ಸಾಮಾನ್ಯವಾಗಿ ಗಂಡ ಹೆಂಡತಿ ನಡುವೆ ವಿವಾದ ಉಂಟಾದಾಗ ವಿ’ಚ್ಛೇ’ದ’ನದ (Divorce) ಮಾತು ಬರುವ ಮುಂಚೆ ಹೆಚ್ಚಿನ ಹೆಣ್ಣು ಮಕ್ಕಳು ಹೇಳುವುದು ನಿನ್ನ ಆಸ್ತಿಯಲ್ಲಿ ಅರ್ಧ ಪಾಲು ತೆಗೆದುಕೊಳ್ಳುವುದು ನನಗೆ ಗೊತ್ತು ಎನ್ನುವುದು. ನಮ್ಮಲ್ಲಿ ಅನೇಕರಿಗೆ ಒಂದು ತಪ್ಪು ಕಲ್ಪನೆ ಏನಿದೆ ಏನೆಂದರೆ ವಿ’ಚ್ಛೇ’ದ’ನ ನೀಡಿದರೆ ತನ್ನ ಆಸ್ತಿಯಲ್ಲಿ ಅರ್ಧ ಪಾಲನ್ನು ಪತ್ನಿಗೆ ಕೊಡಬೇಕಾಗುತ್ತದೆ ಅಥವಾ ವಿ’ಚ್ಛೇ’ದ’ನ ಪಡೆದುಕೊಂಡರೆ ಗಂಡನ ಆಸ್ತಿಯಲ್ಲಿ ಅರ್ಧ ಪಾಲು (properly rights) ಸಿಗುತ್ತದೆ ಎಂದು.
ಆದರೆ ಈ ರೀತಿ ಯಾವುದೇ ರೂಲ್ಸ್ ಕಾನೂನಿನಲ್ಲಿ ಇಲ್ಲ ಎನ್ನುವುದು ಸ್ಪಷ್ಟ. ನಮ್ಮ ಕಾನೂನಿನಲ್ಲಿ ಎಲ್ಲೂ ವಿ’ಚ್ಛೇ’ದ’ನ ಪಡೆದ ಸಂದರ್ಭದಲ್ಲಿ ಗಂಡನು ವಿಚ್ಛೇದಿತ ಹೆಂಡತಿಗೆ ಅರ್ಧ ಪಾಲು ಆಸ್ತಿ ನೀಡಬೇಕು ಎಂದು ಹೇಳಿಲ್ಲ. ಸಕಾರಣಗಳನ್ನು ಕೊಟ್ಟು ಹೆಂಡತಿ ಗಂಡನಿಂದ ವಿ’ಚ್ಛೇ’ದ’ನ ಪಡೆದಾಗ ಅಥವಾ ಅವಳ ಜೀವನ ನಿರ್ವಹಣೆಗಾಗಿ ಕೋರ್ಟ್ ನಲ್ಲಿ ಅರ್ಜಿ ಹಾಕಿ ಜೀವನಾಂಶವನ್ನು (alimony) ಕೇಳಬಹುದು.
ಮೇಂಟೆನೆನ್ಸ್ ಪಡೆದುಕೊಳ್ಳುವುದಕ್ಕೆ, ಶಾಶ್ವತವಾಗಿ ಜೀವನಾಂಶ ಪಡೆದುಕೊಳ್ಳುವುದಕ್ಕೆ ವಿ’ಚ್ಛೇ’ದ’ನ ಪಡೆದ ಪತ್ನಿಯು ಅರ್ಹಳಾಗಿರುತ್ತಾಳೇ ಹೊರತು ಗಂಡನ ಸ್ವಯಾರ್ಜಿತ ಆಸ್ತಿಯಲ್ಲಾಗಲಿ ಅಥವಾ ಪಿತ್ರಾರ್ಜಿತ ಆಸ್ತಿಯಾಗಲಿ ಆಕೆಗೆ ಪಾಲು ಪಡೆದುಕೊಳ್ಳುವುದಕ್ಕೆ ಅವಕಾಶ ಇಲ್ಲ. ಮಕ್ಕಳಿದ್ದ ಪಕ್ಷದಲ್ಲಿ ಅವರು ತಂದೆ-ತಾಯಿಗೆ ವಿ’ಚ್ಛೇ’ದ’ನ ಆಗಿದ್ದರೂ ಕೂಡ ತಂದೆಯ ಪಿತ್ರಾರ್ಜಿತ ಆಸ್ತಿಗಳ ಮೇಲೆ ಹಕ್ಕು ಹೊಂದಿರುತ್ತಾರೆ.
ಅವರ ತಾತನ ಆಸ್ತಿಯು ತಂದೆಗೆ ಹೋಗಿದ್ದರೆ ಅದರಲ್ಲಿ ಪಾಲು ಕೇಳಬಹುದೇ ಹೊರತು ತಂದೆ ಸ್ವಯಾರ್ಜಿತವಾಗಿ ಹಣ ಆಸ್ತಿ ಸಂಪಾದನೆ ಮಾಡಿದ್ದರೆ ಅದರಲ್ಲಿ ಮಕ್ಕಳಿಗೆ ಪಾಲು ಕೇಳುವುದಕ್ಕೆ ಅವಕಾಶ ಇರುವುದಿಲ್ಲ ಪತಿಯ ಯಾವುದೇ ಆಸ್ತಿಯಲ್ಲೂ ಕೂಡ ಆಕೆಗೆ ಭಾಗ ಸಿಗುವುದಿಲ್ಲ.
ಪತಿಗೆ ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಯಲ್ಲಾಗಲಿ, ಗಿಫ್ಟ್ ಅಥವಾ ದಾನದ ರೂಪದಲ್ಲಿ ಬಂದಿರುವ ಆಸ್ತಿಯಲ್ಲಾಗಲಿ ಆತನೇ ಸ್ವಯಾರ್ಜಿತ ಆಸ್ತಿಯಲ್ಲಿ ಆಗಲಿ ವಿ’ಚ್ಛೇ’ದ’ನ ಪಡೆದ ಪತ್ನಿಗೆ ಪಾಲು ಸಿಗುವುದಿಲ್ಲ ಎನ್ನುವುದನ್ನು ಕಾನೂನಿನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ ಹೆಂಡತಿ ಕೋರ್ಟಿನಲ್ಲಿ ತನ್ನ ಪತಿ ಯಾವ ಮಟ್ಟದ ಜೀವನ ಶೈಲಿಯಲ್ಲಿ ಬದುಕುತ್ತಿದ್ದಾನೆ ಅದಕ್ಕೆ ಸರಿಸಮನವಾದ ಜೀವನ ಶೈಲಿಯಲ್ಲಿ ತಾನು ಬದುಕಬೇಕು ಎಂದು ಮೆಂಟೇನೆನ್ಸ್ ಕೇಳಬಹುದು.
ಕೋರ್ಟ್ ನಿಂದ ಆದೇಶ ಬಂದರೂ ಕೂಡ ಮುಂದಿನ ದಿನಗಳಲ್ಲಿ ಆ ವ್ಯಕ್ತಿಯು ಇನ್ನೂ ಹೆಚ್ಚಿನ ಆದಾಯ ಪಡೆದಾಗ ಅಥವಾ ಉನ್ನತ ಹುದ್ದೆಗಳಿಗೆ ಹೋದಾಗ ಆಗಲೂ ಸಹ ಈಕೆ ಹೆಚ್ಚಿನ ಜೀವನಾಂಶಕ್ಕಾಗಿ ದಾಖಲೆಗಳ ಸಮೇತ ಕೋರ್ಟ್ ನಲ್ಲಿ ಗಮನಕ್ಕೆ ತಂದು ಇನ್ನು ಹೆಚ್ಚಿನ ಮೆಂಟೇನೆನ್ಸ್ ಪಡೆಯಲು ಅರ್ಹರಾಗುತ್ತಾರೆ. ಇಂತಹ ಸಂದರ್ಭಗಳಲ್ಲೂ ಕೂಡ ಪತಿಗೆ ಕಾನೂನು ಅನೇಕ ಅವಕಾಶ ಗಳನ್ನು ನೀಡಿದೆ.
ಒಂದು ವೇಳೆ ಪತ್ನಿ ಸ್ವಾವಲಂಬಿಯಾಗಿ ದುಡಿಯುತ್ತಿದ್ದರೆ, ಪತ್ನಿಗೆ ಆದಾಯದ ಮೂಲಗಳು ಇದ್ದರೆ ಅಥವಾ ಮೇಂಟೇನೆನ್ಸ್ ಆರ್ಡರ್ ನೀಡಿದ ಮೇಲೆ ಪತಿಗೆ ಕೆಲಸ ಹೋಗಿದ್ದರೆ ಅಥವಾ ಆರೋಗ್ಯದಲ್ಲಿ ವ್ಯತ್ಯಾಸಗಳು ಉಂಟಾಗಿದ್ದರೆ, ಪತ್ನಿ ಏನಾದರೂ ಮದುವೆ ಆಗಿದ್ದರೆ ಅಥವಾ ಅನೈತಿಕ ಸಂಬಂಧದಲ್ಲಿ ಇದ್ದರೆ ಕೋರ್ಟ್ ಮುಂದೆ ಸಾಕ್ಷಿ ಸಮೇತ ಪ್ರಸ್ತಾಪಿಸಿ ಕೋರ್ಟ್ ಇಂದ ಜೀವನಾಂಶ ನೀಡದೆ ಇರುವುದಕ್ಕೆ ಅನುಮತಿ ಪಡೆದುಕೊಳ್ಳಬಹುದು ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಈ ಬಗ್ಗೆ ಯಾವುದೇ ರೀತಿ ಗೊಂದಲ ಇದ್ದರೂ ಹತ್ತಿರದಲ್ಲಿರುವ ಕಾನೂನು ಸಲಹಾ ಕೆಂದ್ರಕ್ಕೆ ಭೇಟಿಕೊಟ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.