ಜನರು ಕಡಿಮೆ ಸಮಯದಲ್ಲಿ ಹೆಚ್ಚು ಹಣ ಮಾಡಲು ಬಯಸುತ್ತಾರೆ ಹೀಗಾಗಿ ತಮ್ಮ ಹಣಕ್ಕೆ ಯಾವ ಬ್ಯಾಂಕ್ ಗಳಲ್ಲಿ ಅಥವಾ ಯಾವ ಕಡೆ ಹೆಚ್ಚು ಬಡ್ಡಿ ನೀಡುತ್ತಾರೆ ಅಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ ಇಂತಹ ಸಮಯಗಳಲ್ಲಿ ಲಾಭ ಮಾತ್ರ ಅಲ್ಲದೆ ನಿಮ್ಮ ಹಣಕ್ಕೆ ಎಷ್ಟು ಸುರಕ್ಷತೆ ಇದೆ ಎನ್ನುವುದನ್ನು ಕೂಡ ಅಗತ್ಯವಾಗಿ ತಿಳಿದುಕೊಳ್ಳಬೇಕು, ಏಕೆಂದರೆ ಇಂದು ಪ್ರತಿನಿತ್ಯ ನಾವು ಸುದ್ದಿ ಮಾಧ್ಯಮಗಳಲ್ಲಿ ದಿನಪತ್ರಿಕೆಗಳಲ್ಲಿ ಸೋಶಿಯಲ್ ಮೀಡಿಯಾದಲ್ಲೂ ಕೂಡ ಹಣ ಹೂಡಿಕೆ ಮಾಡಿ ವಂ’ಚ’ನೆ ಮಾಡಿಕೊಂಡ ಅನೇಕರ ಬಗ್ಗೆ ಸುದ್ದಿ ನೋಡುತ್ತಿದ್ದೇವೆ.
ಇದರಲ್ಲಿ ಬ್ಯಾಂಕಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡವರು ಕೂಡ ಇರುತ್ತಾರೆ. ಮ್ಯೂಚುವರ್ ಫಂಡ್ ಗಳು ಶೇರ್ ಮಾರ್ಕೆಟ್ ಗಳು, ಚಿಟ್ ಫಂಡ್ ಗಳು ಮಾತ್ರವಲ್ಲದೆ ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ಕೂಡ ಹಣ ಹೂಡಿಕೆ ಮಾಡಿ ಕಳೆದುಕೊಂಡವರ ಗೋ’ಳನ್ನು ನೋಡಿರುತ್ತೇವೆ. ಕೆಲವು ಪ್ರಕರಣಗಳಲ್ಲಿ ಬ್ಯಾಂಕ್ ಆರ್ಥಿಕವಾಗಿ ದಿವಾಳಿಯಾದಾಗ ಅದು ಎಷ್ಟೇ ಹೆಸರು ಮಾಡಿರುವ ಬ್ಯಾಂಕ್ ಆದರೂ ಕೂಡ ಮುಚ್ಚುವ ಪರಿಸ್ಥಿತಿಗೆ ಬರುತ್ತದೆ ಮತ್ತು RBI ಗೈಡ್ ಲೈನ್ಸ್ ವಿರುದ್ಧವಾಗಿ ನಡೆದುಕೊಂಡ ಬ್ಯಾಂಕ್ಗಳನ್ನು RBI ನಿಷ್ಕ್ರಿಯಗೊಳಿಸುತ್ತದೆ.
ಈ ಸುದ್ದಿ ನೋಡಿ:- ರೈತರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದಿಂದ ಸಿಗಲಿದೆ 1 ಲಕ್ಷ ಬೆಳೆವಿಮೆ, ತಪ್ಪದೆ ನೋಂದಣಿ ಮಾಡಿಸಿ.!
ಆಗ ಆ ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟವರು, ಅಕೌಂಟ್ ನಲ್ಲಿ ಹಣ ಇಟ್ಟವರಿಗೂ ಕೂಡ ಇದೇ ಪರಿಸ್ಥಿತಿ ಬಂದೊಗುತ್ತದೆ. ಆದರೆ ಇನ್ನೂ ಮುಂದೆ ಇದಕ್ಕಾಗಿ ಭಯಪಡಬೇಕಾದ ಅಗತ್ಯ ಇಲ್ಲ ಇದಕ್ಕೆಲ್ಲ ಪರಿಹಾರ ಎನ್ನುವಂತೆ, RBI ಹೊಸ ಗೈಡೆನ್ಸ್ ಹೊರಡಿಸಿದರೆ. ಆ ಪ್ರಕಾರವಾಗಿ ಇನ್ನು ಮುಂದೆ ಆ ನಿಯಮಗಳಡಿ ಹಣ ಹೂಡಿಕೆ ಮಾಡಿದವರು ನಿಶ್ಚಿಂತೆಯಾಗಿರಬಹುದು. ಹಾಗಾದರೆ RBI ತಿಳಿಸಿರುವ ಹೊಸ ನಿಯಮ ಏನು ಎನ್ನುವುದರ ಬಗ್ಗೆ ತಿಳಿದುಕೊಳ್ಳಲು ಈ ಅಂಕಣವನ್ನು ತಪ್ಪದೆ ಪೂರ್ತಿಯಾಗಿ ಓದಿ.
ಇತ್ತೀಚೆಗೆ ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಹಾಗೂ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಕೂಡ ನಿಯಮಗಳ ಬಗ್ಗೆ ತಿಳಿಸಿದ್ದರು.ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಇದರ ಬಗ್ಗೆ ಮಾತನಾಡುತ್ತಾ RBI ಮೂಲಕ ನಿಷ್ಕ್ರಿಯಗೊಳ್ಳುವಂತಹ ಬ್ಯಾಂಕುಗಳ ಖಾತೆಗಳಲ್ಲಿ ಹಣವನ್ನು ಠೇವಣಿ ಇಟ್ಟಿರುವವರಿಗೆ 90 ದಿನಗಳ ಒಳಗಾಗಿ ನಿಬಂಧನೆಗಳ ಪ್ರಕಾರ 5 ಲಕ್ಷ ರೂಪಾಯಿಗಳ ವರೆಗೂ ಕೂಡ ಪರಿಹಾರವನ್ನು ನೀಡಲಾಗುತ್ತದೆ ಎಂಬುದಾಗಿ ಹೇಳಿದ್ದರು.
ಈ ಸುದ್ದಿ ನೋಡಿ:- ಇಂಥವರಿಗೆ ಪ್ರತಿ ತಿಂಗಳು 50 ಸಾವಿರ ಪೆನ್ಷನ್ ಖಚಿತ.! ಈಗಲೇ ಅರ್ಜಿ ಹಾಕಿ.!
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ( Finance minister Nirmala Sitharaman) ಅವರೂ ಕೂಡ RBI ನ DGCGC ನಿಯಮದ ಬಗ್ಗೆ ಮಾತನಾಡಿ ಈ ಪ್ರಕಾರ 98.3% ಸುರಕ್ಷತೆಯನ್ನು ನೀವು ಠೇವಣಿ ಇಡುವ ಹಣದ ಮೇಲೆ ನಾವು ನೀಡುತ್ತೇವೆ ಎಂದು ಹೇಳಿದ್ದಾರೆ. ಈ ನಿಯಮಗಳ ಪ್ರಕಾರ ಬ್ಯಾಂಕ್ ದಿವಾಳಿಯಾದರೆ ಅಥವಾ RBI ಮೂಲಕ ಬ್ಯಾಂಕ್ ನಿಷ್ಕ್ರಿಯಗೊಂಡರೆ ಅದು ರಾಷ್ಟ್ರೀಕೃತ ಬ್ಯಾಂಕ್ ಗಳಾಗಿದ್ದರೆ (Nationalized bank).
ಆ ಬ್ಯಾಂಕ್ ಗಳು RBI ಜೊತೆ ಮಾಡಿಕೊಂಡ ಒಪ್ಪಂದದ ಪ್ರಕಾರ ಅಂತಹ ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟವರು ಮತ್ತು ಖಾತೆಗಳಲ್ಲಿ ಹಣ ಹೊಂದಿದವರು 5 ಲಕ್ಷದವರೆಗೂ ಕೂಡ ತಮ್ಮ ಹಣವನ್ನು RBI ನಿಂದ ವಾಪಸ್ ಪಡೆಯಲು ಅರ್ಹರಿರುತ್ತಾರೆ. ಒಂದು ವೇಳೆ ಆ ಮೊತ್ತ 5 ಲಕ್ಷ ದಾಟಿದರೂ ಕೂಡ ಅವರಿಗೆ 5 ಲಕ್ಷ ವರೆಗೆ ಮಾತ್ರ ಹಣ ಸಿಗುತ್ತದೆ ಆದರೆ ಅವು RBI ನಿಯಮಕ್ಕೆ ಒಳಪಟ್ಟ ರಾಷ್ಟ್ರೀಕೃತ ಬ್ಯಾಂಕ್ ಗಳಾಗಿರಬೇಕು.