ಕರ್ನಾಟಕ ಸರ್ಕಾರದ (Karnataka Government) ಗ್ಯಾರಂಟಿ ಯೋಜನೆಗಳ (Gyarantee Scheme) ಪೈಕಿ ನಾಲ್ಕನೇ ಗ್ಯಾರಂಟಿ ಕಾರ್ಡ್ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ಅದ್ದೂರಿಯಾಗಿ ಲಾಂಚ್ ಆಗುತ್ತಿದೆ. ಈವರೆಗೆ ಹಲವು ಬಾರಿ ಈ ಕಾರ್ಯಕ್ರಮದ ದಿನಾಂಕವನ್ನು ಮುಂದೂಡಲಾಗಿತ್ತು, ಅಂತಿಮವಾಗಿ ಕಾಂಗ್ರೆಸ್ ಸರ್ಕಾರಕ್ಕೆ 100 ದಿನ ತುಂಬಿದ ಸಂದರ್ಭದಲ್ಲಿಯೇ ಮುಖ್ಯಮಂತ್ರಿಗಳ (CM) ತವರು ಜಿಲ್ಲೆಯಾದ ಮೈಸೂರು ಜಿಲ್ಲೆಯಲ್ಲಿ (Mysore) ಗೃಹಲಕ್ಷ್ಮಿ ಯೋಜನೆಯ ಲಾಂಚ್ ಗೆ ತಯಾರಿ ನಡೆದಿದೆ.
ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಆಗಸ್ಟ್ 30ನೇ ತಾರೀಖಿನಂದು ಗೃಹಲಕ್ಷ್ಮೀ ಹಣ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಂದೇ ಮಾನ್ಯ ಮುಖ್ಯಮಂತ್ರಿಗಳು ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ ಈ ಸಹಾಯಧನವನ್ನು ಕೂಡ ವರ್ಗಾವಣೆ ಮಾಡಲಿದ್ದಾರೆ.
ಮನೆ ಬಾಡಿಗೆ ಕೊಟ್ಟಿರುವವರಿಗೆ ಮಹತ್ವದ ಸೂಚನೆ, ಕೋರ್ಟ್ ನಿಂದ ಬಂತು ಹೊಸ ಆದೇಶ ತಪ್ಪದೆ ಈ ಸುದ್ದಿ ನೋಡಿ.!
ಸರ್ಕಾರಿ ಹುದ್ದೆಯಲ್ಲಿರುವ ಕುಟುಂಬಗಳು ಹಾಗೂ ಆದಾಯ ತೆರಿಗೆ, ವೃತ್ತಿ ತೆರಿಗೆ, GST ರಿಟರ್ನ್ ಸಲ್ಲಿಸುವ ಕುಟುಂಬಗಳ ಮಹಿಳೆಯರನ್ನು ಹೊರತುಪಡಿಸಿ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ರೇಷನ್ ಕಾರ್ಡ್ ಹೊಂದಿರುವ ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರೂ ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸರ್ಕಾರ ನೀಡಿರುವ ಅಂಕಿ ಅಂಶದ ಪ್ರಕಾರ ಈಗಾಗಲೇ 1.10 ಕೋಟಿ ಮಹಿಳಾ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ರೇಷನ್ ಕಾರ್ಡ್ ಮಾಹಿತಿ ಹಾಗೂ ಬ್ಯಾಂಕ್ ಮಾಹಿತಿಯಲ್ಲಿ ಸಮಸ್ಯೆ ಉಂಟಾಗಿರುವವರು ಅದನ್ನು ಸರಿಪಡಿಸಿಕೊಂಡು ಅರ್ಜಿ ಸಲ್ಲಿಸಲು ಕೂಡ ಅವಕಾಶ ಮಾಡಿಕೊಡಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಇಲ್ಲ ಅರ್ಜಿ ಸಲ್ಲಿಸಿ ನೋಂದಣಿಯಾದ ಮುಂದಿನ ತಿಂಗಳಿಂದ ಅವರು ಈ ಸಹಾಯಧನವನ್ನು ಪಡೆಯಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಪಷ್ಟೀಕರಿಸಿದ್ದಾರೆ.
ಆದರೆ ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಈ ಕುರಿತು ಕುತೂಹಲ ಇದ್ದೇ ಇರುತ್ತದೆ. ಈ ಕುತುಹಲಕ್ಕೆ ಸರ್ಕಾರ ತೆರೆ ಇಳಿದಿದೆ. ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಾಗ ಲಿಸ್ಟ್ (Gruhalakshmi beneficiary list) ಬಿಡುಗಡೆ ಮಾಡಿದೆ. ಈಗ ನಾವು ಹೇಳುವ ಈ ವಿಧಾನದ ಮೂಲಕ ನೀವು ಕೂಡ ಈ ಪಟ್ಟಿಯಲ್ಲಿ ಇದ್ದೀರಾ ಎಂದು ಚೆಕ್ ಮಾಡಿಕೊಳ್ಳಬಹುದು.
● ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿಕೊಡಿ https://ahara.kar.nic.in/WebForms/Show_Village_List.aspx
● ಮೆನು ಬಾರ್ ಅಲ್ಲಿ ಇ-ಸೇವೆಗಳು ಎನ್ನುವ ಆಯ್ಕೆ ಕಾಣುತ್ತದೆ, ಅದನ್ನು ಸೆಲೆಕ್ಟ್ ಮಾಡಿ.
● ಪೇಜ್ ಎಡಭಾಗದಲ್ಲಿ ಎಲ್ಲಾ ಸೇವೆಗಳ ಲಿಸ್ಟ್ ಬರುತ್ತದೆ ಅದರಲ್ಲಿ ಇ-ರೇಷನ್ ಕಾರ್ಡ್ ಎನ್ನುವುದನ್ನು ಸೆಲೆಕ್ಟ್ ಮಾಡಿ ಮತ್ತಷ್ಟು ಸೇವೆಗಳ ವಿವರ ಬರುತ್ತದೆ ಅದರಲ್ಲಿ ವಿಲೇಜ್ ಲಿಸ್ಟ್ ಎನ್ನುವುದನ್ನು ಕ್ಲಿಕ್ ಮಾಡಿ.
● ಜಿಲ್ಲಾವಾರು ಲಿಂಕ್ ಇರುತ್ತದೆ, ಅದರಲ್ಲಿ ನಿಮ್ಮ ಜಿಲ್ಲೆ ಇರುವ ಲಿಂಕ್ ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ.
● ಸ್ಕ್ರೀನ್ ಮೇಲೆ ಒಂದು ಫಾರಂ ಕಾಣುತ್ತದೆ. ಅದರಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ ಮತ್ತು ಗ್ರಾಮದ ಹೆಸರನ್ನು ಹಾಕಿ ಆಗಸ್ಟ್ ತಿಂಗಳು ಎನ್ನುವುದನ್ನು ಸೆಲೆಕ್ಟ್ ಮಾಡಿ.
● ನಿಮ್ಮ ಗ್ರಾಮದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ರೇಷನ್ ಕಾರ್ಡ್ ವಿವರ ಬರುತ್ತದೆ. ಇವರೆಲ್ಲರೂ ಕೂಡ ಅರ್ಜಿ ಸಲ್ಲಿಸಿ ನೋಂದಣಿ ಆಗಿದ್ದರೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗುತ್ತಾರೆ.
ಹಸುಗಳ ರಬ್ಬರ್ ಮ್ಯಾಟ್ ಸಹಾಯಧನಕ್ಕೆ ಅರ್ಜಿ ಆಹ್ವಾನ.! ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ ಮ್ಯಾಟ್ ಪಡೆಯಿರಿ.!
ಆಗಸ್ಟ್ 30ನೇ ತಾರೀಖಿನಂದು ಗೃಹಲಕ್ಷ್ಮಿ ಯೋಜನೆಯ 2,000 ರೂ. ಸಹಾಯಧನವು ನೇರವಾಗಿ ಅವರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ. ಸರ್ಚ್ ಬಾರ್ ಅಲ್ಲಿ ನಿಮ್ಮ ಹೆಸರು ಟೈಪ್ ಮಾಡುವ ಮೂಲಕ ನೀವು ಕೂಡ ಆ ಲಿಸ್ಟ್ ನಲ್ಲಿ ಇದ್ದೀರಾ ಎಂದು ಕನ್ಫರ್ಮ್ ಮಾಡಿಕೊಳ್ಳಿ.