ರೇಷನ್ ಕಾರ್ಡ್ (Ration card) ಈಗ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಅದರಲ್ಲೂ ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು (Guarantee Schemes) ಜಾರಿಗೆ ಮಾಡಿದ ಮೇಲೆ ರೇಷನ್ ಕಾರ್ಡ್ ಕಡ್ಡಾಯವಾಗಿದೆ. ಅನ್ನಭಾಗ್ಯ ಯೋಜನೆಯ (Annabhagya amount) ಪಡಿತರ ಹಾಗೂ ಹೆಚ್ಚುವರಿ ಅಕ್ಕಿಯ ಸಹಾಯಧನ ಪಡೆಯಲು ರೇಷನ್ ಕಾರ್ಡ್ ಬೇಕು.
ಅದೇ ರೀತಿ ಗೃಹಲಕ್ಷ್ಮಿ ಯೋಜನೆಗೆ (to apply Gruhalakshmi Scheme) ಅರ್ಜಿ ಸಲ್ಲಿಸಲು ಕುಟುಂಬದ ಮುಖ್ಯಸ್ಥೆಯ ಸ್ಥಾನದಲ್ಲಿ ಮಹಿಳೆಯ ಹೆಸರು ಇರಬೇಕು ಜೊತೆಗೆ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಮಾಹಿತಿಗಳಲ್ಲಿ ಇರುವಂತೆ ರೇಷನ್ ಕಾರ್ಡ್ ನಲ್ಲಿ ಹೆಸರು ಇರಬೇಕು. ಈ ಕಾರಣಕ್ಕಾಗಿ ಈಗ ತಮ್ಮ ರೇಷನ್ ಕಾರ್ಡ್ ನ ತಿದ್ದುಪಡಿ (ration card correction) ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಸಾರ್ವಜನಿಕರ ಕೋರಿಕೆ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು (Food and Civil Supply department) ಕಳೆದ ತಿಂಗಳು ತಿದ್ದುಪಡಿ ಮಾಡಿಕೊಳ್ಳಲು ಕಾಲಾವಕಾಶ ನೀಡಿತ್ತು. ಮೊದಲಿಗೆ ಆಗಸ್ಟ್ 18 ರಿಂದ 21ನೇ ತಾರೀಖಿನವರೆಗೆ ನಾಲ್ಕು ದಿನಗಳ ಕಾಲ ಅವಕಾಶ ನೀಡಲಾಗಿತ್ತು, ಆದರೆ ಈ ಸಮಯದಲ್ಲಿ ಸರ್ವರ್ ಸಮಸ್ಯೆ ಎದುರಾದ ಕಾರಣ ಆ ಮಧ್ಯೆ ರಜಾದಿನಗಳು ಇದ್ದ ಕಾರಣ ಮತ್ತು ದಿನದಲ್ಲಿ ನಾಲ್ಕು ಗಂಟೆಗಳ ಅವಕಾಶ ಮಾತ್ರ ಇದ್ದ ಕಾರಣ ಎಲ್ಲರಿಗೂ ತಮ್ಮ ಸಮಸ್ಯೆ ಪರಿಹಾರ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.
ಇದರಿಂದ ಸಾರ್ವಜನಿಕರು ಆ’ಕ್ರೋ’ಶಗೊಂಡಿದ್ದರು. ಇದೇ ಕಾರಣಕ್ಕಾಗಿ ಮತ್ತೊಮ್ಮೆ ಆಗಸ್ಟ್ 25ನೇ ತಾರೀಕು ಮತ್ತೊಂದು ದಿನದ ಅವಕಾಶ ನೀಡಿದರು, ಅನೇಕರ ಸಮಸ್ಯೆ ಬಗೆಹರಿದಿಲ್ಲ. ಕೊನೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಾರ್ವಜನಿಕ ವಿತರಣೆ ಹೆಚ್ಚುವರಿ ನಿರ್ದೇಶಕರಾದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ (FACSD officer Gnanendra Kumar Gangvar) ಅವರು ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶ ನೀಡುವುದಾಗಿ ಸಾರ್ವಜನಿಕರಿಗೆ ಮಾಹಿತಿ ಕೊಟ್ಟಿದ್ದರು.
ಆ ಪ್ರಕಾರ ಈಗ ಮತ್ತೊಮ್ಮೆ ಸೆಪ್ಟೆಂಬರ್ 1ನೇ ತಾರೀಖಿನಿಂದ ಸೆಪ್ಟೆಂಬರ್ 10ನೇ ತಾರೀಖಿನವರೆಗೆ ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ತನಕ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಸಿಕೊಳ್ಳುವವರಿಗೆ ಅವಕಾಶ ಕಲ್ಪಿಸಲಾಗಿದೆ. ಯಾವೆಲ್ಲಾ ತಿದ್ದುಪಡಿ ಮಾಡಿಸಿಕೊಳ್ಳಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಏನೆಲ್ಲಾ ದಾಖಲೆಗಳು ಬೇಕು? ಎನ್ನುವುದನ್ನು ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.
ಈ ತಿದ್ದುಪಡಿಗಳಿಗೆ ಅವಕಾಶ:-
● ಹೊಸ ಸದಸ್ಯರ ಸೇರ್ಪಡೆ
● ಹಳೆ ಸದಸ್ಯರ ಹೆಸರನ್ನು ತೆಗೆದುಹಾಕುವುದು
● ಹೆಸರು ಮತ್ತು ಇತರೆ ಮಾಹಿತಿಯಲ್ಲಿ ತಿದ್ದುಪಡಿ ಮಾಡುವುದು
● ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಹೆಸರು ಬದಲಾವಣೆ
● ನ್ಯಾಯಬೆಲೆ ಅಂಗಡಿ ಬದಲಾಯಿಸಲು ಅವಕಾಶ.
ಬೇಕಾಗುವ ದಾಖಲೆಗಳು:-
● ಪ್ರಸ್ತುತ ಇರುವ ರೇಷನ್ ಕಾರ್ಡ್
● ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
● ಹೊಸ ಸದಸ್ಯರ ಸೇರ್ಪಡೆಗೆ ಅವರ ಆಧಾರ್ ಕಾರ್ಡ್ ಹಾಗೂ ಬಯೋಮೆಟ್ರಿಕ್
● 5 ವರ್ಷದ ಒಳಗಿರುವ ಮಕ್ಕಳಾದರೆ ಅವರ ಜನನ ಪ್ರಮಾಣ ಪತ್ರ
● ಕುಟುಂಬದಲ್ಲಿ ಒಬ್ಬ ಸದಸ್ಯರ ಬಯೋಮೆಟ್ರಿಕ್ ಮತ್ತು ಮೊಬೈಲ್ ಸಂಖ್ಯೆ
● ಸದಸ್ಯರ ಹೆಸರು ತೆಗೆದು ಹಾಕಬೇಕಿದ್ದರೆ ಅವರ ಮರಣ ಪ್ರಮಾಣ ಪತ್ರ
ಎಲ್ಲಿ ತಿದ್ದುಪಡಿ ಮಾಡಿಸಬಹುದು:–
● ಸರ್ಕಾರವು ಪ್ರೈವೇಟ್ ಸೆಕ್ಟರ್ ನಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಿಲ್ಲ.
● ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ಹತ್ತಿರದಲ್ಲಿರುವ CSC ಕೇಂದ್ರಗಳಿಗೆ ಅಥವಾ ಹತ್ತಿರದಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ದಾಖಲೆಗಳನ್ನು ನೀಡಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.
● ಆಹಾರ ಇಲಾಖೆಯ ವೆಬ್ ಸೈಟ್ ನಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ,
https://ahara.kar.nic/in/rcamend/ ಇದನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ನೀವು ತಿದ್ದುಪಡಿ ಮಾಡುವ ಪೇಜ್ ಗೆ ಹೋಗುತ್ತೀರಿ. ಬಳಿಕ ಅಲ್ಲಿರುವ ಆಪ್ಶನ್ ಗಳನ್ನು ಸೂಚನೆಗನುಸಾರವಾಗಿ ಆಯ್ಕೆ ಮಾಡಿ ಮುಂದುವರೆದು ಪ್ರಕ್ರಿಯೆ ಪೂರ್ತಿಗೊಳಿಸಬಹುದು.