ರೈತರ ಬ್ಯಾಂಕ್ ಖಾತೆಗೆ ಶುಕ್ರವಾರ ಕೇಂದ್ರ ಸರ್ಕಾರದ ವತಿಯಿಂದ 2000 ರೂಪಾಯಿಗಳ ಸಹಾಯಧನ ಬರುತ್ತದೆ, ಆದರೆ ಹಣ ಪಡೆಯಲು ಈ ಕೆಲಸ ಕಡ್ಡಾಯ.!

ರೈತರನ್ನು ಆರ್ಥಿಕವಾಗಿ ಸಧೃಡರನ್ನಾಗಿಸುವ ಕಾರಣದಿಂದಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ PM ಕಿಸಾನ್ ಸಮ್ಮಾನ್ ಯೋಜನೆಯ 14ನೇ ಕಂತು ಶೀಘ್ರದಲ್ಲೇ ರೈತರ ಖಾತೆಗೆ ಬಿಡುಗಡೆ ಆಗಲಿದೆ
PM Events ಎನ್ನುವ ವೆಬ್ಸೈಟ್ ನಲ್ಲಿ  ಅಧಿಕೃತವಾಗಿ ಘೋಷಿಸುವ ಮೂಲಕ ಕೇಂದ್ರ ಸರ್ಕಾರವು ರೈತರಿಗೆ ಸಿಹಿ ಸುದ್ದಿ ನೀಡಿದೆ.

ಈ ಪ್ರಕಾರವಾಗಿ ಇದೇ ಶುಕ್ರವಾರ ಅಂದರೆ ಜುಲೈ 28ರ ಬೆಳಗ್ಗೆ 11 ಗಂಟೆಗೆ ಸುಮಾರು 8.5 ಕೋಟಿ ರೈತರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು DBT ಮೂಲಕ ಹಣ ವರ್ಗಾವಣೆ ಮಾಡಲಿದ್ದಾರೆ. ಈವರಿಗೆ ಯಶಸ್ವಿಯಾಗಿ 13 ಕಂತಿನ ಹಣ ಪಡೆದಿರುವ ಅನೇಕ ರೈತರು 14ನೇ ಕಂತಿನ ಹಣವನ್ನು ಕೂಡ ಪಡೆಯಲಿದ್ದಾರೆ.

ಆದರೆ ಇತ್ತೀಚಿಗೆ ಪ್ರತಿಯೊಂದು ಕಂತಿನ ಹಣ ಬಿಡುಗಡೆ ಆಗುವ ಸಮಯದಲ್ಲೂ ಅನೇಕ ರೈತರು ಇದರಿಂದ ವಂಚಿತರಾಗುತ್ತಿದ್ದಾರೆ. ಕಾರಣ, ರೈತರು ಕೊಟ್ಟಿರುವ ಮಾಹಿತಿಗಳಲ್ಲಿ ಹೊಂದಾಣಿಕೆ ಆಗದೆ ಇರುವುದು ಮತ್ತು ನಕಲಿ ಫಲಾನುಭವಿಗಳು ಪತ್ತೆ ಆಗಿರುವುದು ಹಾಗೂ ರೈತರ e-kyc ಅಪ್ಡೇಟ್ ಆಗದೆ ಇರುವುದು.

ಈಗಾಗಲೇ ಅನೇಕ ಬಾರಿ ಕೇಂದ್ರ ಸರ್ಕಾರವು ಈ ವಿಚಾರವಾಗಿ ರೈತರಿಗೆ ಮಾಹಿತಿ ನೀಡಿದೆ. ಆದರೂ ಇನ್ನೂ ಅನೇಕ ರೈತರು ತಮ್ಮ e-kyc ಅಪ್ಡೇಟ್ ಮಾಡದ ಕಾರಣ ಈ ಬಾರಿಯೂ ಕೂಡ ಕಿಸಾನ್ ಸಮ್ಮಾನ್ ಹಣದಿಂದ ವಂಚಿತರಾಗಿದ್ದಾರೆ. ಒಂದು ವೇಳೆ ನೀವು ಕೂಡ ಪಿಎಂ ಕಿಸಾನ್ ನಿಧಿ ಯೋಜನೆಯ ಫಲಾನುಭವಿಗಳಾಗಿದ್ದು‌.

ಇದುವರೆಗೂ ಕೂಡ ಸಹಾಯಧನವನ್ನು ಪಡೆದು ಈಗ ವಂಚಿತರಾಗಿದ್ದರೆ ತಪ್ಪದೆ ನಿಮ್ಮ ಹತ್ತಿರದಲ್ಲಿರುವ CSC ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರದಲ್ಲಿ ಅಥವಾ ನೇರವಾಗಿ ನೀವೇ https://pmkisan.gov.in/ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ  e- kyc ಅಪ್ಡೇಟ್ ಮಾಡಿಕೊಳ್ಳಿ.

PM ಕಿಸಾನ್ e-kyc ಅಪ್ಡೇಟ್ ಮಾಡುವ ವಿಧಾನ:-

● ಮೊದಲಿಗೆ https://pmkisan.gov.in/ ವೆಬ್ ಸೈಟ್ ಗೆ ಭೇಟಿ ಕೊಡಿ.
● ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ Search ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಜೊತೆಗೆ ನೀವು ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಅರ್ಜಿ ಹಾಕುವಾಗ ನೀಡಿದ್ದ ಮೊಬೈಲ್ ಸಂಖ್ಯೆಯನ್ನು ಕೂಡ ಎಂಟ್ರಿ ಮಾಡಲು ಆಪ್ಷನ್ ಬರುತ್ತದೆ ಅದನ್ನು ಎಂಟ್ರಿ ಮಾಡಿ.

● ಮೊಬೈಲ್ ನಂಬರ್ ನ ಹಾಕಿ ನಂತರ Get Mobile OTP ಮೇಲೆ ಕ್ಲಿಕ್ ಮಾಡಿ.
● ನಿಮ್ಮ ಮೊಬೈಲ್ ಗೆ ಬಂದಿರುವ OTP ಸಂಖ್ಯೆಯನ್ನು ಹಾಕಿ. ಮತ್ತೊಮ್ಮೆ ನಿಮ್ಮ ಆಧಾರ್ ಕಾರ್ಡ್ ಅಲ್ಲಿರುವ ಮೊಬೈಲ್ ಸಂಖ್ಯೆಯನ್ನು ಕೇಳಲಾಗುತ್ತದೆ.
● ನಿಮ್ಮ ಆಧಾರ್ ಕಾರ್ಡ್ ಅಲ್ಲಿರುವ ಮೊಬೈಲ್  ಸಂಖ್ಯೆ ಎಂಟ್ರಿ ಮಾಡಿದ ನಂತರ ಆ ಸಂಖ್ಯೆಗೆ ಒಂದು OTP ಹೋಗುತ್ತದೆ. ಆ ಒಟಿಪಿಯನ್ನು ಹಾಕಿ Submit ಮೇಲೆ ಕ್ಲಿಕ್ ಮಾಡಿದರೆ e-kyc ಅಪ್ಡೇಟ್ ಆಗುತ್ತದೆ.

● ಕೆಲವೊಮ್ಮೆ PM ಕಿಸಾನ್ ಸಮ್ಮಾನ್ ಯೋಜನೆ ಮಾಡಿಸುವ ವೇಳೆ ಕೊಟ್ಟ ಮೊಬೈಲ್ ಸಂಖ್ಯೆ ಬೇರೆ ಇರುತ್ತದೆ, ನಂತರ ದಿನಗಳಲ್ಲಿ ಆಧಾರ್ ಕಾರ್ಡ್ ಅಲ್ಲಿ ನಂಬರ್ ಬದಲಾಯಿಸಿದ್ದರೆ ಇತ್ಯಾದಿ ಕಾರಣಗಳಿಂದ ಎರಡು ಮೊಬೈಲ್ ಸಂಖ್ಯೆಗಳು ಬೇರೆ ಆಗಿರುತ್ತದೆ. ಆದರೂ ಸಮಸ್ಯೆ ಇರುವುದಿಲ್ಲ. PM ಕಿಸಾನ್ ನಿಧಿ ಯೋಜನೆ ಮಾಡಿಸುವಾಗ ಕೊಟ್ಟ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಅಲ್ಲಿರುವ ಮೊಬೈಲ್ ಸಂಖ್ಯೆ ಒಂದೇ ಆಗಿದ್ದರೆ  ಶೀಘ್ರವಾಗಿ e-kyc ಪ್ರಕ್ರಿಯೆ ಪೂರ್ತಿಗೊಳ್ಳುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!

Leave a Comment

%d bloggers like this: