ಫ್ರೀ ಬಸ್ಸಲ್ಲಿ ಓಡಾಡುವ ಮಹಿಳೆಯರಿಗೆ ಬಿಗ್ ಶಾಕ್, ಇನ್ಮುಂದೆ ಉಚಿತ ಪ್ರಯಾಣ ಮಾಡಲು ಹಣ ಕೊಡಲೇಬೇಕು.!

 

ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರವು ಚುನಾವಣೆ ಪೂರ್ವವಾಗಿ ಕೊಟ್ಟಿದ್ದ ಪಂಚ ಖಾತ್ರಿ ಘೋಷಣೆಗಳ (five Guarantee Scheme) ಪೈಕಿ ಜಾರಿಗೆ ತಂದ ಮೊದಲ ಯೋಜನೆ ಶಕ್ತಿ ಯೋಜನೆ (Shakthi Yojane). ಶಕ್ತಿ ಯೋಜನೆಯಡೀ ಈಗ ಕರ್ನಾಟಕ ರಾಜ್ಯದಾದ್ಯಂತ ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲಾ ಮಹಿಳೆಯರು ಕೂಡ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ.

ಜೂನ್ 11ನೇ ತಾರೀಕಿನಿಂದ ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕರ್ನಾಟಕ ರಾಜ್ಯ ಸರ್ಕಾರದ ನಾಲ್ಕು ನಿಗಮದ ಬಸ್ ಗಳಲ್ಲಿ ಕೂಡ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಸರ್ಕಾರವು ಯೋಜನೆ ಜಾರಿ ಮಾಡಿದ ಸಮಯದಲ್ಲಿ ಮಹಿಳೆಯರು ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಅಥವಾ ರೇಷನ್ ಕಾರ್ಡ್ ನಂತಹ ಸರ್ಕಾರ ನೀಡಿರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಕರ್ನಾಟಕದ ಮಹಿಳೆಯರು ಎನ್ನುವುದನ್ನು ದೃಢಪಡಿಸುವುದಕ್ಕಾಗಿ ತೋರಿಸಿ ಈ ಉಚಿತ ಬಸ್ ಪ್ರಯಾಣಕ್ಕೆ ಟಿಕೆಟ್ ಪಡೆಯಬಹುದು.

LIC ಇಂದ ಗ್ರಾಹಕರಿಗೆ ಬಂಪರ್ ಆಫರ್, ಲ್ಯಾಪ್ಸ್ ಆದ LIC ನವೀಕರಣಕ್ಕೆ ಸುವರ್ಣಾವಕಾಶ.!

ಆದರೆ ಯೋಜನೆ ಆರಂಭವಾದ ಮೂರು ತಿಂಗಳ ಒಳಗೆ ಶಕ್ತಿ ಸ್ಮಾರ್ಟ್ ಕಾರ್ಡ್ (Shakthi Smart card) ಪಡೆಯಬೇಕು. ಒಂದು ವೇಳೆ ಶಕ್ತಿ ಸ್ಮಾರ್ಟ್ ಪಡೆಯದೇ ಇದ್ದಲ್ಲಿ ಅವರು ಮೂರು ತಿಂಗಳ ನಂತರ ಉಚಿತ ಪ್ರಯಾಣದ ಪ್ರಯೋಜನ ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಹಾಗೆಯೇ ಪಿಂಕ್ ಬಣ್ಣದ ಶಕ್ತಿ ಸ್ಮಾರ್ಟ್ ಕಾರ್ಡ್ ಮಾದರಿಯನ್ನು ಕೂಡ ಪರಿಚಯಿಸಿತ್ತು.

ಆ ಕಾರ್ಡ್ ನಲ್ಲಿ ಒಂದೆಡೆ ಮಹಿಳೆಯರ ಜನ್ಮ ದಿನಾಂಕ, ವಿಳಾಸ, ಭಾವಚಿತ್ರ, ಮೊಬೈಲ್ ಸಂಖ್ಯೆ ಸೇರಿದಂತೆ ಮಹಿಳೆಯ ವಿವರ ಮತ್ತೊಂದು ಬದಿಯಲ್ಲಿ ಶಕ್ತಿ ಯೋಜನೆಗೆ ಇರುವ ಕಂಡೀಶನ್ ಗಳನ್ನು ಮುದ್ರಿಸಲಾಗುವುದು ಎಂದು ಹೇಳಿತ್ತು. ಆದರೆ ಯೋಜನೆ ಜಾರಿಯಾಗಿ ಮೂರು ತಿಂಗಳು ಕಳೆದಿದ್ದರೂ ಕೂಡ ಇನ್ನು ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿಲ್ಲ, ಆದರೆ ಇದಕ್ಕೆ ತಯಾರಿ ನಡೆಸುತ್ತಿದೆ ಎನ್ನುವ ಅಪ್ಡೇಟ್ ಆಗಾಗ ಹೊರಬಿಡುತ್ತಿದೆ.

ಸ್ಟೇ ಆರ್ಡರ್ ಅಂದರೇನು.? ಸ್ಟೇ ಆರ್ಡರ್ ತರಲು ಬೇಕಾದ ದಾಖಲೆಗಳನು.? ಸ್ಟೇ ಆರ್ಡರ್ ಹಾಗೂ ಇಂಜಕ್ಷನ್ ಆರ್ಡರ್ ನಡುವಿನ ವ್ಯತ್ಯಾಸವೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಇತ್ತೀಚಿಗೆ ಬಂದ ಮಾಹಿತಿ ಪ್ರಕಾರ ಸರ್ಕಾರ ಮೈಕ್ರೋ ಚಿಪ್ ಅಳವಡಿಸಿ ಇದರ ಮೂಲಕ ಮಹಿಳೆಯರು ಎಲ್ಲಿಂದ ಎಲ್ಲಿಗೆ ಪ್ರಯಾಣಿಸಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕುತ್ತದೆ. ವ್ಯವಸ್ಥಿತವಾಗಿ ಶಕ್ತಿ ಸ್ಮಾರ್ಟ್ ಕಾರ್ಡ್ ಜಾರಿಗೆ ತರುವ ಯೋಜನೆಯಲ್ಲಿದೆ ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ವಿಳಂಬವಾಗುತ್ತಿದೆ ಎನ್ನುವ ಅಪ್ಡೇಟ್ ಇಲ್ಲಿಯವರೆಗೆ ಸಿಕ್ಕಿತ್ತು. ಆದರೆ ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ ಸರ್ಕಾರವು ಚಾರ್ಜಸ್ ಮಾಡಿ ಈ ಶಕ್ತಿ ಸ್ಮಾರ್ಟ್ ಗಳನ್ನು ವಿತರಣೆ ಮಾಡುತ್ತದೆ ಎನ್ನುವ ಮಾಹಿತಿ ಸಿಕ್ಕಿದೆ.

ಸೆಪ್ಟೆಂಬರ್ 7ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ (cabinet meeting) ಈ ಬಗ್ಗೆ ಚರ್ಚೆ ನಡೆದಿದ್ದು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಮಹಿಳೆಯರೇ ಹಣ ಪಾವತಿ ಮಾಡಬೇಕು 14.15ರೂ. ಶುಲ್ಕವಾಗಿ ತೆಗೆದುಕೊಳ್ಳಲಾಗುತ್ತದೆ. ಶೀಘ್ರದಲ್ಲಿ ಇದು ಜಾರಿಗೆ ಬರಲಿದೆ, ಇನ್ನೂ ಆರು ತಿಂಗಳ ಒಳಗೆ ಎಲ್ಲಾ ಮಹಿಳೆಯರು ಕೂಡ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಬೇಕಾಗುತ್ತದೆ.

ಕೇವಲ 4 ಲಕ್ಷಕ್ಕೆ ಮಾರುತಿ ಸುಜುಕಿ ಹೊಸ ಕಾರು ಬಿಡುಗಡೆ.! ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಕಾರ್ ಇದರಲ್ಲಿ ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ.?

ಈ ಬಗ್ಗೆ ಮಾತುಕತೆ ನಡೆದಿದೆ ಎನ್ನುವ ವಿಚಾರವನ್ನು ಕಾನೂನು ಸಚಿವ ಎಚ್.ಕೆ ಪಾಟೀಲ್ (Minister H.K Pateel) ಅವರು ಹಂಚಿಕೊಂಡಿದ್ದಾರೆ. ಮಹಿಳೆಯರು ಸರ್ಕಾರ ಸೂಚಿಸುವ ನಿಗದಿತ ಕೇಂದ್ರಕ್ಕೆ ಹೋಗಿ ಸ್ಮಾರ್ಟ್ ಕಾರ್ಡ್ ಅನ್ನು ಮಾಡಿಸಿಕೊಳ್ಳಬೇಕು. ಒಂದು ವೇಳೆ ಈ ಗಡುವು ಮುಗಿದರೆ ಸ್ಮಾರ್ಟ್ ಕಾರ್ಡ್ ಇಲ್ಲದವರಿಗೆ ಉಚಿತ ಪ್ರಯಾಣದ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

Leave a Comment

%d bloggers like this: