ಕಾಂಗ್ರೆಸ್ ಪಕ್ಷವು ಆಡಳಿತಕ್ಕೆ ಬಂದು ತಾನು ನೀಡಿದ್ದ ಭರವಸೆಯಂತೆ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರಲು ಆರಂಭಿಸಿದ ಮೇಲೆ ರಾಜ್ಯದಲ್ಲಿ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಅಧಿಕವಾಗುತ್ತಿದೆ. ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ, ಈ ಯೋಜನೆಗಳ ಪ್ರಯೋಜನವನ್ನು ಪಡೆಯಲು ರೇಷನ್ ಕಾರ್ಡ್ ಒಂದು ಕಡ್ಡಾಯ ದಾಖಲೆ ಪತ್ರ ಆಗಿರುವುದರಿಂದ ಈ ರೀತಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ.
ಗ್ಯಾರಂಟಿ ಕಾರ್ಡ್ ಯೋಜನೆ ಮಾತ್ರವಲ್ಲದೆ ಸರ್ಕಾರದ ಇನ್ನು ಅನೇಕ ಸವಲತ್ತುಗಳನ್ನು ಪಡೆಯಲು BPL ಕಾರ್ಡ್ ಹೊಂದಿರುವವರು ಅರ್ಹರಾಗಿರುತ್ತಾರೆ ಆ ಕಾರಣದಿಂದಾಗಿ BPL ಕಾರ್ಡ್ ಗಾಗಿಯೇ ಹೆಚ್ಚು ಜನರು ಕೋರಿಕೆ ಸಲ್ಲಿಸುತ್ತಿದ್ದಾರೆ. ಮತ್ತೊಂದೆಡೆ ದೇಶದಲ್ಲಿ ಅನೇಕ ಕುಟುಂಬಗಳು ಅನರ್ಹರಾಗಿದ್ದರು ನಕಲಿ ದಾಖಲೆಗಳನ್ನು ಕೊಟ್ಟು ಸರ್ಕಾರಕ್ಕೆ ವಂಚಿಸಿ BPL ಕಾರ್ಡ್ ಪಡೆದಿದ್ದಾರೆ.
ರಾಜ್ಯದಲ್ಲೂ ಕೂಡ ಲಕ್ಷಾಂತರ ಜನರು ಈ ರೀತಿ ಬಡತನ ರೇಖೆಗಿಂತ ಮೇಲಿದ್ದರೂ ಕೂಡ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸಿಗುವ ಅನುಕೂಲತೆಗಳನ್ನು ಪಡೆಯಲು ಈ ರೀತಿ ಸುಳ್ಳು ಮಾಹಿತಿ ಕೊಟ್ಟು BPL ರೇಷನ್ ಕಾರ್ಡ್ ಪಡೆದಿದ್ದಾರೆ. ಈಗ ರೇಷನ್ ಕಾರ್ಡ್ ತಿದ್ದುಪಡಿ ಕಾರ್ಯಕ್ರಮ ಶುರುವಾಗಿದೆ. ಇದೇ ಸಮಯದಲ್ಲಿ ಇವರೆಲ್ಲರಿಗೂ ಅನ್ವಯವಾಗುವಂತೆ ಸರ್ಕಾರ ಹೊಸದೊಂದು ಆದೇಶವನ್ನು ಹೊರಡಿಸಿದೆ.
ಈ ಸುದ್ದಿ ನೋಡಿ:- ಇನ್ನು ಮುಂದೆ ಈ ರೈತರು ಜಮೀನು ಮಾರುವಂತಿಲ್ಲ ಹಾಗೂ ಇಂತಹ ರೈತರ ಜಮೀನನ್ನು ಯಾರೂ ಕೂಡ ಖರೀದಿಸುವಂತಿಲ್ಲ.! ಹೊಸ ರೂಲ್ಸ್ ಜಾರಿ.!
ಆ ಪ್ರಕಾರವಾಗಿ ಹೊಸದಾಗಿ ಯಾರೇ BPL ಕಾರ್ಡ್ ಪಡೆಯಲು ಕೋರಿಕೆ ಸಲ್ಲಿಸಿದರು ಅವರಿಗೆ ಮಾರ್ಗಸೂಚಿಯಾಗಿ 8 ನಿಯಮಗಳನ್ನು ರೂಪಿಸಿದೆ. ಆ ಮಾನದಂಡದ ಒಳಗಿರುವವರು ಮಾತ್ರ BPL ಕಾರ್ಡ್ ಪಡೆಯಲು ಅನರ್ಹರಾಗಿದ್ದಾರೆ ಎಂದು ಗುರುತಿಸಿ ಅವರ ಅರ್ಜಿಗಳನ್ನು ತಿರಸ್ಕರಿಸಲು ನಿರ್ಧರಿಸಿದೆ. ಮತ್ತೊಂದೆಡೆ ಈಗಾಗಲೇ BPL ಕಾರ್ಡ್ ಹೊಂದಿರುವವರ ಪರಿಶೀಲನೆ ಕಾರ್ಯ ಕೂಡ ನಡೆಯುತ್ತಿದೆ.
ಮಾರ್ಗಸೂಚಿ ತಿಳಿಸಿರುವ ಅರ್ಹತೆಗಳನ್ನು ಹೊಂದಿದ್ದಲ್ಲಿ ಈಗಾಗಲೇ ಅವರು BPL ಕಾರ್ಡ್ ಪಡೆದಿದ್ದರೂ ಕೂಡ ಅವರ ಕಾರ್ಡ್ ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿದೆ. ಶೀಘ್ರವೇ ಜಾರಿಗೆ ತರಲು ರೂಪಿಸಿರುವ ಆ ಮಾರ್ಗಸೂಚಿಗಳ ವಿವರ ಈ ರೀತಿ ಇದೆ ನೋಡಿ.
ಈ ಸುದ್ದಿ ತಪ್ಪದೆ ನೋಡಿ:- ಗೃಹಲಕ್ಷ್ಮಿ ಯೋಜನೆಗೆ ಪ್ರಜಾ ಪ್ರತಿನಿಧಿಗಳಿಗಾಗಿ ಸಿದ್ಧವಾಗಿದೆ ಹೊಸ ಮೊಬೈಲ್ ಆಪ್ ಈ ಆಪ್ ಮೂಲಕ ಅರ್ಜಿ ಸಲ್ಲಿಸಬಹುದು.! ಸೈಬರ್ ಸೆಂಟರ್ ಗೆ ಹೋಗುವುದು ಬೇಡ.!
● ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವಾಗ ಕುಟುಂಬ ಸದಸ್ಯರ ವಿವರವನ್ನು ಕೂಡ ನೀಡಲಾಗುತ್ತದೆ, ಅದರಲ್ಲಿ ಕುಟುಂಬದಲ್ಲಿ ತಂದೆ ಅಥವಾ ಮಗ ಕುಟುಂಬದ ಯಾವುದೇ ಸದಸ್ಯ ಆದಾಯ ತೆರಿಗೆ ಪಾವತಿಸುವವರಾಗಿದ್ದರೆ ಆ ಕುಟುಂಬಕ್ಕೆ BPL ರೇಷನ್ ಕಾರ್ಡ್ ಸಿಗುವುದಿಲ್ಲ.
● ನಾಲ್ಕು ಚಕ್ರದ ಸ್ವಂತ ವಾಹನಗಳನ್ನು ಹೊಂದಿರುವ ಕುಟುಂಬಗಳು ಮತ್ತು ಟ್ರಾಕ್ಟರ್ ಗಳನ್ನು ಹೊಂದಿರುವಂತಹ ಕುಟುಂಬಗಳು ಕೂಡ ಬಡತನ ರೇಖೆಗಿಂತ ಮೇಲಿರುತ್ತವೆ ಎಂದು ಪರಿಗಣಿಸಲಾಗಿದೆ ಹಾಗಾಗಿ ಇವರಿಗೂ BPL ಕಾರ್ಡ್ ಸಿಗುವುದಿಲ್ಲ.
● AC ಅಳವಡಿಸಿರುವ ಸ್ವಂತ ಮನೆಗಳಲ್ಲಿ ವಾಸಿಸುವವರು ಮತ್ತು 5 ಕ್ಕಿಂತ ಹೆಚ್ಚು ಜನರೇಟರ್ ಗಳನ್ನು ಹೊಂದಿರುವ ಕುಟುಂಬಗಳು ಅರ್ಹರಾಗುವುದಿಲ್ಲ.
● 5 ಎಕರೆಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರುವವ ಕುಟುಂಬಗಳು BPL ಕಾರ್ಡ್ ಪಡೆಯಲು ಅರ್ಹರಿರುವುದಿಲ್ಲ.
● ಶಸ್ತ್ರಾಸ್ತ್ರ ಲೈಸೆನ್ ಪಡೆದು ಶಸ್ತ್ರಗಳನ್ನು ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಅವರ ಅರ್ಜಿಗಳೂ ತಿರಸ್ಕೃತವಾಗುತ್ತವೆ.
● ನಿವೃತ್ತಿ ನೌಕರರಾಗಿ ಅಥವಾ ಇನ್ಯಾವುದೇ ಕಾರಣದಿಂದ ಸರ್ಕಾರದಿಂದ ಪೆನ್ಷನ್ ಪಡೆಯುವ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುವ ರೇಷನ್ ಕಾರ್ಡ್ ಪಡೆಯಲು ಅರ್ಹರಿರುವುದಿಲ್ಲ.
● ನಗರ ಪ್ರದೇಶಗಳಲ್ಲಿ ವಾಸವಿದ್ದು ವಾರ್ಷಿಕವಾಗಿ 3 ಲಕ್ಷಕ್ಕಿಂತ ಅಧಿಕ ಆದಾಯ ಪಡೆಯುತ್ತಿರುವ ಕುಟುಂಬಗಳು ಕೂಡ BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.