ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳು ಹಾಗೂ ಮೊಮ್ಮಕ್ಕಳ ಅನುಮತಿ ಇಲ್ಲದೆ ಮಾರಾಟ ಮಾಡಬಹುದಾ.?, ಕಾನೂನಿನಲ್ಲಿ ಅದನ್ನು ಪ್ರಶ್ನಿಸಲು ಅವಕಾಶವಿದೆಯೇ.?

 

ಒಬ್ಬ ತಂದೆಯು ತನ್ನ ಸ್ವಂತ ದುಡಿಮೆಯಿಂದ ಗಳಿಸಿದ ಸ್ವಯಾರ್ಜಿತ ಆಸ್ತಿಯನ್ನು ಅವರಿಗೆ ಇಷ್ಟ ಬಂದ ಯಾರಿಗಾದರೂ ಮಾರಾಟ ಮಾಡಬಹುದು. ಅದನ್ನು ತಮ್ಮ ಇಷ್ಟವಾದ ಯಾವುದೇ ಮಕ್ಕಳಿಗಾಗಲಿ ಅಥವಾ ಯಾವುದೇ ಮೊಮ್ಮಕ್ಕಳಿಗಾಗಲಿ ಅಥವಾ ಮೂರನೇ ವ್ಯಕ್ತಿಗೆ ಆಗಲಿ ಮಾಡುವ ಸಂಪೂರ್ಣ ಅಧಿಕಾರವೂ ಆ ತಂದೆಗೆ ಮಾತ್ರ ಇರುತ್ತದೆ.

ಅದನ್ನು ಪ್ರಶ್ನಿಸಲು ಅವರ ಮಕ್ಕಳಿಗಾಗಲಿ ಮೊಮ್ಮಕ್ಕಳಿಗಾಗಲಿ ಅಧಿಕಾರ ಇರುವುದಿಲ್ಲ ಆದರೆ ಅದೇ ತಂದೆಯು ನನ್ನ ಹಿಂದಿನ ತಲೆಮಾರಿನಿಂದ ಪಡೆದ ಪಿತ್ರಾರ್ಜಿತ ಆಸ್ತಿಯನ್ನು ಈ ರೀತಿ ಮಕ್ಕಳು ಹಾಗೂ ಮೊಮ್ಮಕ್ಕಳ ಅನುಮತಿ ಇಲ್ಲದೆ ಮಾರಾಟ ಮಾಡಲು ಸಾಧ್ಯವಿಲ್ಲ. ಈ ರೀತಿ ಸಂದರ್ಭ ಬಂದಾಗ ಕಾನೂನಿನಲ್ಲಿ ಏನೆಲ್ಲಾ ಅವಕಾಶ ಇದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಹೆಣ್ಣು ಮಕ್ಕಳು ತೀರಿಕೊಂಡ ನಂತರ ಅವರ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಸಿಗುತ್ತ.?

ಒಂದು ಕುಟುಂಬದಲ್ಲಿ ಒಬ್ಬ ತಂದೆಗೆ ಜನಿಸಿದ ಮಕ್ಕಳು ಹಾಗೂ ಅವರ ಮಕ್ಕಳು ಅಂದರೆ ಆ ತಂದೆಯ ಮೊಮ್ಮಕ್ಕಳು ಹುಟ್ಟಿದಾಗಲಿಂದಲೇ ಅವರ ಪಿತ್ರಾರ್ಜಿತ ಆಸ್ತಿಯಲ್ಲಿ ಅಧಿಕಾರ ಹೊಂದಿರುತ್ತಾರೆ. ಹಾಗಾಗಿ ಮಕ್ಕಳು ಹಾಗೂ ಮೊಮ್ಮಕ್ಕಳ ಸಹಿ ಅಥವಾ ಅನುಮತಿ ಇಲ್ಲದೆ ತಂದೆಯು ಸ್ವಂತ ನಿರ್ಧಾರದಿಂದ ಪಿತ್ರಾರ್ಜಿತವಾಗಿ ಪಡೆದ ಆಸ್ತಿಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ.

ಒಂದು ವೇಳೆ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ತಿಳಿಯದಂತೆ ಮಾರಾಟ ಮಾಡುವ ಪ್ರಯತ್ನ ಮಾಡಿದರು ಇದಕ್ಕೆ ಸಂಬಂಧಿಸಿದ ದಾವೆಯನ್ನು ಕೋರ್ಟ್ ನಲ್ಲಿ ಹೂಡಿ ನ್ಯಾಯ ಕೇಳಬಹುದು. ಆದರೆ ಕಾನೂನಿನಲ್ಲಿ ಕೂಡ ಕೆಲವು ವಿಶೇಷ ಸಂದರ್ಭಗಳಲ್ಲಿ ಈ ರೀತಿ ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳು ಹಾಗೂ ಮೊಮ್ಮಕ್ಕಳ ಅನುಮತಿ ಇಲ್ಲದೆ ಮಾರಾಟ ಮಾಡಿದರು ಮಾನ್ಯ ಮಾಡಲಾಗುತ್ತದೆ ಅವುಗಳ ಬಗ್ಗೆ ತಿಳಿಸುತಿದ್ದೇವೆ.

ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್ ಆಗುತ್ತದೆ, 1 ಲಕ್ಷ ಹಣಕ್ಕೆ 2 ಲಕ್ಷ ರಿಟರ್ನ್ಸ್ ಪಡೆಯಬಹುದು.!

ಒಬ್ಬ ಕರ್ತನು ತನ್ನ ಕುಟುಂಬದ ಮೇಲಿರುವ ಸಾಲಗಳನ್ನು ಇತರೆ ಕಾನೂನು ಬಾಧ್ಯತೆಗಳನ್ನು ಮರುಪಾವತಿಸಲು ಹಣಕ್ಕಾಗಿ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಬಹುದು, ಈ ಸಮಯದಲ್ಲಿ ಮಕ್ಕಳು ಹಾಗೂ ಮೊಮ್ಮಕ್ಕಳ ಅನುಮತಿ ಕೇಳುವ ಅವಶ್ಯಕತೆ ಇಲ್ಲ. ಕುಟುಂಬದ ಮೇಲಿರುವ ಸಾಲವನ್ನು ತೀರಿಸುವ ಸಲುವಾಗಿ ಮಗ ಹಾಗೂ ಮೊಮ್ಮಗನ ಪಾಲನ್ನು ಸೇರಿಸಿ ಕರ್ತನು ಮಾರಾಟ ಮಾಡಬಹುದು.

ಆದರೆ ಈ ವಿಚಾರವಾಗಿ ಮುಖ್ಯವಾಗಿ ಗಮನಿಸಲೇಬೇಕಾದ ಅಂಶ ಏನೆಂದರೆ, ಇಂತಹ ಮಾರಾಟಗಳು ಅನೈತಿಕ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಂದ ಕೂಡಿರಬಾರದು. ಇದರಲ್ಲಿ ಕಾರಣಗಳು ಅಂದರೆ ಸತ್ಯಾನು ಸತ್ಯತೆ ಸ್ಪಷ್ಟವಾಗಿರಬೇಕು. ತನ್ನ ಮಕ್ಕಳ ಮದುವೆ ಕರ್ಚಿಗಾಗಿ ಅದರಲ್ಲೂ ಕೂಡ ಹೆಣ್ಣು ಮಕ್ಕಳ ಮದುವೆಯ ಖರ್ಚಿಗಾಗಿ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಿದ್ದಲ್ಲಿ ಆಗಲು ಸಹ ಮಕ್ಕಳು ಹಾಗೂ ಮೊಮ್ಮಕ್ಕಳು ಕೇಳಲು ಬರುವುದಿಲ್ಲ.

ATM ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ಈ ಕಾರ್ಡ್ ಇದ್ದವರಿಗೆ ಸಿಗಲಿದೆ 10 ಲಕ್ಷ, ಸಾಕಷ್ಟು ಜನರಿಗೆ ಈ ವಿಚಾರ ಗೊತ್ತೆ ಇಲ್ಲ…!

ಹಾಗೆ ಕುಟುಂಬದ ಯಾವುದೇ ಸದಸ್ಯನ ಅಂತ್ಯಕ್ರಿಯೆಯ ಖರ್ಚಿಗಾಗಿ ಕೂಡ ಅಥವಾ ಆ ಖರ್ಚಿಗಾಗಿ ಮಾಡಿದ ಸಾಲವನ್ನು ತೀರಿಸಲು ಕೂಡ ಮಾರಾಟ ಮಾಡಬಹುದು ಎಂದು ಅವಕಾಶ ಮಾಡಿಕೊಡಲಾಗಿದೆ. ಅದೇ ರೀತಿಯಲ್ಲಿ ಕರ್ತನು ಗಂಭೀರ ಅಪರಾಧ ಪ್ರಕರಣಗಳನ್ನು ಹೊಂದಿದ್ದಾಗ ತನ್ನ ರಕ್ಷಣೆಗಾಗಿ ಆಸ್ತಿಯನ್ನು ಮಾರಾಟ ಮಾಡಬಹುದು, ಒಂದು ವೇಳೆ ಆತ ಅಥವಾ ಆ ಕುಟುಂಬದ ಯಾವುದೇ ಸದಸ್ಯರ ವಿರುದ್ಧ ಕೋರ್ಟ್ ಗಳಲ್ಲಿ ನಡೆಯುತ್ತಿರುವ ವ್ಯಾಜ್ಯಗಳ ಖರ್ಚಿಗಾಗಿ ಕೂಡ ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಿದ್ದಲ್ಲಿ ಅಂತಹ ಸಂದರ್ಭಗಳಲ್ಲಿ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಪ್ರಶ್ನೆ ಮಾಡಲು ಅವಕಾಶ ಇರುವುದಿಲ್ಲ.

Leave a Comment

%d bloggers like this: