ಹೆಣ್ಣು ಮಕ್ಕಳು ತೀರಿಕೊಂಡ ನಂತರ ಅವರ ಮಕ್ಕಳಿಗೆ ಆಸ್ತಿ ಹಕ್ಕು (Property rights) ಬರುತ್ತದೆಯೇ ಎನ್ನುವುದು ಹಲವರ ಪ್ರಶ್ನೆ. ಆದರೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮುನ್ನ ಒಂದು ಅಂಶವನ್ನು ಇಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅದೇನೆಂದರೆ ಆ ಹೆಣ್ಣು ಮಕ್ಕಳಿಗೆ ಅಂದರೆ ಮೃ’ತಪಟ್ಟಿರುವ ಆ ಹೆಣ್ಣು ಮಗಳಿಗೆ ಆಸ್ತಿಯು ಯಾವ ಮೂಲದಿಂದ ಬಂದಿದೆ ಎನ್ನುವುದನ್ನು ಮೊದಲು ನೋಡಬೇಕು.
ಹಿಂದೂ ಸಕ್ಸೆಷನ್ ಆಕ್ಟ್ 1956 (Hindu succesion act 1956) ಸೆಕ್ಷನ್ 15A ನಲ್ಲಿ ಮಹಿಳೆಗೆ ಆಸ್ತಿ ಮೂಲ ಯಾವುದರಿಂದ ಬಂದಿದೆ ಎನ್ನುವುದರ ಮೇಲೆ ಅದು ಯಾರಿಗೇ ಹೋಗಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಇದಕ್ಕೂ ಮುನ್ನ ಅರಿತುಕೊಳ್ಳಬೇಕಾದ ಮತ್ತೊಂದು ವಿಷಯ ಏನೆಂದರೆ, ಒಬ್ಬ ಮಹಿಳೆಯು ತನ್ನ ಸ್ವಂತ ದುಡಿಮೆಯಿಂದ ಅಥವಾ ಸರ್ಕಾರದ ಗೌರವದ ರೂಪದಲ್ಲಿ ಯಾವುದೇ ಒಂದು ಆಸ್ತಿಯನ್ನು ಪಡೆದಿದ್ದರೆ.
ಅಥವಾ ಯಾವುದೇ ಒಂದು ಆಸ್ತಿ ಮೇಲೆ ಆಕೆಗೆ ಕಾನೂನು ಪ್ರಕಾರವಾದ ಹಕ್ಕು ಇದ್ದಾಗ ಆ ಆಸ್ತಿಯನ್ನು ಆಕೆಯ ನಂತರ ಯಾರಿಗೆ ಹೋಗಬೇಕು ಎಂದು ಅದನ್ನು ದಾನ ಪತ್ರದ ಮೂಲಕ ಅಥವಾ ವಿಭಾಗದ ಮೂಲಕ ಅಥವಾ ವೀಲ್ ಮಾಡುವ ಮೂಲಕ ಈ ರೀತಿ ಯಾವುದೇ ಟೆಸ್ಟಮೆಂಟರಿ ಡಾಕ್ಯುಮೆಂಟ್ (testamentary document) ಗಳನ್ನು ಮಾಡದೆ ಮೃ’ತಪಟ್ಟಿದ್ದಲ್ಲಿ ಮಾತ್ರ ಈ ಪ್ರಶ್ನೆ ಉದ್ಭವಿಸುತ್ತದೆ.
ಇಲ್ಲವಾದಲ್ಲಿ ಆಕೆ ಆಸ್ತಿ ಹಕ್ಕು ತದ ನಂತರ ಯಾರಿಗೆ ಹೋಗಬೇಕು ಎನ್ನುವುದನ್ನು ವೀಲ್ ಮಾಡಿದರೆ ಅದರ ಪ್ರಕಾರವೇ ವಿಭಾಗವಾಗುತ್ತದೆ. ದಾನಪತ್ರ ಕೊಟ್ಟಿದ್ದರೆ ಅವರು ಯಾರಿಗೆ ಆಸ್ತಿಯನ್ನು ದಾನ ಕೊಟ್ಟಿದ್ದರು ಅವರಿಗೆ ಹೋಗುತ್ತದೆ, ಒಂದು ವೇಳೆ ವಿಭಾಗ ಮಾಡಿ ಎಲ್ಲಾ ಮಕ್ಕಳಿಗೂ ಹಂಚಿಕೆ ಮಾಡಿಕೊಟ್ಟಿದ್ದರೆ ಅವರ ಇಚ್ಛೆಯಂತೆ ಎಲ್ಲರಿಗೂ ವಿಭಾಗವಾಗುತ್ತದೆ.
ಆದರೆ ಈ ರೀತಿ ಯಾವುದನ್ನು ಮಾಡದೆ ಮೃ’ತ ಪಟ್ಟಿದ್ದಾಗ ಆ ಆಸ್ತಿಯ ಮೂಲ ಯಾವುದು ಎನ್ನುವುದರ ಆಧಾರದ ಮೇಲೆ ಯಾರಿಗೆ ಹೋಗಬೇಕು ಎನ್ನುವುದು ನಿರ್ಧಾರ ಆಗುತ್ತದೆ. ಒಂದು ವೇಳೆ ಈ ಆಸ್ತಿಯು ಆಕೆಯ ಸ್ವಯಾರ್ಜಿತ ಆಸ್ತಿ ಆಗಿದ್ದಾಗ ಆಕೆಯ ಮರಣದ ನಂತರ ಅವರ ಮಕ್ಕಳಿಗೆ ಈ ಆಸ್ತಿಯ ಸಂಪೂರ್ಣ ಹಕ್ಕು ಸಮಾನವಾಗಿ ಸೇರುತ್ತದೆ.
ಇದರಲ್ಲಿ ಅವರ ದತ್ತು ತೆಗೆದುಕೊಂಡಿದ್ದ ಮಕ್ಕಳಿಗೂ ಕೂಡ ಈ ಹಕ್ಕು ಸಮಾನವಾಗಿ ಹೋಗುತ್ತದೆ ಎನ್ನುವುದನ್ನು ಕೂಡ ಮರೆಯುವಂತಿಲ್ಲ. ಒಂದು ವೇಳೆ ಆ ಮಹಿಳೆಗೆ ಮಕ್ಕಳಿರದೇ ಇದ್ದ ಪಕ್ಷದಲ್ಲಿ ಆಕೆಯ ಪತಿಗೆ ಎರಡನೇ ವರ್ಗದ ವಾರಸುದಾರರು ಎನ್ನುವುದರ ಆಧಾರದ ಮೇಲೆ ಈ ಆಸ್ತಿಯ ಹಕ್ಕು ಹೋಗುತ್ತದೆ ಒಂದು ವೇಳೆ ಪತಿಯು ಕೂಡ ಇಲ್ಲದಿದ್ದ ಪಕ್ಷದಲ್ಲಿ ಇದು ಆಕೆಯ ಪೋಷಕರಿಗೆ ಸೇರುತ್ತದೆ, ಆಕೆ ಪೋಷಕರು ಇಲ್ಲದೆ ಇದ್ದಾಗ ಆಕೆಯ ಪತಿ ಕಡೆಯವರಿಗೆ ಈ ಆಸ್ತಿ ಸೇರುತ್ತದೆ.
ಒಂದು ವೇಳೆ ಮಹಿಳೆಯರು ತನ್ನ ತವರು ಮನೆ ಕಡೆಯಿಂದ ಈ ರೀತಿಯಾದ ಆಸ್ತಿಯನ್ನು ಪಡೆದಿದ್ದರೆ ಈಗಾಗಲೇ ಆಸ್ತಿಯು ಆಕೆಯ ಹೆಸರಿನಲ್ಲಿದ್ದರೆ ಆಕೆಯ ಮರಣದ ನಂತರ ಆಸ್ತಿಯು ಮಕ್ಕಳಿಗೆ ಹೋಗುತ್ತದೆ, ಮಕ್ಕಳಿಲ್ಲದ ಪಕ್ಷದಲ್ಲಿ ಪತಿಗೆ ಹೋಗುತ್ತದೆ, ಪತಿ ಇಲ್ಲದಿದ್ದಾಗ ಆಕೆಯ ಪೋಷಕರಿಗೆ ಸಲ್ಲುತ್ತದೆ.
ಒಂದು ವೇಳೆ ಆ ಆಸ್ತಿಯು ಆಕೆಯ ಪತಿಯ ಕಡೆಯಿಂದ ಬಂದ ಆಸ್ತಿಯಾಗಿದ್ದರೆ ಆ ಮಹಿಳೆಯ ನಂತರ ಆಕೆಯ ಮಕ್ಕಳಿಗೆ ಆಸ್ತಿ ಹಕ್ಕು ವರ್ಗಾವಣೆ ಆಗುತ್ತದೆ, ಮಕ್ಕಳಿರದ ಪಕ್ಷದಲ್ಲಿ ಪತಿಗೆ, ಪತಿಯೂ ಇರದ ಪಕ್ಷದಲ್ಲಿ ಪತಿಯ ಕಡೆಯವರಿಗೆ ಈ ಆಸ್ತಿಯ ಒಡೆತನ ಸೇರುತ್ತದೆ.