾನ:-
● ಮೊದಲಿಗೆ ration card Karnataka ಎಂದು ಸರ್ಚ್ ಕೊಡಿ.
● E-Services link ಮೇಲೆ ಕ್ಲಿಕ್ ಮಾಡಿ, ಎಡಭಾಗದಲ್ಲಿ ಕೆಲ ಸರ್ವೀಸ್ ಗಳ ಹೆಸರು ಇರುತ್ತದೆ, ಕೊನೆಯಲ್ಲಿ Shop owner module ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ.
● ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಜಿಲ್ಲಾವಾರು ಲಿಂಕ್ ಗಳ ಲಿಸ್ಟ್ ಇರುತ್ತದೆ, ನಿಮ್ಮ ಜಿಲ್ಲೆಯ ಲಿಂಕನ್ನು ಕ್ಲಿಕ್ ಮಾಡಿ.
● ಲಾಗ್ ಇನ್ ಆಗಲು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚ ಕೋಡ್ ಕೇಳುತ್ತದೆ ಅದನ್ನು ಎಂಟ್ರಿ ಮಾಡಿ ಲಾಗ್ ಇನ್ ಆಗಿ.
● ನಿಮ್ಮ ಬಯೋಮೆಟ್ರಿಕ್ ಮಾಹಿತಿ ಕೊಡಬೇಕಾಗುತ್ತದೆ, ಮೊದಲಿಗೆ ಚೆಕ್ ಬಾಕ್ಸ್ ಅಲ್ಲಿ ರೈಟ್ ಕ್ಲಿಕ್ ಮಾಡುವ ಮೂಲಕ ಅಲೋ ಮಾಡಿ ಫಿಂಗರ್ ಪ್ರಿಂಟ್ ಇಮೇಜ್ ಎನ್ನುವ ಕಡೆ ಕ್ಲಿಕ್ ಮಾಡಿ ಕ್ಯಾಪ್ಚರ್ ಎನ್ನುವುದನ್ನು ಸೆಲೆಕ್ಟ್ ಮಾಡಿ, ನಿಮ್ಮ ಬಯೋಮೆಟ್ರಿಕ್ ಕ್ಯಾಪ್ಚರ್ ಆಗುತ್ತದೆ ಪಕ್ಕದಲ್ಲಿ ಪರಿಶೀಲಿಸಿ ಎನ್ನುವ ಆಪ್ಷನ್ ಇರುತ್ತದೆ. ಅದನ್ನು ಕ್ಲಿಕ್ ಮಾಡಿದರೆ ವೆರಿಫೈ ಆಗಿ ನೀವು ಲಾಗಿನ್ ಆಗಿರುತ್ತೀರಿ ಹೊಸ ಪೇಜ್ ಓಪನ್ ಆಗುತ್ತದೆ.
● ಎಡ ಭಾಗದಲ್ಲಿ ಮೇನ್ ಮೆನು ಎನ್ನುವ ಆಪ್ಷನ್ ಇರುತ್ತದೆ, ಮುಖ್ಯ ಮಾಹಿತಿ ಎನ್ನುವುದರಲ್ಲ ಕ್ಲಿಕ್ ಮಾಡಿ ಕೊನೆಯಲ್ಲಿರುವ ಆಪ್ಶನ್ ಆದ E-KYC ಇಂದ ರೇಷನ್ ಕಾರ್ಡ್ ಸದಸ್ಯರ ವಿವರಗಳ ನವೀಕರಣ ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿ.
● ರೇಷನ್ ಕಾರ್ಡ್ ನಿಮ್ಮ ಡಿಪೋ ದಾರಿ? ಅಥವಾ ಬೇರೆ ತಾಲೂಕು ಅಥವಾ ಬೇರೆ ಜಿಲ್ಲೆಯ ರೇಷನ್ ಕಾರ್ಡ್ ಎನ್ನುವುದಕ್ಕೆ ಆಪ್ಷನ್ ಇರುತ್ತದೆ ಸರಿಯಾದದ್ದನ್ನು ಆಯ್ಕೆ ಮಾಡಿ.
● ಮುಂದಿನ ಪೇಜ್ ಅಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆ ನಮೂದಿಸಬೇಕು. ಸದಸ್ಯರ ಹೆಸರು ಎಂದು ಇರುತ್ತದೆ ಅದರಲ್ಲಿ ಕುಟುಂಬದಲ್ಲಿ ಯಾವುದಾದರೂ ಒಬ್ಬರ ಸದಸ್ಯರ ಹೆಸರು ಸೆಲೆಕ್ಟ್ ಮಾಡಿ ಅವರ ಬಯೋಮೆಟ್ರಿಕ್ ತೆಗೆದುಕೊಳ್ಳಬೇಕು. ವೆರಿಫೈ ಆದಮೇಲೆ ಆಹಾರ ಇಲಾಖೆ ವೆಬ್ಸೈಟ್ ನಿಂದ ಮುಖ್ಯಸ್ಥರ ಸ್ಥಾನವನ್ನು ಬದಲಾಯಿಸಿ ಎಂದು ಒಂದು ಪಾಪ್ ಆಪ್ ಮೆಸೇಜ್ ಬರುತ್ತದೆ.
● ಸ್ಕ್ರೀನ್ ಮೇಲೆ ನಿಮ್ಮ ಕುಟುಂಬದ ಎಲ್ಲ ಸದಸ್ಯರ ಹೆಸರು ಬರುತ್ತದೆ. ಪತಿ ಪತ್ನಿ ಮಗ ಮಗಳು ಇತ್ಯಾದಿ ವಿವರಗಳು ಇರುತ್ತದೆ. ಅದರಲ್ಲಿ ರೇಷನ್ ಕಾರ್ಡ್ ರೂಲ್ಸ್ ಪ್ರಕಾರ ಕುಟುಂಬದಲ್ಲಿ ಹಿರಿಯ ಮಹಿಳೆಯ ಹೆಸರಿನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನ ಇರಬೇಕು. ಅದು ವ್ಯತ್ಯಾಸವಿದ್ದರೆ ಅವರ ಹೆಸರಿನಿಂದ ಮುಂದೆ ಕ್ಲಿಕ್ ಮಾಡಿ ಕುಟುಂಬದ ಮುಖ್ಯಸ್ಥರು ಎಂದು ಆಯ್ಕೆ ಮಾಡಿ.
● ಕೆಲವೊಂದು ಪಡಿತರ ಚೀಟಿಯಲ್ಲಿ ಅತ್ತೆ ಸೊಸೆಯಂದಿರು ಎಲ್ಲ ಒಟ್ಟಿಗೆ ಇರುತ್ತಾರೆ. ಆಗ ಸೊಸೆಯ ಹೆಸರನ್ನು ಅತ್ತೆ ಹೆಸರ ಬದಲಿಗೆ ಮುಖ್ಯಸ್ಥರ ಸ್ಥಾನಕ್ಕೆ ತರಬೇಕು ಎಂದರೆ expansion for E-KYC ಎಂದು ಕ್ಲಿಕ್ ಮಾಡಿ, ನಿಮ್ಮ ಕಾರಣಕ್ಕೆ ಸಂಬಂಧಪಟ್ಟ ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ. ಮತ್ತು ಉಳಿದ ಸದಸ್ಯರ ಸ್ಥಾನವನ್ನು ನಿಮ್ಮ ಸಂಬಂಧಕ್ಕೆ ಸರಿಯಾಗಿ ಆಯ್ಕೆ ಮಾಡಲು Ok ಮಾಡಿ.
● ಮತ್ತೊಮ್ಮೆ ಆಹಾರ ಇಲಾಖೆಯಿಂದ ವೆಬ್ ಸೈಟ್ ಇಂದ ಪಾಪ್ ಅಪ್ ಮೆಸೇಜ್ ಬರುತ್ತದೆ ಅದನ್ನು OK ಎಂದು ಕ್ಲಿಕ್ ಮಾಡಿದರೆ ನೀವು ಅಕ್ನಾಲೆಜ್ಮೆಂಟ್ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!