ಗೃಹಲಕ್ಷ್ಮಿ ಅರ್ಜಿ ಹಾಕಿದ್ರೂ ಕೂಡ 2,000 ಹಣ ಬರದೆ ಇರಲು ಇದೇ ಮುಖ್ಯ ಕಾರಣ.! ಮೊದಲು ಈ ಕೆಲಸ ಬೇಗ ಮಾಡಿ.! ಇಲ್ಲದಿದ್ರೆ ಹಣ ಬರಲ್ಲ.!

ಕರ್ನಾಟಕದ ರಾಜ್ಯದ ಮಹಿಳೆಯರೆಲ್ಲರೂ ಮಹತ್ವಾಕಾಂಕ್ಷೆಯಿಂದ ಕಾಯುತ್ತಿದ್ದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ವರ್ಗಾವಣೆ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಜುಲೈ 19 ರಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಕೂಡ ಆರಂಭವಾಗಿತ್ತು, ಯೋಜನೆ ಹಣ ವರ್ಗಾವಣೆ ಆಗುವ ದಿನಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳು ಕೂಡ ಕಾಯುತ್ತಿದ್ದರು.

ಹಲವು ಬಾರಿ ಈ ದಿನಾಂಕ ಮುಂದೂಡಲ್ಪಟ್ಟರು ಅಂತಿಮವಾಗಿ ಆಗಸ್ಟ್ 30ರಂದು ಮೈಸೂರಿನಲ್ಲಿ (Mysore) ಮಹಾರಾಜ ಕಾಲೇಜು ಆವರಣದಲ್ಲಿನ ನಡೆದ ಬೃಹತ್ ಸಮಾರಂಭದಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ಲಕ್ಷಾಂತರ ಫಲಾನುಭವಿಗಳ ಸಮ್ಮುಖದಲ್ಲಿ DBT ಮೂಲಕ ಹಣ ವರ್ಗಾವಣೆ ಆಗುವ ಡಿಜಿಟಲ್ ಬಟನ್ ಪ್ರೆಸ್ (Digital button press) ಮಾಡುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ.

ಕೇಂದ್ರ ಸರ್ಕಾರದಿಂದ ಗ್ಯಾಸ್ ಸಬ್ಸಿಡಿ ಹಣ ₹ 200/- ಬಿಡುಗಡೆಯಾಗಿದೆ.! ಸಬ್ಸಿಡಿ ಹಣ ಜಮೆ ಆಗಿದಿಯೋ ಇಲ್ಲವೋ ನಿಮ್ಮ ಮೊಬೈಲ್ ಮೂಲಕವೇ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ

ಆ ತಕ್ಷಣ ಅನೇಕ ಫಲಾನುಭವಿಗಳು ಸರ್ಕಾರದ ವತಿಯಿಂದ ಗೃಹಲಕ್ಷ್ಮಿ ಯೋಜನೆಯ ಕುರಿತು SMS ಸಂದೇಶ ಪಡೆದಿದ್ದಾರೆ. ಅದರಲ್ಲಿ ಅಭಿನಂದನೆಗಳೊಂದಿಗೆ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆಯನ್ನು ಅನುಮೋದಿಸಲಾಗಿದೆ, ಪ್ರತಿ ತಿಂಗಳು 2000 ಸಹಾಯಧನವನ್ನು ನೋಂದಾಯಿಸಿಕೊಂಡ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದು ತಿಳಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಕಿ ಅಂಶದ ಪ್ರಕಾರ 1.28 ಕೋಟಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಎಲ್ಲರೂ ಈ SMS ಸಂದೇಶವನ್ನು ಪಡೆದಿಲ್ಲ. ನೆಟ್ವರ್ಕ್ ಸಮಸ್ಯೆ ಅಥವಾ ಸರ್ವರ್ ಸಮಸ್ಯೆಯಿಂದ ವಿಳಂಬವಾಗಿದ್ದರೆ ಸೆಪ್ಟೆಂಬರ್ 5ರ ಒಳಗೆ ಎಲ್ಲರಿಗೂ ಸಂದೇಶ ತಲುಪಲಿದೆ, ಸಂದೇಶ ಪಡೆದ ಪ್ರತಿಯೊಬ್ಬರು ಕೂಡ ತಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಕೂಡ ಪಡೆಯುತ್ತಾರೆ.

ಕೃಷಿ ಇಲಾಖೆ ನೇಮಕಾತಿ, ವೇತನ 2,18,200 ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

ಆದರೆ ಈ ಕುರಿತು, ಇಲಾಖೆ ಅಧಿಕಾರಿಗಳು ಒಂದು ಶಾ’ಕಿಂ’ಗ್ ನ್ಯೂಸ್ ಹಂಚಿಕೊಂಡಿದ್ದಾರೆ ಅದೇನೆಂದರೆ ಕೊಟ್ಟಿರುವ ದಾಖಲೆಗಳಲ್ಲಿ ಸಮಸ್ಯೆ ಆಗುವ ಕಾರಣ ಲಕ್ಷಾಂತರ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದರು ಅವರ ಖಾತೆಗೆ ಹಣ ಹಾಕಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಈ ಹಿಂದೆ ಅನ್ನ ಭಾಗ್ಯ ಯೋಜನೆಗೆ (Annabhagya Scheme amount) ಹೆಚ್ಚುವರಿ ಅಕ್ಕಿ ಹಣವನ್ನು ಪಡೆಯುವ ಸಮಯದಲ್ಲಿ ಕೂಡ ಇದೇ ರೀತಿ ಸಮಸ್ಯೆ ಆಗಿತ್ತು. ಸರ್ಕಾರವು ನೇರವಾಗಿ ಕುಟುಂಬದ ಮುಖ್ಯಸ್ಥೆಯ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತಿತ್ತು, ಆದರೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ (aadhar Seeding NPCI Mapping) ಆಗದ ಕಾರಣ ಅನೇಕರು ಹಣ ಪಡೆಯಲಾಗದೆ ವಂ’ಚಿ’ತರಾಗಿದ್ದಾರೆ.

ಅಕ್ಕಿ v/s ಗೋಧಿ ಡಯಾಬಿಟಿಸ್ ಇರುವವರಿಗೆ ಅನ್ನ ಅಥವಾ ಚಪಾತಿ ಇದರಲ್ಲಿ ಯಾವುದು ಉತ್ತಮ.? ಡಾಕ್ಟರ್ ಕೊಟ್ಟ ಸಲಹೆ ಏನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಈಗಾಗಲೇ ಅನ್ನ ಭಾಗ್ಯ ಯೋಜನೆ ಎರಡನೇ ಕಂತಿನ ಹಣ ಬಿಡುಗಡೆ ಆಗಿದ್ದರೂ ಅನೇಕರು ಸಮಸ್ಯೆಯನ್ನು ಸರಿಪಡಿಸಿಕೊಂಡಿಲ್ಲ. ಈಗ ಅದೇ ನಿಯಮ ಗೃಹಲಕ್ಷ್ಮಿ ಯೋಜನೆಗೂ ಅನ್ವಯವಾಗಲಿದೆ. ಈಗ ನಾವು ಹೇಳುವ ಈ ವಿಧಾನದಿಂದ ಚೆಕ್ ಮಾಡಿಕೊಂಡು ನಿಮಗೆ ಹಣ ಬರುತ್ತದೆಯೋ ಇಲ್ಲವೋ ಎನ್ನುವುದನ್ನು ದೃಢಪಡಿಸಿಕೊಳ್ಳಿ. ಸಮಸ್ಯೆಗಳಿದ್ದರೆ ನಾವು ನೀಡಿರುವ ಸಲಹೆಗಳನ್ನು ಪಾಲಿಸಿ ಅದನ್ನು ಪರಿಹರಿಸಿಕೊಳ್ಳಿ.

● ಮೊದಲಿಗೆ ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ (food department website) https://ahara.kar.nic.in/status2/status_of_dbt_new.aspx ಭೇಟಿ ಕೊಟ್ಟು ಅನ್ನಭಾಗ್ಯ ಯೋಜನೆಯ DBT Status ಚೆಕ್ ಮಾಡುವ ರೀತಿ ಚೆಕ್ ಮಾಡಿ.


● ನೀವು ಈಗಾಗಲೇ ಅನ್ನಭಾಗ್ಯ ಯೋಜನೆಯ ಜುಲೈ ತಿಂಗಳು ಅಥವಾ ಆಗಸ್ಟ್ ತಿಂಗಳ ಹಣವನ್ನು ಪಡೆದಿದ್ದರೆ ನಿಮ್ಮ ಅದೇ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಕೂಡ ವರ್ಗಾವಣೆ ಆಗುತ್ತದೆ.

● ಒಂದು ವೇಳೆ ಅದರಲ್ಲಿ ಆಧಾರ್ ಕಾರ್ಡ್ ಧೃಡೀಕರಣ ಪರಿಶೀಲನೆಗೆ, NPCI ಧೃಡಿಕರಣ ಪರಿಶೀಲನೆಗೆ ಕಳುಹಿಸಲಾಗಿತ್ತು, NPCI ಚೆಕ್ ವಿಫಲವಾಗಿದೆ ಎನ್ನುವ ಘೋಷಣೆ ಇದ್ದರೆ ಈ ಕಾರಣದಿಂದಾಗಿ ನೀವು ಅನ್ನಭಾಗ್ಯ ಯೋಜನೆ ಹಣವನ್ನು ಪಡೆಯಲು ಆಗಿರುವುದಿಲ್ಲ, ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು 2,000 ಹಣ ನಿಮಗೆ ಬರುವುದಿಲ್ಲ.

● ನೀವು ಮತ್ತೊಮ್ಮೆ UIDAI ಅಧಿಕೃತ ವೆಬ್ ಸೈಟ್ ಗೆ https://resident.uidai.gov.in/bank-mapper
ಹೋಗಿ ಅಲ್ಲಿ ಆಧಾರ್ ಬ್ಯಾಂಕ್ ಸೀಡಿಂಗ್ ಸ್ಟೇಟಸ್ (Aadhar Bank Seeding Status) ಚೆಕ್ ಮಾಡಬೇಕು.

ಅದರಲ್ಲಿ ಬ್ಯಾಂಕ್ ಸೀಡಿಂಗ್ ಸ್ಟೇಟಸ್ ಆಕ್ಟಿವ್ (Bank seeding status active) ಇದ್ದರೆ ನಿಮ್ಮ ಯಾವ ಖಾತೆ ಆಧಾರ್ ಗೆ ಲಿಂಕ್ ಆಗಿದೆ, ಯಾವ ದಿನಾಂಕದಂದು ಆಗಿದೆ ಎನ್ನುವ ಸಂಪೂರ್ಣ ವಿವರ ಬರುತ್ತದೆ.

ಒಂದು ವೇಳೆ ಆಧಾರ್ ಸೀಡಿಂಗ್ ಸ್ಟೇಟಸ್ ಅಲ್ಲಿ ಇನ್ ಆಕ್ಟಿವ್ (Inactive) ಎಂದು ಇದ್ದರೆ ನೀವು ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಗೆ ಅರ್ಜಿ ಫಾರಂ ಪಡೆದು ದಾಖಲೆಗಳನ್ನು ಕೊಟ್ಟು ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕು.
● ಅರ್ಜಿ ಸಲ್ಲಿಸಿದ 15 ರಿಂದ 20 ದಿನಗಳ ಒಳಗೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿರುತ್ತದೆ, ತದನಂತರ ನೀವು ಸರ್ಕಾರ ಯೋಜನೆಗಳ ಹಣವನ್ನು ಪಡೆಯುತ್ತೀರಿ.

Leave a Comment

%d bloggers like this: