ಇಂದು ಸರ್ವೇ ಸಾಮಾನ್ಯವಾಗಿ ಎಲ್ಲೆಡೆ ಕೇಳಿ ಬರುತ್ತಿರುವ ಒಂದು ಸಮಸ್ಯೆ ಎಂದರೆ ಸಂತಾನಹೀನತೆ. ಮದುವೆಯಾದ ವರ್ಷದಲ್ಲೇ ದಂಪತಿಗಳು ಸಿಹಿಸುದ್ದಿ ನೀಡಬೇಕೆಂಬುದು ಕುಟುಂಬದವರ ನಿರೀಕ್ಷೆ. ಆದರೆ ವರ್ಷವಲ್ಲದೇ ಮೂರ್ನಾಲ್ಕು ವರ್ಷಗಳು ಕಳೆದರೂ ಮಗುವಿನ ಆಗಮನದ ಬಗ್ಗೆ ಸುಳಿವಿರದೇ ಹೋದರೆ ನಿಧಾನವಾಗಿ ಯಾವುದೇ ಆರೋಗ್ಯ ಸಮಸ್ಯೆಗಿಂತಲೂ ಕಡಿಮೆ ಇಲ್ಲದಂತೆ ಈ ಸಮಸ್ಯೆ ದಂಪತಿಗಳನ್ನು ಮಾತ್ರವಲ್ಲದೇ ಕುಟುಂಬದವರನ್ನು ಕೂಡ ಕಾಡಿ ಬಿಡುತ್ತದೆ.
ಕುಟುಂಬದವರು, ಬಂಧು ಮಿತ್ರರು ಮತ್ತು ಸ್ನೇಹಿತರ ನಡುವೆಯೇ ಆ ದಂಪತಿಗಳು ಆಡಿಕೊಳ್ಳುವ ವಸ್ತುವಾಗಿ ಬಿಡುತ್ತಾರೆ. ನಂತರದ ದಿನದಲ್ಲಿ ಮಗುವನ್ನು ಪಡೆಯಲೇ ಬೇಕೆಂಬ ಹಂಬಲದಿಂದ ಮಾಡದಿರುವ ಪೂಜೆ, ವ್ರತಗಳಿಲ್ಲ. ಸುತ್ತದೇ ಇರುವ ಆಸ್ಪತ್ರೆಗಳಿರುವುದಿಲ್ಲ. ಮದುವೆಯಾದ ಮೂರು ವರ್ಷಗಳ ನಂತರವೂ ದಂಪತಿಗಳು ಅನ್ಯೋನ್ಯವಾಗಿದ್ದರೂ, ಇಬ್ಬರೂ ಯಾವುದೇ ಫ್ಯಾಮಿಲಿ ಪ್ಲಾನಿಂಗ್ ನಲ್ಲಿ ಮಾಡಿಕೊಳ್ಳದಿದ್ದರೂ ಮಕ್ಕಳನ್ನು ಪಡೆಯದೇ ಇದ್ದಲ್ಲಿ ಇಬ್ಬರಲ್ಲಿ ಯಾರಿಗಾದರೂ ಅಥವಾ ಇಬ್ಬರಿಗೆ ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಸಮಸ್ಯೆ ಇದೆ ಎಂದೇ ಭಾವಿಸಲಾಗುತ್ತದೆ.
ಆಗ ತಪ್ಪದೇ ಮೊದಲಿಗೆ ತಜ್ಞ ವೈದರ ಬಳಿ ಹೋಗಿ ಅವರ ಸಲಹೆಗಳನ್ನು ಪಡೆಯುವುದು ಉತ್ತಮ. ಎಲ್ಲಾ ಜನರಲ್ ಚೆಕಪ್ ಆದ ಬಳಿಕ ಮಹಿಳೆಗೆ ಹಾರ್ಮೋನ್ಸ್, ಅಂಡಾಶಯ, ಅಂಡಾಣುಗಳ ಪರೀಕ್ಷೆ ನಡೆಸಿ ಸಮಸ್ಯೆ ಬಗೆಹರಿಸಲಾಗುತ್ತದೆ. ಹಾಗೆಯೇ ಪುರುಷರಿಗೂ ಕೂಡ ಅವರ ವೀರ್ಯಾಣುಗಳ ಗುಣಮಟ್ಟ, ಸಾಮರ್ಥ್ಯ ಬಗ್ಗೆ ಪರೀಕ್ಷೆ ನಡೆಸಿ ಅವುಗಳಲ್ಲಿ ಸಮಸ್ಯೆ ಕಂಡು ಬಂದಿದ್ದರೆ ಚಿಕಿತ್ಸೆ ಕೊಟ್ಟು ಪರಿಹರಿಸುತ್ತಾರೆ.
ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಅಥವಾ ಲೈಂಗಿಕ ಕ್ರಿಯೆ ಗೆ ಸಂಬಂಧಪಟ್ಟ ಸಮಸ್ಯೆಗಳು ಅಥವಾ ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಇನ್ಯಾವುದೇ ಸಮಸ್ಯೆ ಇಲ್ಲದೆ ಇದ್ದಾಗ ಶೀಘ್ರವಾಗಿ ಮಗುವನ್ನು ಪಡೆಯಬೇಕು ಎನ್ನುವ ಇಚ್ಛೆಯಿದ್ದರೆ ಹೆಣ್ಣು ಮಕ್ಕಳು ಮಿಲನ ಕ್ರಿಯೆ ಆದ ನಂತರ ಮಾಡುವ ಕೆಲ ಸಣ್ಣ ಪುಟ್ಟ ತಪ್ಪುಗಳನ್ನು ತಪ್ಪಿಸಬೇಕು. ಇವುಗಳ ಬಗ್ಗೆ ಗಮನಹರಿಸಿದರೆ ಆದಷ್ಟೂ ಬೇಗ ಅವರು ಗರ್ಭಧರಿಸಬಹುದು.
ಸ್ತ್ರೀ ರೋಗ ತಜ್ಞರು, ಪ್ರಸೂತಿ ತಜ್ಞರು, ಲೈಂಗಿಕ ಶಾಸ್ತ್ರಜ್ಞರು ನೀಡುವ ಈ ವಿಷಯವಾಗಿ ನೀಡುವ ಕೆಲ ಸಲಹೆಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ. ಅದೇನೆಂದರೆ, ಮಿಲನ ಕ್ರಿಯೆಯಲ್ಲಿ ಅಂಡಾಣುಗಳ ಜೊತೆ ಪುರುಷರ ವೀರ್ಯಾಣುಗಳು ಸೇರುತ್ತದೆ. ಆ ಸಮಯದಲ್ಲಿ ಹೆಣ್ಣಿನ ದೇಹದಲ್ಲಿ ಕೆಲ ಸಮಯ ವೀರ್ಯಾಣುಗಳು ಹೋಗಿ ಸೇರಲು ಕೆಲ ನಿಮಿಷಗಳ ಅವಶ್ಯಕತೆ ಇರುತ್ತದೆ.
ಆದರೆ ಕೆಲ ಹೆಣ್ಣು ಮಕ್ಕಳು ಸಂಭೋಗ ಕ್ರಿಯೆ ಆದ ತಕ್ಷಣ ನೀರಿನಲ್ಲಿ ಕ್ಲೀನ್ ಮಾಡುವುದರಿಂದ ವೀರ್ಯಗಳು ತಮ್ಮ ಜಾಗವನ್ನು ಹೋಗಿ ತಲುಪಲು ಸಾಧ್ಯವಾಗುವುದಿಲ್ಲ ಮತ್ತು ಅವು ಹೊರ ಹೋಗುವ ಸಾಧ್ಯತೆ ಹೆಚ್ಚು. ಆದರೆ ಈ ಸೂಕ್ಷ್ಮ ವಿಷಯದ ಬಗ್ಗೆ ಅನೇಕ ಹೆಣ್ಣು ಮಗಳಿಗೆ ಮಾಹಿತಿ ಇರದೇ ಅವರ ತಾಯಿಯಾಗುವ ಕನಸಿಗೆ ಅಡ್ಡಿಯಾಗುತ್ತಿರುತ್ತದೆ.
ಇದೇ ರೀತಿಯ ಮತ್ತೊಂದು ಸಮಸ್ಯೆ ಎಂದರೆ ಅವರು ಮಿಲನ ಕ್ರಿಯೆಯಲ್ಲಿ ಅನುಸರಿಸುವ ಭಂಗಿಗಳು. ಇದು ಬಹಳ ಸಿಲ್ಲಿ ವಿಷಯ ಎನಿಸಬಹುದು ಆದರೆ ಈ ಗರ್ಭಧಾರಣೆ ವಿಷಯದಲ್ಲಿ ಬಹಳ ಗಂಭೀರ ಪರಿಣಾಮ ಬೀರುವ ವಿಷಯವಾಗಿದೆ. ಈ ರೀತಿ ಬಹಳ ಬೇಗ ಗರ್ಭ ಧರಿಸಬೇಕು ಎಂದರೆ ಮಿಷಿನರಿ ಪೊಸಿಷನ್ ನಲ್ಲಿ ಸಂಭೋಗ ಕ್ರಿಯೆ ನಡೆಸಿದರೆ ಬೇಗ ರಿಸಲ್ಟ್ ಸಿಗುತ್ತದೆ ಎಂದು ಸಲಹೆ ನೀಡುತ್ತಾರೆ ತಜ್ಞರು.