ಗೃಹಲಕ್ಷ್ಮಿ ಯೋಜನೆಗೆ ಪ್ರಜಾ ಪ್ರತಿನಿಧಿಗಳಿಗಾಗಿ ಸಿದ್ಧವಾಗಿದೆ ಹೊಸ ಮೊಬೈಲ್ ಆಪ್ ಈ ಆಪ್ ಮೂಲಕ ಅರ್ಜಿ ಸಲ್ಲಿಸಬಹುದು.! ಸೈಬರ್ ಸೆಂಟರ್ ಗೆ ಹೋಗುವುದು ಬೇಡ.!

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಕಾರ್ಯಕ್ರಮಕ್ಕೆ ಕಳೆದ ವಾರದಿಂದ ಚಾಲನೆ ನೀಡಲಾಗಿದೆ. ಆದರೆ ಈ ಬಾರಿ ಸರ್ಕಾರವು ಕೇವಲ ಸರ್ಕಾರದ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾತ್ರ ಹೋಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಫಲಾನುಭವಿಗಳು ಮೊದಲು ಮೊಬೈಲ್ ಸಂಖ್ಯೆ ಮೂಲಕ ನೋಂದಾಯಿಸಿಕೊಂಡು ವೇಳಾಪಟ್ಟಿ ಪಡೆದು ಆ ಸಮಯದಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು.

WhatsApp Group Join Now
Telegram Group Join Now

ಆದರೆ ಈಗ ಮುಕ್ತವಾಗಿ ಎಲ್ಲರಿಗೂ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ ಮತ್ತು ಇದರೊಂದಿಗೆ ಮತ್ತೊಂದು ಗುಡ್ ನ್ಯೂಸ್ ಸಹ ನೀಡಿದೆ. ಅದೇನೆಂದರೆ, ಈ ಮೊದಲೇ ಸರ್ಕಾರ ಪೋಷಿಸಿದಂತೆ 1000 ಜನರಿಗೆ ಇಬ್ಬರಂತೆ ಪ್ರಜಾಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡು ಅವರ ಮೂಲಕವೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.

ಆ ಪ್ರಜಾ ಪತಿನಿಧಿಗಳು ಕೂಡ ಮೊಬೈಲ್ ಆಪ್ ಮೂಲಕ ಸರ್ಕಾರದ ಪರವಾಗಿ ಅರ್ಜಿ ಸಲ್ಲಿಸಿ ಕೊಡುತ್ತಾರೆ. ಪ್ರಜಾ ಪ್ರತಿನಿಧಿಗಳಾಗಲು ಆಸಕ್ತಿ ಇರುವವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅರ್ಜಿ ಆಹ್ವಾನ ಮಾಡಿತ್ತು, ಈಗ ಅರ್ಜಿ ಸಲ್ಲಿಸಿ ಸ್ವಯಂಪೇತವಾಗಿ ಪ್ರಜಾ ಪ್ರತಿನಿಧಿಗಳಾಗಿರುವವರು ಮೊಬೈಲ್ ಆಪ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ತಿಗೊಳಿಸಿ ಕೊಡುತ್ತಾರೆ.

ಈ ಮೊಬೈಲ್ ಆಪ್ ಯಾವ ರೀತಿ ಕೆಲಸ ಮಾಡುತ್ತದೆ ಯಾವ ರೀತಿ ಇರುತ್ತದೆ ಅದರಲ್ಲಿ ಹೇಗೆ ಅರ್ಜಿ ಸಲ್ಲಿಸಬಹುದು ಎನ್ನುವ ವಿವರವನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ. ಆದರೆ ಸರ್ಕಾರಕ್ಕೆ ಪ್ರಜಾ ಪ್ರತಿನಿಧಿಗಳಾಗಿಲು ಅರ್ಜಿ ಸಲ್ಲಿಸಿ ಅನುಮತಿ ಪಡೆದ ನಂತರ ಸರ್ಕಾರದಿಂದ ಗುರುತಿನ ಚೀಟಿ ಪಡೆದು ಅಧಿಕೃತವಾಗಿ ಆಯ್ಕೆ ಆಗಿರುವ ಅರ್ಹರಷ್ಟೇ ಈ ಮೊಬೈಲ್ ಅಪ್ ಬಳಸಲು ಸಾಧ್ಯವಾಗುತ್ತದೆ. ಅವರ ಮೊಬೈಲ್ ಸಂಖ್ಯೆಯಿಂದ ಲಾಗಿನ್ ಆಗುವ ಮೂಲಕ ಮಾತ್ರ ಈ ಮೊಬೈಲ್ ಆಪ್ ಅನ್ನು ಬಳಸಬಹುದು.

ಮೊಬೈಲ್ ಆಪ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-

● Gruha Lakshmi version 2.01 apk ಈ ಆಪ್ ಡೌನ್ಲೋಡ್ ಮಾಡಿಕೊಂಡು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
https://drive.google.com/file/d/1XuwbPI2XLtACsWM_kPI02WNHthZu6VQT/view ಈ ಲಿಂಕ್ ಬಳಸಿ ಆಪ್ ಡೌನ್ಲೋಡ್ ಮಾಡಬಹುದು.

● ಆಪ್ ಓಪನ್ ಆದಮೇಲೆ ಮೊಬೈಲ್ ಸಂಖ್ಯೆ ಕೇಳುತ್ತದೆ ನೀವು ಸರ್ಕಾರ ಗುರುತಿಸಿರುವ ಪ್ರಜಾ ಪ್ರತಿನಿಧಿಯಾಗಿದ್ದರೆ ಮಾತ್ರ ನಿಮ್ಮ ಮೊಬೈಲ್ ಸಂಖ್ಯೆ ಮಾನ್ಯವಾಗಿ ಅದಕ್ಕೆ OTP ಬರುತ್ತದೆ, OTP ಯನ್ನು ಹಾಕಿ ವೆರಿಫೈ ಮಾಡಿ. ಇಲ್ಲವಾದಲ್ಲಿ invalid ಮೊಬೈಲ್ ನಂಬರ್ ಎಂದು ಬರುತ್ತದೆ

● ಮೊಬೈಲ್ ಸಂಖ್ಯೆ ಮೂಲಕ ಲಾಗಿನ್ ಆದ ಮೇಲೆ ನಿಮಗೆ ಎರಡು ಆಯ್ಕೆಗಳು ಕಾಣುತ್ತದೆ, ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಅಥವಾ ಸಲ್ಲಿಸಿರುವ ಹಳೆ ಅರ್ಜಿಗಳು ಎನ್ನುವ ಆಪ್ಷನ್ ಇರುತ್ತದೆ. ಅದರಲ್ಲಿ ಹೊಸ ಅರ್ಜಿ ಎನ್ನುವುದನ್ನು ಕ್ಲಿಕ್ ಮಾಡಿ.

● ಅರ್ಜಿ ಸಲ್ಲಿಸಲು ಗೃಹಲಕ್ಷ್ಮಿ ಯೋಜನೆ ಫಲಾನುಭವಿಯ ಪಡಿತರ ಚೀಟಿಯ RC ಸಂಖ್ಯೆಯನ್ನು ಹಾಕಿ ಮತ್ತು ಅವರ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿದರೆ ಆಧಾರ್ ಕಾರ್ಡ್ ಸಂಖ್ಯೆಯಲ್ಲಿರುವ ಮೊಬೈಲ್ ಸಂಖ್ಯೆಗೆ ಒಂದು OTP ಹೋಗಿರುತ್ತದೆ. ಆ OTPಯನ್ನು ನಮೂದಿಸಿ ಸಬ್ಮಿಟ್ ಕೊಟ್ಟರೆ ಯಶಸ್ವಿಯಾಗಿ ಅರ್ಜಿ ಸಲ್ಲಿಕೆ ಆಗುತ್ತದೆ. ಅದರ ಸ್ವೀಕೃತಿ ಪತ್ರವನ್ನು ಕೂಡ ಪಡೆಯಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now