ಕರ್ನಾಟಕ ರಾಜ್ಯ ಸರ್ಕಾರವು ಅನ್ನ ಭಾಗ್ಯ ಯೋಜನೆ ಅಡಿ ನೀಡುತ್ತಿರುವ ಪಡಿತರವನ್ನು 10 ಕೆಜಿಗೆ ಏರಿಸಲಾಗುವುದು ಎಂದು ಚುನಾವಣೆಪೂರ್ವವಾಗಿ ಭರವಸೆ ನೀಡಿತ್ತು. ಅದರಂತೆ ಜುಲೈ ತಿಂಗಳಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪ್ರತಿ ಸದಸ್ಯನಿಗೆ 10 ಕೆಜಿ ಪಡಿತರ ನೀಡುವುದಾಗಿ ಘೋಷಣೆ ಮಾಡಿತ್ತು.
ಆದರೆ ದಾಸ್ತಾನು ಲಭ್ಯವಾಗದ ಕಾರಣ ಎಂದಿನಂತೆ ಕೇಂದ್ರದಿಂದ ನೀಡುತ್ತಿರುವ 5 ಕೆಜಿ ಪಡಿತರದ ಜೊತೆ ರಾಜ್ಯ ಸರ್ಕಾರದ ಭರವಸೆಯಾಗಿ ನೀಡಬೇಕಾಗಿದ್ದ 5 ಕೆಜಿ ಅಕ್ಕಿ ಬದಲಿಗೆ Kg ಗೆ 34 ರೂ. ನಂತೆ ಒಬ್ಬ ಸದಸ್ಯನಿಗೆ ಹೆಚ್ಚುವರಿ ಅಕ್ಕಿ ಹಣವಾಗಿದ್ದರೆ 170 ರೂ. ಅನ್ನು ಆ ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡುವುದಾಗಿ ಸರ್ಕಾರ ನಿರ್ಧರಿಸಿ ಈ ಪ್ರಕ್ರಿಯೆಗೆ ಚಾಲನೆ ಕೂಡ ನೀಡಿದೆ.
ಈಗಾಗಲೇ ಜಿಲ್ಲಾವಾರು ಹಲವಾರು ಜಿಲ್ಲೆಗಳಿಗೆ ಈ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣ ವರ್ಗಾವಣೆಯೂ ಆಗಿದೆ. ಆದರೆ ಕೆಲವರ ಖಾತೆಗೆ ಇನ್ನೂ ಸಹ ಆ ಹಣ ವರ್ಗಾವಣೆ ಆಗಿಲ್ಲ. ಅದಕ್ಕೆ ಕಾರಣವೇನೆಂದರೆ, ಅನೇಕ ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ಬ್ಯಾಂಕ್ ಖಾತೆ ಇಲ್ಲದಿರುವುದು.
ಇನ್ನು ಅನೇಕರು ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಗೆ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸದೇ ಇರುವುದು ಸದಸ್ಯರ e-kyc ಅಪ್ಡೇಟ್ ಆಗದಿರುವುದು ಅಥವಾ ನೀಡಿರುವ ಆಧಾರ್ ಕಾರ್ಡ್ ಮಾಹಿತಿ ತಪ್ಪಾಗಿರುವುದು ಅಥವಾ ನಿಷ್ಕ್ರಿಯವಾಗಿರುವ ಬ್ಯಾಂಕ್ ಅಕೌಂಟ್ ಮಾಹಿತಿ ನೀಡಿರುವುದು ಈ ಎಲ್ಲಾ ಕಾರಣದಿಂದ ಹಲವರು ಅನ್ನಭಾಗ್ಯ ಯೋಜನೆ ಹಣದಿಂದ ವಂಚಿತರಾಗಿದ್ದಾರೆ.
ಇದರ ಬಗ್ಗೆ ಮತ್ತು ರಾಜ್ಯದಲ್ಲಿ AAY ಹಾಗೂ PHH ಪಡಿತರ ಚೀಟಿ ಹೊಂದಿರುವ ಪಡಿತರ ಚೀಟಿದಾರರ ಬಗ್ಗೆ ಆಹಾರ ಇಲಾಖೆಯ ಉಪ ನಿರ್ದೇಶಕರು ಮಹತ್ವದ ಸೂಚನೆಯನ್ನು ನೀಡಿದ್ದಾರೆ. ಅದೇನೆಂದರೆ, ಈಗಾಗಲೇ AAY ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಅನ್ನಭಾಗ್ಯ ಯೋಜನೆಯಡಿ ಕಡುಬಡವರೆಂದು 21 Kg ಅಕ್ಕಿ ಹಾಗೂ 14 Kg ಜೋಳ ನೀಡಲಾಗುತ್ತಿದೆ.
AAY ಕಾರ್ಡ್ ನಲ್ಲಿ ಮೂರು ಜನ ಸದಸ್ಯರಿದ್ದರೆ, ಮೂರಕ್ಕಿಂತ ಹೆಚ್ಚು ಸದಸ್ಯರಿದ್ದರೂ ಕೂಡ ಪ್ರತಿ ಸದಸ್ಯರಿಗೆ 510 ಹೆಚ್ಚುವರಿ ಪಡಿತರದ ಹಣ ನೀಡಲಾಗುತ್ತಿದೆ. ಈ ರೀತಿ ಹೆಚ್ಚುವರಿ ಅಕ್ಕಿಯ ಹಣಕ್ಕೆ ಅರ್ಹರಾಗಿರುವ ಎಲ್ಲಾ ಪಡಿತರ ಚೀಟಿ ಸದಸ್ಯರು ಕೂಡ ತಪ್ಪದೇ e-kyc ಅಪ್ಡೇಟ್ ಮಾಡಿಸಲೇಬೇಕು.
ಈ ರೀತಿ e-kyc ಅಪ್ಡೇಟ್ ಮಾಡಿಸದೆ ಇದ್ದಲ್ಲಿ ಅಂತಹ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯ ಪಡಿತರವನ್ನು ವಿತರಣೆ ಮಾಡುವುದು ಹಾಗೂ ಹೆಚ್ಚುವರಿ ಅಕ್ಕಿಯ ಹಣವನ್ನು ಖಾತೆಗೆ ವರ್ಗಾವಣೆ ಮಾಡುವುದು ಎರಡನ್ನು ಕೂಡ ಸ್ಥಗಿತಗೊಳಿಸಲಾಗುತ್ತದೆ ಎಂದು ಆಹಾರ ನಾಗರಿಕ ಮತ್ತು ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಾಗಾಗಿ ತಪ್ಪದೆ ಪಡಿತರ ಚೀಟಿದಾರರು ತಪ್ಪದೆ ಈ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ತಿಗೊಳಿಸಬೇಕು. ಜುಲೈ ತಿಂಗಳ ಅಂತ್ಯದ ಒಳಗೆ ಇದನ್ನು ಪೂರ್ತಿಗೊಳಿಸಿದವರಿಗೆ ಆಗಸ್ಟ್ ತಿಂಗಳಲ್ಲಿ ಪಡಿತರ ಹಾಗೂ ಹೆಚ್ಚುವರಿ ಹಣವನ್ನು ಪಡೆಯಲು ಅವಕಾಶ ಇರುತ್ತದೆ. ಜುಲೈ ತಿಂಗಳ ಹೆಚ್ಚುವರಿ ಅಕ್ಕಿ ಹಣ ಪಡೆಯದೇ ಇರುವವರು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಕುವ ಮೂಲಕ ಸ್ಥಿತಿಯನ್ನು ಚೆಕ್ ಮಾಡಿ ಅದಕ್ಕೆ ಸಂಬಂಧಪಟ್ಟ ಕ್ರಮ ಕೈಗೊಂಡು ಸಮಸ್ಯೆ ಪರಿಹಾರ ಮಾಡಿಕೊಳ್ಳಿ.