Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ಜರುಗುವ ಪ್ರತಿ ಮದುವೆ ಮುಖ್ಯ ಉದ್ದೇಶ ವಂಶೋದ್ದಾರಕರನ್ನು ಪಡೆಯುವುದೇ ಆಗಿರುತ್ತದೆ. ಕಾಲಕಾಲಕ್ಕೆ ಮದುವೆಯ ಉದ್ದೇಶಗಳಲ್ಲಿ ಒಂದಷ್ಟು ವ್ಯತ್ಯಾಸವಾಗಿದ್ದರು ಕೂಡ ದಂಪತಿಗಳಿಬ್ಬರ ನಡುವಿನ ಆಕರ್ಷಣ ಶಕ್ತಿಯನ್ನು ಹೆಚ್ಚಿಸುವುದೇ ಮಗುವನ್ನು ಪಡೆಯಬೇಕೆಂಬ ಉದ್ದೇಶ.
ಮದುವೆಯಾದ ವರ್ಷದಲ್ಲೇ ಸಿಹಿಸುದ್ದಿ ಪಡೆದವರಿಂದ ಹಿಡಿದು ಅದಕ್ಕಾಗಿ ಗುಡಿ ಮಂದಿರ ಸುತ್ತಿ ಆಸ್ಪತ್ರೆ ಚಿಕಿತ್ಸೆಗಳನ್ನು ಪಡೆದು ಆ ಮೂಲಕ ಗರ್ಭ ಧರಿಸಿದವರವರೆಗೆ ಎಲ್ಲರಿಗೂ ಗರ್ಭಧಾರಣೆಯಾದ ಸಮಯದಲ್ಲಿ ಒಂದಷ್ಟು ಆತಂಕ, ಭಯ, ಗೊಂದಲಗಳು, ಪ್ರಶ್ನೆಗಳು ಇದ್ದೇ ಇರುತ್ತವೆ, ಅದರಲ್ಲಿ ಅತ್ಯಂತ ಪ್ರಮುಖವಾಗಿ ಎಲ್ಲಾ ದಂಪತಿಗಳಿಗೂ ಇರುವ ಸಾಮಾನ್ಯ ಪ್ರಶ್ನೆಯಾದ ಪ್ರೆಗ್ನೆನ್ಸಿ ಸಮಯದಲ್ಲಿ ಲೈಂ.ಗಿ.ಕ ಕ್ರಿಯೆಯಲ್ಲಿ ತೊಡಗಬಹುದಾ.? ನಿಷಿದ್ಧವಾ ಎನ್ನುವುದು ಈ ಪ್ರಶ್ನೆಗೆ ಉತ್ತರವನ್ನು ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
ಈ ವಿಷಯದಲ್ಲಿ ವೈದ್ಯರು ಮಹಿಳೆಯ ಗರ್ಭಧಾರಣೆಯ ಕಂಡೀಶನ್ ಮೇಲೆ ಸಲಹೆ ನೀಡುತ್ತಾರೆ. ಕೆಲವು ಹೈ ರಿಸ್ಕ್ ಪ್ರೆಗ್ನೆನ್ಸಿ ಕೇಸ್ ಗಳಾದ ಗರ್ಭಿಣಿಯಲ್ಲಿ ರಕ್ತಹೀನತೆ ಸಮಸ್ಯೆಯಿದ್ದರೆ, ಹೈ ಬಿಪಿ ಮತ್ತು ಶುಗರ್ ನಂತಹ ಸಮಸ್ಯೆಗಳಿದ್ದರೆ, ಪದೇ ಪದೇ ಗರ್ಭಪಾತವಾಗುತ್ತಿದ್ದರೆ ಅಂತಹ ಸಮಯದಲ್ಲಿ ದೂರ ಇರುವುದೇ ಉತ್ತಮ ಎಂದು ವೈದ್ಯರು ಹೇಳುತ್ತಾರೆ.
ಸಾಮಾನ್ಯವಾಗಿ ಎಲ್ಲರಿಗೂ ಅನ್ವಯವಾಗುವಂತೆ ಹೇಳಬೇಕು ಎಂದರೆ ಗರ್ಭಧಾರಣೆ ಆದ ಮೊದಲ ತ್ರೈಮಾಸಿಕದಲ್ಲಿ ಮಹಿಳೆಯ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ ಆಕೆಯ ಆರೋಗ್ಯದಲ್ಲೂ ಕೂಡ ಅತಿಯಾಗಿ ವಾಂತಿ ಆಗುವುದು ಈ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳುವುದರಿಂದ ಗರ್ಭಿಣಿ ಮಹಿಳೆ ದೈಹಿಕವಾಗಿ ಬಹಳ ಆಯಾಸಗೊಂಡಿರುತ್ತಾರೆ ಹಾಗಾಗಿ ಸಹಜವಾಗಿ ಆಕೆಗೆ ಲೈಂಗಿಕ ಕ್ರಿಯೆ ಬಗ್ಗೆ ಆಸಕ್ತಿ ಇರುವುದಿಲ್ಲ.
ಹಾಗೆಯೇ ಎರಡನೇ ತ್ರೈ ಮಾಸಿಕದಲ್ಲಿ ಆಕೆಗೆ ಏನು ಸಮಸ್ಯೆ ಇಲ್ಲದಿದ್ದರೆ ಆಕೆಗೆ ಆಸಕ್ತಿಯಿದ್ದರೆ ಪಾಲ್ಗೊಳ್ಳಬಹುದು. ಕೊನೆಯ ತ್ರೈಮಾಸಿಕದಲ್ಲಿ ಸಹಜವಾಗಿ ಆಕೆಯ ಹೊಟ್ಟೆ ಗಾತ್ರ ದೊಡ್ಡದಾಗಿರುತ್ತದೆ ಹಾಗೂ ಗರ್ಭಿಣಿ ದೇಹದಲ್ಲಿ ಸಾಕಷ್ಟು ಸೂಕ್ಷ್ಮ ವ್ಯತ್ಯಾಸಗಳು ಆಗುವುದರಿಂದ ದೂರ ಇರುವುದೇ ಒಳಿತು. ಕೇವಲ ದೈಹಿಕ ಸಂಪರ್ಕದಲ್ಲಿ ಒಂದಾಗಿರುವುದು ಮಾತ್ರ ಮುಖ್ಯವಲ್ಲ ಬದಲಿಗೆ ಆಕೆಗೆ ಮಾನಸಿಗೆ ಧೈರ್ಯ ಹೇಳಿ ಭಾವನಾತ್ಮಕವಾಗಿ ಕೂಡ ಆಕೆಗೆ ಹತ್ತಿರವಾಗಿರುವುದು ಕೂಡ ಮುಖ್ಯವಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ತಾನು ಗರ್ಭಿಣಿ ಆಗಿದ್ದೇನೆ ಎಂದು ಕನ್ಫರ್ಮ್ ಆದ ದಿನದಿಂದಲೇ ವೈದ್ಯರ ಭೇಟಿ ಮಾಡುತ್ತಾರೆ. ಮರು ದಿನದಿಂದಲೇ ಆಕೆ ಪಾಲಿಸಬೇಕಾದ ಆಹಾರದ ಮೆನು, ಚಟುವಟಿಕೆಗಳು, ಆಕೆ ಸೇವಿಸಬೇಕಾದ ಔಷಧಿಗಳು ಎಲ್ಲದರ ಬಗ್ಗೆಯೂ ಕೂಡ ಕೇಳಿ ಮಾಹಿತಿ ಪಡೆಯುತ್ತಾರೆ. ಭ್ರೂಣ ದ ಆರೋಗ್ಯಕ್ಕಾಗಿಯೂ ಬೇಕಾದ ಕ್ರಮಗಳನ್ನು ಕೈ ಗೊಳ್ಳುತ್ತಾರೆ.
ಎಲ್ಲಾ ಟೆಸ್ಟ್ ಗಳು, ಸ್ಕ್ಯಾನಿಂಗ್ ಮಾಡಿಸಿ ಭ್ರೂಣದ ಆರೋಗ್ಯದ ಸ್ಥಿತಿ ಬಗ್ಗೆ ಪ್ರತಿ ಹಂತಗಳಲ್ಲೂ ತಿಳಿದುಕೊಳ್ಳುತ್ತಾರೆ ಮತ್ತು ಪಡೆಯಬೇಕಾದ ಚುಚ್ಚುಮದ್ದುಗಳು ಇತ್ಯಾದಿಗಳ ಬಗ್ಗೆ ಕೂಡ ಮರೆಯುವುದಿಲ್ಲ. ಆದರೆ ಬಹಳ ಮುಖ್ಯವಾದ ವಿಚಾರವಾದ ಲೈಂಗಿಕ ಸಂಪರ್ಕದ ಬಗ್ಗೆ ವೈದ್ಯರ ಬಳಿ ಪ್ರಶ್ನೆ ಮಾಡಿ ತಿಳಿದುಕೊಳ್ಳುವುದಿಲ್ಲ.
ಆದರೆ ಇದು ತಪ್ಪು ಈ ರೀತಿ ಯಾವುದೇ ಗೊಂದಲಗಳು ಅಥವಾ ಅನುಮಾನಗಳು ಇದ್ದಾಗ ನೇರವಾಗಿ ವೈದ್ಯರನ್ನೇ ಪ್ರಶ್ನಿಸಿ ಮಾಹಿತಿ ಪಡೆದುಕೊಳ್ಳುವುದು ಉತ್ತಮ. ನೀವು ಯಾವ ವೈದ್ಯರ ಬಳಿ ತಪಾಸಣೆಗೆ ಹೋಗುತ್ತಿರುತ್ತಿರುತ್ತೀರ ಅವರಿಗೆ ನಿಮ್ಮ ದೇಹದ ಆರೋಗ್ಯ ಪರಿಸ್ಥಿತಿಯ ಬಗ್ಗೆ ಚೆನ್ನಾಗಿ ಅರಿವಿರುತ್ತದೆ ಅವರೇ ಇದರ ಬಗ್ಗೆ ಸರಿಯಾದ ಸಲಹೆಯನ್ನು ಕೊಡುತ್ತಾರೆ ಅವರ ಸಲಹೆಯಂತೆ ಮುಂದುವರೆಯಿರಿ.