ಭಾರತದಲ್ಲಿ ಅನೇಕ ಪ್ರತಿಷ್ಠಿತ ಬ್ಯಾಂಕ್ ಗಳು ಇವೆ. ಈ ಪೈಕಿ SBI (state bank of mysore) ಬ್ಯಾಂಕ್ ಅತಿಹೆಚ್ಚಿನ ಗ್ರಾಹಕರನ್ನು ಹೊಂದಿದ್ದು ತನ್ನದೇ ಆದ ವಿಶಿಷ್ಟ ಸೇವೆಗಳನ್ನು ದೇಶದ ನಾಗರಿಕರಿಗೆ ನೀಡುವ ಮೂಲಕ ಮುಂಚೂಣಿಯಲ್ಲಿದೆ. ಬ್ಯಾಂಕುಗಳಲ್ಲಿ ಅನೇಕ ಯೋಜನೆಗಳ ಲಾಭವಿದೆ ಬ್ಯಾಂಕುಗಳ ಮೂಲಕ ಜನರು ಅನೇಕ ಲಾಭವನ್ನು ಪಡೆಯುತ್ತಿದ್ದಾರೆ.
ಉಳಿತಾಯ ಮಾಡುವುದು, ಸಾಲ ಪಡೆಯುವುದು, ಸರ್ಕಾರದ ಸೌಲಭ್ಯಗಳ ಮೇಲೆ ಸಾಲ ಪಡೆಯುವುದು, ವಿದ್ಯಾಭ್ಯಾಸಕ್ಕಾಗಿ ಸಾಲ, ಉಳಿತಾಯ ಮಾಡುವುದರ ಜೊತೆಗೆ ಅವುಗಳನ್ನು ಹೂಡಿಕೆ ಮಾಡುವುದರ ಮೇಲೆ ಲಾಭ ಪಡೆಯುವುದು, ಈ ರೀತಿ ಇದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
UPI Payments: ಗೂಗಲ್ ಪೇ, ಫೋನ್ ಪೇ, ಪೇಟಿಎಂ ಉಪಯೋಗಿಸೋರಿಗೆ ಹೊಸ ರೂಲ್ಸ್ ಜಾರಿ.!
ಬ್ಯಾಂಕಿನಲ್ಲಿ ಜನರು ಹಣವನ್ನು ಭವಿಷ್ಯದ ಬಳಕೆಗಾಗಿ ಉಳಿತಾಯ (Saving ) ಮಾಡಿಕೊಳ್ಳುವುದು ಮಾತ್ರವಲ್ಲದೆ ಉಳಿತಾಯ ಮಾಡಿಕೊಂಡ ಹಣವನ್ನು ಬ್ಯಾಂಕಿನ ಇನ್ನಿತರ ಸ್ಕೀಮ್ ಗಳಲ್ಲಿ (Schemes) ಹೂಡಿಕೆ ಮಾಡುವ ಮೂಲಕ ಅದರ ಲಾಭವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು.
ಪ್ರತಿಯೊಬ್ಬರೂ ಕೂಡ ಭವಿಷ್ಯದ ದಿನಗಳ ಬಗ್ಗೆ ಯೋಚನೆ ಮಾಡಲೇಬೇಕು. ದುಡಿಯ ವಯಸ್ಸಿನಿಂದಲೇ ಸ್ವಲ್ಪ ಹಣವನ್ನು ಉಳಿತಾಯ ಮಾಡಿಟ್ಟುಕೊಂಡರೆ ಭವಿಷ್ಯದಲ್ಲಿ ಅದನ್ನು ಒಂದೊಳ್ಳೆ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು, ಆಗ ಹಣಕ್ಕಾಗಿ ಪರದಾಡುವ ಪರಿಸ್ಥಿತಿ ತಪ್ಪುತ್ತದೆ.
ಇಂತಹ ಪ್ಲಾನ್ ಗಳನ್ನು ಹೊಂದಿರುವವರು ನೇರವಾಗಿ ಆಯ್ಕೆ ಮಾಡುವುದು ಬ್ಯಾಂಕುಗಳ ಉಳಿತಾಯ ಸೌಲಭ್ಯವನ್ನು. ಈಗ ಉಳಿತಾಯ ಮಾಡುವುದು ಮಾತ್ರವಲ್ಲದೆ ಹೂಡಿಕೆಗಳ ಬಗ್ಗೆ ಕೂಡ ಆಸಕ್ತಿ ತೋರುತ್ತಿದ್ದಾರೆ. ಅಂಚೆ ಕಚೇರಿಗಳು, ಪೋಸ್ಟ್ ಆಫೀಸ್ ಗಳು, ಮ್ಯೂಚುವಲ್ ಫಂಡ್ ಗಳು ಶೇಕ್ ಮಾಡಿ ಕಟ್ಟೆಗಳು ಇವುಗಳಲ್ಲಿ ವಿಭಿನ್ನ ರೀತಿಯಲ್ಲಿ ಹಣವನ್ನು ಹೂಡಿಕೆ ಲಾಭ ಮಾಡಬಹುದು.
ಆದರೆ ಪೋಸ್ಟ್ ಆಫೀಸ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳು ಕೊಡುವಷ್ಟು ಗ್ಯಾರಂಟಿಯನ್ನು ಇನ್ನಿತರ ಹಣಕಾಸಿನ ಸಂಸ್ಥೆಗಳು ನೀಡುತ್ತವೆ ಎನ್ನುವ ಗ್ಯಾರಂಟಿ ಇಲ್ಲ. ಹಾಗಾಗಿ SBI ನಂತಹ ಬ್ಯಾಂಕ್ ಗಳಲ್ಲಿ ಸಿಗುವ ಅತ್ಯುತ್ತಮವಾದ ಯೋಜನೆಯ ಮೇಲೆ ಹೂಡಿಕೆ ಮಾಡಿ ನೆಮ್ಮದಿಯಾಗಿ ಜೀವನ ಕಳೆಯಬಹುದು. ಜೊತೆಗೆ ಇವುಗಳಿಗೆ ಈಗ ಅತ್ಯುತ್ತಮವಾದ ಬಡ್ಡಿದರ (rate of intrest) ಕೂಡ ನಿಗದಿ ಆಗಿದೆ ಎನ್ನುವುದು ಇಷ್ಟೇ ಉತ್ತಮವಾದ ವಿಷಯವಾಗಿದೆ.
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ದವರಿಗೆ RBI ನಿಂದ ಹೊಸ ರೂಲ್ಸ್ ಜಾರಿ.! ತಪ್ಪದೆ ಈ ಕೆಲಸ ಮಾಡಿ.!
ಈ ನಿಟ್ಟಿನಲ್ಲಿ ಏಪ್ರಿಲ್ 12, 2023 ರಂದು SBI ತನ್ನ ಗ್ರಾಹಕರಿಗೆ ಅಮೃತ ಕಳಶ ಯೋಜನೆ (SBI Amruth kalsh Kalash Scheme) ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು. ಇದೊಂದು FD (fixes deopist) ಯೋಜನೆ ಆಗಿದ್ದು ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಉಳಿದ ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿದರವನ್ನು ಪಡೆಯಬಹುದಾಗಿದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆಗಸ್ಟ್ 15, 2023ರ ಸ್ವತಂತ್ರ ದಿನಾಚರಣೆ ಬಗ್ಗೆ ಮಾತ್ರ ಅವಕಾಶ ನೀಡಲಾಗಿತ್ತು ಆದರೆ ಈಗ ಇದಕ್ಕೆ ಕಂಡುಬರುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆಯನ್ನು ಕಂಡು ಡಿಸೆಂಬರ್ 31, 2023ರವರೆಗೆ ಬ್ಯಾಂಕ್ ಈ ಯೋಜನೆ ಅವಧಿಯನ್ನು ವಿಸ್ತರಿಸಿದೆ. ಇದರ ವಿಶೇಷತೆ ಏನು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ ಇದರ ಬಗ್ಗೆ ತಿಳಿದುಕೊಳ್ಳಲು ಪೂರ್ತಿಯಾಗಿ ಓದಿ.
ಕೇವಲ 1 ರೂಪಾಯಿ ಕಟ್ಟಿ ಈ ಎಲೆಕ್ಟ್ರಿಕಲ್ ಬೈಕ್ ಅನ್ನು ಮನೆಗೆ ತರಬಹುದು ಕಂಪನಿಯಿಂದ ಬಿಡುಗಡೆ ಆಯ್ತು ಹೊಸ ಆಫರ್.!
SBI ನ ನೂತನ ಅಮೃತ ಕಳಶ ಯೋಜನೆ ವಿಶೇಷತೆಗಳು:-
● 400 ದಿನಗಳ ಹೂಡಿಕೆಯ ಯೋಜನೆಯಾಗಿದೆ.
● SBI ನ ಅಮೃತ ಕಲಶ್ ಯೋಜನೆಯಡಿಯಲ್ಲಿ ಠೇವಣಿ ಇಟ್ಟರೆ ಆದಾಯ ತೆರಿಗೆ ಕಾಯ್ದೆಯ ಅನ್ವಯ TDS ದರವನ್ನು ವಿಧಿಸಲಾಗುತ್ತದೆ. TDS ಕಡಿತಗೊಳಿಸಿ ಸ್ಥಿರ ಠೇವಣಿಯ ಮೇಲೆ, ಮಾಸಿಕ ತ್ರೈಮಾಸಿಕ ಹಾಗೂ ಅರ್ಧವಾರ್ಷಿಕವಾಗಿ ಪರಿಷ್ಕೃತಗೊಂಡ ಬಡ್ಡಿ ನೀಡಲಾಗುತ್ತದೆ.
● ಈ ಯೋಜನೆಯಡಿಯಲ್ಲಿ ಸಾಮಾನ್ಯವಾಗಿ ಹೂಡಿಕೆದಾರರಿಗೆ 7.10% ನಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರು ಯೋಜನೆಯಲ್ಲಿ ಠೇವಣಿ ಇಟ್ಟರೆ 7.60% ಬಡ್ಡಿಯನ್ನು ಕೊಡಲಾಗುವುದು.
● ಒಂದು ಲಕ್ಷ ರೂಪಾಯಿಗೆ ಈ ಯೋಜನೆ ಖರೀದಿಸಿದರೆ ವಾರ್ಷಿಕವಾಗಿ 8,017 ರೂಪಾಯಿ ಬಡ್ಡಿ ಸಿಗುತ್ತದೆ, ಹಿರಿಯ ನಾಗರಿಕರಿಗಾದರೆ 8,600 ರೂಪಾಯಿಗಳ ಬಡ್ಡಿ ಸಿಗುತ್ತದೆ.
● ಈ ಯೋಜನೆಯಲ್ಲಿ ಅವಧಿಪೂರ್ವ ಸಾಲ ಸೌಲಭ್ಯವನ್ನು ಕೂಡ ಪಡೆಯಬಹುದು. ಯೋಜನೆಯಲ್ಲಿ 2 ಕೋಟಿ ಹೂಡಿಕೆ ಮಾಡಿದರೆ ಮುಂಚಿತವಾಗಿ ಸಾಲ ತೆಗೆದುಕೊಳ್ಳುವ ಅವಕಾಶವೂ ಇದೆ.
● ಅಮೃತ ಕಲಾಶ್ FD ಯೋಜನೆಯನ್ನು SBI ನ ಯುನೋ ಬ್ಯಾಂಕಿಂಗ್ ಆಪ್ ಅನ್ನು ಖರೀದಿಸಬಹುದು ಅಥವಾ ಹತ್ತಿರದ SBI ಬ್ಯಾಂಕಿಗೆ ಭೇಟಿ ಕೊಡಬಹುದು.