ಹಿಂದೂಗಳ ಪಾಲಿನ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶಿವನ ಜ್ಯೋತಿರ್ಲಿಂಗಗಳಲ್ಲಿ ಒಂದಾದ ವಿಶ್ವೇಶ್ವರನು ಇರುವ ಕಾಶಿಯನ್ನು ಜೀವನದಲ್ಲಿ ಒಂದು ಬಾರಿಯಾದರೂ ದರ್ಶನ ಮಾಡಬೇಕು ಎನ್ನುವುದು ಪ್ರತಿಯೊಬ್ಬ ಆಸ್ತಿಕರ ಕನಸು. ಆದರೆ ಇದುವರೆಗೆ ಎಲ್ಲರಿಗೂ ಇದು ಸಾಧ್ಯವಾಗುತ್ತಿರಲಿಲ್ಲ.
ಇದನ್ನು ಮನಗಂಡು ನಮ್ಮ ಸರ್ಕಾರವು IRCTC ಮತ್ತು ಭಾರತೀಯ ರೈಲ್ವೆ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ (Karnataka Bharath Gourava Kashi Darshana) ಎನ್ನುವ ಯೋಜನೆಯನ್ನು ಜಾರಿಗೆ ತಂದಿತು. 2022 ಜುಲೈ 29ರಂದು ಲಾಂಚ್ ಆಗಿದ್ದ ಈ ಯೋಜನೆ ಯಶಸ್ವಿಯಾಗಿ ಇಲ್ಲಿಯವರೆಗೆ ನಾಲ್ಕು ಸುತ್ತಿನಲ್ಲಿ ಅನೇಕರು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಕಾಶಿಗೆ ತೆರಳಿ ದರ್ಶನ ಮಾಡಿ ಬಂದಿದ್ದಾರೆ.
ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ, ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿದೆ ನೋಡಿ.!
ಈ ರೀತಿ ವಿಶೇಷ ಯೋಜನೆಯಿಂದ ಪ್ರಯಾಣ ಹೊರಟವರಿಗೆ ಪೂರಕ ದಾಖಲೆಗಳನ್ನು ಒದಗಿಸಿದಲ್ಲಿ ಸರ್ಕಾರವು 5000 ರೂಪಾಯಿಗಳ ಸಹಾಯಧನವನ್ನು (Subsidy) ಕೂಡ ನೀಡುತ್ತಿತ್ತು. ಇದೀಗ ನೂತನವಾಗಿ ರಾಜ್ಯದಲ್ಲಿ ಸ್ಥಾಪನೆಯಾಗಿರುವ ಕಾಂಗ್ರೆಸ್ ಸರ್ಕಾರವು (Congress government) ಈ ಸಹಾಯಧನವನ್ನು ಹೆಚ್ಚಿಸಿರುವುದು (increase facilities) ಮಾತ್ರವಲ್ಲದೆ ಐದು ಮತ್ತು ಆರನೇ ಸುತ್ತಿನಲ್ಲಿ ಹೊರಡುವ ರೈಲು ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಲು ಕೂಡ ಅವಕಾಶ ಮಾಡಿಕೊಟ್ಟಿದೆ.
ಈ ಬಾರಿ 7,500 ರೂಗಳ ಸಹಾಯಧನವನ್ನು ಪ್ರಯಾಣಿಕರು ಪಡೆಯಲಿದ್ದು ಇದರ ಜೊತೆಗೆ ಕಾಶಿ ಮಾತ್ರವಲ್ಲದೇ ಜೊತೆಗೆ ಅಯೋಧ್ಯೆ, ಗಯಾ ಮತ್ತು ಪ್ರಯಾಗ ರಾಜ್ ಕ್ಷೇತ್ರಗಳನ್ನು ಒಳಗೊಂಡ 9 ದಿನಗಳ ಯಾತ್ರೆಯ ಪ್ಯಾಕೇಜ್ ಸಿಗಲಿದೆ. ಈ ಬಾರಿ ಇನ್ನಷ್ಟು ಕ್ಷೇತ್ರಗಳನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ ಸಹಾಯಧನವನ್ನು ಹೆಚ್ಚಿಸಿರುವುದು ಯಾತ್ರೆಗೆ ಹೊರಡಲು ಸಜ್ಜಾಗಿದ್ದ ಪ್ರಯಾಣಿಕರ ಸಂತಸವನ್ನು ಇಮ್ಮಡಿಗೊಳಿಸಿದೆ.
ಸದ್ಯಕ್ಕೀಗ ಪ್ಲಾನ್ ಮಾಡಲಾಗಿರುವ ಈ ಹೊಸ ಪ್ಯಾಕೇಜ್ಗೆ ಒಬ್ಬ ಯಾತ್ರಾರ್ಥಿಗೆ 22,500ರೂ. ಖರ್ಚಾಗಲಿದೆ ಎಂದು ಊಹಿಸಲಾಗಿದ್ದು. ಅದರಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ 7,500 ಸಹಾಯಧನ ಸಿಗಲಿದೆ. 15 ಸಾವಿರ ರೂಪಾಯಿಗಳನ್ನು ಯಾತ್ರಾರ್ಥಿಗಳು ಪಾವತಿಸಬೇಕಾಗುತ್ತದೆ. ಈ ವಿಶೇಷ ವ್ಯವಸ್ಥೆ ಬಗ್ಗೆ ಇದೀಗ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ (Transport Minister Ramalinga Reddy) ಅವರು ಘೋಷಿಸಿದ್ದಾರೆ. ಈ ವಿಶೇಷ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿ ಹೀಗಿದೆ ನೋಡಿ.
ಈ ಪ್ಯಾಕೇಜ್ ನ ವಿಶೇಷತೆಗಳು:-
● ಮೂರು ಟೈಲ್ AC ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದ್ದು, ಊಟ ವಸತಿ ವ್ಯವಸ್ಥೆಯ ಜೊತೆಗೆ ಸ್ಥಳೀಯ ಸಾರಿಗೆ ಹಾಗೂ ದರ್ಶನದ ವ್ಯವಸ್ಥೆ ಇರುತ್ತದೆ.
● ಯಾತ್ರಾರ್ಥಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ತಂಡವನ್ನು ಕೂಡ ನೇಮಿಸಲಾಗಿದೆ.
● ಪ್ರಯಾಣಿಕರಿಗೆ ಆಧುನಿಕ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುತ್ತದೆ.
● ಯಶವಂತಪುರ, ತುಮಕೂರು, ದಾವಣಗೆರೆ, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ರಾಯಭಾಗ ಈ ನಿಲ್ದಾಣಗಳಲ್ಲಿ ರೈಲು ಹತ್ತುವ ಹಾಗೂ ಇಳಿಯುವ ಅವಕಾಶಗಳಿವೆ.
ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆಗಳು:-
8595931291, 8595931292, 859593124.
● ಟಿಕೆಟ್ ಬುಕ್ಕಿಂಗ್ ಆಗಿ ಹಾಗೂ ಇನ್ನೂ ಹೆಚ್ಚಿನ ಮಾಹಿತಿಗಾಗಿ irctctourism.com ವೆಬ್ ಸೈಟ್ ಗೆ ಭೇಟಿ ಕೊಡಿ.