ಹಣಕಾಸು ವ್ಯವಹಾರದ ಮೇಲೆ ಆದಾಯ ತೆರಿಗೆ (Income tax) ಸದಾ ನಿಗಾ ಇಟ್ಟಿರುತ್ತದೆ. ನಮ್ಮ ಭಾರತ ದೇಶದ ಆದಾಯ ತೆರಿಗೆ ಇಲಾಖೆಯು ಬಹಳ ಕಟ್ಟುನಿಟ್ಟಾದ ನಿಯಮಗಳನ್ನು (Rules) ಹೊಂದಿದ್ದು ಆ ಮೂಲಕವಾಗಿ ತೆರಿಗೆ, ದಂಡ (fine punishment) ಇವುಗಳನ್ನು ವಿಧಿಸುತ್ತದೆ. ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಅಥವಾ ಇನ್ಯಾವುದೇ ಹಣಕಾಸು ಸಂಸ್ಥೆಗಳಲ್ಲಿ ಆರ್ಥಿಕ ವಹಿವಾಟು ನಡೆಸುವವರು ಈ ತೆರಿಗೆ ಎನ್ನುವ ವಿಷಯದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು.
ಆದಾಯ ತೆರಿಗೆ ಇಲಾಖೆಯ ಬಗ್ಗೆ ಕನಿಷ್ಠ ಜ್ಞಾನ ಹೊಂದಿರಲೇಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ನಿಮ್ಮಿಂದ ನಿಯಮಗಳ ಉಲ್ಲಂಘನೆ ಆದರೆ ದಂಡ ಅಥವಾ ಶಿ’ಕ್ಷೆ ಪಡೆಯಬೇಕಾಗುತ್ತದೆ ಹಾಗಾಗಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ ನೋಡಿ ಆದಾಯ ತೆರಿಗೆ ಎನ್ನುವ ವಿಚಾರವನ್ನು ನಾವು ಎಲ್ಲೆಡೆ ಹೆಚ್ಚಾಗಿ ಕೇಳುತ್ತಿರುತ್ತೇವೆ.
3D ಪ್ರಿಂಟ್ ಕಟ್ಟಡ ಕ್ರಾಂತಿ, ಇನ್ನು ಮುಂದೆ ಕಟ್ಟಡ ಕೆಲಸ ಕೂಡ ಸುಲಭ, ಖರ್ಚು ಸಹಾ ಅರ್ಧಕರ್ಧ ಕಡಿಮೆ.!
ಉದಾಹರಣೆಯೊಂದಿಗೆ ಏನು ಎನ್ನುವುದನ್ನು ಸುಲಭವಾಗಿ ಅರ್ಥೈಸಬೇಕು ಎಂದರೆ ಈಗಿರುವ ರೂಲ್ಸ್ ಪ್ರಕಾರ ಹೇಳುವುದಾದರೆ ನೀವು ನಿಮ್ಮ ಖಾತೆಗೆ ಹಣವನ್ನು ಇಡುತ್ತೀರಿ ಎಂದು ಇಟ್ಟುಕೊಳ್ಳಿ. ನೀವು ನಿಮ್ಮ ಖಾತೆಗೆ ಹಣ ಜಮೆ ಮಾಡಿದರೆ ಅಥವಾ ನೀವು ಠೇವಣಿ ಇಟ್ಟರೆ ಅದಕ್ಕೆ ಮಿತಿ ಇರುತ್ತದೆ. ಒಬ್ಬ ವ್ಯಕ್ತಿಯು ಒಂದು ಆರ್ಥಿಕ ವರ್ಷದಲ್ಲಿ ಎಷ್ಟು ಹಣವನ್ನು ಇಡಬಹುದು ಎಂದು ಅದನ್ನು ಮೀರಿ ನೀವು ಹಣಕಾಸಿನ ವಹಿವಾಟು (transactions) ಮಾಡಿದಾಗ ಹೆಚ್ಚುವರಿ ಆದ ಹಣದ ಮೇಲೆ ನಿಮಗೆ ಸರ್ಕಾರ ತೆರಿಗೆ ವಿಧಿಸುತ್ತದೆ.
ನಮ್ಮ ದೇಶದಲ್ಲಿ ಈಗ ಇರುವ ಕಾನೂನಿನ ಪ್ರಕಾರ ನೀವು ಒಂದು ದಿನಕ್ಕೆ 1 ಲಕ್ಷ ಹಣವನ್ನು ವಹಿವಾಟು ಮಾಡಬಹುದು ಹಾಗೂ ಒಂದು ಆರ್ಥಿಕ ವರ್ಷದಲ್ಲಿ ಅಂದರೆ ಏಪ್ರಿಲ್ 1 ನೇ ತಾರೀಖಿನಿಂದ ಮುಂದಿನ ವರ್ಷ ಮಾರ್ಚ್ 31 ನೇ ತಾರೀಖಿನ ಒಳಗೆ ಗರಿಷ್ಠ 10 ಲಕ್ಷದವರೆಗೆ ನೀವು ಹಣಕಾಸಿನ ವಹಿವಾಟು ನಡೆಸಿದರೆ ನಿಮ್ಮ ಮೇಲೆ ಆದಾಯ ತೆರಿಗೆ ಇಲಾಖೆಯ ಕಣ್ಣು ಬೀಳುವುದಿಲ್ಲ.
ಗ್ರಾಮೀಣ ಬ್ಯಾಂಕಿನಿಂದ ಸಾಲ ಪಡೆದಿದ್ದ ರೈತರಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ.!
ಅದಕ್ಕಿಂತಲೂ ಹೆಚ್ಚಿನ ಹಣಕಾಸಿನ ವ್ಯವಹಾರ ನಡೆಸಿದ್ದರೆ ನೀವು ಆಗ ತೆರಿಗೆ (tax) ಕಟ್ಟಬೇಕಾಗುತ್ತದೆ. ನೀವೇನಾದರೂ ನಿಮ್ಮ ಖಾತೆಗೆ 10 ಲಕ್ಷಕ್ಕಿಂತ ಹಣ ಹಾಕಿದ್ದೀರಾ ಎಂದರೆ ನಿಮ್ಮ ಉಳಿತಾಯ ಖಾತೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಹಣ ಇದ್ದರೆ ಅಥವಾ ನೀವು 10 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಠೇವಣಿ ಇಟ್ಟಿದ್ದರೆ ಆ ಹಣದ ಮೇಲೆ ನೇರವಾಗಿ ಟ್ಯಾಕ್ಸ್ ಬೀಳುವುದಿಲ್ಲ.
ಬದಲಾಗಿ ನೀವು ಪಡೆಯುತ್ತಿರುವ ಆದಾಯದ ಮೇಲೆ ಟ್ಯಾಕ್ಸ್ ಬೀಳುತ್ತದೆ ಇದನ್ನು ITR ಫಾರ್ಮ್ ಎನ್ನುತ್ತಾರೆ ಹೇಗೆಂದರೆ ನೀವು ಇಟ್ಟಿರುವ ಹಣಕ್ಕೆ ಬ್ಯಾಂಕ್ ನಿಮಗೆ ಬಡ್ಡಿ ರೂಪದಲ್ಲಿ ಹಣ ನೀಡುತ್ತದೆ. ಇದು ಕೂಡ ನಿಮ್ಮ ಆದಾಯದ ಮೂಲವೇ ಆಗುತ್ತದೆ ನೀವು ಆ ರೀತಿ ಬಡ್ಡಿ ರೂಪದಲ್ಲಿ ಪಡೆಯುವ ಹಣದ ಮೇಲೆ ನಿಮಗೆ ಟ್ಯಾಕ್ಸ್ ಬೀಳುತ್ತದೆ.
ಮಾತ್ರೆ, ಇನ್ಸುಲಿನ್ ಇಲ್ಲದೆ ಸಕ್ಕರೆ ಕಾಯಿಲೆ ಗುಣಪಡಿಸುವ ವಿಧಾನ. ಶುಗರ್ ಪೇಷಂಟ್ ಗಳು ತಪ್ಪದೆ ಈ ಮಾಹಿತಿಯನ್ನು ನೋಡಿ.!
ಅದನ್ನು ಯಾವ ರೀತಿ ಅನ್ವಯಿಸಲಾಗುತ್ತದೆ ಎಂದರೆ ಈಗ ಇರುವ ನಿಯಮದ ಪ್ರಕಾರ ನೀವು ಇಟ್ಟಿರುವ ಹಣದ ಮೇಲೆ ನೀವು ಗರಿಷ್ಠವಾಗಿ 10,000 ವರೆಗೆ ಬಡ್ಡಿ ಪಡೆಯುತ್ತಿದ್ದರೆ ನಿಮಗೆ ಯಾವುದೇ ಟ್ಯಾಕ್ಸ್ ಬಿಡುವುದಿಲ್ಲ 10,000 ಕ್ಕಿಂತ ಹೆಚ್ಚಿನ ಹಣವನ್ನು ಬಡ್ಡಿ ರೂಪದ ಆದಾಯವಾಗಿ ಪಡೆಯುತ್ತಿದ್ದರೆ ಆಗ ನಿಮ್ಮ ಬಡ್ಡಿ ಹಣಕ್ಕೆ ಟ್ಯಾಕ್ಸ್ ಬೀಳುತ್ತದೆ.
ಇದರ ಜೊತೆಗೆ ನೀವು ಆದಾಯ ತೆರಿಗೆ ಇಲಾಖೆ ವಿಧಿಸಿದ ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸಿದಾಗ ಹಣಕಾಸಿನ ಮೂಲದ ಬಗ್ಗೆ ಮತ್ತು ನೀವು ನಡೆಸಿದ ಟ್ರಾನ್ಸಾಕ್ಷನ್ಗಳ ಬಗ್ಗೆ ದಾಖಲೆಗಳನ್ನು (Documents) ಇಟ್ಟುಕೊಂಡಿರಬೇಕು. ಐಟಿ ರೈಡ್ (IT Ride) ಆದಾಗ ನೀವು ಆ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಬೇಕಾಗುತ್ತದೆ.