ಬೆಳಗಾವಿ (Belagavi) ಜಿಲ್ಲೆಯಲ್ಲಿ ಹೈನೋದ್ಯಮಕ್ಕೆ (dairy farming) ಉತ್ತೇಜನ ನೀಡುವ ಉದ್ದೇಶದಿಂದ ರಾಸುಗಳಾದ ಹಸು ಎಮ್ಮೆಯನ್ನು ಖರೀದಿಸಲು ರೈತರಿಗೆ (farmers) ಬಡ್ಡಿ ಇಲ್ಲದೇ 50 ಸಾವಿರ ಸಾಲ ( 0% intrest loan) ನೀಡಲಿದ್ದೇವೆ ಎನ್ನುವ ಭರವಸೆಯನ್ನು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಅಧ್ಯಕ್ಷ (President of Belagavi District Co-Operative Milk Producers Society) ವಿವೇಕರಾವ್ ಪಾಟೀಲ ರವರು ಮಂಗಳವಾರದ ನಡೆದ ಸುದ್ದಿಗೋಷ್ಠಿಯಲ್ಲಿ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯಾದ್ಯಂತ ಚರ್ಮಗಂಟು ರೋಗ (Lumpy Skin disease) ಅಂಟಿ ಅಪಾರ ಸಂಖ್ಯೆಯ ರಾಸುಗಳು ಸತ್ತಿವೆ. ಹಾಲಿನ ಉತ್ಪಾದನೆ ಪ್ರಮಾಣವು ಸಾಕಷ್ಟು ಕುಸಿದಿದೆ. ಇದನ್ನು ಸರಿದೂಗಿಸುವ ಸಲುವಾಗಿ ರೈತರಿಗೆ ಉತ್ತಮ ತಳಿಯ ರಾಸುಗಳನ್ನು ಖರೀದಿಸಲು ಉತ್ತೇಜನ ನೀಡಲು ಈ ನಿರ್ಧಾರ ಮಾಡಿದ್ದೇವೆ ಎಂದು ಒಕ್ಕೂಟದ ಅಧ್ಯಕ್ಷರು ತಿಳಿಸಿದ್ದಾರೆ.
ವೋಟರ್ ಐಡಿಗೆ ಹೊಸ ವೆಬ್ಸೈಟ್ ಪ್ರಾರಂಭ, ಬದಲಾದ ಹೊಸ ವಿಧಾನದ ಪ್ರಕಾರ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 14 ಹಾಲು ಒಕ್ಕೂಟಗಳಿವೆ. ಪ್ರತಿಯೊಂದು ಒಕ್ಕೂಟಕ್ಕೂ ಕೂಡ ತಲಾ ₹5 ಲಕ್ಷದಂತೆ ₹70 ಲಕ್ಷ ಬಿಡುಗಡೆ ಮಾಡಲಾಗಿದೆ. ರೈತರು ಇದರ ಮಾಹಿತಿ ತಿಳಿದುಕೊಂಡು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು. ಈಗ ಕೈಗೊಂಡಿರುವ ಯೋಜನೆಯು ಯಶಸ್ವಿಯಾದರೆ ಒಕ್ಕೂಟಗಳಿಗೆ ನೀಡುತ್ತಿರುವ ಸಾಲದ ಮೊತ್ತವನ್ನು ಹಂತ ಹಂತವಾಗಿ ಹೆಚ್ಚಿಸಲಾಗುವುದು ಎನ್ನುವ ಮಾತುಗಳನ್ನು ಕೂಡ ಅಧ್ಯಕ್ಷರು ಆಡಿದ್ದಾರೆ.
ಹಾಲನ್ನು ಹೋಲುವಂಥ ಅಗ್ಗದ ರಾಸಾಯನಿಕ ಬಳಸಿ ಪ್ಯಾಕೇಟ್ ಮೂಲಕ ಹಾಲು ಎಂದು ಮಾರಾಟ ಮಾಡಲಾಗುತ್ತಿದೆ. ನೆರೆಯ ಮಹಾರಾಷ್ಟ್ರದಿಂದ ಇಂತಹ ಕಳಪೆ ಗುಣಮಟ್ಟದ ಹಾಲಿನ ಸರಬರಾಜು ಹೆಚ್ಚಾಗಿದೆ. ಹಲವರು ಜಿಲ್ಲೆಯಲ್ಲೇ ಕಲಬೆರಕೆ ಹಾಲು ಉತ್ಪಾದನಾ ಘಟಕಗಳನ್ನೇ ಆರಂಭಿಸಿದ್ದಾರೆ ಎನ್ನುವ ಬಗ್ಗೆ ಕಳಕಳ ವ್ಯಕ್ತಪಡಿಸಿದ ಅವರು ಆರೋಗ್ಯ ಇಲಾಖೆ ಹಾಗೂ ಪೊಲೀಸರು ಇವುಗಳ ಮಾಹಿತಿ ಸಂಗ್ರಹಣೆ ಮಾಡಿ ಕಲಬೆರಕೆರೆ ಹಾಲು ಉತ್ಪಾದನಾ ಘಟಕಗಳ ಅಡ್ಡೆಗಳ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹ ಮಾಡಿದ್ದಾರೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FESSAI), ಪಶುಸಂಗೋಪನೆ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಜನರ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಘಟಕಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘದ ಒಕ್ಕೂಟದ ಅಧ್ಯಕ್ಷರಾದ ವಿವೇಕ್ ರಾವ್ ಪಾಟೀಲ್ ಅವರು ಅಧಿಕಾರಿಗಳಿಗೆ ಮನವಿ ಮಾಡಿದರು.
ಒಕ್ಕೂಟದ ನಿರ್ದೇಶಕ (Director) ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ನಗರದಲ್ಲಿ ಒಕ್ಕೂಟದಿಂದ 5 ಕೋಟಿ ವೆಚ್ಚದಲ್ಲಿ 100 ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ಕಟ್ಟಡ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ರೈತರ ಹೆಣ್ಣುಮಕ್ಕಳಿಗೆ ಮಾತ್ರ ಈ ಹಾಸ್ಟೆಲ್ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ತಿರುಪತಿ ಪ್ರಸಾದಕ್ಕೆ ನಂದಿನಿ ತುಪ್ಪ ಖರೀದಿಸದಿರುವ ಬಗ್ಗೆ ಮಾತನಾಡಿದ ಅವರು ಈ ಹಿಂದೆ ತಿರುಪತಿ ತಿರುಮಲ ಟ್ರಸ್ಟ್ನವರು (TTD) ದೇವಸ್ಥಾನಕ್ಕೆ ನಂದಿನಿ ತುಪ್ಪವನ್ನೇ (Nandini Ghee) ಖರೀದಿಸುತ್ತಿದ್ದರು. ಈ ಬಾರಿಯ ಟೆಂಡರ್ನಲ್ಲಿ KMF ಗಿಂತ ಕಡಿಮೆ ದರದಲ್ಲಿ ತುಪ್ಪ ಸಿಕ್ಕಿರುವುದರಿಂದ ಗುತ್ತಿಗೆ ನಮ್ಮ ಕೈತಪ್ಪಿದೆ ಎನ್ನುವ ಉತ್ತರವನ್ನು ನೀಡಿದರು.
ಈ ಸುದ್ದಿಗೋಷ್ಠಿಯಲ್ಲಿ ಸಹಕಾರ ಸಂಘಗಳ ಉಪನಿಬಂಧಕ ಎಂ.ಎನ್. ಮಣಿ, ಒಕ್ಕೂಟದ ನಿರ್ದೇಶಕರು ಸಹಾ ಹಾಜರಿದ್ದರು. ಸದ್ಯಕ್ಕೆ ಹಾಲಿನ ಒಕ್ಕೂಟದ ಮೂಲಕ ರೈತರಿಗೆ ಬಡ್ಡಿ ರಹಿತವಾಗಿ ರಾಸುಗಳ ಖರೀದಿಗೆ ಸಾಲ ನೀಡುತ್ತಿರುವುದು ಸಂತಸದ ವಿಚಾರವಾಗಿದ್ದು ನಿಧಾನವಾಗಿ ಎಲ್ಲಾ ಜಿಲ್ಲೆಗಳಿಗೂ ಕೂಡ ಈ ಅವಕಾಶ ಸಿಗುವಂತಾಗಲಿ ಎಂದು ನಾವು ಕೇಳಿಕೊಳ್ಳೋಣ.