ಸ್ಟೇಟಸ್ ನಲ್ಲಿ ದುಡ್ಡು ತೋರಿಸಿದ್ರೂ ಅನ್ನ ಭಾಗ್ಯ ಹಣ ಇನ್ನೂ ನಿಮ್ಮ ಅಕೌಂಟ್ ಗೆ ಬಂದಿಲ್ವಾ.? ಇದಕ್ಕೆ ಅಸಲಿ ಕಾರಣ ಏನು.? ಇದಕ್ಕೆ ಪರಿಹಾರವೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

 

ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಕಾರ್ಡ್ ಯೋಜನೆಗಳಲ್ಲಿ (Guarantee Sceme) ಮಹತ್ವಪೂರ್ಣ ಯೋಜನೆಯಾದ ಅನ್ನಭಾಗ್ಯ (Anna Bhagya) ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 10 ಕೆಜಿ ಪಡಿತರವನ್ನು ವಿತರಿಸುವುದಾಗಿ ಸರ್ಕಾರ ಘೋಷಿಸಿತ್ತು.

ಆದರೆ ಇದಕ್ಕಾಗಿ ಸರ್ವ ಪ್ರಯತ್ನವನ್ನು ಮಾಡಿದ ಕಾಂಗ್ರೆಸ್ ಸರ್ಕಾರ ದಾಸ್ತಾನು ಕೊರತೆ ಉಂಟಾದ ಕಾರಣ ಎಂದಿನಂತೆ ಒಬ್ಬ ಸದಸ್ಯನಿಗೆ 5Kg ಪಡಿತರ ಹಾಗೂ ಉಳಿದ 5Kg ಅಕ್ಕಿ ಬದಲು Kg ಅಕ್ಕಿಗೆ 35ರೂ. ನಂತೆ 170 ರೂಪಾಯಿಯನ್ನು ಆ ಕುಟುಂಬದ ಮುಖ್ಯಸ್ಥನ (Head of the family) ಬ್ಯಾಂಕ್ ಖಾತೆಗೆ ವರ್ಗಾಯಿಸಲು ನಿರ್ಧಾರ ಮಾಡಿದೆ.

ಜುಲೈ ತಿಂಗಳಿಂದ ಅಕ್ಕಿ ಸಿಗುವವರೆಗೂ ಪ್ರತಿ ತಿಂಗಳು ಹೆಚ್ಚುವರಿ ಅಕ್ಕಿಭಾಗ್ಯದ ಹಣವನ್ನು ಸರ್ಕಾರ ಫಲಾನುಭವಿಗಳ (Beneficiaries) ಖಾತೆಗೆ ವರ್ಗಾವಣೆ (Money transfer) ಮಾಡುವುದಾಗಿ ತಿಳಿಸಿದೆ. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದಿನವೇ ಮೈಸೂರು ಹಾಗೂ ಕೋಲಾರ ಜಿಲ್ಲೆಯ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಿತ್ತು.

ಎರಡನೇ ಹಂತದಲ್ಲಿ ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಕೊಪ್ಪಳ ಜಿಲ್ಲೆಗಳ 49 ಲಕ್ಷ ಫಲಾನುಭವಿಗಳ ಖಾತೆಗೆ 80 ಕೋಟಿ ರೂ. ಹಣ DBT ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿದೆ. ಆದರೆ ಇನ್ನುಳಿದ ಜಿಲ್ಲೆಗಳ ಫಲಾನುಭವಿಗಳಿಗೆ ಹಣ ವರ್ಗಾವಣೆ ಆಗಿಲ್ಲ ಸರ್ಕಾರ ಈ ಕುರಿತು ಸಿಹಿ ಸುದ್ದಿ ನೀಡಿದೆ.

ಅದೇನೆಂದರೆ, ಮುಂದಿನ ನಾಲ್ಕು ದಿನದ ಒಳಗೆ ರಾಮನಗರ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಗದಗ, ವಿಜಯಪುರ, ಬಳ್ಳಾರಿ, ಬೀದರ್, ಕಲಬುರ್ಗಿ, ಬೆಳಗಾವಿ ಹಾಗೂ ರಾಯಚೂರು ಜಿಲ್ಲೆಗಳ ಪಡಿತರ ಚೀಟಿದಾರರ ಖಾತೆಗೆ ಹಣ ಜಮೆ ಮಾಡಲಿದೆ. ಸರ್ಕಾರ ಇದಕ್ಕಾಗಿ ಯಾವುದೇ ಅರ್ಜಿ ಆಹ್ವಾನ ಮಾಡಿಲ್ಲ, ಪಡಿತರ ಚೀಟಿಯಲ್ಲಿ ಮುಖ್ಯಸ್ಥರಾಗಿರುವ ಆಧಾರ ಸಂಖ್ಯೆ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೋ ಆ ಖಾತೆಗೆ DBT ಮೂಲಕ ಹಣ ವರ್ಗಾವಣೆ ಮಾಡುತ್ತಿದೆ.

ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡದೆ ಇರುವುದು ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡದೆ ಇರುವುದು ಇನ್ನೂ ಮುಂತಾದ ಕಾರಣಗಳಿಂದ ಅನೇಕರು ಈ ಹಣದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಗೊಂದಲಗಳಿದ್ದರೆ ಫಲಾನುಭವಿಗಳು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅನ್ನಭಾಗ್ಯ ಯೋಜನೆ ಹಣವನ್ನು ಪಡೆಯಲು ತಮ್ಮ ರೇಷನ್ ಕಾರ್ಡ್ ಅರ್ಹವಾಗಿದೆಯೇ.

ಕುಟುಂಬದ ಯಾವ ಸದಸ್ಯನ ಖಾತೆಗೆ ಹಣ ಜಮೆ ಆಗಿದೆ, ಎಷ್ಟು Kg ಪಡಿತರನ್ನು ಪಡೆಯಲು ಕಾರ್ಡ್ ಅರ್ಹವಾಗಿದೆ, ಎಷ್ಟು ಹಣ ಸಿಗುತ್ತಿದೆ ಮತ್ತು ಇದರ ಸ್ಥಿತಿ (Status) ಏನಾಗಿದೆ ಎನ್ನುವುದನ್ನು ಕೂಡ ಚೆಕ್ ಮಾಡಿ ತಿಳಿದುಕೊಳ್ಳಬಹುದು. ಒಂದು ವೇಳೆ ಏನೇ ಸಮಸ್ಯೆ ಇದ್ದರೂ ಅಥವಾ ಪ್ರೋಸೆಸ್ ಚಾಲ್ತಿಯಲ್ಲಿದ್ದರೂ ಕೂಡ ಅದರ ಘೋಷಣೆ ವಾಕ್ಯ ಕೂಡ ಕೆಳಗಿರುತ್ತದೆ ಅದರಿಂದಲೂ ಮಾಹಿತಿ ಪಡೆಯಬಹುದು.

ಅಥವಾ DBT ಕರ್ನಾಟಕ ಆಪ್ (DBT Karnataka App) ಡೌನ್ಲೋಡ್ ಮಾಡಿಕೊಂಡು ಕೂಡ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಹಣ ವರ್ಗಾವಣೆ ಆಗಿರುವ ವಿವರವನ್ನು ಚೆಕ್ ಮಾಡಿ ತಿಳಿದುಕೊಳ್ಳಬಹುದು.

ಆಹಾರ ಇಲಾಖೆ ವೆಬ್ಸೈಟ್ ಮೂಲಕ ಚೆಕ್ ಮಾಡುವ ವಿಧಾನ:-
ಮೊದಲಿಗೆ ಆಹಾರ ಇಲಾಖೆ ಅಧಿಕೃತ ವ್ಯವಸ್ಥೆಗೆ ಭೇಟಿ ಕೊಡಬೇಕು ಅದಕ್ಕಾಗಿ https://ahara.kar.nicin/home/E.services ಕ್ಲಿಕ್ ಮಾಡಿ.

● ಆಹಾರ ಇಲಾಖೆ ಪೇಜ್ ಓಪನ್ ಆಗುತ್ತದೆ, ಎಡಭಾಗದ ಮೇಲೆ ಮೂರು ಗೆರೆಗಳು ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿ e-services ಎನ್ನುವ ಆಪ್ಷನ್ ಸೆಲೆಕ್ಟ್ ಮಾಡಿ.
● DBT Status ಎನ್ನುವ ಆಪ್ಷನ್ ಇರುತ್ತದೆ ಅದನ್ನು ಸೆಲೆಕ್ಟ್ ಮಾಡಿ, ಒಂದು ಹೊಸ ಪೇಜ್ ಓಪನ್ ಆಗುತ್ತದೆ ಅದರಲ್ಲಿ ಜಿಲ್ಲಾವಾರು ಲಿಸ್ಟ್ ಇರುತ್ತದೆ, ಇದರಲ್ಲಿ ನಿಮ್ಮ ಜಿಲ್ಲೆಯ ಲಿಂಕ್ ಕ್ಲಿಕ್ ಮಾಡಿ.

● ಅದರಲ್ಲಿ Status of DBT ಎಂದು ಇರುತ್ತದೆ. ಅದನ್ನು ಸೆಲೆಕ್ಟ್ ಮಾಡಿದ ಮೇಲೆ ಕೊನೆ ಪೇಜ್ ಅಲ್ಲಿ ಮೊದಲಿಗೆ ತಿಂಗಳನ್ನು ಸೆಲೆಕ್ಟ್ ಮಾಡಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ (RC number) ಹಾಕಿ ಕ್ಯಾಪ್ಚ ಕೋಡ್ (Captcha Code) ಹಾಕಿದರೆ ನಿಮ್ಮ ಕುಟುಂಬದ ಯಾವ ಸದಸ್ಯರ ಬ್ಯಾಂಕ್ ಖಾತೆಗೆ ಹಣ ಹೋಗುತ್ತದೆ ಅವರ ಆಧಾರ್ ಕಾರ್ಡ್ ಸಂಖ್ಯೆ ಕೊನೆ ನಾಲ್ಕು ನಂಬರ್, ಎಷ್ಟು ಕೆಜಿ ಅಕ್ಕಿಗೆ ಈ ಕಾರ್ಡ್ ಅರ್ಹವಾಗಿದೆ, ಅದಕ್ಕೆ ಎಷ್ಟು ಹಣ ಬರುತ್ತದೆ ಮತ್ತು ಈ ಮೇಲೆ ತಿಳಿಸಿದಂತೆ ಸ್ಟೇಟಸ್ ಏನಾಗಿದೆ ಎನ್ನುವ ಘೋಷಣೆ ಇರುತ್ತದೆ.

DBT ಕರ್ನಾಟಕ ಆಪ್ ಮೂಲಕ ಚೆಕ್ ಮಾಡುವ ವಿಧಾನ:-
● ಮೊದಲಿಗೆ ನಿಮ್ಮ ಮೊಬೈಲ್ ಫೋನ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ, DBT Karnataka app ಡೌನ್ಲೋಡ್ ಮಾಡಿಕೊಳ್ಳಿ.
● ಡೌನ್ಲೋಡ್ ಆದ ಮೇಲೆ ಆಪ್ ಓಪನ್ ಮಾಡಿ ಕೆಲವು ಪರ್ಮಿಷನ್ಗಳನ್ನು ಕೇಳಲಾಗಿರುತ್ತದೆ, ಆ ಎಲ್ಲಾ ಪರ್ಮಿಷನ್ ಗಳಿಗೂ allow ಕೊಡಿ.

● ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು (Aadhar Number) ಕೇಳಲಾಗುತ್ತದೆ, ಆಧಾರ್ ಸಂಖ್ಯೆ ಫಿಲ್ ಮಾಡಿ ಕೆಳಗೆ ಚೆಕ್ ಬಾಕ್ಸ್ ಅಲ್ಲಿ ಘೋಷಣೆ ಇರುತ್ತದೆ ಅದನ್ನು ಓದಿ ರೈಟ್ ಮಾರ್ಕ್ ಕ್ಲಿಕ್ ಮಾಡಿ OTP ಮೇಲೆ ಕ್ಲಿಕ್ ಮಾಡಿದಾಗ OTP ವೆರಿಫೈ ಆಗುತ್ತದೆ.
● ನಂತರ M.pin ಕೇಳುತ್ತದೆ ಅಂದರೆ ನೀವು ಆಪ್ ಓಪನ್ ಮಾಡುವುದಕ್ಕೆ ನಿಮ್ಮ ಇಚ್ಛೆಯ 4 ನಂಬರ್ ಅನ್ನು Password ಆಗಿ ಸೆಟ್ ಮಾಡಿ ಮತ್ತೊಮ್ಮೆ ಕನ್ಫರ್ಮ್ ಮಾಡಿ ಸಬ್ಮಿಟ್ ಕೊಡಿ.
● ನೀವು ಕೊಟ್ಟಿರುವ ಮಾಹಿತಿ ಸರಿ ಇದ್ದರೆ ನಿಮ್ಮ ವಿವರಗಳೆಲ್ಲವೂ ಬರುತ್ತದೆ.

● ಮುಂದಿನ ಹಂತದಲ್ಲಿ ನಿಮಗೆ 4 ಆಪ್ಷನ್ ಗಳು ಕಾಣುತ್ತವೆ. ಪೇಮೆಂಟ್ ಸ್ಟೇಟಸ್, ಆಧಾರ್ ಸೀಡಿಂಗ್, ಪ್ರೊಫೈಲ್ ಮತ್ತು ಕಾಂಟಾಕ್ಟ್.
● ಪೇಮೆಂಟ್ ಸ್ಟೇಟಸ್ (Payment status) ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಯಾವ ಯೋಜನೆಯಡಿ ಹಣ ವರ್ಗಾವಣೆ ಆಗಿರುತ್ತದೆ. ಅದರ ವಿವರ ತೋರಿಸುತ್ತದೆ. ನೀವು ಅನ್ನಭಾಗ್ಯ ಯೋಜನೆಯ ಹಣ ಚೆಕ್ ಮಾಡುವುದರಿಂದ ಇದು ಹೆಡ್ ಆಫ್ ದ ಫ್ಯಾಮಿಲಿ ಗೆ ಬರುವುದರಿಂದ ಅವರ ಆಧಾರ್ ಸಂಖ್ಯೆ ಹಾಕಿ DBT ಆಪ್ ಮೂಲಕ ಚೆಕ್ ಮಾಡಿ.

Leave a Comment

%d bloggers like this: