HSRP ನಂಬರ್ ಪ್ಲೇಟ್ ಹಾಕಿಸದಿದ್ದರೆ ಬೀಳಲಿದೆ ದಂಡ.! ವಾಹನ ಸಾವರರಿಗೆ ಹೊಸ ರೂಲ್ಸ್ ಜಾರಿ.!

 

 

2019ರ ಏಪ್ರಿಲ್ 1ರ ನಂತರ ಖರೀದಿಸಿರುವ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಸಹಜವಾಗಿ HSRP ನಂಬರ್ ಪ್ಲೇಟ್ ಇರುತ್ತದೆ. ಆದರೆ ಅದಕ್ಕೂ ಮುನ್ನ ನೋಂದಾಯಿಸಲಾಗಿರುವ ಎಲ್ಲ ಮಾದರಿಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳ (High Security Registration plate – HSRP) ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.

HSRP ನಂಬರ್ ಪ್ಲೇಟ್ ವಿಶೇಷತೆಗಳೇನು ಎಂದು ನೋಡುವುದಾದರೆ ಈ ಪ್ಲೇಟ್ ಅನ್ನು ಕ್ರೋಮಿಯಂ (Cromium) ಲೋಹದಿಂದ ತಯಾರಿಸಲಾಗಿರುತ್ತದೆ ಹಾಗೂ ಸಂಖ್ಯೆಯನ್ನು ಲೇಸರ್‌ (Laser letter) ತಂತ್ರಜ್ಞಾನದಲ್ಲಿ ಮುದ್ರಿಸಿರುವುದರಿಂದ ಅಕ್ಷರಗಳನ್ನು ಅಳಿಸಲು ಆಗುವುದಿಲ್ಲ. ಅಕ್ಷರಗಳು ಉಬ್ಬಿಕೊಂಡಂತೆ ಇರುತ್ತವೆ. ಪ್ಲೇಟ್ ನ ಎಡಭಾಗದಲ್ಲಿ ನೀಲಿ ಬಣ್ಣದ ಅಶೋಕ ಚಕ್ರ (Ashoka chakra seal) ಮುದ್ರೆಯು ಸಹ ಇರುತ್ತದೆ.

ಆಧಾರ್ ಸೀಡಿಂಗ್ ಆಗಿದ್ರೂ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗಿಲ್ಲವೇ? ಹಣ ಬಂದೇ ಬರುತ್ತಿದೆ ಹೀಗೆ ಮಾಡಿ.!

ಇದರಲ್ಲಿ ವಾಹನದ ಎಂಜಿನ್‌ ಸಂಖ್ಯೆ, ಚಾಸಿಸ್‌ ಮಾಹಿತಿ ಇರುತ್ತದೆ. 20mm ಉದ್ದ ಅಗಲದಲ್ಲಿ ಇದ್ದು ನೋಡಲು ಕೊಡ ಬಹಳ ಆಕರ್ಷಕವಾಗಿರುತ್ತದೆ. ವಾಹನದ ಹಿಂಬದಿ ಮತ್ತು ಮುಂಬದಿಯಲ್ಲಿ ಇದನ್ನು ಅಳವಡಿಸಲಾಗುತ್ತದೆ. ಈ ಮಾದರಿಯ ನಂಬರ್‌ ಪ್ಲೇಟ್‌ಗಳು ಹೆಚ್ಚು ಸುರಕ್ಷಿತವಾಗಿರುತ್ತವೆ. ಪ್ರತಿ ವಾಹನದ HSRP ಗೂ ಪ್ರತ್ಯೇಕ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುತ್ತದೆ. ಇದನ್ನು ಸಾರಿಗೆ ಇಲಾಖೆಯಲ್ಲಿ (transport department) ನೋಂದಣಿ ಮಾಡಲಾಗಿರುತ್ತದೆ.

ಕೇಂದ್ರಿಯ ಡಾಟಾ ಬೇಸ್ ನಲ್ಲೂ (Central database) ಕೂಡ ಈ ಮಾಹಿತಿ ಅಪ್ಲೋಡ್ ಆಗಿರುತ್ತದೆ. ಹಳೆಯ ಕಾರುಗಳನ್ನು ಕೊಳ್ಳುವಾಗ ಈ ಸಂಖ್ಯೆಯನ್ನು ಪರಿಶೀಲಿಸಿದರೆ, ಅದು ಅದೇ ವಾಹನದ್ದೇ ಅಥವಾ ಇಲ್ಲವೇ ಎಂಬುದು ಗೊತ್ತಾಗುತ್ತದೆ. ಕದ್ದ ವಾಹನದ ನಂಬರ್‌ ಪ್ಲೇಟ್‌ ಬದಲಿಸಿ, ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಕಳ್ಳತನಕ್ಕೆ ಕಡಿವಾಣ ಬೀಳಲಿದೆ. ಮುದ್ರಿತ ಅಕ್ಷರಗಳು ಗಾಜಿಗೆ ಅಂಟಿಕೊಂಡಿರುತ್ತವೆ ಹಾಗಾಗಿ ಸ್ಟಿಕ್ಕರ್‌ ಅನ್ನು ಒಮ್ಮೆ ತೆಗೆದರೆ ಮತ್ತೆ ಅಂಟಿಸಲಾಗದು.

SBI ನಲ್ಲಿ 2000 ಕ್ಕೂ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!

ಹಾಗಾಗಿ ನಿಮ್ಮ ಗಾಡಿಯ ನಂಬರ್ ಪ್ಲೇಟ್ ತೆಗೆದು ಹಾಕಿ ಅಪರಾಧಿ ಕೃತ್ಯಗಳಿಗೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಇದರೊಂದಿಗೆ ಸುರಕ್ಷಿತ ಜೊತೆ ರಾಷ್ಟ್ರೀಯ ಭದ್ರತೆ ವಿಷಯದಲ್ಲೂ ಕೂಡ ಅನುಕೂಲವಾಗಲಿದೆ. ಆದ್ದರಿಂದ ಹಳೆಯ ವಾಹನ ಮಾಲೀಕರು (old vehicles) ಕೂಡ ತಪ್ಪದೆ ಇದನ್ನು ಬದಲಾಯಿಸುವಂತೆ ಸರ್ಕಾರ ಸೂಚಿಸಿದೆ. ಒಂದು ವೇಳೆ ನೀವು ನಿಮ್ಮ ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಬದಲಾಯಿಸಿದರೆ ಕಾರು ಮಾರಾಟ ಮಾಡುವ ಸಂದರ್ಭದಲ್ಲಿ ಮಾಲಿಕತ್ವದ ಬದಲಾವಣೆ ಸಾಧ್ಯವಾಗುವುದಿಲ್ಲ.

ವಿಳಾಸ ಬದಲಾಯಿಸಲು ಸಾಧ್ಯವಿಲ್ಲ, ನಕಲಿ RC ಕೂಡ ಸಿಗುವುದಿಲ್ಲ ವಿಮೆ ಅಪ್ಡೇಟ್ ಮಾಡಲು ಆಗುವುದಿಲ್ಲ, ವಾಹನ ಸಾಮರ್ಥ್ಯ ಅನುಮೋದನೆ ಕೂಡ ಆಗುವುದಿಲ್ಲ. ಹಾಗಾಗಿ ಸರ್ಕಾರ 2019 ಏಪ್ರಿಲ್ 1ರ ಹಿಂದೆ ವಾಹನ ಖರೀದಿ ಮಾಡಿರುವ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ಮಾಲೀಕರಿಗೆ ಕಡ್ಡಾಯವಾಗಿ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎಂದು ಆಜ್ಞೆ ಮಾಡಿದೆ ಇಲ್ಲವಾದಲ್ಲಿ ನೀವು ದಂಡ ಕಟ್ಟಬೇಕಾಗುತ್ತದೆ.

ಇನ್ಮುಂದೆ ATM ಕಾರ್ಡ್ ಇಲ್ಲದೆ ಕೇವಲ UPI ಬಳಸಿ ATM ನಿಂದ ಕ್ಯಾಶ್ ಪಡೆಯಬಹುದು.!

ಈಗ ದೇಶದ 18 ರಾಜ್ಯಗಳಲ್ಲಿ HSRP ಕಡ್ಡಾಯವಾಗಿದೆ. ಕರ್ನಾಟಕದಲ್ಲಿ ಕೂಡ ಕಳೆದ ಆಗಸ್ಟ್ 18 ರಿಂದ HSRP ನಂಬರ್ ಪ್ಲೇಟ್ ಕಡ್ಡಾಯವಾಗಿದೆ. ನವೆಂಬರ್ 17, 2023ರ ವರೆಗೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ. ಅಷ್ಟರ ಒಳಗಡೆ ನಿಮ್ಮ ವಾಹನದ ಹಳೆಯ ಪ್ಲೇಟ್ ಬದಲಾವಣೆ ಮಾಡಿಕೊಳ್ಳಿ. ಇಲ್ಲವಾದಲ್ಲಿ ನಿಮಗೆ ಕನಿಷ್ಠ 500 ರಿಂದ 1000 ದವರೆಗೆ ದಂಡ ಬಿಡಲಿದೆ.

www.siam.in ವೆಬ್ ಸೈಟ್ ಗೆ ಭೇಟಿ ಕೊಡುವ ಮೂಲಕ ಮೊದಲು ನಿಮ್ಮ ವಾಹನದ ಮಾಹಿತಿಯನ್ನು ಅಪ್ಲೋಡ್ ಮಾಡಿ HSRP ಪ್ಲೇಟ್ ಹಾಕಿಸಿಕೊಳ್ಳಲು ನೋಂದಣಿ ಮಾಡಿಕೊಳ್ಳಬೇಕು. ನಂತರ ನಿಮ್ಮ ವಾಹನ ಖರೀದಿ ಮಾಡಿದ ಶೋರೂಮ್ ಅಥವಾ ಡೀಲರ್ ಬಳಿ ಹೋಗಿ HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳಬಹುದು. ಇದನ್ನು ಅಳವಡಿಸಿಕೊಳ್ಳಲು ದ್ವಿಚಕ್ರ ಮತ್ತು   ಚಕ್ರದ ವಾಹನಕ್ಕೆ 400 ವರೆಗೆ ಖರ್ಚು ತಗಲಿದೆ.

Leave a Comment

%d bloggers like this: