ಅಗ್ರಿಮೆಂಟ್ ನೋಂದಣಿ ಆಗಿರದಿದ್ದರೆ ಬಾಡಿಗೆ ಹೆಚ್ಚಿಸಲು ಸಾಧ್ಯವಿಲ್ಲ, ಹೈಕೋರ್ಟ್ ನ ಹೊಸ ಆದೇಶ ಈ ವಿಚಾರವು ಬಾಡಿಗೆ ಮನೆಗಳಲ್ಲಿ ವಾಸ ಮಾಡುವವರು ಮಾತ್ರವಲ್ಲದೆ ಕಟ್ಟಡಗಳಲ್ಲಿ ಬಾಡಿಗೆಗೆ ಇರುವವರು ಮತ್ತು ಅವರ ಮಾಲೀಕರಿಗೂ ಕೂಡ ಸಂಬಂಧ ಪಟ್ಟ ವಿಚಾರವಾಗಿದೆ.
ಅದೇನೆಂದರೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಆಗುವ ಒಪ್ಪಂದದ ಕರಾರು ಪತ್ರವು ನೋಂದಣಿ ಕಾಯ್ದೆ 1908ರ ಸೆಕ್ಷನ್ 17(1) (d) ಪ್ರಕಾರ ಆ ಕರಾರು ಒಪ್ಪಂದದ ಅವಧಿ 11 ತಿಂಗಳಿಗಿಂತ ಹೆಚ್ಚಿಗೆ ಇದ್ದ ಸಮಯದಲ್ಲಿ ತಪ್ಪದೇ ಆ ದಸ್ತಾವೇಜನ್ನು ನೋಂದಣಿ ಮಾಡಿಸುವುದು ಕಡ್ಡಾಯ.
ಒಂದು ವೇಳೆ ಇದು ತಪ್ಪಿದ್ದಲ್ಲಿ ಮುಂದೆ ಬಾಡಿಗೆದಾರರು ಹಾಗೂ ಮಾಲೀಕರ ನಡುವೆ ಬಾಡಿಗೆ ಹೆಚ್ಚಿಸುವ ವಿಚಾರಕ್ಕೆ ತಕರಾರು ಬಂದು ಕಾನೂನು ಮೊರೆ ಹೋದ ಸಮಯದಲ್ಲಿ ತೊಡಕುಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಇತ್ತೀಚೆಗೆ ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಇದೇ ರೀತಿಯ ಪ್ರಕರಣ ಒಂದು ದಾಖಲಾಗಿತ್ತು.
ಇದರ ಸಂಬಂಧವಾಗಿ ಬೆಂಗಳೂರಿನಲ್ಲಿ ಮಾಲೀಕರೊಬ್ಬರ ಮೇಲೆ ಬಾಡಿಗೆಗೆ ಇದ್ದ ಪಂಜಾಬ್ ಬ್ಯಾಂಕ್ ಹೈಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಸಮಯದಲ್ಲಿ ಮೇಲ್ಮನವಿ ದರದ ಪರವಾಗಿ ಹೈಕೋರ್ಟ್ ಆದೇಶ ಹೊರಡಿಸಿದೆ. ಸೆಕ್ಷನ್ 49ರ ಪ್ರಕಾರ ಬಾಡಿಗೆ ಕರಾರು ಒಪ್ಪಂದಗಳನ್ನು ಉಪನೋಂದಾಣಿಧಿಕಾರಿ ಕಛೇರಿಗಳಲ್ಲಿ ರಿಜಿಸ್ಟರ್ ಮಾಡಿಸದೇ ಇದ್ದರೆ.
ಇದನ್ನು ಮೇಲಾಧಾರವಾಗಿ ಬಳಸಬಹುದೆ ಹೊರತು ಆ ಆಧಾರದ ಮೇಲೆ ಬಾಡಿಗೆ ಹೆಚ್ಚು ಮಾಡುವ ಅಧಿಕಾರ ಮಾಲಿಕರಿಗೆ ಇರುವುದಿಲ್ಲ ಎನ್ನುವುದನ್ನು ಹಳೆಯ ಪ್ರಕರಣವಾದ ಚಂದ್ರಕಲಾ ವರ್ಸಸ್ ಸೋಮನ್ ಪ್ರಕರಣವನ್ನು ಉಲ್ಲೇಖಿಸಿ ಸ್ಪಷ್ಟಪಡಿಸಿದೆ. ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಕರಣದ ವಿವರ ನೋಡುವುದಾದರೆ.
ಶ್ರೀನಿವಾಸ್ ಎಂಟರ್ಪ್ರೈಸಸ್ ಮಾಲೀಕರು ತಮ್ಮ ಕಟ್ಟಡವನ್ನು 1998ರಲ್ಲಿ ನೆಡುಂಗಡಿ ಬ್ಯಾಂಕಿಗೆ 81,444ರೂ. ಅಡ್ವಾನ್ಸ್ ಮತ್ತು 13,754ರೂ. ಬಾಡಿಗೆ ಎನ್ನುವ ಒಪ್ಪಂದದ ಮೇರೆಗೆ 5 ವರ್ಷಗಳವರೆಗೆ ಬಾಡಿಗೆಗೆ ನೀಡಿದ್ದರು. ಆ ಒಪ್ಪಂದ ಪತ್ರದಲ್ಲಿ ಪ್ರತಿವರ್ಷ 20%ರಷ್ಟು ಬಾಡಿಗೆ ಹೆಚ್ಚಿಸಲಾಗುವುದು ಎನ್ನುವುದು ಅಂಶವನ್ನು ಕೂಡ ಸೇರಿಸಲಾಗಿತ್ತು.
ಈ ಒಪ್ಪಂದವಾದ ಕೆಲವೇ ದಿನಗಳಲ್ಲಿ ನೆಡುಂಗಡಿ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೊತೆಗೆ ವಿಲೀನವಾಯಿತು. ಹಳೆ ಒಪ್ಪಂದ ಮುಗಿದ ಬಳಿಕ 2002ರಲ್ಲಿ ಅದೇ ಒಪ್ಪಂದವನ್ನು ರಿನೀವಲ್ ಮಾಡಿಕೊಂಡಿದ್ದರು. ಆದರೆ ಒಪ್ಪಂದದ ಪ್ರಕಾರ ಹೆಚ್ಚುವರಿ ಬಾಡಿಗೆಯನ್ನು ಬ್ಯಾಂಕ್ ನೀಡುತ್ತಿರಲಿಲ್ಲ ಇದರಿಂದ ಶ್ರೀನಿವಾಸ್ ಎಂಟರ್ಪ್ರೈಸಸ್ ಮಾಲೀಕರು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಅಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿರುದ್ಧ ದಾವೆ ಹೂಡಿ ಬಾಕಿ ಇರುವ ಹೆಚ್ಚಿಗೆ ಬಾಡಿಗೆ ಹಣ 9.34 ಲಕ್ಷ ಹಣ ಕೊಡಬೇಕೆಂದು ಕೋರಿಕೊಂಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು 2008ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಾಕಿ ಬಾಡಿಗೆ ಹಣ ಪಾವತಿಸಬೇಕು ಎಂದು ಆದೇಶಿಸಿತ್ತು. ಆದರೆ ಈ ಆದೇಶ ಪ್ರಶ್ನಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಿದ ನ್ಯಾ. ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾ. ಸಿ.ಎಂ ಪೂಣಚ್ಚ ಅವರಿದ್ದ ವಿಭಾಗೀಯ ಪೀಠವು.
ಉಪನೋಂದಾಣಾಧಿಕಾರಿ ಕಚೇರಿಯಲ್ಲಿ ಬಾಡಿಗೆ ಕರಾರು ಒಪ್ಪಂದ ಪತ್ರವನ್ನು ರಿಜಿಸ್ಟರ್ ಮಾಡಿಸಿಲ್ಲ. ಈ ಕಾರಣದಿಂದ ಕಟ್ಟಡದ ಮಾಲೀಕರಿಗೆ ಪ್ರತಿ ವರ್ಷವೂ ಬಾಡಿಗೆ ಹೆಚ್ಚಿಸಲು ಪತ್ರದಲ್ಲಿ ಬರೆದಿದ್ದರೂ ಮಾನ್ಯವಾಗದೇ ಇರುವುದರಿಂದ ಕಾನೂನಿನಲ್ಲಿ ಇದಕ್ಕೆ ಅವಕಾಶ ಇರುವುದಿಲ್ಲ ಎಂದು ತೀರ್ಪು ನೀಡಿದೆ.