Skip to content

Rishi The Power

Just another WordPress site

  • Useful Information
  • Government Schemes
  • Health Tips
  • Job News
  • Law Rights
  • Home
  • About Us
  • Contact Us
  • Privacy Policy
  • Terms and Conditions
  • Toggle search form

ಇನ್ಮುಂದೆ ATM ಕಾರ್ಡ್ ಇಲ್ಲದೆ ಕೇವಲ UPI ಬಳಸಿ ATM ನಿಂದ ಕ್ಯಾಶ್ ಪಡೆಯಬಹುದು.!

Posted on September 11, 2023September 11, 2023 By Rishi The Power No Comments on ಇನ್ಮುಂದೆ ATM ಕಾರ್ಡ್ ಇಲ್ಲದೆ ಕೇವಲ UPI ಬಳಸಿ ATM ನಿಂದ ಕ್ಯಾಶ್ ಪಡೆಯಬಹುದು.!

 

WhatsApp Group Join Now
Telegram Group Join Now

ಕಳೆದ ಒಂದು ದಶಕದಿಂದ ATM ಕಾರ್ಡ್ ಗಳು ನಮ್ಮೆಲ್ಲರ ಜೀವನದ ಬಹು ಮುಖ್ಯ ಭಾಗವಾಗಿ ಹೋಗಿದೆ. ATM ಕಾರ್ಡ್ ಗಳ ಮೂಲಕ ನಾವು ಸರಾಗವಾಗಿ ನಮ್ಮ ಖಾತೆಗಳಲ್ಲಿರುವ ಹಣವನ್ನು ವಿಥ್ ಡ್ರಾ ಮಾಡಬಹುದು. ಹಣವನ್ನು ಜೇಬಿನಲ್ಲಿ ತುಂಬಿಕೊಂಡು ಓಡಾಡಬೇಕಾಗಿದ್ದ ಪರಿಸ್ಥಿತಿಯನ್ನು ATM ಕಾರ್ಡ್ ತಪ್ಪಿಸಿ ನಮ್ಮೆಲ್ಲರ ಮನಸ್ಸಿನಲ್ಲಿ ಬಹುದೊಡ್ಡ ಸ್ಥಾನ ಗಿಟ್ಟಿಸಿಕೊಂಡಿದೆ.

ಈಗ ನಿಧಾನವಾಗಿ ದೇಶ ಕ್ಯಾಸ್ಟ್ ಲೆಸ್ (Cashless) ವ್ಯವಹಾರಕ್ಕೆ ಹೊಂದಿಕೊಳ್ಳುತ್ತಿದೆ. ಸಣ್ಣದಿನಸಿ ಅಂಗಡಿಯಿಂದ ಹಿಡಿದು ಹೆಸರಾಂತ ಶಾಪಿಂಗ್ ಕಾಂಪ್ಲೆಕ್ಸ್ ಗಳಲ್ಲಿ ಕೂಡ ನಾವು UPI ಆಧಾರಿತ ಆಪ್ ಗಳ ಮೂಲಕ ಹಣ ವಹಿವಾಟು ಮಾಡಬಹುದು. ATM ನಂತೆಯ UPI ಕೂಡ ಬಹುದೊಡ್ಡ ಪಾತ್ರ ವಹಿಸುತ್ತಿದ್ದು ಹೆಚ್ಚಿನ ವೈಶಿಷ್ಟ್ಯದ ಮೂಲಕ ಇನ್ನಷ್ಟು ಹತ್ತಿರವಾಗಿದೆ ಎಂದರೂ ತಪ್ಪಾಗಲಾರದು. ಈಗ ಇದಕ್ಕೆ ಮತ್ತೊಂದು ಗರಿ ಏರುತ್ತಿದೆ.

LIC ಇಂದ ಗ್ರಾಹಕರಿಗೆ ಬಂಪರ್ ಆಫರ್, ಲ್ಯಾಪ್ಸ್ ಆದ LIC ನವೀಕರಣಕ್ಕೆ ಸುವರ್ಣಾವಕಾಶ.!

ಇನ್ನು ಮುಂದೆ ATM ಮಿಷನ್ ಗಳಲ್ಲಿ ATM ಕಾರ್ಡ್ ಇಲ್ಲದೆ ನಾವು UPI ಆಪ್ ಗಳಿಂದ QR Code ಸ್ಕ್ಯಾನ್ ಮಾಡುವ ಮೂಲಕವೇ ಹಣವನ್ನು ಪಡೆಯಬಹುದು.ಮಂಗಳವಾರ ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್‌ಟೆಕ್ (FinTech) ಫೆಸ್ಟ್‌ನಲ್ಲಿ ATM ಕಾರ್ಡ್ ಬಳಕೆ ಮಾಡದೆ ಹಣವನ್ನು ಡ್ರಾ ಮಾಡಬಹುದಾದ ಯುಪಿಐ ಎಟಿಎಂ (UPI ATM) ಅವಕಾಶದ ಬಗ್ಗೆ ಮೊದಲ ಬಾರಿಗೆ ಪ್ರದರ್ಶನ ಮಾಡಲಾಯಿತು.

ಭಾರತದ ಮೊದಲ UPI ATM ಇದಾಗಿದ್ದು, ಈ ವಿಶೇಷ ATM ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (National Corporation of India) ಮತ್ತು NCR ಕಾರ್ಪೊರೇಷನ್ ಅಭಿವೃದ್ಧಿ ಪಡಿಸಿ ನಡೆಸುತ್ತಿದೆ. ಫಿನಾಟೆಕ್ ಖ್ಯಾತಿಯ ರವಿಸುತಂಜನಿಯವರು (Ravisuthanjani) ಯವರು ಕಾರ್ಯಕ್ರಮದಲ್ಲಿ UPI ಆಪ್ ಮೂಲಕ ATM ಮಿಷನ್ ನಲ್ಲಿ ಹಣ ಪಡೆಯಬಹುದು ಎನ್ನುವುದನ್ನು ತೋರಿಸಿದ್ದಾರೆ.

ಸ್ಟೇ ಆರ್ಡರ್ ಅಂದರೇನು.? ಸ್ಟೇ ಆರ್ಡರ್ ತರಲು ಬೇಕಾದ ದಾಖಲೆಗಳನು.? ಸ್ಟೇ ಆರ್ಡರ್ ಹಾಗೂ ಇಂಜಕ್ಷನ್ ಆರ್ಡರ್ ನಡುವಿನ ವ್ಯತ್ಯಾಸವೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ರವಿಸುತಂಜನಿಯವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಗುರುವಾರ ಕೇಂದ್ರ ಸಚಿವ ಪೀಯೂಷ್ ಗೋಯಲ್ (Piyush Goyal) ತಮ್ಮ ಎಕ್ಸ್‌ ಪೇಜ್ ನಲ್ಲಿ ಇದಕ್ಕೆ ಸಂಬಂಧಪಟ್ಟ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಏನಿದೆ ಎಂದು ನೋಡುವುದಾದರೆ ರವಿಸುತಂಜನಿ ಮೊದಲು ATM ಸ್ಕ್ರೀನ್ ಮೇಲೆ ತೋರಿಸಿರುವ UPI ಕಾರ್ಡ್‌ಲೆಸ್ ಕ್ಯಾಶ್ ಆಯ್ಕೆಯ ಮೇಲೆ ಕ್ಲಿಕ್ ಮಾಡುತ್ತಾರೆ.

ನಂತರ ತಾವು ಪಡೆಯಲು ಬಯಸುವ ಹಣದ ಮೊತ್ತವನ್ನು ನಮೂದಿಸುತ್ತಾರೆ. ಈ ವೇಳೆ ATM ಸ್ಕ್ರೀನ್‌ ಮೇಲೆಯೇ QR Code ಗೋಚರಿಸುತ್ತದೆ. ಬಳಿಕ ಅವರು ಭೀಮ್ ಆ್ಯಪ್ ಅನ್ನು ಬಳಸಿಕೊಂಡು ಸ್ಕ್ಯಾನ್ ಮಾಡುತ್ತಾರೆ. ನಂತರ ತಮ್ಮ UPI ಪಿನ್ ಎಂಟ್ರಿ ಮಾಡಿ ಹಣ ಪಡೆಯುತ್ತಾರೆ. UPI ATM ನ್ನು ಸಾಮಾನ್ಯ ATM ನಂತೆಯೇ ಬಳಸಬಹುದು ಆದರೆ ಒಂದು ದಿನಕ್ಕೆ ಇಂತಿಷ್ಟೇ ಮಿತಿ ಎಂದು ನಿಗದಿ ಪಡಿಸಿ ಉಚಿತ ಬಳಕೆಯ ಮಿತಿಯನ್ನು ಮೀರಿ ಹಣ ಪಡೆದುಕೊಂಡಾಗ ಶುಲ್ಕ ಹೇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಕೇವಲ 4 ಲಕ್ಷಕ್ಕೆ ಮಾರುತಿ ಸುಜುಕಿ ಹೊಸ ಕಾರು ಬಿಡುಗಡೆ.! ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಕಾರ್ ಇದರಲ್ಲಿ ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ.?

ಸದ್ ಭೀಮ್ UPI ಅಪ್ಲಿಕೇಶನ್‌ನಲ್ಲಿ (Bhim UPI) ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಗೂಗಲ್ ಪೇ, ಫೋನ್ ಪೇ ಹಾಗೂ ಪೇಟಿಎಂ ಇತರ ಅಪ್ಲಿಕೇಶನ್‌ಗಳಲ್ಲಿ ಬಳಕೆಗೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಸೇವೆ ಇನ್ನು ಕೂಡಾ ಸಾರ್ವಜನಿಕವಾಗಿ ನಿಯೋಜಿಸಲಾಗಿಲ್ಲ. ಮುಂದೆ ಹಂತ ಹಂತವಾಗಿ ಹೊರತರುವ ಸಾಧ್ಯತೆಯಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿ ಈ ಹೊಸ ಫೀಚರ್ ಅನ್ನು ‘ಗೇಮ್ ಚೇಂಜರ್’ ಎಂದು ಕರೆದು, ತಾವೆಲ್ಲ ಇದಕ್ಕಾಗಿ ಕಾತುರದಿಂದ ಪ್ರತಿಕ್ರಿಯಿಸಿದ್ದಾರೆ.

ಫ್ರೀ ಬಸ್ಸಲ್ಲಿ ಓಡಾಡುವ ಮಹಿಳೆಯರಿಗೆ ಬಿಗ್ ಶಾಕ್, ಇನ್ಮುಂದೆ ಉಚಿತ ಪ್ರಯಾಣ ಮಾಡಲು ಹಣ ಕೊಡಲೇಬೇಕು.!

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
Useful Information
WhatsApp Group Join Now
Telegram Group Join Now

Post navigation

Previous Post: ಫ್ರೀ ಬಸ್ಸಲ್ಲಿ ಓಡಾಡುವ ಮಹಿಳೆಯರಿಗೆ ಬಿಗ್ ಶಾಕ್, ಇನ್ಮುಂದೆ ಉಚಿತ ಪ್ರಯಾಣ ಮಾಡಲು ಹಣ ಕೊಡಲೇಬೇಕು.!
Next Post: SBI ನಲ್ಲಿ 2000 ಕ್ಕೂ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!

Leave a Reply Cancel reply

Your email address will not be published. Required fields are marked *

  • About Us
  • Contact Us
  • Privacy Policy
  • Terms and Conditions

Recent Posts

  • Gruhalakshmi: ಗೃಹಲಕ್ಷ್ಮೀ ಯೋಜನೆ ಹಣ 4000 ರೂಪಾಯಿಗೆ ಏರಿಕೆ.! March 21, 2025
  • Gold ಚಿನ್ನದ ಮೇಲೆ ಸಾಲ ಪಡೆದವರಿಗೆ – RBI ನಿಂದ ಹೊಸ ನಿಯಮ.! March 20, 2025
  • Loan: ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು 5 ಲಕ್ಷ ದಂಡ.! March 20, 2025
  • DOT ದೂರಸಂಪರ್ಕ ಇಲಾಖೆ ನೇಮಕಾತಿ ಟೆಲಿಕಾಂ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ February 25, 2025
  • IOCL ನೇಮಕಾತಿ – 457 ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಿ February 25, 2025

Archives

  • March 2025
  • February 2025
  • January 2025
  • August 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022

Copyright © 2025 Rishi The Power.


Developed By Top Digital Marketing & Website Development company in Mysore