ಸಾಮಾಜಿಕ ಭದ್ರತಾ ಯೋಜನೆಗೆ ಕರ್ನಾಟಕದಲ್ಲಿ ಲಕ್ಷಾಂತರ ವೃದ್ಧರು, ಅಂಗವಿಕಲರು ಹಾಗೂ ವಿಧವೆಯರು ಮಾಸಿಕ ಪಿಂಚಣಿ (Pension) ಪಡೆಯುತ್ತಿದ್ದಾರೆ ಕೆಲವರಿಗೆ ಉಳಿತಾಯ ಖಾತೆಗೆ DBT ಮೂಲಕ ಹಣ ವರ್ಗಾವಣೆಯಾದರೆ ಕೆಲವರು ಅಂಚೆ ಕಚೇರಿ ಮೂಲಕ ಈ ಪಿಂಚಣಿಯನ್ನು ಪಡೆಯುತ್ತಿದ್ದಾರೆ.
ನಿಮ್ಮ ಗ್ರಾಮದಲ್ಲಿ ಯಾರೆಲ್ಲಾ ಈ ಪಿಂಚಣಿ ಪಡೆಯುತ್ತಿದ್ದಾರೆ ಎನ್ನುವ ಪಟ್ಟಿಯನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದು, ಯಾವುದಾದರೂ ಅಗತ್ಯ ಸಂದರ್ಭದಲ್ಲಿ ಇದರ ಅವಶ್ಯಕತೆ ಇರುತ್ತದೆ. ನಿಮ್ಮ ಮೊಬೈಲ್ ಮೂಲಕವೇ ಮಂಜೂರು ಪಟ್ಟಿಯನ್ನು ಪರೀಕ್ಷಿಸಲು ಈ ಕೆಳಗಿನ ಹಂತಗಳನ್ನು ಪಾಲಿಸಿ.
SSC ನೇಮಕಾತಿ, 1876 ಹುದ್ದೆಗಳಿಗೆ ಅರ್ಜಿ ಆಹ್ವಾನ, ವೇತನ 1,12,400 ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!
● ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ www.nsap.nic.in ಟೈಪ್ ಮಾಡಿ ಸರ್ಚ್ ಕೊಡಿ.● Dash board ನಲ್ಲಿ ನಮ್ಮ ದೇಶದಲ್ಲಿ ಎಷ್ಟು ಜನರು ಸರ್ಕಾರದಿಂದ ಈ ಪಿಂಚಣಿ ಪಡೆಯುತ್ತಿದ್ದಾರೆ ಎನ್ನುವ ವಿವರಗಳು ಇರುತ್ತದೆ. ಕೆಳಗಡೆ more details ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿ.● ಮುಂದಿನ ಪುಟ List of reports ನಲ್ಲಿ ಮೂರನೇ ಸಾಲಿನಲ್ಲಿರುವ State Dashboard ಎನ್ನುವುದನ್ನು ಕ್ಲಿಕ್ ಮಾಡಿ.
● State wise dashboard ನಲ್ಲಿ ರಾಜ್ಯವನ್ನು ಸೆಲೆಕ್ಟ್ ಮಾಡಿ Scheme ಆಯ್ಕೆ ಮಾಡಬೇಕು. ವೃದ್ಯಾಪ್ಯ ವೇತನ, ಅಂಗವಿಕಲ ವೇತನ ವಿಧವಾ ವೇತನ ಇವುಗಳಲ್ಲಿ ಯಾವ ಲಿಸ್ಟ್ ಬೇಕು ಆ Scheme ಅನ್ನು ಸೆಲೆಕ್ಟ್ ಮಾಡಿ Submit ಕೊಡಿ.
ವಿಧವಾ ವೇತನಕ್ಕೆ ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ.!
● ಆಗ ನೀವು ಸೆಲೆಕ್ಟ್ ಮಾಡಿದ ಸ್ಕೀಮ್ ನ ಫಲಾನುಭವಿಗಳು ಕರ್ನಾಟಕದಲ್ಲಿ ಎಷ್ಟು ಜನ ಇದ್ದಾರೆ ಎಷ್ಟು ಜನರ ಬ್ಯಾಂಕ್ ಖಾತೆಗೆ ಪಡೆಯುತ್ತಿದ್ದಾರೆ, ಎಷ್ಟು ಜನ ಅಂಚೆ ಇಲಾಖೆಯಿಂದ ಪಡೆಯುತ್ತಿದ್ದಾರೆ. ಮಹಿಳಾ ಫಲಾನುಭವಿಗಳೆಷ್ಟು, ಪುರುಷ ಫಲಾನುಭವಿಗಳೆಷ್ಟು, ಎಷ್ಟು ಜನರು ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದ್ದಾರೆ ಎಷ್ಟು ಜನರ ಆಧಾರ್ ವೇರಿಫೈ ಆಗಿದೆ ಮುಂತಾದ ವಿವರ ಬರುತ್ತದೆ.
● ಹಾಗೆಯೇ ಪ್ರತಿ ಜಿಲ್ಲೆಗೆ ಸಂಬಂಧಪಟ್ಟ ವಿವರಗಳು ಇರುತ್ತದೆ ನೀವು ಅದರಲ್ಲಿ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಬೇಕು. ಈ ಮೇಲೆ ತಿಳಿಸಿದ ಎಲ್ಲಾ ವಿವರಗಳ ಜಿಲ್ಲಾವಾರು ಮಾಹಿತಿ ಸಿಗುತ್ತದೆ.
● ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿದ ನಂತರ ನಿಮ್ಮ ತಾಲೂಕನ್ನು ಸೆಲೆಕ್ಟ್ ಮಾಡಬೇಕು ಆಗ ನಿಮ್ಮ ತಾಲೂಕಿನಲ್ಲಿ ನೀವು ಸೆಲೆಕ್ಟ್ ಮಾಡಿ. ಆಗ ಈ ಮೇಲೆ ತಿಳಿಸಿದ ಎಲ್ಲ ಮಾಹಿತಿಗಳು ಕೂಡ ನಿಮ್ಮ ತಾಲೂಕುವಾರು ಎಷ್ಟಿದೆ ಎನ್ನುವ ವಿವರ ಪಡೆಯುತ್ತೀರಿ.
● ನಿಮ್ಮ ತಾಲೂಕು ಪಟ್ಟಿಯನ್ನು ಪಡೆದ ಮೇಲೆ ನಿಮ್ಮ ತಾಲೂಕಿನಲ್ಲಿ ಇರುವ ಗ್ರಾಮಗಳ ಲಿಸ್ಟ್ ಕೂಡ ಬರುತ್ತದೆ ಅದರಲ್ಲಿ ನಿಮ್ಮ ಗ್ರಾಮ ಪಂಚಾಯಿತಿ ಯಾವುದು ಎನ್ನುವುದನ್ನು ಸೆಲೆಕ್ಟ್ ಮಾಡಿ ಇದನ್ನು ಸೆಲೆಕ್ಟ್ ಮಾಡಿದ ನಂತರ ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ಜನರು ನೀವು ಸೆಲೆಕ್ಟ್ ಮಾಡಿದ ಸ್ಕೀಮ್ ನ ಫಲಾನುಭವಿಗಳಾಗಿದ್ದಾರೆ ಎನ್ನುವುದರ ವಿವರ ಬರುತ್ತದೆ.
● ಅವರಿಗೆ ಪೆನ್ಷನ್ ಆರ್ಡರ್ ಆಗಿರುವ ಸಂಖ್ಯೆ ಅಪ್ಲಿಕೇಂಟ್ ಹೆಸರು, ಅವರ ತಂದೆ ಅಥವಾ ಪತಿಯ ಹೆಸರು ವಯಸ್ಸು, ಯಾವ ಸ್ಕೀಮ್ ನಲ್ಲಿ ಅವರು ಪೆನ್ಷನ್ ಪಡೆಯುತ್ತಿದ್ದಾರೆ, ಪೆನ್ಷನ್ ಪಡೆಯುತ್ತಿರುವ ಬ್ಯಾಂಕ್ ಖಾತೆ IFSC ಕೋಡ್ ಇನ್ನು ಮುಂತಾದ ಮಾಹಿತಿಗಳು ಬರುತ್ತದೆ, ನಿಮಗೆ ಅವಶ್ಯಕತೆ ಇದ್ದರೆ ಇದನ್ನು ಪ್ರಿಂಟೌಟ್ ಕೂಡ ಪಡೆದುಕೊಳ್ಳಲು ಅವಕಾಶವಿದೆ.