ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ, ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿದೆ ನೋಡಿ.!

2023-24 ನೇ ಸಾಲಿನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (Department of Industry and Commerce) ಗ್ರಾಮೀಣ ಕೈಗಾರಿಕೆಗಳು (ಖಾದಿ ಮತ್ತು ಗ್ರಾಮೋದ್ಯೋಗ) ಜಿಲ್ಲಾ ಪಂಚಾಯತ್ ವತಿಯಿಂದ ವೃತ್ತಿಪರ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ (Free toolkit Scheme) ವಿದ್ಯುತ್ ಚಾಲಿತ ಹೊಲಿಗೆ ತಂತ್ರ ಮತ್ತು ಮರಗೆಲಸ, ಗಾರೆಕೆಲಸ ಹಾಗೂ ಕ್ಷೌರಿಕ ಮತ್ತು ಧೋಬಿ ಉಪಕರಣಗಳನ್ನು ಪಡೆಯಬಹುದು.

ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಮತ್ತು ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇದಕ್ಕಾಗಿ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು, ಸಲ್ಲಿಸಬೇಕಾದ ದಾಖಲೆಗಳೇನು ಅರ್ಜಿ ಸಲ್ಲಿಸುವ ವಿಧಾನ ಹಾಗೂ ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿ ಕೊಡುತ್ತಿದ್ದೇವೆ.

60 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು 5,000 ಘೋಷಣೆ, ಈ ಯೋಜನೆಗೆ ಇಂದೇ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.!

ಯೋಜನೆಯ ಹೆಸರು:- ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ವಿತರಣೆ

ಬೇಕಾಗುವ ದಾಖಲೆಗಳು:-

● ಪಾಸ್ಪೋರ್ಟ್ ಅಳತೆಯ ಭಾವಚಿತ್ರ
● ಜಾತಿ ಪ್ರಮಾಣ ಪತ್ರ
● ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ
● ರೇಷನ್ ಕಾರ್ಡ್ ಅಥವಾ ವೋಟರ್ ಐಡಿ
● ಮರಗೆಲಸ, ಗಾರೆ ಕೆಲಸ, ಕ್ಷೌರಿಕ ಹಾಗೂ ಧೋಬಿ ಕಸುಬಿನ ಕುಶಲ ಕಾರ್ಮಿಗಳಾಗಿದ್ದಲ್ಲಿ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಧೃಡೀಕರಣ ಪತ್ರ ಅಥವಾಕಾರ್ಮಿಕ ಇಲಾಖೆ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ.

ಅರ್ಜಿ ಸಲ್ಲಿಸುವ ವಿಧಾನ:-

● ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.
● ಆಯಾ ಜಿಲ್ಲಾ ಪಂಚಾಯಿತಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಬೇಕು
● 2023-24ನೇ ಸಾಲಿನ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ವೃತ್ತಿಪರ ಉಪಕರಣಗಳನ್ನು ಪಡೆಯಲು ಅರ್ಜಿ ಆಹ್ವಾನ ಈ ವಿಭಾಗಕ್ಕೆ ಭೇಟಿಕೊಡಿ.

ಪೋಸ್ಟ್ ಆಫೀಸ್ ನಲ್ಲಿ ಹಣ ಇಟ್ಟವರಿಗೆ ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ.! ಪೋಸ್ಟ್ ಆಫಿಸ್ FD ಅಥವಾ ಇನ್ನಿತರ ಇನ್ವೆಸ್ಟ್ ಮೆಂಟ್ ಮಾಡಿದ್ದವರು ತಪ್ಪದೆ ಇದನ್ನು ನೋಡಿ.!

● ಹೊಸ ಪೇಜ್ ಓಪನ್ ಆಗುತ್ತದೆ ಅದರಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಪ್ರಮುಖ ಸೂಚನೆಗಳು ಮತ್ತು ಯೋಜನೆ ಕುರಿತ ಸಂಪೂರ್ಣ ಮಾಹಿತಿಯ ವಿವರಗಳು ಕೂಡ ಇರುತ್ತದೆ ಅವುಗಳನ್ನು ಓದಿ ಅರ್ಜಿ ಫಾರಂ ಲಿಂಕ್ ಕ್ಲಿಕ್ ಮಾಡಬೇಕು.
● ಅರ್ಜಿ ಫಾರಂನಲ್ಲಿ ಮೊದಲಿಗೆ ಅರ್ಜಿದಾರನ ವಿವರಗಳನ್ನು ಕೇಳಲಾಗುತ್ತದೆ.

● ನಿಮ್ಮ ಜಿಲ್ಲೆಯ ಹೆಸರು, ತಾಲೂಕಿನ ಹೆಸರು, ಯೋಜನೆಯ ಹೆಸರು, ಅರ್ಜಿದಾರರ ಹೆಸರು ತಂದೆ / ತಾಯಿ / ಗಂಡನ ಹೆಸರು, ಅರ್ಜಿದಾರರ ಗ್ರಾಮ ಪಂಚಾಯಿತಿ ಹೆಸರು, ಲಿಂಗ, ಜಾತಿ ಕೇಳಲಾಗುತ್ತದೆ. ಇವುಗಳಲ್ಲಿ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ.
● ಯೋಜನೆಗೆ ವಿವರಗಳು ಎನ್ನುವ ಆಪ್ಷನ್ ಬರುತ್ತದೆ ಇದರಲ್ಲಿ ಉಪಕರಣ ಪಡೆಯಲು ಇಚ್ಛಿಸುವ ವೃತ್ತಿ ಎನ್ನುವ ಆಪ್ಷನ್ ಇರುತ್ತದೆ. ಇದರಲ್ಲಿ ಧೋಬಿ / ಮರಗೆಲಸ / ಟೈಲರಿಂಗ್ ಇರುತ್ತದೆ. ನೀವು ನಿಮ್ಮ ವೃತ್ತಿಯನ್ನು ಸೆಲೆಕ್ಟ್ ಮಾಡಿ.

RTO ಕಚೇರಿಗೆ ಹೋಗದೆ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು ಮನೆಯಲ್ಲೇ ಕುಳಿತು ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿ ಹಾಕುವ ವಿಧಾನ.!

● ನಂತರ ಪತ್ರ ವ್ಯವಹಾರಕ್ಕಾಗಿ ವಿವರಗಳು ಎನ್ನುವ ಆಪ್ಷನ್ ಇರುತ್ತದೆ ಅದರಲ್ಲಿ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಮನೆಯ ವಿಳಾಸ ಇವುಗಳನ್ನು ಕೇಳಲಾಗಿರುತ್ತದೆ. ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಪ್ರೆಸೆಂಟ್ ಅಡ್ರೆಸ್ ವಿವರಗಳನ್ನು ತುಂಬಿಸಿ.
● ಶೈಕ್ಷಣಿಕ ವಿದ್ಯಾರ್ಹತೆಯ ವಿವರಗಳನ್ನು ಕೇಳಲಾಗುತ್ತದೆ ಅವುಗಳನ್ನು ಭರ್ತಿ ಮಾಡಿ.

● ಕೊನೆಯಲ್ಲಿ ಪ್ರಮಾಣ ಪತ್ರಗಳ ವಿವರ ಇರುತ್ತದೆ. ಇದೆ ಎನ್ನುವ ಆಪ್ಷನ್ ಕ್ಲಿಕ್ ಮಾಡಿ. ಸಂಬಂಧಪಟ್ಟ ಪ್ರಮಾಣ ಪತ್ರವನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
● ಸ್ವಯಂ ಘೋಷಣೆ ಬರುತ್ತದೆ ಅದನ್ನು ಕೂಡ ಓದಿಕೊಂಡು Agree ಎಂದು ಕ್ಲಿಕ್ ಮಾಡಿ.
● Captcha ನಮೂದಿಸಿ Submit ಕೊಡಿ.

7ನೇ ತರಗತಿ, SSLC, PUC, ಡಿಗ್ರಿ ಮುಗಿಸಿದವರಿಗೆ ಮುಕ್ತ ವಿವಿಯಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ವೇತನ 58,250

ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಬೇಕಾದ ವಿಳಾಸ:-
ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿಗಳು,
ಉಪ ನಿರ್ದೇಶಕರ ಕಛೇರಿ,
ಗ್ರಾಮೀಣ ಕೈಗಾರಿಕೆಗಳು ಖಾದಿ ಮತ್ತು ಗ್ರಾಮೋದ್ಯೋಗ.

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 10.08.2023.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 10.10.2023.

https://youtu.be/IEOX08OxYBw?si=1wyVyhkkv9KQisj1

Leave a Comment

%d bloggers like this: