ಪಡಿತರ ಚೀಟಿ (Ration card) ಎನ್ನುವುದು ಒಂದು ಅವಶ್ಯಕ ದಾಖಲೆ. ಅದರಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು (Karnataka government gyarantee Scheme ) ಜಾರಿ ಮಾಡಿದ ಮೇಲೆ ಅನ್ನಭಾಗ್ಯ ಯೋಜನೆ (Annabhagya) ಮತ್ತು ಗೃಹಲಕ್ಷ್ಮಿ ಯೋಜನೆಯ (Gruhalaksmi) ಫಲಾನುಭವಿಗಳಾಗಲು ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಾಗಿದೆ.
ಪ್ರತಿ ದಿನವೂ ಕೂಡ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಕಳೆದ ವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (Food and civil supply Minister K.H Muniyappa) ರವರು ರೇಷನ್ ಕಾರ್ಡ್ ವಿತರಣೆ (ration card distribution) ಹಾಗೂ ಇತರ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ರೇಷನ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರ ಹೊರಡಿಸಿರುವ ಹೊಸ ಆದೇಶ (new rule) ಬಗ್ಗೆ ಕೂಡ ತಿಳಿಸಿದರು.
ಚುನಾವಣೆ ನೀತಿ ಸಂಹಿತೆ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ರೇಷನ್ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಶೀಘ್ರದಲ್ಲಿ ಆರಂಭಿಸಲಿದ್ದೇವೆ ಆದರೆ ವೈಟ್ ಬೋರ್ಡ್ ಕಾರ್ (white bord car) ಹೊಂದಿರುವವರಿಗೆ BPL ಕಾರ್ಡ್ ನೀಡಲು ಸಾಧ್ಯವಾಗುವುದಿಲ್ಲ, ಅವರ ಅರ್ಜಿಗಳು ತಿರಸ್ಕೃತವಾಗುತ್ತದೆ ಈಗಾಗಲೇ ಅವರು BPL ಕಾರ್ಡ್ ಪಡೆದಿದ್ದರು ಕೂಡ ಅಂತವರ ರೇಷನ್ ಕಾರ್ಡನ್ನು ಕೂಡ ರದ್ದು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಅದೇ ರೀತಿ 2016ರ BPL ಕಾರ್ಡ್ ಮಾನದಂಡಗಳನ್ನು ಮೀರಿ ಯಾರೇ BPL ಕಾರ್ಡ್ ಗಳು ಹೊಂದಿದ್ದರು ಕೂಡ ಇದೆಲ್ಲವೂ ಆಹಾರ ಇಲಾಖೆ ಗಮನಕ್ಕೆ ಬಂದಿರುವುದರಿಂದ ಇದರ ಬಗ್ಗೆ ಕ್ರಮ ಕೈಗೊಂಡಿದ್ದೇವೆ.ಶೀಘ್ರದಲ್ಲಿ ಅವರೆಲ್ಲರ BPL ಕಾರ್ಡ್ ಗಳು ರದ್ದಾಗಲಿವೆ ಎಂದು ಹೇಳಿದರು. ಈಗ ಸರ್ಕಾರದಿಂದ ರದ್ದಾಗಲಿರುವ ರೇಷನ್ ಕಾರ್ಡ್ ಗಳ ಪಟ್ಟಿ ಕೂಡ ಬಿಡುಗಡೆ ಆಗಿದೆ, ಅದನ್ನು ನೀವು ನಿಮ್ಮ ಮೊಬೈಲ್ ಮೂಲಕ ಮಾಡಿಕೊಳ್ಳಬಹುದು.
ಹೆಂಡತಿಗೆ ಗಂಡನ ಆಸ್ತಿಯ ಮೇಲೆ ಹಕ್ಕು ಇರೋದಿಲ್ವಾ.? ಕಾನೂನು ಏನು ಹೇಳುತ್ತೆ ನೋಡಿ.!
● ಮೊದಲಿಗೆ ಆಹಾರ ಇಲಾಖೆ ಅಧಿಕೃತ ವೆಬ್ ಸೈಟ್ ಆದ www.ahara.kar.nic.in ಗೆ ಭೇಟಿ ಕೊಡಿ.
● ಓಪನ್ ಆಗುವ ಮುಖಪುಟದಲ್ಲಿ ಈ ಸೇವೆಗಳು ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ ಎಡಭಾಗದಲ್ಲಿ ಮೂರು ಚಿಕ್ಕ ಗೆರೆಗಳು ಇರುತ್ತವೆ, ಅದನ್ನು ಕ್ಲಿಕ್ ಮಾಡಿ.
● ಮೆನುಬಾರ್ ಓಪನ್ ಆಗುತ್ತದೆ ಅದರಲ್ಲಿ ಇ-ಪಡಿತರ ಚೀಟಿ ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ, ಅದರ ಕೊನೆ ಸಾಲಿನಲ್ಲಿ ರದ್ದು ಮಾಡಲಾದ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ್ ಪಟ್ಟಿ ಎನ್ನುವ ಆಪ್ಷನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
● ಓಪನ್ ಆದ ಪೇಜ್ ಮೇಲೆ ನಿಮ್ಮ ಜಿಲ್ಲೆ ತಾಲೂಕು ತಿಂಗಳು ಹಾಗೂ ವರ್ಷವನ್ನು ಸೆಲೆಕ್ಟ್ ಮಾಡಲು ಆಪ್ಷನ್ ತೋರಿಸುತ್ತದೆ. ಮೊದಲಿಗೆ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ, ಜಿಲ್ಲೆಯನ್ನು ಸೆಲೆಕ್ಟ್ ಆದಮೇಲೆ ಆ ಜಿಲ್ಲೆಯಲ್ಲಿ ಬರುವ ತಾಲೂಕುಗಳಲ್ಲಿ ಬರುತ್ತದೆ. ಅದರಲ್ಲಿ ಹೋಗಿ ನಿಮ್ಮ ತಾಲೂಕನ್ನು ಸೆಲೆಕ್ಟ್ ಮಾಡಿ ಮತ್ತು ನೀವು ಯಾವ ತಿಂಗಳಿನಲ್ಲಿ ಚೆಕ್ ಮಾಡುತ್ತಿದ್ದೀರಾ ಆ ತಿಂಗಳನ್ನು ಸೆಲೆಕ್ಟ್ ಮಾಡಿ ವರ್ಷವನ್ನು ಕೂಡ ಸೆಲೆಕ್ಟ್ ಮಾಡಿ GO ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ಆಗ ನಿಮಗೆ ನಿಮ್ಮ ತಾಲೂಕಿನಲ್ಲಿ ಆಗಸ್ಟ್ ತಿಂಗಳಿನಲ್ಲಿ ಕ್ಯಾನ್ಸಲ್ ಆಗಿರುವ ಪಡಿತರ ಚೀಟಿ ಲಿಸ್ಟ್ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಿಕೊಳ್ಳಬಹುದು. ಪಡಿತರ ಚೀಟಿ ಸಂಖ್ಯೆ ಇರುತ್ತದೆ ಅದರ ಮುಂದೆಯೇ ಯಾವ ಕಾರಣಕ್ಕಾಗಿ ಕ್ಯಾನ್ಸಲ್ (Cancel) ಆಗಿದೆ ಅಥವಾ ಸಸ್ಪೆಂಡ್ (Suspend) ಆಗಿದೆ ಎನ್ನುವ ವಿವರವನ್ನು ಕೂಡ ನೀಡಲಾಗಿರುತ್ತದೆ.