ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme ) ಬೇಕಾಗಬಹುದಾದ ಅಂದಾಜು ಮೊತ್ತವನ್ನು ಲೆಕ್ಕಾಚಾರ ಹಾಕಿ ಹಣಕಾಸು ಇಲಾಖೆಯು (finanace department) ತನ್ನದೇ ಆದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆ ಪ್ರಕಾರವಾಗಿ ಗೃಹಲಕ್ಷ್ಮಿ ಯೋಜನೆಗೆ ಕೆಲ ಕಂಡೀಷನ್ (conditions) ಗಳನ್ನು ಹಾಕದೆ ಹೋದರೆ ಐದು ವರ್ಷಗಳವರೆಗೆ ಹಣ ನೀಡಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ.
ಆ ಹೊಡೆದ ತಪ್ಪಿಸುವ ಸಲುವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಕೆಲ ಕಂಡೀಷನ್ ಗಳನ್ನು ಹಾಕಬೇಕು ಎಂದು ಆರ್ಥಿಕ ಇಲಾಖೆ ಸೂಚಿಸಿತ್ತುು ಮತ್ತು ಎಂಟು ಕಂಡೀಷನ್ ಗಳ ಸಲಹೆ ಕೂಡ ನೀಡಿತ್ತು. ಆ ಪ್ರಕಾರವಾಗಿ ಇದ್ದ ಕಂಡಿಶನ್ಗಳು ಏನೆಂದರೆ BPL ಕಾರ್ಡ್ ಹೊಂದಿರುವವರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡಬೇಕು.
8 ಕಂಡಿಷನ್ ಗಳು ಯಾವುದು ಅಂತ ನೋಡಿ
1. 5 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ಕುಟುಂಬದವರಿಗೆ.
2. ನಾಲ್ಕು ಚಕ್ರದ ವಾಹನ ಹೊಂದಿರುವವರಿಗೆ
3. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ
4. ಸರ್ಕಾರಿ ಉದ್ಯೋಗಿಗಳಿಗೆ
5. ಸರ್ಕಾರಿ ಉದ್ಯೋಗದಿಂದ ನಿವೃತ್ತರಾಗಿ ಪೆನ್ಷನ್ ಪಡೆಯುವವರಿಗೆ, 6. GST ಕಟ್ಟುವವರು
7. ಆದಾಯ ತೆರಿಗೆ ಸಲ್ಲಿಸುವವರು
8. ಪ್ರೊಫೆಷನಲ್ ಟ್ಯಾಕ್ಸ್ ಪೇಯರ್ಸ್ ಗೆ ಗೃಹಲಕ್ಷ್ಮಿ ಯೋಜನೆ ಸಹಾಯಧನ ಕೊಡುವುದು ಬೇಡ ಎಂದು ಸಲಹೆ ನೀಡಿದ್ದರು.
ಆದರೆ ಈ ಬಗ್ಗೆ ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಆ ಮೂಲಕವಾಗಿ ರಾಜ್ಯದ ಎಲ್ಲಾ ಕುಟುಂಬಗಳ ಯಜಮಾನಿಯರಿಗೂ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ ಎಂದೇ ಹೇಳಬಹುದು. ಯಾಕೆಂದರೆ ಈ ಗೃಹಲಕ್ಷ್ಮಿ ಯೋಜನೆಗೆ ಆರ್ಥಿಕ ಇಲಾಖೆ ಸೂಚಿಸಿದ್ದ ಎಂಟು ಕಂಡೀಷನ್ ಗಳ ಬದಲು ಎರಡು ಕಂಡೀಶನ್ ಗಳನ್ನು ಮಾತ್ರ ಸರ್ಕಾರ ಹೇರಿದೆ.
ಅದನ್ನು ಹೊರತುಪಡಿಸಿ ಉಳಿದ ಎಲ್ಲಾ ಫಲಾನುಭವಿಗಳು ಕೂಡ ಅರ್ಜಿ ಸಲ್ಲಿಸಿ ಗೃಹಲಕ್ಷ್ಮಿ ಯೋಜನೆ ಸಹಾಯಧನವನ್ನು ಪಡೆಯಬಹುದು ಎಂದು ತಿಳಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು GST ಪೇಯರ್ಸ್ ಹಾಗೂ ಇನ್ಕಮ್ ಟ್ಯಾಕ್ಸ್ ಪೇಯರ್ಸ್ ಕುಟುಂಬಗಳು ಮತ್ತು ಸರ್ಕಾರಿ ಉದ್ಯೋಗ ಹೊಂದಿರುವ ಕುಟುಂಬದ ಯಜಮಾನಿ ಮಾತ್ರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಅದನ್ನು ಹೊರತುಪಡಿಸಿ ರೇಷನ್ ಕಾರ್ಡ್ ಹೊಂದಿರುವ ಎಲ್ಲರೂ ಕೂಡ ಅರ್ಜಿ ಹಾಕಬಹುದು. ಇದಕ್ಕಾಗಿ ಆರು ತಿಂಗಳಿಗೆ ಬೇಕಾದ 17500 ಕೋಟಿ ಬಜೆಟ್ ಸರ್ಕಾರದ ಬಳಿ ಇದೆ. ಮುಂದಿನ ವರ್ಷಗಳಲ್ಲಿ ಬೇಕಾಗುವ ಅಂದಾಜಿನ ಬಗ್ಗೆ ಕೂಡ ಲೆಕ್ಕಾಚಾರ ಹಾಕಿ ಹಣ ಹೊಂದಾಣಿಕೆ ಮಾಡುತ್ತೇವೆ, ಸರ್ಕಾರದ ಬಳಿ ಹಣ ಇದೆ ಈ ವಿಚಾರವಾಗಿ ಯಾವುದೇ ಗೊಂದಲ ಇಲ್ಲ.
ಹಾಗಾಗಿ ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಪಡೆಯಲು ಈ ಎರಡು ಕಂಡೀಶನ್ ಹೊರತುಪಡಿಸಿ ಉಳಿದ ಎಲ್ಲಾ ಕುಟುಂಬಗಳ ಯಜಮಾನಿಯರು ಕೂಡ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಜುಲೈ ತಿಂಗಳ 19ನೇ ತಾರೀಖಿನಿಂದ ಸರ್ಕಾರ ಸೂಚಿಸಿರುವ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಫಲಾನುಭವಿಗಳಾಗಲು ಇಚ್ಚಿಸುವವರು ಕುಟುಂಬದ ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಿ ಗೃಹಲಕ್ಷ್ಮಿ ಯೋಜನೆ ಮಂಜೂರಾತಿ ಪತ್ರವನ್ನು ಕೂಡ ಪಡೆಯಬಹುದಾಗಿದೆ. ಈ ರೀತಿ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಆಗಸ್ಟ್ ತಿಂಗಳಿನಿಂದ ಪ್ರತಿ ತಿಂಗಳು 2000 ಸಹಾಯಧನವು ಅವರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆಯಾಗಲಿದೆ.
https://youtu.be/tcYMFJjaheE