ಪ್ರತಿ ತಿಂಗಳು ಸರ್ಕಾರದಿಂದ 2000 ಸಹಾಯವನ್ನು ಪಡೆಯಲು ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಯರು ಈಗ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ತಯಾರಾಗಿದ್ದಾನೆ. ಈ ಹಿಂದೆ ಇದಕ್ಕಾಗಿ SMS ಕಳುಹಿಸಿ ವೇಳಾಪಟ್ಟಿ ನೋಂದಣಿ ಮಾಡಿಕೊಳ್ಳಬೇಕಾಗಿತ್ತು, ಆದರೆ ಸರ್ಕಾರ ಮತ್ತೊಮ್ಮೆ ಅನೌನ್ಸ್ ಮಾಡುವ ಮೂಲಕ ಸರ್ಕಾರ ಸೂಚಿಸಿರುವ ಸೇವಾ ಸಿಂಧು ಕೇಂದ್ರಗಳಾದ.
ಗ್ರಾಮ ಒನ್, ಕರ್ನಾಟಕ, ಒನ್ ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಗಳಲ್ಲಿ SMS ಇಲ್ಲದೆ ಇದ್ದರೂ ಯಾರು ಬೇಕಾದರೂ ಹೋಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ಆದರೆ ಅನೇಕರಿಗೆ ಅರ್ಜಿ ಸಲ್ಲಿಸಲು ಕುಟುಂಬದ ಯಜಮಾನಿಯೇ ಹೋಗಬೇಕಾ ಎನ್ನುವ ಗೊಂದಲಗಳಿವೆ ಅದರ ಬಗ್ಗೆ ಕೆಲ ಮುಖ್ಯ ಮಾಹಿತಿಯನ್ನು ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
● ಕುಟುಂಬದ ಯಜಮಾನಿಯು ಬಹಳ ವಯಸ್ಸಾಗಿದ್ದರೆ ಅಥವಾ ಅನಾರೋಗ್ಯ ಪೀಡಿತರಾಗಿದ್ದರೆ ಅಥವಾ ಉದ್ಯೋಗಸ್ಥೆಯಾಗಿದ್ದು ಆಕೆಗೆ ಅರ್ಜಿ ಸಲ್ಲಿಸಲು ಹೋಗಲು ಆಗುತ್ತಿಲ್ಲ ಎಂದರೆ ಕುಟುಂಬದ ಯಜಮಾನಿ ಪರವಾಗಿ ಆಕೆಯ ಪತಿ ಅಥವಾ ಅವರ ಮಕ್ಕಳು ಯಾರು ಬೇಕಾದರೂ ಹೋಗಿ ಅರ್ಜಿ ಸಲ್ಲಿಸಬಹುದು. ಆದರೆ ಈ ಕಂಡಿಷನ್ ಗಳನ್ನು ಫಾಲೋ ಮಾಡಬೇಕು.
1. ಕುಟುಂಬದ ಪಡಿತರ ಚೀಟಿ, ಯಜಮಾನಿ ಮಹಿಳೆಯ ಆಧಾರ್ ಕಾರ್ಡ್, ಅವರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮತ್ತು ಮಹಿಳೆಯ ಬ್ಯಾಂಕ್ ಪಾಸ್ ಬುಕ್ ಅನ್ನು ತಪ್ಪದೆ ತೆಗೆದುಕೊಂಡು ಹೋಗಬೇಕು. ಕಡ್ಡಾಯವಾಗಿ ಕುಟುಂಬದ ಮುಖ್ಯಸ್ಥೆ ಆಗಿರುವ ಮಹಿಳೆಯ ದಾಖಲೆಯನ್ನೇ ನೀಡಬೇಕು ಬೇರೆಯವರ ಪಾಸ್ ಬುಕ್ ವಿವರ ನೀಡಲು ಅವಕಾಶ ಇರುವುದಿಲ್ಲ.
2. ಯಜಮಾನಿ ಮಹಿಳೆಯ ಆಧಾರ್ ಕಾರ್ಡ್ ನಲ್ಲಿ ಯಾವ ಮೊಬೈಲ್ ಸಂಖ್ಯೆ ಇದೆಯೋ ಅದು ಮಹಿಳೆಯದಾಗಿದ್ದರು ಅಥವಾ ಆಕೆಯ ಪತಿಯದ್ದಾಗಿದ್ದರೂ, ಮಕ್ಕಳದ್ದೇ ಆಗಿದ್ದರೂ ಯಜಮಾನಿ ಮಹಿಳೆ ಆಧಾರ್ ಕಾರ್ಡ್ ನಲ್ಲಿ ಇರುವ ಫೋನ್ ನಂಬರ್ ಮೊಬೈಲ್ ಅನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವೇಳೆ ಒಂದು OTP ಬರುತ್ತದೆ, ಅದು 30 ಸೆಕೆಂಡ್ ನಲ್ಲಿ ಎಕ್ಸ್ಪೈರ್ ಆಗುತ್ತದೆ.
ಹಾಗಾಗಿ ಆ ಕಾಲಾವಕಾಶದ ಒಳಗಡೆ ಅರ್ಜಿ ಸಲ್ಲಿಸಲು OTP ಹೇಳಬೇಕಾದ ಅವಶ್ಯಕತೆ ಇರುವುದರಿಂದ ತಪ್ಪದೆ ಆ ಮೊಬೈಲ್ ಸಂಖ್ಯೆ ಇರುವ ಮೊಬೈಲ್ ಫೋನನ್ನು ಅರ್ಜಿ ಸಲ್ಲಿಸುವ ವೇಳೆ ಜೊತೆಗೆ ತೆಗೆದುಕೊಂಡು ಹೋಗಬೇಕು. ಈ ರೀತಿ ದಾಖಲೆಗಳು ಹಾಗೂ ಮೊಬೈಲ್ ಸಂಖ್ಯೆ ಇದ್ದರೆ ಯಜಮಾನಿ ಮಹಿಳೆ ಪರವಾಗಿ ಯಾರು ಬೇಕಾದರೂ ಹೋಗಿ ಅರ್ಜಿ ಸಲ್ಲಿಸಬಹುದು.
● ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಒಂದು ವೇಳೆ ಮಹಿಳೆಯ ಪತಿ ಇದ್ದು ಅವರ ಹೆಸರು ಯಜಮಾನ ಎಂದು ಬರುತ್ತಿದ್ದರು ಕೂಡ ಮತ್ತೊಂದು ಪುಟದಲ್ಲಿ ಮಹಿಳೆ ಹೆಸರು ಇದ್ದರೂ ಆ ಪಡಿತರ ಚೀಟಿಯಲ್ಲಿ ಅವರೇ ಕುಟುಂಬದ ಹಿರಿಯ ಮಹಿಳೆ ಆಗಿದ್ದರೆ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಲು ಅವರು ಅರ್ಹರಾಗಿರುತ್ತಾರೆ. ಆದರೆ ಕುಟುಂಬದ ಮುಖ್ಯಸ್ಥೆ ಅತ್ತೆ ಆಗಿದ್ದು ಅವರು ತೀರಿಹೋಗಿದ್ದರೆ ಅಥವಾ ಅವರು ಜೀವಂತವಾಗಿದ್ದರು.
ಅವರ ಬದಲು ಕುಟುಂಬದ ಬೇರೆ ಯಾವುದಾದರೂ ಮಹಿಳೆಯ ಹೆಸರಿನಲ್ಲಿ ಅರ್ಜಿ ಸಲ್ಲಿಸಲು ಪ್ರಯತ್ನ ಪಟ್ಟರೆ ಸಾಧ್ಯವಾಗುವುದಿಲ್ಲ. ಇದಕ್ಕಾಗಿ ನೀವು ಮೊದಲು ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಿಸಿ ಕೊಳ್ಳಬೇಕು. ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ನಿಮ್ಮ ಹೆಸರು ಬಂದ ಮೇಲೆ ಅರ್ಜಿ ಸಲ್ಲಿಸಬಹುದು.