ಜೀವನದಲ್ಲಿ ಹಣ ಇರುವಾಗಲೇ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ದುಡಿಯುವ ವಯಸ್ಸಿನಲ್ಲಿಯೇ ಉದ್ಯೋಗದಲ್ಲಿ ಇದ್ದಾಗಲೇ ಪ್ರತಿಯೊಬ್ಬರಿಗೂ ನಿವೃತ್ತಿ ಜೀವನದ ಬಗ್ಗೆ ಮುಂದಾಲೋಚನೆ ಇರಬೇಕು. ಇತ್ತೀಚಿನ ದಿನದಲ್ಲಿ ದುಡಿಯಲು ಆರಂಭ ಮಾಡಿದ ದಿನದಿಂದಲೇ ಈ ರೀತಿ ಪ್ಲಾನ್ ಗಳನ್ನು ಮಾಡಿಕೊಂಡು ಸಂಧ್ಯಾಕಾಲ ನೆಮ್ಮದಿಯಾಗಿರುವಂತ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಸರ್ಕಾರಿ ಉದ್ಯೋಗಿಗಳಿಗೆ ಅವರ ನಿವೃತ್ತಿಯ ನಂತರ ಪೆನ್ಷನ್ ಸಿಗುವ ಯೋಜನೆ ಇತ್ತು ಆದರೆ ಎಲ್ಲಾ ಉದ್ಯೋಗಗಳಿಗೂ ಕೂಡ ಈಗ ಪೆನ್ಷನ್ ಸಿಗುತ್ತಿಲ್ಲ ಜೊತೆಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುವವರಿಗೆ ಈ ರೀತಿ ಪೆನ್ಷನ್ ಸೌಲಭ್ಯ ಸರಳವಾಗಿ ಸಿಗುವುದಿಲ್ಲ ಹಾಗಾಗಿ ಅವರೇ ನಿವೃತ್ತಿ ನಂತರ ಕೆಲಸ ಇಲ್ಲದಿದ್ದಾಗ ಬೇರೆ ಕೆಲಸ ಮಾಡಲು ಶಕ್ತಿ ಇಲ್ಲದಿದ್ದಾಗ ತಿಂಗಳ ಖರ್ಚಿಗೆ ಬೇಕಾದ ಆದಾಯದ ಮೂಲವನ್ನು ಹುಡುಕಿಕೊಳ್ಳಬೇಕು.
ಈ ಸುದ್ದಿ ಓದಿ:- ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ ಶುರುವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!
ಈ ರೀತಿ ಭವಿಷ್ಯದ ಬಗ್ಗೆ ಚಿಂತೆ ಇರುವವರಿಗೆ ಅನುಕೂಲವಾಗುವ ಕೆಲವು ವಿಷಯಗಳನ್ನು ಈಗ ನಾವು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಭಾರತದಲ್ಲಿ ನಿವೃತ್ತಿ ನಂತರದ ಬದುಕು ನಿಶ್ಚಿಂತೆಯಂದಿರಲಿ ಎನ್ನುವ ಕಾರಣಕ್ಕಾಗಿ ಹಿರಿಯ ಜೀವಗಳಿಗಾಗಿ ಕೇಂದ್ರ ಸರ್ಕಾರವೂ ಕೆಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಇವುಗಳಲ್ಲಿ ಹೂಡಿಕೆ ಮಾಡುವುದರಿಂದ ಹಣದ ಬಗ್ಗೆ ಯಾವುದೇ ಅಭದ್ರತೆ ಇಲ್ಲದೆ ಒಂದು ನಿಶ್ಚಿತ ಆದಾಯವನ್ನು ಪ್ರತಿ ತಿಂಗಳ ಪಡೆದು ಬದುಕನ್ನು ಸರಳವಾಗಿ ಕಳೆಯಬಹುದು ಅಥವಾ ನೀವು ಇಷ್ಟು ವರ್ಷಗಳವರೆಗೆ ದುಡಿದ ಹಣವನ್ನು ಇನ್ಸೂರೆನ್ಸ್ ಕಂಪನಿಗಳು ಮ್ಯೂಚುವಲ್ ಫಂಡ್ ಅಥವಾ ಶೇರ್ ಮಾರ್ಕೆಟ್ ಗಳಲ್ಲಿ ಹೂಡಿಕೆ ಮಾಡುವ ಮೂಲಕ ಕಡೇ ಸಮಯಕ್ಕೆ ಹೆಚ್ಚಿನ ಆದಾಯವನ್ನು ಪಡೆಯಬಹುದು ಆದರೆ ರಿಸ್ಕ್ ಕೂಡ ಇರುತ್ತದೆ. ಅದರ ಕೆಲ ಪ್ರಮುಖ ಅಂಶವನ್ನು ಈಗ ತಿಳಿಸುತ್ತಿದ್ದೇವೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (National Pension System)
ಕೇಂದ್ರ ಸರ್ಕಾರ ಅಡಿಯಲ್ಲಿ ಬರುವ ಈ ಒಂದು ಸ್ಕೀಮ್ ಅಲ್ಲಿ ನೀವು ನಿಯಮಿತವಾಗಿ ಹೂಡಿಕೆ ಮಾಡುತ್ತ ಬರುವುದರಿಂದ 60 ವರ್ಷ ಆದ ನಂತರ ತಿಂಗಳಿಗೆ 50 ಸಾವಿರ ರೂಪಾಯಿವರೆಗೆ ಪೆನ್ಷನ್ ಅನ್ನು ಪಡೆಯಬಹುದು. ಈ ಪೆನ್ಷನ್ ಅನ್ನು ಪಡೆಯಬೇಕು ಎಂದರೆ ನೀವು 25ನೇ ವಯಸ್ಸಿನಿಂದ ದಿನಕ್ಕೆ 270ಯಂತೆ ಹೂಡಿಕೆ ಮಾಡುತ್ತಾ ಬರಬೇಕು ಆಗ ನಿಮಗೆ 60 ವರ್ಷವಾದ ಬಳಿಕ ತಿಂಗಳಿಗೆ 57,000 ಸಾವಿರ ಪೆನ್ಷನ್ ನಿಮಗೆ ಸಿಗುತ್ತದೆ.
ಆನ್ಲೈನ್ ಲಿಂಕ್ಡ್ ಇನ್ಸೂರೆನ್ಸ್ ಪ್ಲಾನ್ ಗಳು (ULIP)
ನೀವು ಇನ್ಶೂರೆನ್ಸ್ ಕಂಪನಿಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತೀರಿ, ನಿಮ್ಮ ಹಣವನ್ನು ವಿಮಾ ಕಂಪನಿಗಳು ಈಕ್ವಿಟಿಗಳು ಮತ್ತು ಸಾಲ ನಿಧಿಗಳಲ್ಲಿ ಹೂಡಿಕೆ ಮಾಡುತ್ತವೆ. ಆಗ ನೀವು ಹೂಡಿಕೆ ಮಾಡಿದ ಹಣದ ಅವಧಿ ಆಧಾರದ ಮೇಲೆ ಒಂದು ನಿಶ್ಚಿತ ಮೊತ್ತದ ಆದಾಯವನ್ನು ಪ್ರತಿ ತಿಂಗಳು ಪಡೆಯುತ್ತೀರಿ ಇದರ ಜೊತೆಗೆ ನಿಮಗೆ ಇನ್ಶುರೆನ್ಸ್ ಕಂಪನಿಯಿಂದ ಜೀವವಿಮೆ ಭದ್ರತೆ ಕೂಡ ಸಿಗುತ್ತದೆ. ಇದು ಸಹ ಕಡಿಮೆ ರಿಸ್ಕ್ ನೊಂದಿಗೆ ಪ್ರತಿ ತಿಂಗಳು ಆದಾಯ ತರುವ ಮೂಲ ಆಗಿದೆ.
ಮ್ಯೂಚುವಲ್ ಫಂಡ್ ಗಳು:-
ಮ್ಯೂಚುವಲ್ ಫಂಡ್ ಗಳಲ್ಲಿನ ವ್ಯವಸ್ಥಿತ ಹೂಡಿಕೆ ಯೋಜನೆಗಳು (SIP) ನಿವೃತ್ತಿಯ ನಂತರ ಉತ್ತಮ ಆದಾಯವನ್ನು ಪಡೆಯಬೇಕು ಎನ್ನುವವರಿಗೆ ಅತ್ಯುತ್ತಮ ಯೋಜನೆ ಆಗಿದೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕವೂ ಕೂಡ ನೀವು ತಿಂಗಳು ನಿಶ್ಚಿತ ಮೊತ್ತದ ಆದಾಯವನ್ನು ನಿಮ್ಮ ಖರ್ಚಿಗಾಗಿ ಪಡೆಯಬಹುದು. ಆದರೆ ಇದರಲ್ಲಿ ಅಷ್ಟೇ ಮಟ್ಟದ ರಿಸ್ಕ್ ಇರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.