ರೈತರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದಿಂದ ಸಿಗಲಿದೆ 1 ಲಕ್ಷ ಬೆಳೆವಿಮೆ, ತಪ್ಪದೆ ನೋಂದಣಿ ಮಾಡಿಸಿ.!

ಕೇಂದ್ರ (Central) ಹಾಗೂ ರಾಜ್ಯ ಸರ್ಕಾರಗಳು (State government) ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಭಾರತದಲ್ಲಿ ವ್ಯವಸಾಯವು (Agriculture) ಮಳೆ ಜೊತೆ ಆಡುವ ಜೂಜಾಟವಾಗಿದೆ. ಯಾಕೆಂದರೆ, ಕೆಲವೊಮ್ಮೆ ಅಪಾರ ಮಳೆಯಿಂದಾಗಿ ನೆರೆಹಾವಳಿಯಿಂದಾಗಿ ರೈತರ ಬೆಳೆದ ಬೆಳೆ ಕೊಚ್ಚಿ ಹೋಗಿ ನಷ್ಟವಾದರೆ ಅಥವಾ ಬೆಳೆದ ಬೆಳೆಗೆ ಕೀಟಬಾಧೆ ಅಥವಾ ಇನ್ಯಾವುದ ರೋಗಗಳು ಉಂಟಾಗಿ ಫಸಲು ನಷ್ಟವಾಗುತ್ತದೆ.

ಇನ್ನು ಕೆಲವೊಮ್ಮೆ ಮಳೆಯ ಕೊರತೆ, ಬರಗಾಲ ಪರಿಸ್ಥಿತಿಯಿಂದ ಬೆಳೆ ಹಾನಿಯಾಗುತ್ತದೆ. ಅಕಾಲಿಕ ಮಳೆ, ಗಾಳಿಯ ವೇಗ, ಆದ್ರತೆ, ಇನ್ನು ಹಲವು ಕಾರಣಗಳಿಂದ ಬೆಳೆ ಹಾನಿಯಾಗುವುದರಿಂದ ಕೃಷಿ ಕ್ಷೇತ್ರವು ನಿಖರವಾಗಿ ಆದಾಯ ನಿರೀಕ್ಷಿಸಲಾಗದ ಬಹಳ ಅಪಾಯಕಾರಿಯದ ಕ್ಷೇತ್ರವಾಗಿದೆ.

ಆದರೆ ಭಾರತದಲ್ಲಿ ಅನೇಕ ಕುಟುಂಬಗಳು ಕೃಷಿಯನ್ನೇ ಅನುಸರಿಸಿ ಬದುಕುತ್ತಿವೆ. ಕೃಷಿ ಭಾರತದ ಜನರ ಜೀವನ ಆದ್ದರಿಂದ ಇದನ್ನು ಮನಗಂಡು ಕೇಂದ್ರ ಸರ್ಕಾರವು ಕೃಷಿ ಬೆಳೆಗೂ ಕೂಡ ವಿಮೆ (Crop Insuranc) ಮಾಡುವಂತಹ ಸೌಲಭ್ಯವನ್ನು ಮಾಡಿಕೊಟ್ಟಿದೆ. 2016ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ರೈತರು ಬೆಳೆಯುವ ಬೆಳೆಗಳು ಕೂಡ ವಿಮೆ ಮಾಡಿಕೊಂಡು ಬೆಳೆ ನಷ್ಟವಾದಾಗ ಆ ಬೆಳೆಗೆ ಖಚಿತ ಮೊತ್ತದ ವಿಮೆ ಪಡೆಯಲು ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆ (PMFBY Scheme) ಅನುಕೂಲತೆಯನ್ನು ಕೇಂದ್ರ ಸರ್ಕಾರ ಮಾಡಿಕೊಟ್ಟಿದೆ.

ಈ ಸುದ್ದಿ ನೋಡಿ:- ಇಂಥವರಿಗೆ ಪ್ರತಿ ತಿಂಗಳು 50 ಸಾವಿರ ಪೆನ್ಷನ್ ಖಚಿತ.! ಈಗಲೇ ಅರ್ಜಿ ಹಾಕಿ.!

ರಾಬಿ, ಖಾರಿಫ್, ತೋಟಗಾರಿಕೆ ಬೆಳೆಗೂ ಕೂಡ ರೈತರು ಬೆಳೆಗೆ ಅನುಸಾರವಾಗಿ ವಿಮಾ ಕಂಪನಿಗಳಿಗೆ 2% ಅಷ್ಟು ಪ್ರೀಮಿಯಂ ಕಟ್ಟುತ್ತಾರೆ. ಒಂದು ವೇಳೆ ಆ ಬೆಳೆಯು ನಷ್ಟವಾಗಿ ಹೋದರೆ ಬೆಳೆ ಹಾನಿಗೆ ಸಂಬಂಧಪಟ್ಟ ಪೂರಕ ದಾಖಲೆಗಳನ್ನು ಒದಗಿಸಿದಲ್ಲಿ ರೈತರಿಗೆ ಆ ಬೆಳೆ ಹಾನಿಗೆ ನಿಗದಿಪಡಿಸಿದ್ದ ವಿಮೆಯನ್ನು ಸರ್ಕಾರ ತುಂಬಿಕೊಡುತ್ತದೆ.

ಇದು ಬೆಳಗ್ಗೆ 25% ಇರುವುದರಿಂದ ರೈತನಿಗೆ ನಷ್ಟ ಕಡಿಮೆ ಆಗುತ್ತದೆ. ಇದು ಕಳೆದ ನಾಲ್ಕೈದು ವರ್ಷಗಳಿಂದಲೂ ಕೂಡ ಭಾರತದ ಎಲ್ಲಾ ರಾಜ್ಯದಲ್ಲೂ ರೈತರಿಗೆ ವರದಾನವಾಗಿರುವಂತಹ ಒಂದು ಯೋಜನೆ ಆಗಿದೆ. ಆದರೆ ಹಲವು ವರ್ಷಗಳಿಂದ ಸರ್ಕಾರ ರೈತರಿಗೆ ಬೆಳೆ ವಿಮೆ ಮೊತ್ತವನ್ನು ಬಿಡುಗಡೆ ಮಾಡಿಲ್ಲ. ಕರ್ನಾಟಕ ರಾಜ್ಯವು ಸೇರಿದಂತೆ ದೇಶದ ಹಲವು ರಾಜ್ಯಗಳ 5.60 ಸಾವಿರ ರೈತರು ಬೆಳೆ ವಿಮೆ ಪರಿಹಾರ ಧನಕ್ಕಾಗಿ ಕಾಯುತ್ತಿದ್ದಾರೆ, ಬೆಳೆ ವಿಮೆಗಾಗಿ ಅರ್ಜಿ ಸಲ್ಲಿಸಿದರೂ ಕೂಡ ಪರಿಹಾರದ ಹಣ ಬಿಡುಗಡೆ ಆಗದೆ ಈ ರೈತರು ಕಂಗಾಲಾಗಿದ್ದಾರೆ.

ದೇಶದ ಹಲವು ಭಾಗಗಳಲ್ಲಿ ರೈತರು ಈ ಯೋಜನೆ ವಿರುದ್ಧ ಕೂಡ ತಿರುಗಿ ಬಿದ್ದಿದ್ದರು ಆದರೆ ಇದೀಗ ರೈತರಿಗೆ ಬಾಕಿ ಇರುವ ಬೆಳೆ ಕ್ಲೇಮ್ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡಿದೆ. ರೈತರಿಗೆ ಫಸಲ್ ಭೀಮಾ ಯೋಜನೆಯ ಪರಿಹಾರ ಕ್ರಮವಾಗಿ ಕೇಂದ್ರ ಸರ್ಕಾರವು 258 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಈ ಸುದ್ದಿ ನೋಡಿ:- ಅಣಬೆ ಕೃಷಿ ಮಾಡುವವರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ 8 ಲಕ್ಷ ಅನುದಾನ ಆಸಕ್ತರು ಅರ್ಜಿ ಸಲ್ಲಿಸಿ.!

ಈ ಬಗ್ಗೆ ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ (Agricultural Minister Narendra Singh Thomar) ಅವರೇ ಮಾಹಿತಿ ತಿಳಿಸಿದ್ದಾರೆ. ಹಲವು ಕಾರಣಗಳಿಂದಾಗಿ ಈ ರೀತಿ ಬೆಳೆ ವಿಮೆ ಹಣ ಬಿಡುಗಡೆ ಮಾಡುವುದು ವಿಳಂಬವಾಗಿತ್ತು. ಈಗ ಅದಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನು ಮುಂದೆಯೂ ಕೂಡ ರೈತರಿಗೆ ಸಕಾಲದಲ್ಲಿ ಅವರ ಬೆಳೆ ವಿಮೆ ಹಣ ಪಾವತಿ ಆಗುತ್ತದೆ ಈ ಬಗ್ಗೆ ಆತಂಕ ಪಡಬೇಕಿಲ್ಲ ಎನ್ನುವ ಭರವಸೆ ನೀಡಿದ್ದಾರೆ.

ಈ ವರ್ಷದ ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಜುಲೈ 31 ಕಡೆಯ ದಿನಾಂಕ ಆಗಿದೆ, ಯಾವ ರೈತರು ಫಸಲ್ ಭೀಮಾ ಯೋಜನೆಯಡಿ ನೋಂದಾಯಿಸಿಕೊಂಡಿಲ್ಲ, ಮತ್ತು ಬೆಳೆ ವಿಮೆ ಕೋರಿ ಅರ್ಜಿ ಸಲ್ಲಿಸಬೇಕಾದ ರೈತರು ರೈತ ಸಂಪರ್ಕ ಕೇಂದ್ರ ಅಥವಾ ಸೇವಾ ಸಿಂಧು ಸೆಂಟರ್ ಗಳಲ್ಲಿ ಹೋಗಿ ಮಾಹಿತಿ ಪಡೆದು ಮಂದುವರೆಯಿರಿ.

Leave a Comment

%d bloggers like this: