3D ಪ್ರಿಂಟ್ ಕಟ್ಟಡ ಕ್ರಾಂತಿ, ಇನ್ನು ಮುಂದೆ ಕಟ್ಟಡ ಕೆಲಸ ಕೂಡ ಸುಲಭ, ಖರ್ಚು ಸಹಾ ಅರ್ಧಕರ್ಧ ಕಡಿಮೆ.!

 

ಇತ್ತೀಚೆಗಷ್ಟೇ ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ ನಲ್ಲಿ 1000Sq.ft ಅಂಚೆ ಕಚೇರಿಯನ್ನು (Post office) ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್ (Central Minister Ashwin Vaishnav) ಅವರು ಉದ್ಘಾಟನೆ ಮಾಡಿದರು. ಇದರ ವಿಶೇಷತೆ ಏನೆಂದರೆ ಇದನ್ನು ಸಂಪೂರ್ಣವಾಗಿ 3D ಪ್ರಿಂಟ್ ಟೆಕ್ನಾಲಜಿ (3D Print technology) ಬಳಸಿ ಕಟ್ಟಲಾಗಿದೆ.

ಕೇವಲ 48 ದಿನಗಳಲ್ಲಿ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಒಟ್ಟಾರೆ ಎಲ್ಲಾ ಖರ್ಚು ಸೇರಿ 40 ಲಕ್ಷ ವೆಚ್ಚದಲ್ಲಿ ಪೂರ್ತಿಗೊಳಿಸಲಾಗಿದೆ. ಹಾಗಾಗಿ ಇದು ಮತ್ತೊಮ್ಮೆ ಜನಸಾಮಾನ್ಯರ ಗಮನ ಸೆಳೆದಿದೆ. 3D ಪ್ರಿಂಟ್ ಕಟ್ಟಡ ಎನ್ನುವ ಹೊಸ ವಿಧಾನವು ಇತ್ತೀಚಿಗೆ ಹೆಚ್ಚು ಸದ್ದು ಮಾಡುತ್ತಿದೆ ಆದರೆ ಇದು 80ರ ದಶಕದಲ್ಲೇ ಇತ್ತು. ಆಗಿನ ಕಾಲಘಟ್ಟಕ್ಕೆ ದುಬಾರಿ ಖರ್ಚಿನ ವಿಧಾನ ಎನ್ನುವ ಕಾರಣಕ್ಕಾಗಿ ಕೈ ಬಿಡಲಾಗಿತ್ತು.

3D ಪ್ರಿಂಟಿಂಗ್ ಟೆಕ್ನಾಲಜಿ ಬಳಸಿ ಒಂದು ಚಿಕ್ಕ ಚಮಚದಿಂದ ಹಿಡಿದು ವಾಹನಗಳ ಚಕ್ರಗಳು ಮತ್ತು ಕಟ್ಟಡ ಈ ರೀತಿ ಏನನ್ನು ಬೇಕಾದರೂ ಸೃಷ್ಟಿಸಿಬಹುದು ಅತಿ ಕಠಿಣಾತಿ ಕಠಿಣ ಡಿಸೈನ್ಗಳನ್ನು ಕೂಡ ಕಂಪ್ಯೂಟರ್ ಸಹಾಯದಿಂದ (Computer) ಸಲೀಸಾಗಿ ಅಚ್ಚುಕಟ್ಟಾಗಿ ಮಾಡಿ ಮುಗಿಸಬಹುದು.

2010 ರಿಂದ ಈಚೆಗೆ ಈ ಟೆಕ್ನಾಲಜಿಯನ್ನು ಆಟೋಸ್ಪೇಸ್, ಏರೋ ಮೊಬೈಲ್, ಹೆಲ್ತ್ ಕೇರ್ ಇಂಡಸ್ಟ್ರಿಯ ವಸ್ತುಗಳನ್ನು ಮ್ಯಾನಿಫ್ಯಾಕ್ಚರ್ ಮಾಡಲು ಬಳಸಲಾಗುತ್ತಿದೆ. 2023ರ ಮೇ ತಿಂಗಳಿನಲ್ಲಿ ಸಂಪೂರ್ಣ 3D ಪ್ರಿಂಟ್ ಟೆಕ್ನಾಲಜಿ ಬಳಸಿ ಮಾಡಲಾದ 100ft ಎತ್ತರದ 7.5ft. ಅಗಲದ ಟೆಸ್ಟ್ ರಾಕೆಟ್ ಅನ್ನು ರಿಲೇಟಿವಿಟಿ ಏರೋ ಸ್ಪೇಸ್ (Relativity Aerospace test Rocket) ಎನ್ನುವ ಕಂಪನಿಯು ಲಾಂಚ್ ಮಾಡಿತ್ತು.

ಕೋವಿಡ್ ಲಾಕ್ಡೌನ್ (Covid Lockdown) ಸಮಯದಲ್ಲೂ ಕೂಡ ಮಾಸ್ಕ್ ಗಳು ಫೇಸ್ ಶೀಲ್ಡ್ ಗಳು ಇವುಗಳನ್ನು ತಯಾರು ಮಾಡಲು ಈ ಟೆಕ್ನಾಲಜಿಯನ್ನು ಬಳಸಲಾಗಿತ್ತು. ಕಟ್ಟಡ ನಿರ್ಮಾಣಕ್ಕೆ ಈ ಟೆಕ್ನಾಲಜಿ ಬಳಸುವ ಬಗ್ಗೆ ಈಗ ಎಲ್ಲೆಡೆ ಚರ್ಚೆ ಆರಂಭ ಆಗಿದೆ. ಯಾಕೆಂದರೆ ಕಡಿಮೆ ಸಮಯದಲ್ಲಿ ಕಡಿಮೆ ಖರ್ಚಿನಲ್ಲಿ ಸಾಂಪ್ರದಾಯಿಕವಾದ ಕಟ್ಟಡ ನಿರ್ಮಾಣ ಮಾಡುವ ಪದ್ಧತಿಗಿಂತ ಅನುಕೂಲಕರವಾಗಿ 3D ಪ್ರಿಂಟಿಂಗ್ ಬಳಸಿ ಕಟ್ಟಡಗಳನ್ನು ನಿರ್ಮಾಣ ಮಾಡಬಹುದು ಎಂದು.

ಈ ಮೇಲೆ ತಿಳಿಸಿದ ರೀತಿ ಹಲವಾರು ಕಡೆ ಈಗಾಗಲೇ ಈ ರೀತಿಯ ಪ್ರಯೋಗ ಕೂಡ ಕನ್ನಡದಿದೆ. ಚೆನ್ನೈನಲ್ಲಿ (Chennai 3D printing house) 3D ಪ್ರಿಂಟಿಂಗ್ ಟೆಕ್ನಾಲಜಿ ಬಳಸಿ 2021 ರಲ್ಲಿ 600ft. ಮನೆಯನ್ನು 5 ಲಕ್ಷ ಖರ್ಚಿನಲ್ಲಿ ಒಂದೇ ವಾರದಲ್ಲಿ ನಿರ್ಮಾಣ ಮಾಡಲಾಗಿತ್ತು. ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರೇ (Minister Nirmala Sitharaman) ಈ ಮನೆಯ ಉದ್ಘಾಟನೆ ಮಾಡಿದ್ದರು.

ಸಾಂಪ್ರದಾಯಿಕವಾಗಿ ಕಟ್ಟುವ ವಿಧಾನಕ್ಕಿಂತ 40%-50% ರಷ್ಟು ಕಡಿಮೆ ಖರ್ಚಿನಲ್ಲಿ ಈ ಮನೆಗಳನ್ನು ನಿರ್ಮಾಣ ಮಾಡಬಹುದು ಎನ್ನುವುದು ಇದರ ಪ್ಲಸ್ ಪಾಯಿಂಟ್ ಈ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಹಾಗೂ ಪ್ರಿಂಟರ್ ಮಿಷನ್ (Printer mission) ಸಹಾಯದಿಂದ ಮನೆ ನಿರ್ಮಾಣ ಮಾಡಲಾಗುತ್ತದೆ. ಮೊದಲಿಗೆ ಕಂಪ್ಯೂಟರ್ ನಲ್ಲಿ 3D ಡಿಸೈನ್ ಫೈನಲ್ ಮಾಡಲಾಗುತ್ತದೆ.

ಕಂಪ್ಯೂಟರ್ ಅದನ್ನು 2D ಯಾಗಿ ಅನಲೈಸ್ ಮಾಡಿ ಪ್ರಿಂಟರ್ ಮಿಷನ್ ಗಳ ಸಹಾಯದಿಂದ ಪದರ ಪದರವಾಗಿ (layer) ನಿರ್ಮಾಣ ಮಾಡುತ್ತಾ ಬರುತ್ತದೆ. ತನ್ನದೇ ಆದ ಮೆಟೀರಿಯಲ್ ಗಳನ್ನು ಬಳಸುತ್ತದೆ ಇದಕ್ಕೆ ಕೆಲ ಕೆಮಿಕಲ್ ಗಳನ್ನು ಬಳಸಿ ಅಂಟುವ ರೀತಿ ಮಾಡಲಾಗುತ್ತದೆ. ಇದು ವಿಶ್ವವಾಪಿ ಅತಿ ಹೆಚ್ಚು ಬಳಕೆ ಬಂದರೆ ಅರ್ಧಕರ್ಧ ಕಡಿಮೆ ಖರ್ಚಿನಲ್ಲಿ ಕಡಿಮೆ ಸಮಯದಲ್ಲಿ ಮನೆ ನಿರ್ಮಾಣ ಮಾಡಬಹುದು ಎನ್ನುವುದು ಎಲ್ಲರ ಅನಿಸಿಕೆ. ಆದರೆ ಇದಕ್ಕೂ ಕೂಡ ಅಡೆತಡೆಗಳಿವೆ.

ಯಾಕೆಂದರೆ ಈ ಕೆಲಸಕ್ಕೆ ಕಂಪ್ಯೂಟರ್ ಆಪರೇಟರ್ ಹಾಗೂ ಪ್ರಿಂಟರ್ ಜೋಡಿಸುವ ಕೆಲಸಕ್ಕೆ ಬಿಟ್ಟು ಕಾರ್ಮಿಕರು ಬೇಕಾಗುವುದಿಲ್ಲ ಹಾಗಾಗಿ ಕಟ್ಟಡ ಕಾರ್ಮಿಕರ ಉದ್ಯೋಗ (labour’s job) ಹೋಗುತ್ತದೆ ಎನ್ನುವುದು ಪ್ರಿಂಟರ್ ಮಿಷನ್ ಗಳು ಬಹಳ ದುಬಾರಿ ಕಡಿಮೆ ಎಂದರೆ ಏಳೆಂಟು ಕೋಟಿ ಖರ್ಚಾಗುತ್ತದೆ ಹಾಗಾಗಿ 3D ಪ್ರಿಂಟರ್ ಕಂಪನಿಗಳು ಕೂಡ ಕಡಿಮೆ, ಫಿನಿಶಿಂಗ್ ಕೂಡ ಎಲ್ಲರಿಗೂ ಒಪ್ಪಿಗೆಯಾಗುವ ರೀತಿ ಇಲ್ಲ ಎನ್ನುವುದು ಮತ್ತೊಂದು ಅಭಿಪ್ರಾಯ.

ಬಾಳಿಕೆ ವಿಚಾರದಲ್ಲಿ ಕೂಡ ಈಗಷ್ಟ ನಿರ್ಮಾಣ ಆಗುತ್ತಿರುವುದಂದ ಇನ್ನು ಕೆಲವು ವರ್ಷಗಳ ವರೆಗೆ ಕಾದು ನೋಡಬೇಕು. ಒಟ್ಟಾರಿಯಾಗಿ ಇದು ಎಲ್ಲೆಡೆ ಕೂಡ ಸುಲಭವಾಗಿ, ಸರಳವಾಗಿ ಸಿಗಬೇಕು ಎಂದರೆ ಕನಿಷ್ಠ 30 ವರ್ಷಗಳಾದರೂ ಆಗಬಹುದು.

Leave a Comment

%d bloggers like this: