LIC ಇಂದ ಗ್ರಾಹಕರಿಗೆ ಬಂಪರ್ ಆಫರ್, ಲ್ಯಾಪ್ಸ್ ಆದ LIC ನವೀಕರಣಕ್ಕೆ ಸುವರ್ಣಾವಕಾಶ.!

 

LIC ಪಾಲಿಸಿಗಳನ್ನು ಖರೀದಿಸಿದ ಮೇಲೆ ಅವುಗಳಿಗೆ ಇರುವ ಕಂತುಗಳನ್ನು ಸರಿಯಾದ ಸಮಯಕ್ಕೆ ಕಟ್ಟಿಕೊಂಡು ಹೋಗಬೇಕು. ಈಗ LIC ತನ್ನ ಗ್ರಾಹಕರಿಗೆ ತಮ್ಮ ಕಂತುಗಳನ್ನು (Premium) ಕಟ್ಟಬೇಕಾದ ಸಮಯಕ್ಕೆ SMS ನೋಟಿಫಿಕೇಶನ್ ಗಳನ್ನು ಕಳುಹಿಸಿ ಎಚ್ಚರಿಸುತ್ತದೆ. ಈ ಹಿಂದೆ ಅಂಚೆ ಮೂಲಕ LIC ವತಿಯಿಂದ ನೋಟಿಸ್ ಕೂಡ ಬರುತ್ತಿತ್ತು.

LIC ಕಂತುಗಳನ್ನು ಕಟ್ಟುವುದಕ್ಕೆ 15 ರಿಂದ 30 ದಿನಗಳವರೆಗೆ ಗ್ರೇಸ್ ಅವಧಿಯನ್ನು ಕೂಡ ನೀಡುತ್ತದೆ. ಆ ಸಮಯದ ಒಳಗೆ ಯಾವುದೇ ದಂಡ ಅಥವಾ ವಿಳಂಬ ಶುಲ್ಕ ಇಲ್ಲದೆ ಪ್ರೀಮಿಯಂಗಳನ್ನು ಪಾವತಿಸಬಹುದು. ಈಗ ಆನ್ಲೈನ್ ಮೂಲಕ ಕೂಡ LIC ಪ್ರೀಮಿಯಂ ಗಳನ್ನು ಪಾವತಿಸುವ ಅವಕಾಶ ಇದೆ ಆದರೂ ಹಣಕಾಸಿನ ತೊಂದರೆಯ ಕಾರಣದಿಂದಲೂ ಅಥವಾ ಇನ್ಯಾವುದೋ ಕಾರಣದಿಂದ ಕಂತುಗಳನ್ನು ಕಟ್ಟದ ಕಾರಣ ಅನೇಕರ ಪಾಲಿಸಿ ಲ್ಯಾಪ್ಸ್ (lapse) ಆಗಿದೆ.

ಸ್ಟೇ ಆರ್ಡರ್ ಅಂದರೇನು.? ಸ್ಟೇ ಆರ್ಡರ್ ತರಲು ಬೇಕಾದ ದಾಖಲೆಗಳನು.? ಸ್ಟೇ ಆರ್ಡರ್ ಹಾಗೂ ಇಂಜಕ್ಷನ್ ಆರ್ಡರ್ ನಡುವಿನ ವ್ಯತ್ಯಾಸವೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಈಗ ಸಂಸ್ಥೆ ಅವರಿಗೆಲ್ಲಾ ಅವಕಾಶವೊಂದನ್ನು ನೀಡುತ್ತಿದೆ LIC ಸಂಸ್ಥೆಯು ಈಗ 67 ವರ್ಷಗಳನ್ನು ಪೂರೈಸಿರುವ ಸಂಭ್ರಮದಲ್ಲಿ ಇದೆ. ಕಳೆದ 67 ವರ್ಷಗಳಿಂದಲೂ ಅದರಲ್ಲೂ ಕಳೆದ ಎರಡು ದಶಕಗಳಿಂದ LIC ಪ್ರತಿ ಮನೆ ಮನೆಯ ಮಾತಾಗಿದೆ. ಅದಕ್ಕೆ ತಕ್ಕಂತೆ ಗ್ರಾಹಕರ ಆಲೋಚನೆಗಳಿಗೆ ಅನುಗುಣವಾಗಿ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ.

ಅವುಗಳಲ್ಲಿ LIC ಜೀವ ವಿಮೆಗಳು ದೇಶದಾದ್ಯಂತ ಹೆಸರುವಾಸಿಯಾಗಿವೆ, ಅನೇಕ ಕುಟುಂಬಗಳು ಈ ನೆರವನ್ನು ಪಡೆದಿವೆ. ಒಂದೆಡೆ LIC ಪಾಲಿಸಿಗಳನ್ನು ಕಟ್ಟಿ ಯಾವ ಉದ್ದೇಶಕ್ಕಾಗಿ LIC ಪ್ಲಾನ್ ಮಾಡಿದ್ದರು ಆ ಕನಸುಗಳನ್ನು ಪೂರೈಸಿಕೊಂಡಿರುವ ಸಂಭ್ರಮದಲ್ಲಿರುವ ಜನರಿದ್ದರೆ ಜೊತೆಗೆ LIC ಪಾಲಿಸಿಗಳನ್ನು ಲ್ಯಾಪ್ಸ್ ಮಾಡಿಕೊಂಡವರ ಸಂಖ್ಯೆ ಕೂಡ ಕಡಿಮೆ ಏನಿಲ್ಲ.

ಕೇವಲ 4 ಲಕ್ಷಕ್ಕೆ ಮಾರುತಿ ಸುಜುಕಿ ಹೊಸ ಕಾರು ಬಿಡುಗಡೆ.! ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಕಾರ್ ಇದರಲ್ಲಿ ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ.?

ಹಲವರು ಪಾಲಿಸಿಗಳನ್ನು ಖರೀದಿಸಿ ಮೂರ್ನಾಲ್ಕು ಕಂತುಗಳನ್ನು ಕಟ್ಟಿ, ನಂತರ ಕೈ ಬಿಟ್ಟು ಬಿಡುತ್ತಾರೆ. ಆಗ ಅವರ ಯೋಜನೆಗಳು ಲ್ಯಾಪ್ಸ್ ಆಗಿರುತ್ತವೆ. ಆದರೆ ಕೆಲವರು ಹಲವರು ವರ್ಷಗಳಿಂದ ಪ್ರೀಮಿಯಂ ಗಳನ್ನು ಕಟ್ಟಿ ಕೊನೆ ಘಳಿಗೆಯಲ್ಲಿ ಒಂದೆರಡು ವರ್ಷದ ಪ್ರೀಮಿಯಂ ಗಳನ್ನು ಪಾವತಿಸಲಾಗದೆ ಲ್ಯಾಪ್ಸ್ ಆದಾಗ ಲ್ಯಾಪ್ಸ್ ಮಾಡಿಕೊಂಡವರಿಗೆ ಬಹಳ ದುಃಖವಾಗುತ್ತದೆ.

ಅಂತವರಿಗೆ ಎಲ್ಲರಿಗೂ ಕೂಡ LIC ಅವಕಾಶ ನೀಡುತ್ತಿದೆ. ನೀವು ನಿಮ್ಮ ಲ್ಯಾಪ್ಸ್ ಆಗಿರುವ LIC ಯೋಜನೆಗಳನ್ನು ಈಗ ಮತ್ತೆ ಪುನರಾರಂಭಿಸಬಹುದು (Continue). ನಿಮ್ಮ ಎಲ್ಲಾ ಪ್ರೀಮಿಯಂ ಗಳ ಹಣ ಹಾಗೂ ಅದಕ್ಕೆ ಬೀಳುವ ಬಡ್ಡಿ, ವೈದ್ಯಕೀಯ ವಿಮೆಗಳು ಹಾಗೂ ವಿಶೇಷ ರಿಪೋಟ್ ಗಳಿಗೆ ಬೀಳುವ ಖರ್ಚುಗಳನ್ನು ಪಾವತಿ ಮಾಡುವ ಮೂಲಕ ನೀವು ನಿಮ್ಮ LIC ಯೋಜನೆಗಳನ್ನು ಈಗ ಪುನಃ ಆರಂಭಿಸಬಹುದು.

ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳು ಹಾಗೂ ಮೊಮ್ಮಕ್ಕಳ ಅನುಮತಿ ಇಲ್ಲದೆ ಮಾರಾಟ ಮಾಡಬಹುದಾ.?, ಕಾನೂನಿನಲ್ಲಿ ಅದನ್ನು ಪ್ರಶ್ನಿಸಲು ಅವಕಾಶವಿದೆಯೇ.?

ಈ ಅವಕಾಶವು ನಿಮಗೆ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 30ರವರೆಗೆ ಮಾತ್ರ ಲಭ್ಯವಿರುತ್ತದೆ. ನೀವು ನಿಮ್ಮ LIC ಪಾಲಿಸಿಯ ಸೂಕ್ತ ದಾಖಲೆಗಳ ಜೊತೆಗೆ ಶಾಖೆಗಳಿಗೆ ಭೇಟಿ ಕೊಡುವ ಮೂಲಕ ನಿಮ್ಮ ಲ್ಯಾಪ್ಸ್ ಆದ ಯೋಜನೆಗಳನ್ನು ಪುನಃ ಆರಂಭಿಸಲು ಅವಕಾಶ ಇದೆ. ವಿಮಾದಾರರ ಗ್ರಾಹಕ ವಿಭಾಗವನ್ನು ಸಂಪರ್ಕಿಸಿದರೆ ನಿಮ್ಮ LIC ಅನ್ನು ನವೀಕರಿಸುತ್ತಿರುವ ಕಾರ್ಯವಿಧಾನದ ಬಗ್ಗೆ ಅವರು ವಿವರಿಸುತ್ತಾರೆ ಅಥವಾ ನಿಮ್ಮ ಏಜೆಂಟ್ ಸಹಾಯ ಕೂಡ ಪಡೆದುಕೊಳ್ಳಬಹುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ LIC ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ

Leave a Comment

%d bloggers like this: