ಸರ್ಕಾರವು ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ (Annabhagya Scheme) ಪ್ರಯೋಜನವನ್ನು ರಾಜ್ಯದ ಕೋಟ್ಯಾಂತರ ಫಲಾನುಭವಿಗಳು ಪಡೆಯುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ 10KG ಪಡಿತರವನ್ನು ನೀಡಬೇಕಾಗಿತ್ತು ಆದರೆ ದಾಸ್ತಾನು ಕೊರತೆ ಉಂಟಾಗಿದ ಕಾರಣ 5 ಅಕ್ಕಿ ಹಾಗೂ ಹೆಚ್ಚುವರಿ 5KG ಅಕ್ಕಿ ಬದಲಿಗೆ 170 ರೂಗಳನ್ನು ಆ ಕುಟುಂಬದ ಮುಖ್ಯಸ್ಥರ ಖಾತೆಗೆ (head of the family account) DBT ಮೂಲಕ ನೇರವಾಗಿ ವರ್ಗಾವಣೆ ಮಾಡುತ್ತಿದೆ.
ಜುಲೈ ತಿಂಗಳಿನಲ್ಲಿ ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳಿಗೂ ಕೂಡ ಸರ್ಕಾರ ಅನ್ನ ಭಾಗ್ಯ ಯೋಜನೆ ಹೆಚ್ಚುವರಿ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಿತ್ತು. ಆ ಸಮಯದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಆಹಾರ ಇಲಾಖೆ ಸಚಿವರು ಅಕ್ಕಿ ಸಿಗುವವರೆಗೂ ಕೂಡ ಇದೇ ಪದ್ಧತಿಯನ್ನು ಅನುಸರಿಸುವುದಾಗಿ ತಿಳಿಸಿದ್ದರು.
ಈಗ ಆಗಸ್ಟ್ ತಿಂಗಳಲ್ಲಿ (August month) ಕೂಡ ಕಳೆದ ತಿಂಗಳಿನ ರೀತಿಯೇ 5KG ಅಕ್ಕಿ ಹಾಗೂ ಹೆಚ್ಚುವರಿ 5KG ಅಕ್ಕಿ ಬದಲಿಗೆ ಹಣವನ್ನೇ ನೀಡಲು ಸರ್ಕಾರ ಮುಂದಾಗಿದೆ. ಈ ಬಾರಿ ಎಲ್ಲಾ ಜಿಲ್ಲೆಗಳಿಗೂ ಕೂಡ ಒಂದೇ ದಿನಾಂಕದಂದು ಹಣ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ದಿನಾಂಕ 25-8-2023 ರಂದು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಲಿದೆ.
ಕಳೆದ ಬಾರಿ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಮಾಹಿತಿ ಸಮಸ್ಯೆಯಿಂದಾಗಿ ಅನೇಕರು ಈ ಹಣದಿಂದ ವಂಚಿತರಾಗಿದ್ದರು. ಅನೇಕರು ಈ ಸಮಸ್ಯೆಗಳನ್ನು ಸರಿಪಡಿಸಿಕೊಂಡಿರುವುದರಿಂದ ಈ ಬಾರಿ ಕಳೆದ ತಿಂಗಳಿಗಿಂತ ಹೆಚ್ಚು ಫಲಾನುಭವಿಗಳು ಈ ಯೋಜನೆ ಪ್ರಯೋಜನ ಪಡೆಯುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ನೀವು ಕೂಡ ಅನ್ನ ಭಾಗ್ಯ ಯೋಜನೆ ಫಲಾನುಭವಿಗಳಾಗಿದ್ದೀರಾ.?
3D ಪ್ರಿಂಟ್ ಕಟ್ಟಡ ಕ್ರಾಂತಿ, ಇನ್ನು ಮುಂದೆ ಕಟ್ಟಡ ಕೆಲಸ ಕೂಡ ಸುಲಭ, ಖರ್ಚು ಸಹಾ ಅರ್ಧಕರ್ಧ ಕಡಿಮೆ.!
ನಿಮ್ಮ ಕುಟುಂಬಕ್ಕೆ ಎಷ್ಟು ಹಣ ಸಿಗುತ್ತದೆ ಎಂದು ತಿಳಿದುಕೊಳ್ಳಲು ಈ ರೀತಿ ಚೆಕ್ ಮಾಡಿ:-
● ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಯ (Food and civil supply department) ವೆಬ್ಸೈಟ್ ಆದ
https://ahara.kar.nic.in/Home/Eservices ಭೇಟಿಕೊಡಿ.
● ಮುಖಪುಟದ ಎಡಭಾಗದಲ್ಲಿರುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಿ.
● ಅದರಲ್ಲಿ e-services ಎನ್ನುವ ಆಯ್ಕೆ ಕಾಣುತ್ತದೆ. ಆ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ನಂತರ DBT Status ಎನ್ನುವುದರ ಮೇಲೆ ಕ್ಲಿಕ್ ಮಾಡಿ.
● ಮತ್ತೊಂದು ಪೇಜ್ ಓಪನ್ ಆಗುತ್ತದೆ ಸ್ಕ್ರೀನ್ ಮೇಲೆ ಜಿಲ್ಲೆಗಳಿಗೆ ಅನುಸಾರವಾಗಿ ವಿಭಾಗ ಮಾಡಲಾಗಿರುವ ಮೂರು ಲಿಂಕ್ ಗಳು ಕಾಣುತ್ತವೆ. ಅದರಲ್ಲಿ ನಿಮ್ಮ ಜಿಲ್ಲೆಯ ಹೆಸರು ಯಾವ ಲಿಂಕ್ ಅಲ್ಲಿ ಕಾಣುತ್ತದೆ ಆ ಲಿಂಕ್ ಕ್ಲಿಕ್ ಮಾಡಿ.
● ಮತ್ತೊಂದು ಪೇಜ್ ಓಪನ್ ಆಗುತ್ತದೆ ಕೊನೆಯಲ್ಲಿ, ಎಡ ಭಾಗದ ಮೆನುವಿನ ಕೊನೆ ಆಪ್ಷನ್ ಅಲ್ಲಿ DBT Status ಎನ್ನುವ ಆಪ್ಷನ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
ಗ್ರಾಮೀಣ ಬ್ಯಾಂಕಿನಿಂದ ಸಾಲ ಪಡೆದಿದ್ದ ರೈತರಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ.!
● ಆಹಾರ ಇಲಾಖೆಯ ಅಫಿಷಿಯಲ್ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ತಿಂಗಳು ಎನ್ನುವ ಆಪ್ಷನ್ ಅಲ್ಲಿ ಜುಲೈ ತಿಂಗಳು ಇರುತ್ತದೆ ಅದನ್ನು ಆಗಸ್ಟ್ ಎಂದು ಬದಲಾಯಿಸಿ, ನಿಮ್ಮ ಪಡಿತರ ಚೀಟಿ ಸಂಖ್ಯೆ (RD Num) ನಮೂದಿಸಿ. ನಂತರ ಸಂಖ್ಯೆಗಳ ಕ್ಯಾಪ್ಚಾ (Number code captcha) ಬರುತ್ತದೆ ಅದನ್ನು ಎಂಟ್ರಿ ಮಾಡಿ Go ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಈ ಮೇಲೆ ತಿಳಿಸಿದಂತೆ ಹಣ ಜಮೆ ಆಗಿರುವ ಕಂಪ್ಲೀಟ್ ಡೀಟೇಲ್ಸ್ ಬರುತ್ತದೆ.
● ಅನ್ನಭಾಗ್ಯ ಯೋಜನೆಯ ಎಷ್ಟು ಹಣವು ಫಲಾನುಭವಿಯ ಯಾವ ಬ್ಯಾಂಕ್ ಖಾತೆಗೆ ಜಮೆ ಆಗಿದೆ ಅಥವಾ ಅದರ ಸ್ಥಿತಿ ಹೇಗಿದೆ ಎಂಬುವುದನ್ನು ಈ ರೀತಿ ಚೆಕ್ ಮಾಡಿ ತಿಳಿದುಕೊಳ್ಳಬಹುದು.