ಕರ್ನಾಟಕ ರಾಜ್ಯದ ಮಹಿಳೆಯರು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಇಂದು ಚಾಲನೆ ಸಿಗುತ್ತಿದೆ. ಸರ್ಕಾರ ಭರವಸೆ ನೀಡಿದ ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕನೇ ಗ್ಯಾರಂಟಿ ಕಾರ್ಡ್ ಯೋಜನೆ ಯಾಗಿ (Gyarantee Scheme) ಗೃಹಲಕ್ಷ್ಮಿ ಯೋಜನೆಯು ಆಗಸ್ಟ್ 30ನೇ ತಾರೀಕು ಸರ್ಕಾರಕ್ಕೆ 100 ದಿನಗಳು ತುಂಬಿದ ಸಂಭ್ರಮದಲ್ಲಿ ಜಾರಿಗೆ ಬರುತ್ತಿದೆ.
ಮೈಸೂರಿನಲ್ಲಿ (Mysore) ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು (C.M Siddaramaih) ಅರ್ಹ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಿದ್ದಾರೆ. ಇಂದು ಬೆಳಿಗ್ಗೆ 11:30 ಕರ್ನಾಟಕದ 1.28 ಕೋಟಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಲಿದ್ದು, ಈ ಕಾರ್ಯಕ್ರಮವನ್ನು ಏಕಕಾಲಕ್ಕೆ ಸುಮಾರು 11,000 ಕಡೆಗಳಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ಪುರ ಹಾಗೂ ನಗರ ಸಭೆ ವ್ಯಾಪ್ತಿಯಲ್ಲಿ ರಾಜ್ಯದಾದ್ಯಂತ ನಡೆಸಲಾಗುತ್ತಿದೆ.
ಇಂದಿನಿಂದ ಗ್ಯಾಸ್ ಸಿಲಿಂಡರ್ ಮೇಲೆ 400 ರೂಪಾಯಿ ಕಡಿತ ಕೇಂದ್ರ ಸರ್ಕಾರದಿಂದ ಅಧಿಕೃತ ಘೋಷಣೆ.!
ಪದೇ ಪದೇ ಗೃಹಾಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹಾಗೂ ಈ ಯೋಜನೆಯ ಹಣ ಬಿಡುಗಡೆ ಮಾಡುವ ದಿನಾಂಕ ಮುಂದೆ ಹೋಗುತ್ತಲೇ ಇತ್ತು. ಜುಲೈ 19 ರಿಂದ ಕುಟುಂಬದ ಯಜಮಾನಿ ಸ್ಥಾನದಲ್ಲಿರುವ ಮಹಿಳೆಯು ಸರ್ಕಾರವು ಸೂಚಿಸಿದಂತೆ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ದಾಖಲೆಯೊಂದಿಗೆ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹೋಗಿ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳುತ್ತಿದ್ದಾರೆ.
ಈ ಮೊದಲು ಹೇಳಿದ ಪ್ರಕಾರ ಆಗಸ್ಟ್ 15 ರಂದು ಸ್ವತಂತ್ರ ದಿನಾಚರಣೆ ಪ್ರಯುಕ್ತ ಯೋಜನೆ ಲಾಂಚ್ ಮಾಡಬೇಕಿತ್ತು ಆದರೆ ಕಾರಣಾಂತರಗಳಿಂದ ಕೆಲವು ದಿನಗಳವರೆಗೆ ಮುಂದೂಡಲಾಯಿತು. ಇದರಿಂದ ಆಗಸ್ಟ್ ತಿಂಗಳಲ್ಲಿ ಸಹಾಯಧನ ಸಿಗುತ್ತದೆಯೋ ಇಲ್ಲವೋ ಎನ್ನುವ ಗೊಂದಲದ ವಾತಾವರಣ ಕೂಡ ಸೃಷ್ಟಿಯಾಗಿತ್ತು.
ವಾಣಿಜ್ಯ ತೆರಿಗೆ ಇಲಾಖೆ ನೇಮಕಾತಿಗೆ ಅರ್ಜಿ ಆಹ್ವಾನ ಆಸಕ್ತ ಅಭ್ಯರ್ಥಿಗಳು ತಪ್ಪದೆ ಅರ್ಜಿ ಸಲ್ಲಿಸಿ.! ವೇತನ 62,600/-
ಈಗ ಅಂತಿಮವಾಗಿ ಆಗಸ್ಟ್ 30ನೇ ತಾರೀಕು ಖಾತ್ರಿಯಾಗಿ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿರುವ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಸಹಾಯಧನವನ್ನು ವರ್ಗಾವಣೆ ಮಾಡಲಾಗುತ್ತಿದೆ. ನೀವು ಸಹ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ನಿಮಗೂ ಕೂಡ ಗೃಹಲಕ್ಷ್ಮಿ ಯೋಜನೆ 2000 ಸಹಾಯಧನವು ಸಿಗುತ್ತದೆ. ಒಟ್ಟಿಗೆ ಕೋಟ್ಯಾಂತರ ಮಹಿಳೆಯರ ಖಾತೆಗೆ ಹಣ ವರ್ಗಾವಣೆಯಾಗುತ್ತಿರುವ ಕಾರಣ ನಿಮ್ಮ ಖಾತೆಗೆ ಹಣ ಬರುವುದಕ್ಕೆ ಒಂದೆರಡು ದಿನಗಳ ಸಮಯ ತೆಗೆದುಕೊಳ್ಳಬಹುದು.
ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದೆಯೇ ಎಂದು ನೀವು ಈ ಕೆಳಗಿನ ವಿಧಾನಗಳಿಂದ ದೃಢಪಡಿಸಿಕೊಳ್ಳಬಹುದು:-
● ನೀವು ಗೃಹಲಕ್ಷ್ಮಿ ಯೋಜನೆಯ 2000 ಸಹಾಯಧನವನ್ನು ಪಡೆದ ತಕ್ಷಣವೇ ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಇದರ ಕುರಿತು SMS ನೋಟಿಫಿಕೇಶನ್ ಕೂಡ ಬರುತ್ತದೆ.
● ಇಲ್ಲದೆ ಇದ್ದಲ್ಲಿ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಉಳಿತಾಯ ಖಾತೆಯ ಮಾಹಿತಿಯನ್ನು ತಿಳಿದುಕೊಳ್ಳುವ ಮೂಲಕ ಗೃಹಲಕ್ಷ್ಮಿ ಯೋಜನೆ ಸಹಾಯಧನ ನಿಮ್ಮ ಖಾತೆಗೆ ವರ್ಗಾವಣೆ ಆಗಿದೆಯೇ ಎಂದು ದೃಢಪಡಿಸಿಕೊಳ್ಳಬಹುದು.
● ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಅನ್ನಭಾಗ್ಯ ಯೋಜನೆಯ ಹಣವನ್ನು ಚೆಕ್ ಮಾಡುವ DBT ಸ್ಟೇಟಸ್ ವಿಧಾನದಿಂದ ಕೂಡ ನೀವು ನಿಮ್ಮ ಯಾವ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವು ಯಾವ ದಿನಾಂಕದಂದು ವರ್ಗಾವಣೆ ಆಗಿದೆ ಎನ್ನುವುದರ ಮಾಹಿತಿಯನ್ನು ಪಡೆದು ಕೊಳ್ಳಬಹುದು.