ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಬಡವರು ಹಾಗೂ ಮಧ್ಯಮ ವರ್ಗದವರ ಜೀವನ ನಿರ್ವಹಣೆ ಬಹಳ ಕ’ಷ್ಟವಾಗುತ್ತಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರವು (Government) ಕೋವಿಡ್ ಸಮಯದಲ್ಲಿ ಸ್ಥಗಿತಗೊಳಿಸಿದ್ದ LPG ಸಬ್ಸಿಡಿ (Subsidy) ವಿತರಣೆಯನ್ನು ಮತ್ತೆ ಪುನರಾರಂಭಿಸಿದೆ. ಈ ಬಗ್ಗೆ ಕೇಂದ್ರ ಸಚಿವ ಸಂಪುಟದಲ್ಲಿ ತೀರ್ಮಾನ ಆಗಿದ್ದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವರು ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಗೃಹ ಬಳಕೆಯ LPG ಸಿಲಿಂಡರ್ ಗೆ 200ರೂ. ಹಾಗೂ ಉಜ್ವಲ ಯೋಜನೆಯಡಿ ಸಿಲಿಂಡರ್ ಸೌಲಭ್ಯ ಪಡೆದಿರುವವರಿಗೆ ಈಗಾಗಲೇ ಸಿಗುತ್ತಿರುವ 200ರೂ. ಸಹಾಯಧನ ಜೊತೆಗೆ ಹೆಚ್ಚುವರಿ 200ರೂ. ಅಂದರೆ ಒಟ್ಟಾರೆಯಾಗಿ 400ರೂ. ಸಬ್ಸಿಡಿ ಸಿಗಲಿದೆ. ಈ ವಿಷಯದ ಕುರಿತು ಕೆಲವು ಮುಖ್ಯ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಕೃಷಿ ಇಲಾಖೆ ನೇಮಕಾತಿ, ವೇತನ 2,18,200 ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!
ಸಿಲಿಂಡರ್ ಸಬ್ಸಿಡಿ ಹಣ ಪಡೆಯಲು ಅರ್ಹತೆಗಳು:-
● ಒಂದು ವರ್ಷದಲ್ಲಿ 12 ಸಿಲಿಂಡರ್ ಬಳಸುವ ಕುಟುಂಬಗಳು 12 ಸಿಲಿಂಡರ್ ಗಳ ಖರೀದಿ ಮೇಲೆ ಈ ಸಬ್ಸಿಡಿ ಸೌಲಭ್ಯ ಪಡೆಯಬಹುದು.
● ಈ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು ತಮ್ಮ ಆಧಾರ್ ಸಂಖ್ಯೆಯನ್ನು LPG ಸಂಪರ್ಕದೊಂದಿಗೆ ಲಿಂಕ್ ಮಾಡಿರಬೇಕು.
● ನೀವು ಯಾವ ಏಜೆನ್ಸಿಯಿಂದ ಪ್ರತಿ ತಿಂಗಳು LPG ಖರೀದಿ ಮಾಡೀರುತ್ತಿರೋ ಆ ಕಚೇರಿಯಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ಕೊಟ್ಟು ಅಪ್ಡೇಟ್ ಮಾಡಿರಬೇಕು. ಈಗಾಗಲೇ ಇದನ್ನು ಪೂರ್ತಿ ಕಳಿಸಿದರೆ ಮತ್ತೊಮ್ಮೆ ಮಾಡಬೇಕಾದ ಅವಶ್ಯಕತೆ ಇಲ್ಲ.
LPG ಸಬ್ಸಿಡಿ ಹಣ ಬಂದಿರುವುದನ್ನು ಮೊಬೈಲ್ ಮೂಲಕ ಚೆಕ್ ಮಾಡುವ ವಿಧಾನ:-
● ಮೊದಲಿಗೆ https://www.mylpg.in ವೆಬ್ ಸೈಟ್ ಗೆ ಭೇಟಿ ಕೊಡಬೇಕು. ಎಲ್ಲಾ LPG ಕಂಪನಿಗಳ ಹೆಸರು ಕೂಡ ಇರುತ್ತದೆ. ಭರತ್ / ಇಂಡಿಯನ್ / HP ಮೂರರಲ್ಲಿ ನಿಮ್ಮ ಮನೆಗೆ ಬರುತ್ತಿರುವ ಸಿಲಿಂಡರ್ ಕಂಪನಿ ಯಾವುದು ಅದನ್ನು ಸೆಲೆಕ್ಟ್ ಮಾಡಿ.
● ನೀವೇನಾದರೂ ಹೊಸ ಗ್ರಾಹಕರಾಗಿದ್ದು ಇದೇ ಮೊದಲ ಬಾರಿಗೆ ವೆಬ್ಸೈಟ್ ಗೆ ಭೇಟಿ ಕೊಡುತ್ತಿದ್ದರೆ ನಿಮ್ಮ ಆಯ್ಕೆ ಭಾಷೆ ಕನ್ನಡ ಆಗಿದ್ದರೆ ಭಾಷೆಗಳು ಆಯ್ಕೆಯಲ್ಲಿ ಕನ್ನಡ ಎನ್ನುವುದನ್ನು ಸೆಲೆಕ್ಟ್ ಮಾಡಿ ನಂತರ ಎಲ್ಲ ಮಾಹಿತಿ ಕೂಡ ಕನ್ನಡದಲ್ಲಿ ಬರಲು ಶುರು ಆಗುತ್ತದೆ.
ಗೃಹಲಕ್ಷ್ಮಿ ಯೋಜನೆ 2000 ಹಣ ಇನ್ನು ಬಂದಿಲ್ವಾ.? ಆಗಿದ್ರೆ ತಕ್ಷಣ ಈ ಕೆಲಸ ಮಾಡಿ.! ಇಲ್ಲದಿದ್ರೆ ಹಣ ಬರಲ್ಲ.!
● ಬಳಿಕ ಹೊಸ ಬಳಕೆದಾರ ಎಂದು ಇರುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮಗೆ LPG ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮುಂದುವರೆಯಿರಿ.
ಈ ಪ್ರಕ್ರಿಯೆ ಮುಗಿದ ನಂತರ ನಿಮ್ಮ ಮೊಬೈಲ್ ಗೆ OTP ಸಂದೇಶ ಬರುತ್ತದೆ, Click here to generate OTP ಎನ್ನುವ ಆಯ್ಕೆ ಕಾಣುತ್ತದೆ, ಆ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ಮತ್ತೊಂದು OTP ಬರುತ್ತದೆ, ಅದನ್ನು ನಮೂದಿಸಿ ವೇರಿಫೈ ಮಾಡಿ ಮುಂದುವರೆಯಿರಿ.
● ಬಳಕೆದಾರರ ID ಮತ್ತು Password create ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡುವ ಮೂಲಕ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿ.
● ಈಗ ಅದೇ ಐಡಿ ಮತ್ತು ಪಾಸ್ವರ್ಡ್ ಬಳಸಿ ಯಶಸ್ವಿಯಾಗಿ log in ಆಗಿ
● ಲಾಗಿನ್ ಆದ ಬಳಿಕ ಮೆನು ಕ್ಲಿಕ್ ಮಾಡಿದರೆ ಸಿಲಿಂಡರ್ ಬುಕಿಂಗ್ ಇತಿಹಾಸವನ್ನು ನೋಡಿ ಎನ್ನುವ ಮತ್ತೊಂದು ಆಪ್ಷನ್ ಕಾಣುತ್ತದೆ.
● ಆ ಆಪ್ಷನ್ ನ್ನು ಕ್ಲಿಕ್ ಮಾಡಿದ ಕೂಡಲೇ ನೀವು ಯಾವಾಗ ಸಿಲಿಂಡರ್ ಬುಕ್ ಮಾಡಿದ್ದೀರಾ, ಆ ಬುಕಿಂಗ್ ನಿಮಗೆ ಎಷ್ಟು ಸಬ್ಸಿಡಿ ಹಣ ಬಂದಿದೆ, ಅದು ನಿಮ್ಮ ಯಾವ ಬ್ಯಾಂಕ್ ಖಾತೆಗೆ ಜಮೆ ಆಗಿದೆ ಎನ್ನುವ ಸಂಪೂರ್ಣ ಮಾಹಿತಿ ಬರುತ್ತದೆ.