ATM ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ಈ ಕಾರ್ಡ್ ಇದ್ದವರಿಗೆ ಸಿಗಲಿದೆ 10 ಲಕ್ಷ, ಸಾಕಷ್ಟು ಜನರಿಗೆ ಈ ವಿಚಾರ ಗೊತ್ತೆ ಇಲ್ಲ…!

 

ಇತ್ತೀಚಿನ ದಿನಗಳಲ್ಲಿ ನಗದು ರೂಪದ ಹಣಕಾಸಿನ ವ್ಯವಹಾರ (Less Cash) ಕ್ರಮೇಣ ಕಡಿಮೆ ಆಗುತ್ತಿದೆ. ಅದರಲ್ಲೂ ಈ ಒಂದು ದಶಕಗಳಲ್ಲಿ ATM ಕಾರ್ಡ್ ಗಳು ಹೊಸದೊಂದು ಕ್ರಾಂತಿಯನ್ನೇ ಮಾಡಿದೆ ಎಂದರೆ ಸುಳ್ಳಾಗಲಾರದು. ಜನರು ತಮ್ಮ ಜೇಬಿನಲ್ಲಿ ದೊಡ್ಡ ಮೊತ್ತದ ಹಣ ಇಟ್ಟುಕೊಂಡು ಓಡಾಡಲು ಸಾಧ್ಯವಾಗದ ಕಾರಣ ATM ಕಾರ್ಡ್ ಗಳನ್ನು ಮಾಡಿಸಿಕೊಂಡು ತಮಗೆ ಎಲ್ಲಿ, ಯಾವಾಗ ಅವಶ್ಯಕತೆ ಇರುವಷ್ಟು ಆಗ ಹಣವನ್ನು ಡ್ರಾ ಮಾಡಿಕೊಳ್ಳುತ್ತಿದ್ದಾರೆ ಅಥವಾ ATM ಕಾರ್ಡ್ ಗಳನ್ನು ಸ್ವೈಪ್ ಮಾಡುವ ಮೂಲಕ ತಮ್ಮ ವಹಿವಾಟುಗಳನ್ನು ಮುಗಿಸುತ್ತಿದ್ದಾರೆ.

ಈಗ ಆ ಸ್ಥಾನಕ್ಕೆ UPI ಆಧಾರಿತ ಆಪ್ ಗಳು ಬಂದಿದ್ದರೂ ATM ಗೆ ಇರುವ ಸ್ಥಾನಮಾನ ಕೊಂಚ ಕೂಡ ಕಡಿಮೆ ಆಗಿಲ್ಲ. ಈಗ ಇದೇ ATM ಕಾರ್ಡ್ ನಿಂದ ಪಡೆಯಬಹುದಾದ ಮತ್ತೊಂದು ಅನುಕೂಲತೆ ಬಗ್ಗೆ ತಿಳಿಸುತ್ತಿದ್ದೇವೆ. ATM ಕಾರ್ಡ್ ಇರುವವರು ATM ವಿಮೆ (Accident Insurance) ಕೂಡ ಮಾಡಿಸಿ 10 ಲಕ್ಷದವರೆಗೂ ಇನ್ಸೂರೆನ್ಸ್ ಕ್ಲೈಮ್ ಮಾಡಬಹುದು ಈ ಒಂದು ಅನುಕೂಲತೆ ಇದೆ ಎನ್ನುವುದು ಅನೇಕ ಜನರಿಗೆ ಗೊತ್ತೇ ಇಲ್ಲ.

ನಿಮ್ಮ ಜಮೀನು ಮನೆ ಅಥವಾ ಆಸ್ತಿಯನ್ನು ಬೇರೆಯವರು ಆಕ್ರಮಿಸಿಕೊಂಡಿದ್ರೆ ಅಥವಾ ಒತ್ತುವರಿ ಮಾಡಿಕೊಂಡಿದ್ರೆ ಅದನ್ನು ಬಿಡಿಸಿಕೊಳ್ಳುವುದು ಹೇಗೆ.? ಕಾನೂನು ಹೇಳೋದೇನು ನೋಡಿ.!

ಪ್ರತಿನಿತ್ಯವೂ ಕೂಡ ಬ್ಯಾಂಕ್ ಜೊತೆಗೆ ವ್ಯವಹಾರ ಇಟ್ಟುಕೊಂಡು ಓಡಾಡುವ ಜನರು, ಐದಾರು ಬ್ಯಾಂಕಿನ ATM ಕಾರ್ಡ್ ಗಳನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡುವ ಜನರೂ ಕೂಡ ATM ಕಾರ್ಡ್ ನಿಂದ ಈ ರೀತಿಯ ಒಂದು ಪ್ರಯೋಜನ ಇದೆ ಎಂದು ತಿಳಿದುಕೊಂಡೆ ಇಲ್ಲ. ಯಾವುದೇ ಸರ್ಕಾರಿ ಬ್ಯಾಂಕ್ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ನಾವು ಉಳಿತಾಯದ ಖಾತೆಯನ್ನು (Saving account) ಹೊಂದಿದ್ದಾಗ ಆ ಖಾತೆಗೆ ATM ಕಾರ್ಡ್ ಬೇಕು ಎಂದು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.

ಹಾಗೆಯೇ ಈ ATM ಪಡೆದ 45 ದಿನದ ಒಳಗೆ ನಾವು ATM ಅಪಘಾತದ ವಿಮೆ ಕೂಡ ಮಾಡಿಸಿಕೊಳ್ಳಬಹುದು. ಯಾವ ವಿಧದ ATM ಕಾರ್ಡ್ ಎನ್ನುವುದರ ಆಧಾರದ ಮೇಲೆ 1 ಲಕ್ಷದಿಂದ 10 ಲಕ್ಷದವರೆಗೆ ಆ ಅಪಘಾತದ ವಿಮೆ ನಿರ್ಧಾರ ಆಗಿರುತ್ತದೆ. ATM ಕಾರ್ಡ್‌ನಲ್ಲಿ ಅಪಘಾತ ಮತ್ತು ಅನಿಶ್ಚಿತ ಸಾವಿನ ಸಂದರ್ಭದಲ್ಲಿ ವಿಮೆ ಲಭ್ಯವಿದೆ. ಇದರ ನಿಯಮಗಳ ಪ್ರಕಾರ 45 ದಿನಗಳ ವರೆಗೆ ಯಾವುದೇ ಸರ್ಕಾರಿ ಮತ್ತು ಸರ್ಕಾರೇತರ ಬ್ಯಾಂಕ್‌ ನಿಂದ ಪಡೆದ ATM ಅನ್ನು ಬಳಸುತ್ತಿರಬೇಕು.

ಮನೆ ಅಥವಾ ಜಮೀನಿನ ಆಸ್ತಿ ಪತ್ರ ಕಳೆದು ಹೋದರೆ ಮರಳಿ ಪಡೆಯುವ ವಿಧಾನ ಇಲ್ಲಿದೆ ನೋಡಿ.!

ಇದರಲ್ಲಿ ATM ಕಾರ್ಡ್‌ನ ವರ್ಗಕ್ಕೆ ಅನುಗುಣವಾಗಿ ವಿಮೆಯ ಮೊತ್ತ ನಿರ್ಧಾರವಾಗುತ್ತದೆ (Insurance amount decide on category of ATM cards). ಆಯಾ ಕೆಟಗರಿ ಪ್ರಕಾರ ಗರಿಷ್ಠ 10 ಲಕ್ಷ ರೂಪಾಯಿಗಳ ತನಕ ವಿಮೆ ಪಡೆದುಕೊಳ್ಳಬಹುದು. ಈ ವಿಮೆಯನ್ನು ಪಡೆಯಲು ಆ ATM ಕಾರ್ಡ್ ಹೊಂದಿದ್ದವರು ಅವರ ಖಾತೆಗೆ ಯಾರನ್ನು ನಾಮಿನಿ (Nominee) ಮಾಡಿರುತ್ತಾರೋ ಅವರೇ ಬ್ಯಾಂಕ್ ಶಾಖೆಗೆ ಹೋಗಿ ಅರ್ಜಿ ಸಲ್ಲಿಸಬೇಕು.

ಇದರಲ್ಲಿ FIR ನಕಲು, ಚಿಕಿತ್ಸೆಯ ಪ್ರಮಾಣ ಪತ್ರ, ಮರಣ ಪ್ರಮಾಣಪತ್ರ ಇತ್ಯಾದಿ ದಾಖಲೆ ಪತ್ರಗಳನ್ನು ಸಲ್ಲಿಸುವ ಅಗತ್ಯವಿರುತ್ತದೆ. ಅದರ ನಂತರ ವಿಮಾ ಹಕ್ಕು ಕೆಲವೇ ದಿನಗಳಲ್ಲಿ ನೇರವಾಗಿ ನಾಮಿನಿ ಖಾತೆಗೆ ಬರುತ್ತದೆ. ಈ ATM ವಿಮೆಗಾಗಿ ನೀವು ATM ಪಡೆದ ಒಂದು ತಿಂಗಳೊಳಗೆ ಬ್ಯಾಂಕ್ ಶಾಖೆಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ATM ವಿಮೆ ಕುರಿತು ಬಿಹಾರ ಸಾರಿಗೆ ಕಾರ್ಯದರ್ಶಿ ಸಂಜಯ್ ಕುಮಾರ್ ಅಗರ್ವಾಲ್ (Sanjay Kumar Agarawal) ಅವರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಈ ತಿಂಗಳು ಕೆಲವು ಜಿಲ್ಲೆಗಳಿಗೆ ಮಾತ್ರ ಅನ್ನಭಾಗ್ಯ ಯೋಜನೆಯ ಅಕ್ಕಿ & ಹಣ ಸಿಗೋದು.! ಯಾವ ಜಿಲ್ಲೆಗೆ ಸಿಗಲಿದೆ ಯಾವ ಜಿಲ್ಲೆಯ ಜನರಿಗೆ ಬರಲ್ಲ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

Leave a Comment

%d bloggers like this: