LIC (Life Insurance Corporation of India) ಭಾರತದಲ್ಲಿ ಒಂದು ನಂಬಿಕಾರ್ಹ ವಿಮಾಸಂಸ್ಥೆಯಾಗಿದೆ. ಭಾರತದ ಕಟ್ಟ ಕಡೆಯ ಹಳ್ಳಿಯ ಕುಟುಂಬಕ್ಕೂ ಕೂಡ ಪರಿಚಿತರವಿರುವ LIC ಸಂಸ್ಥೆ ತನ್ನ ಯೋಜನೆಗಳ ಮೂಲಕವಾಗಿ ಈ ಮಟ್ಟದ ಜಗದ್ವಿಖ್ಯಾತಿ ಪಡೆದುಕೊಂಡಿದೆ. LIC ಯಲ್ಲಿ ಕಡಿಮೆ ಮೊತ್ತದ ಹಣವನ್ನು ಹೂಡಿಕೆ ಮಾಡಿ ಹೆಚ್ಚು ಲಾಭವನ್ನು ಪಡೆಯಬಹುದು ಎನ್ನುವುದು ಜನಸಾಮಾನ್ಯರ ಅಚ್ಚುಮೆಚ್ಚಿನ ವಿಷಯ.
ಅದಕ್ಕೆ ತಕ್ಕ ಹಾಗೆ LIC ಕೂಡ ತನ್ನ ಗ್ರಾಹಕರಿಗೆ ನೆಚ್ಚಿನ ಯೋಜನೆಗಳನ್ನು ಜಾರಿಗೆ ತಂದು ಜನಸಾಮಾನ್ಯರ ಬಾಳಿಗೆ ಬೆಳಕಾಗಿದೆ. LIC ಪಾಲಿಸಿಯ ಮೂಲಕ ಅನೇಕರ ಜೀವನವೇ ಬದಲಾಗಿದೆ ಎಂದರು ಕೂಡ ತಪ್ಪಾಗಲಾರದು. ಯಾಕೆಂದರೆ, ಇದೊಂದು ದೀರ್ಘಾವಧಿಯ ಪ್ಲಾನ್ ಆಗಿರುವುದರಿಂದ ಜನರು ತಮ್ಮ ಕನಸಿನ ಯೋಜನೆಗಳಿಗೆ ಕಡಿಮೆ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತಾ ಭವಿಷ್ಯದಲ್ಲಿ ತಮ್ಮ ಕನಸಿಗೆ ಬೇಕಾದಷ್ಟು ದೊಡ್ಡಮಟ್ಟದ ಹಣವನ್ನು ಪಡೆಯುತ್ತಾರೆ.
LIC ಯು ಕಾಲಕಾಲಕ್ಕೆ ಸರ್ಕಾರ ಹಾಗೂ ಸರ್ಕಾರರೇತರ ವಾಗಿರುವ ಸಂಸ್ಥೆಗಳು ನೀಡುವ ಬಹುತೇಕ ಎಲ್ಲಾ ರೀತಿ ಯೋಜನೆಗಳ ಅನುಕೂಲತೆಯನ್ನು ಕೂಡ ನೀಡುತ್ತಿದ್ದು ಈಗ ಅದೇ ರೀತಿಯ ಮತ್ತೊಂದು ಹೊಸ ಯೋಜನೆಯನ್ನು ಪರಿಚಯಿಸುತ್ತಿದೆ. ಈ ಹೊಸ ಯೋಜನೆ ವಿಶೇಷತೆ ಏನೆಂದರೆ ಇದರಲ್ಲಿ ನೀವು ಕನಿಷ್ಠ 2,000 ರೂ. ಕಂತಿನ ರೂಪದಲ್ಲಿ ಪಾವತಿ ಮಾಡುವ ಮೂಲಕ ಭವಿಷ್ಯದಲ್ಲಿ 43 ಲಕ್ಷದವರೆಗೂ ಕೂಡ ರಿಟರ್ನ್ಸ್ ಪಡೆಯಬಹುದು.
ಸದ್ಯಕ್ಕೆ ದೇಶದಲ್ಲಿ LIC ಯ ಎಲ್ಲಾ ಯೋಜನೆಗಳಿಗಿಂತಲೂ ಅತಿ ಹೆಚ್ಚು ಚರ್ಚೆಯಾಗುತ್ತಿರುವ ಈ ಯೋಜನೆ ಬಗ್ಗೆ ಈ ಅಂಕಣದಲ್ಲಿ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಈ ಯೋಜನೆಯ ಹೆಸರು LIC ನ್ಯೂ ಎಂಡೋಮೆಂಟ್ ಪ್ಲಾನ್ (LIC New Endoment plan). ಉಳಿದ ಎಲ್ಲಾ LIC ಯೋಜನೆಗಳಿಗೂ ಇರುವ ಸಾಮಾನ್ಯ ನಿಯಮಗಳು ಈ ಯೋಜನೆಗೆ ಕೂಡ ಅನ್ವಯವಾಗುತ್ತದೆ.
HSRP ನಂಬರ್ ಪ್ಲೇಟ್ ಹಾಕಿಸದಿದ್ದರೆ ಬೀಳಲಿದೆ ದಂಡ.! ವಾಹನ ಸಾವರರಿಗೆ ಹೊಸ ರೂಲ್ಸ್ ಜಾರಿ.!
ಇದರಲ್ಲಿ ಇರುವ ಕೆಲ ಪ್ರಮುಖ ಕಂಡಿಷನ್ ಗಳ ಬಗ್ಗೆ ಹೇಳುವುದಾದರೆ 8 ವರ್ಷದ ವಯಸ್ಸಿನಿಂದ 55 ವರ್ಷದ ಒಳಗಿನವರು ಮಾತ್ರ ಈ ಯೋಜನೆಯನ್ನು ಖರೀದಿಸಬಹುದು. ಮತ್ತು ಕನಿಷ್ಠ ವಿಮೆಯಾಗಿ ಒಂದು ಲಕ್ಷದ ಮೊತ್ತವನ್ನಾದರೂ ಕೂಡ ನೀವು ಸೆಲೆಕ್ಟ್ ಮಾಡಲೇಬೇಕು. ಉದಾಹರಣೆಯೊಂದಿಗೆ ಈ ಯೋಜನೆಯ ಬಗ್ಗೆ ವಿವರಿಸುವುದಾದರೆ ಒಬ್ಬ ವ್ಯಕ್ತಿಯು 25 ನೇ ವಯಸ್ಸಿನಲ್ಲಿ ಈ ಯೋಜನೆ ಖರೀದಿಸಿದ್ದಾರೆ ಎಂದಿಟ್ಟುಕೊಳ್ಳೋಣ.
ಈ ಪಾಲಿಸಿ ಅವಧಿ 35 ವರ್ಷಗಳು ಮತ್ತು ವಿಮಾ ಮೊತ್ತವನ್ನು 9 ಲಕ್ಷ ಆರಿಸಿದ್ದೀರಿ ಎಂದುಕೊಳ್ಳೋಣ. ಆಗ ನಿಮ್ಮ ಮೊದಲ ವರ್ಷದ ಮಾಸಿಕ ಪ್ರೀಮಿಯಂ 2046 ರೂ. ಆಗಿರುತ್ತದೆ. ಎರಡನೇ ವರ್ಷದಿಂದ, ಒಬ್ಬ ವ್ಯಕ್ತಿಯು ಈ ಪಾಲಿಸಿಗಾಗಿ ಪ್ರತಿ ತಿಂಗಳು 2002 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. 9 ಲಕ್ಷ ರೂ.ಗಳ ಒಬ್ಬ ವ್ಯಕ್ತಿ 35 ವರ್ಷಗಳವರೆಗೆ ಒಟ್ಟು 8,23,052 ಪಾವತಿಸಬೇಕಾಗುತ್ತದೆ ಅದರ ರಿಟರ್ನ್ಸ್ನಲ್ಲಿ, 35 ವರ್ಷಗಳ ನಂತರ 43,87,500 ರೂ. ಸಿಗುತ್ತದೆ.
ಆಧಾರ್ ಸೀಡಿಂಗ್ ಆಗಿದ್ರೂ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗಿಲ್ಲವೇ? ಹಣ ಬಂದೇ ಬರುತ್ತಿದೆ ಹೀಗೆ ಮಾಡಿ.!
ವ್ಯಕ್ತಿಯು 35 ವರ್ಷಗಳವರೆಗೆ ಮಾಸಿಕ 2,000 ರೂ ಪ್ರೀಮಿಯಂ ಪಾವತಿಸುವ ಮೂಲಕ 43 ಲಕ್ಷ ರೂ.ಗಿಂತ ಹೆಚ್ಚಿನ ಆದಾಯವನ್ನು ಪಡೆಯಬಹುದು. ಈ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ LIC ಅತಿ ದೊಡ್ಡ ವೆಬ್ಸೈಟ್ಗೆ ಭೇಟಿ ಕೊಟ್ಟು ಮಾಹಿತಿ ಪಡೆಯಬಹುದು ಅಥವಾ ನಿಮ್ಮ ಪರಿಚಯದ LIC ಏಜೆಂಟ್ ಅಥವಾ LIC ಶಾಖೆಗೆ ಭೇಟಿ ನೀಡಿ.