ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರ ಅನುಮತಿ ನೀಡಿದೆ. ಸರ್ಕಾರ ಸೂಚಿಸಿರುವ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಗ್ರಾಮ ಪಂಚಾಯಿತಿಯಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನಿಗದಿತ ಸಮಯಕ್ಕೆ ಪೂರಕ ದಾಖಲೆಗಳ ಜೊತೆ ಹೋಗಿ ಅರ್ಜಿ ಸಲ್ಲಿಸಬಹುದು.
ಆದರೆ ಈ ಅರ್ಜಿ ಸಲ್ಲಿಕೆಗೆ ಸಂಬಂಧಪಟ್ಟ ಹಾಗೆ ಅನೇಕರಿಗೆ ಸಾಕಷ್ಟು ಗೊಂದಲಗಳು ಇವೆ. ಅದರಲ್ಲಿ ಮುಖ್ಯವಾದದ್ದು ಈಗಾಗಲೇ ಸರ್ಕಾರ ಸ್ಪಷ್ಟವಾಗಿ ಘೋಷಣೆ ಮಾಡಿರುವಂತೆ ಕುಟುಂಬದ ಯಜಮಾನಿ ಆಗಿರುವ ಮಹಿಳೆ ಬ್ಯಾಂಕ್ ಖಾತೆಗೆ DBT ಮೂಲಕ ಈ ಸಹಾಯಧನ ಸಿಗುತ್ತದೆ.
ಕುಟುಂಬದ ಯಜಮಾನಿ ಎನ್ನುವುದನ್ನು ಧೃಡ ಪಡಿಸಿಕೊಳ್ಳುವುದಕ್ಕಾಗಿ ಪಡಿತರ ಚೀಟಿಯಲ್ಲಿ ಆಕೆಯ ಹೆಸರು ಮೊದಲ ಪುಟದಲ್ಲಿ ಇರಬೇಕು. ಇತ್ತೀಚಿನ ಕೆಲ ವರ್ಷಗಳಿಂದ ಇದೇ ಮಾದರಿಯಲ್ಲಿ ರೇಷನ್ ಕಾರ್ಡ್ ವಿತರಣೆ ಕೂಡ ಮಾಡಲಾಗಿದೆ ಆದರೆ ಬಹಳ ಹಳೆಯದಾದ ರೇಷನ್ ಕಾರ್ಡ್ ಹೊಂದಿರುವವರಲ್ಲಿ ಕುಟುಂಬದ ಮುಖ್ಯಸ್ಥ ಪುರುಷನಾಗಿದ್ದಾನೆ ಈಗ ಅವರು ಅರ್ಜಿ ಸಲ್ಲಿಸಲು ಸಾಧ್ಯವೇ ಎನ್ನುವ ಗೊಂದಲಗಳಿವೆ.
ಹಾಗೆಯೇ ಈಗಾಗಲೇ ಒಂದೇ ಪಡಿತರ ಚೀಟಿಯಲ್ಲಿ ಅತ್ತೆ ಸೊಸೆ ಈ ರೀತಿ ಹೆಚ್ಚು ಮಹಿಳೆಯರಿದ್ದು ಅತ್ತೆ ಒಂದು ವೇಳೆ ಮೃ’ತಪಟ್ಟಿದ್ದರೆ ಅಥವಾ ಬೇರೆ ಹೋಗಿದ್ದರೆ ಅವರ ದಾಖಲೆಗಳು ಸಿಗದ ಕಾರಣ ಕುಟುಂಬದ ಮುಖ್ಯಸ್ಥೆ ಆಗಿರುವ ಅತ್ತೆ ಬದಲಿಗೆ ಸೊಸೆ ಕೂಡ ಅರ್ಜಿ ಸಲ್ಲಿಸಬಹುದೇ ಎನ್ನುವುದು ಗೊಂದಲವಿದೆ.
ಈ ರೀತಿ ಪ್ರಶ್ನೆಗಳಿಗೆ ಸರಿಯಾದ ಮಾಹಿತಿಯನ್ನು ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರ ವಿಧಿಸಿರುವ ಕಂಡಿಷನ್ ಪ್ರಕಾರ ಕುಟುಂಬದ ಮುಖ್ಯಸ್ಥೆ ಆಗಿರುವ ಮಹಿಳೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಮತ್ತು ಕುಟುಂಬದ ಪಡಿತರ ಚೀಟಿ, ಯಜಮಾನಿ ಮಹಿಳೆ ಆಧಾರ್ ಕಾರ್ಡ್, ಆಕೆಯ ಬ್ಯಾಂಕ್ ಖಾತೆ ವಿವರ ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಇದ್ದರೆ ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯ.
ಒಂದು ವೇಳೆ ಈ ಮೇಲೆ ತಿಳಿಸಿದಂತೆ ಸಮಸ್ಯೆಗಳಾಗಿರುವ ಸಮಯದಲ್ಲಿ ಅವರಿಗೆ ಪರಿಹಾರ ಏನೆಂದರೆ ಅವರು ಮೊದಲಿಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕು ಆದರೆ ಸದ್ಯಕ್ಕೆ ಬೇರೆ ಯಾವ ಪಬ್ಲಿಕ್ ವೆಬ್ಸೈಟ್ ಅಲ್ಲಿ ಕೂಡ ಇದಕ್ಕೆ ಅನುಮತಿ ನೀಡದ ಕಾರಣ ನೀವು ನೇರವಾಗಿ ನಿಮಗೆ ಪಡಿತರ ವಿತರಣೆ ಮಾಡುವ ಸೇವಾಕೇಂದ್ರಕ್ಕೆ ಹೋಗಿ ಆನ್ಲೈನ್ ಮೂಲಕ ತಿದ್ದುಪಡಿ ಮಾಡಿಸಿ ನಂತರ ಅರ್ಜಿ ಸಲ್ಲಿಸಲು ಪ್ರಯತ್ನಿಸಬಹುದು.
ತಿದ್ದುಪಡಿ ಮಾಡಿಸುವ ವಿಧಾನ:-
● ಮೊದಲಿಗೆ https://ahara.kar.nic.in/ ವೆಬ್ ಸೈಟ್ ಗೆ ಲಾಗಿನ್ ಆಗಬೇಕು. ಬಳಿಕ ಮೇನ್ ಪೇಜ್ ನಲ್ಲಿರುವ e-sevices ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
● ತಿದ್ದುಪಡಿ ಅಥವಾ ಹೊಸ ಸೇರ್ಪಡೆಗೆ ವಿನಂತಿ ಆಯ್ಕೆ ಕಾಣಿಸಲಿದೆ. ಅದನ್ನು ಕ್ಲಿಕ್ ಮಾಡಿದರೆ ಹೊಸ ಪುಟ ತೆರೆದುಕೊಳ್ಳುತ್ತದೆ.
● ಅದರಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿ. ಹೊಸ ಸೇರ್ಪಡೆ ಅಥವಾ ತಿದ್ದುಪಡಿ ಫಾರ್ಮ್ ನಲ್ಲಿ ಕುಟುಂಬದ ಮುಖ್ಯಸ್ಥರ ಹೆಸರನ್ನು ಬದಲಾಯಿಸಿ ಮಾಹಿತಿ ತುಂಬಿ. ತಿದ್ದುಪಡಿಗೆ ಬೇಕಾದ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ ಲೋಡ್ ಮಾಡಿ. ನಂತರ ಫಾರ್ಮ್ ಅನ್ನು ಸಬ್ಮಿಟ್ ಮಾಡಿದರೆ ಅರ್ಜಿ ಸಲ್ಲಿಕೆಯ ರಿಜಿಸ್ಟರ್ ನಂಬರ್ ಸಿಗಲಿದೆ.
● ಈ ರೆಫರೆನ್ಸ್ ನಂಬರ್ ಮೂಲಕ ಅರ್ಜಿಯ ಸ್ಟೇಟಸ್ ಟ್ರ್ಯಾಕ್ ಮಾಡಿ ತಿದ್ದುಪಡಿ ಆಗಿರುವ ರೇಷನ್ ಕಾರ್ಡ್ ಪಡೆದ ನಂತರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.